Tuesday, June 28, 2011

ಕಲಾ ಕೃತಿ ಬೆಟ್ಟ

      
ಹಸುವಿನ  ಮುಖದಂತೆ ಕಾಣುವ

ರತಿ ಆಟದಲಿ ಕಾಣುವ ಸರ್ಪದಂತೆ

ಮೆಟ್ಟಿಲುಗಳು 

ಬ್ಯಾಗ್ ನಂತೆ 

ಗೌರಿಬಿದನೂರ್ ನಿಂದ  ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಬರುವ " ಪುರ " ಎಂಬ ಹಳ್ಳಿಯಲ್ಲಿ ಎಡ ಭಾಗಕ್ಕೆ  ಕಾಣುವ ಸುಂದರ  ಪುಟ್ಟ ಬೆಟ್ಟದಲ್ಲಿ  ಪ್ರಕೃತಿ ನಿರ್ಮಿತ ಕಲಾಕೃತಿಯೇ ಅಡಗಿದೆ.

Thursday, June 23, 2011

ನಂಟು


ಸಾಕು ಪ್ರಾಣಿಗಳಿಗೆ  ಹೇನು ,ಹುಳು .........ಬಿದ್ದಾಗ  ಈ ಹಕ್ಕಿಗಳು ಹೆಕ್ಕಿ ಹೆಕ್ಕಿ ತೆಗೆದು ಪ್ರಾಣಿಗಳನ್ನು ಸ್ವಚ್ಛ ಗೊಳಿಸಿ ತಾನು ಹೊಟ್ಟೆ ತುಂಬಿಸಿ ಕೊಳ್ಳುತ್ತೇವೆ.

Thursday, June 9, 2011

ಓತಿಕ್ಯಾತ


ಭಾನುವಾರ  ನನ್ನ ಮಕ್ಕಳನ್ನಾ  ಕಲ್ಲಿನ್ತ್ರ್ಯನ  ಗುಡ್ಡ ಕ್ಕೆ  ಕರೆದುಕೊಂಡು 
ಹೋಗಿದ್ದೆ. ಆಗ  ಈ ಬಣ್ಣ  ಬಣ್ಣದ  ಓತಿಕ್ಯಾತ  ಕಣ್ಣಿಗೆ  ಬಿತ್ತು. ನಮ್ಮನ್ನು ಕಂಡ 
ತಕ್ಷಣ  ನಾಗಾಲೋಟದಿಂದ ಓಡಿತು..... ಆದರೆ  ನಾ ಬಿಡಬೇಕಲ್ಲ. ವಿಶೇಷ    
ಅಂದರೆ  ಗಾಬರಿಗೆ  ಮೂಟಾಗಿದ್ದ  ಬಾಲ  ನಂತರ  ಬಹು ಉದ್ದವಾಗಿ  ಹೊರ   
ಬಂತು. ಇದನ್ನು  ಕಂಡ  ನನ್ನ ಮಕ್ಕಳ ಮೊಗದಲಿ  " ಆನೊಂದು ಭ್ರಹ್ಮ .      

Sunday, May 29, 2011

ಬಸವನ ಹುಳು






            ನೆರಳಲಿ  ತಂಪಾಗಿ  ಚಿಪ್ಪಿನೊಳಗೆ ಮುದುಡಿ ಮಲಗಿದ್ದ  ಬಸವನ ಹುಳುವನ್ನ,
        ಎಬ್ಬಿಸಿ  ಬಿಸಿಲಲ್ಲಿ ಇಟ್ಟಾಗ  ಅದರ  ನಡಿಗೆಯ ಭಂಗಿಗಳು..............!!!!!!!.

Monday, May 23, 2011

ಹೊಟ್ಟೆ ಪಾಡು

ಕೆರೆಯಲ್ಲಿ ನೀರು ಕಡಿಮೆ  ಆಗುತ್ತಾ  ಬರುತ್ತಿದೆ. ಈ ಹಕ್ಕಿಗಳಿಗೆ  ಮೀನು ಗಳ  ಸುಗ್ಗಿ.




Saturday, May 14, 2011

ಸಿಂಗಾರ



      ಈ  ಹಕ್ಕಿಗಳು    ಮುಂಜಾನೆಯ  ಸೂರ್ಯನಿಗೆ ಮಧು  ಮಗನಂತೆ  ಸಿಂಗಾರ 
     ಮಾಡುವದರಲ್ಲಿ  ಸಂಬ್ರಮದಿಂದ  ತೊಡಗಿಸಿ ಕೊಂಡಿವೆ.

ಕುರ್ರ ಮಾಮ


  ಇವರು ನಮ್ಮ ಕಡೆ  ಹಾಲಕ್ಕಿ ಶಾಸ್ತ್ರ ನುಡಿಯುವರಂತೆ........ ನಮ್ಮ ಗಡಿಗೆ ಹೊಂದಿ ಕೊಂಡಂತೆ  ಆಂಧ್ರ  ಪ್ರದೇಶದ  ಇವರನ್ನು " ಕುರ್ರ  ಮಾಮ  ಅಥವಾ ಕೊಂಡ ದೇವಡು "  ಅಂತ  ಕರೆಯುತ್ತಾರೆ. ಇವರು   ಶಾಸ್ತ್ರ  ಹೇಳುವ ಮುನ್ನ  ಈ  ರೀತಿ  ಪದಗಳನ್ನು  ಹೇಳುತ್ತಾರೆ.
                         ಕೊಂಡ ದೇವುಡ 
                         ಜಾಗ್ನುನಾಥುಡ
                         ಮಸ್ತಚಂದ್ರ 
                         ಕುರ್ರ ಮಾಮಡ
ಒನ್ನದಿ  ಒಂನತ್ಲ ..............ಲೇನದಿ  ಲೇನತ್ಲ  ಚಬುತಾನು................ ಎಂದು  ಪ್ರಾರಂಬಿಸಿ  ಬಹಳ ಚಾಲಾಕಿ  ತನದಿಂದ ಭವಿಷ್ಯ  ನುಡಿಯುತ್ತಾರೆ. ಇವರು ಹೆಚ್ಹಾಗಿ  ಕೋರುವುದಿಲ್ಲ. ಒಂದು  ಹಳೇ ಬಟ್ಟೆಗೂ  ಅಥವಾ  ೧೦ ರೂಪಾಯಿಗು  ತೃಪ್ತಿ  ಹೊಂದುತ್ತಾರೆ. ಇವರು  ಇತ್ತೀಚಿಗೆ  ಕಾಣೆ ಆಗುತ್ತಿದ್ದಾರೆ. ತುಸು  ದಿನ ಕಳೆದರೆ
ಜಾನಪದ  ಕೊಂಡಿ  ಕಳಿಚಿದಂತೆ ಸರಿ.

Thursday, May 5, 2011

ಚಿಕ್ಕಬಳ್ಳಾಪುರ-೨೦೧೧ ರ ಸಾಹಿತ್ಯ ಸಮ್ಮೇಳನದಲ್ಲಿ




        ೪.೫.೨೦೧೧ ಮತ್ತು ೫.೫.೨೦೧೧ ಎರಡು  ದಿನ   ಅದ್ಬುರಿಯಾಗಿ  ಸಾಹಿತ್ಯ ಸಮ್ಮೇಳನ ಚಿಕ್ಕಬಳ್ಳಾಪುರದ ನಂದಿ ರಂಗ ಮಂದಿರ ದಲ್ಲಿ ಶ್ರೀ ಕ್ಯೆಪು  ಲಕ್ಷ್ಮಿ ನರಸಿಂಹ  ಶಾಸ್ತ್ರೀ  ಸಮ್ಮೇಳನ ಅಧ್ಯಕ್ಷರಾಗಿ  ನೆರವೇರಿಸಿ  ಕೊಟ್ಟರು. 
ಶಿಕ್ಷಣ ಸ್ಥಿತಿ -ಗತಿಗಳು,ಜಿಲ್ಲೆಯ  ಆಧ್ಯಾತ್ಮಿಕ  ಚಿಂತಕರು, ತಾತಯ್ಯ,ನೀರಾವರಿ  ಯೋಜನೆಗಳು,ಮಹಿಳೆ ಮತ್ತು  ಅಭಿವುದ್ದಿ , ಸಾಹಿತ್ಯ ಮತ್ತು  ಸಾಂಸ್ಕೃತಿಕ ಪರಂಪರೆ, ಕವಿಗೋಷ್ಠಿ .............ಇತರ  ಕಾರ್ಯ ಕ್ರಮ  ಸೊಗಸಾಗಿ 
ನಡೆಯುತು.
       ಈ  ಕವಿಗೋಷ್ಠಿ ಯಲ್ಲಿ  ನಾನು ಒಬ್ಬನಾಗಿ ಕವನ ವಚನ  ಮಾಡಿದೆ . ಆ  ಕವನ  ಈ  ಕೆಳಗಿನಂತೆ  ಇದೆ.

 
     ಕೊಲಿಗಳು
     ಕೂಲಿಗಳು 
    ನಾವು ಕೂಲಿ ಆಳುಗಳು
    ನಮಗಿಲ್ಲ ಸರಿ ದಾರಿಗಳು
    ಸಾಗಲಾರೆವು ನೇರ  ದಾರಿಗಳು 
 
    ಸುಗ್ಗಿಯ ನೋಡದ   ದವಸಗಳು
    ದವಸವು ಮೊಡದ ತೆನೆಗಳ
    ತೆನೆಗಳೇ  ಇಲ್ಲದ ಕಾಳುಗಳು
    ಕಾಳೆ  ಕಾಣದ   ಕಡ್ಡಿಗಳು
    ಕಡ್ಡಿಯೇ  ಮೊಳೆಯದ   ಭೂಮಿಗಳು
    ಭೂಮಿಯೇ  ಇಲ್ಲದ  ಕೂಲಿಗಳು

    ಸಿರಿಯರ ಹರಿಕೆಯಾ ಕುರಿಗಳು 

    ಗೆಲುವೇ ಗೆಲ್ಲದ ಸೋಲುಗಳು
    ಸೋಲುನು ಹಾಸೋದ್ದ  ಸಾವುಗಳು
    ಸಾವಿನ ಮುಳ್ಳಲಿ  ಹೆಜ್ಜೆಗಳು
    ಹೆಜ್ಜೆಯು ಊರದ ಜೀವಿಗಳು
    ಜೀವವು ಬೆಳಗದ ಬದುಕುಗಳು
    ಬದುಕೇ  ಏರದ  ಜೀತದಾಳುಗಳು
    ಜೀತದ ನೋವಿನ  ಮೇಘಗಳು
    ಮೇಘವು  ಪ್ರಸವಿಸಿದ  ಹನಿಗಳು
    ಹನಿಯನು ಹೀರುವ  ಅರಸರು
    ಅರಸರ ಪಾದಕೆ ಮೆಟ್ಟುಗಳು
    ಅರಸೊತ್ತಿಗೆಗೆ  ನಮ್ಮ ಗೋರಿಗಳೇ ಮೆಟ್ಟಿಲುಗಳು 

           

Tuesday, April 19, 2011

ಕಾಲುವೆ

   


           ಹಳ್ಳಿಯ  ಹೊಲಗಳಲ್ಲಿ  ಕಾಲುವೆಯಲ್ಲಿ  ನೀರನ್ನು  ಹರಿಸುವಾಗ ಬಣ್ಣ ಬಣ್ಣದ ಚಿತ್ತಾರ  ಸುಂದರವಾದ  ಆಕೃತಿ  ಮೊಡುತ್ತದೆ. 

ಹಳ್ಳಿಯಲ್ಲಿ ರಜದ ಮಜಾ



          ಪ್ರಕೃತಿಯ  ಮಡಿಲಲ್ಲಿ  ಆಡಿ ನಲಿಯುವುದು  ಅಂದರೆ  ಇದೇನೆ.....!!!!!!!!.

Saturday, April 9, 2011

ಒಂಟಿಗ


ಒಂಟಿತನದಲ್ಲಿ  ಗೆಳಯರಿಂದ  ದೂರ ವಾಗಿರುತ್ತವೆ.   ಏಕಾಂತದಲ್ಲಿ  ನಾವು ಬಯಸಿ  ಎಲ್ಲರಿಂದ  ದೂರ ವಾಗಿರುತ್ತವೆ.ಏನಂತೀರಿ................?

ಹೂ

ಈ  ಹೂ...ನಿಮಗೆ .
ಶ್ರೀ ರಾಮ ನವಮಿ ಹಬ್ಬದ  ಶುಭಾಶಯಗಳು.

Wednesday, March 30, 2011

ಚ್ಯೆತ್ರದ ಚಿಗುರು

ಯುಗಾದಿ ಹಬ್ಬದ  ಸಮಯದಲ್ಲಿ ಸಸ್ಯ  ರಾಶಿಯ ಹಸಿರ ಉಡುಗೆ ಯನ್ನು 
ನೋಡುವುದೇ .........ಕಣ್ಣಿಗೆ  ಹಬ್ಬ.     

Wednesday, March 16, 2011

ನನ್ನದೆ................ನೆರಳು


ದುಡಿತ

ಓದುವ  ಕ್ಯೆಗೆ ದುಡಿಮೆಯ ಕೆಲಸ ...........ಪರೀಕ್ಷೆ ಸಮಯದಲ್ಲಿ

ಗುಬ್ಬಿ ಸಾಲು

ಇತ್ತೀಚಗೆ ನಮ್ಮ ಊರಿನಲ್ಲಿ ಗುಬ್ಬಿಗಳು ಕಡಿಮೆ ಆಗಿದ್ದವು. ಆದರೆ  ಈ ನಡುವೆ  ಊರಾಚೆ ಇರುವ  ಕಲ್ಲಂತ್ರಯ ಗುಡ್ಡದ ಬಳಿ ಇರುವ  ಕೆರೆಯಲ್ಲಿ  ಹಿಂಡು ಹಿಂಡು ಕಪ್ಪು ಗುಬ್ಬಿಗಳು  ಹಾರಾಡ ತೊಡಗಿವೆ.

Monday, March 14, 2011

ಕುರಿಗಳು

                   
                
            ಕುರಿಗಳು ನೆದದಾಡುವ ಬ್ಯಾಂಕುಗಳು ಎಂದು ಪ್ರಸಿದ್ದಿ. ಹಳ್ಳಿಗಳಲ್ಲಿ 
ಕುರಿಗಳನ್ನು ಸಾಕಬೇಕಾದರೆ ಅಕ್ಕ ಪಕ್ಕ ಹೊಲಗಳಿಗೆ ಕುರಿಗಳು ಹೋಗದ ಹಾಗೆ 
ಹುಷಾರಾಗೆ ಕಾದರು.... ಜಗಳ ತಪ್ಪಿದ್ದಲ್ಲ. ಅದಕ್ಕೆ  ನಮ್ಮ  ಹಿರಿಯರು  ತುಂಟ, 
ಕಳ್ಳ,ಯಾಮಾರಿಸುವ ಕುರಿಗಳಿಗೆ ತಡೆಯಲು  ಚಿಕ್ಕ ಬಿದಿರಿನ ತುಂಡನ್ನ ಕೂರಳಿಗೆ 
ಕಟ್ಟುತ್ತಾರೆ. ಈ ಬಿದಿರಿನ ತುಂಡುಗಿಗೆ " ಭೂಂಕ" ಎಂದು ಹೆಸರು.
ಹಳ್ಳಿಗಳಲ್ಲಿ ಹಾಗು ಕುರಿಗಳ ಸಂತೆಯಲ್ಲಿ  ಈಗಲೂ  ಈ ಭೂಂಕ   ಕಾಣಬಹುದು.
ಬೂಂಕ ಪದ ಹಳ್ಳಿ ಬಾಷೆಯಲ್ಲಿ ಪರಿಚಿತ  ಆದರೆ ಕನ್ನಡ ನಿಗಂಟುನಲ್ಲಿ  ಈ ಪದ 
ಕಾಣಿಸಲ್ಲಿಲ್ಲ. 

Sunday, March 13, 2011

ಬೆಳಕಿನ ನೆರಳಿನ ಆಟದ ಚಿತ್ರ

   
ಸಾಮಾನ್ಯವಾಗಿ ಬಿಸಿಲಿಗೆ ನಮ್ಮ ನೆರಳು  ಒಂದು  ಮಾತ್ರ        ಕಾಣುತ್ತದೆ.ಆದರೆ ಕೆಲವು  ಬಾರಿ  ಎರಡು,                            
 ಮೂರೂ....ಕಾಣುತ್ತದೆ. ಈ ಛಾಯಾ ಚಿತ್ರ  ನೋಡಿದಾಗ          ತಿಳಿಯುತ್ತದೆ.      ಗಮನಿಸಿ.                                                       

Tuesday, March 8, 2011

ಸೂರ್ಯನ ಉದಯ

    ಘೋಟಗನಪುರದ ಕೆರೆಯಲ್ಲಿ  ಸೂರ್ಯನ  ಉದಯ