Saturday, December 23, 2017

"ಗಂಗೆತ್ತು " ಆಟ




     ಈ ಜಾನಪದ ಕಲೆಯಲ್ಲಿ  ಎತ್ತನ್ನು  ಸಾಕಿ  ಇದಕ್ಕೆ ಶ್ರಮದ  ಆಟಗಳನ್ನು ಕಲಿಸುತ್ತಾರೆ .  ಹಾಗು ಒಂದು  ಹಸುವಿನ ಜೊತೆ ಮದುವೆ ಮಾಡಿಸುವ  ಆಟ ಸಹ  ಮಾಡಿಸುತ್ತಾರೆ.  ಸಾಮಾನ್ಯವಾಗಿ  ಈ  "ಗಂಗೆತ್ತು "  ಆಟ  ನಮ್ಮ ಕರುನಾಡಿನ  ಕಡೆ ನಶಿಸುತ್ತಿದೆ. ಆಂಧ್ರ ಪ್ರದೇಶದ  ಗ್ರಾಮೀಣ ಪ್ರದೇಶಗಳಲ್ಲಿ   ಇನ್ನು  ಜೀವಂತವಾಗಿದೆ .  

Wednesday, December 13, 2017

ಜಾನಪದ ಕಲೆ

ಈ ಜಾನಪದ  ಕಲೆಯಲ್ಲಿ  ನಮ್ಮ   ಪುರಾಣ,ಇತಿಹಾಸ,ಸಮಾಜ ..... ವ್ಯಕ್ತಿಗಳನ್ನಾ  ಮರು ರೂಪಿಸಿ ಜನತೆಗೆ  ರಂಜನೆ ಮುಖಾಂತರ  ತಮ್ಮ  ಪ್ರತಿಭೆ ತೋರಿಸುತ್ತಾರೆ

Wednesday, December 6, 2017

Saturday, October 7, 2017

ಕತ್ತಲಾಚೆಯ ಛಾಯಾಚಿತ್ರ






ಕತ್ತಲಾಚೆಯ ಛಾಯಾಚಿತ್ರ   ಸೊಬಗು ವಿಶೇಷವಾಗಿರುತ್ತೆ.
 

Thursday, September 7, 2017

ಪಿತೃ ಪಕ್ಷ

    ಪಿತೃ ಪಕ್ಷ 
     ಹುಟ್ಟಿಗೆ ಅಂದ್ರೆ  ಹುಟ್ಟಿದ ಹಬ್ಬಕ್ಕೆ ಸಂತೋಷ,ಸಡಗರ,ಸಂಭ್ರಮ.... ಪ್ರಾಮುಖ್ಯತೆ ಹೆಚ್ಚು. ಏಕೆಂದ್ರೆ  ಹುಟ್ಟು  ಕಣ್ಣಿಗೆ  ಕಾಣುತ್ತೆ..!!!. 
     ಸಾವಿನ ನಂತರದ  ಲೋಕವನ್ನಾ  ಕಂಡಿರುವ  ಮಹಾಭಾವರು  ಬೆರಳೆಣಿಕೆ. 
     ಗತಿಸಿದ ಗುರು ಹಿರಿಯರಿಗೆ ಸ್ಮರಿಸುವುದಕ್ಕೆ ಸರ್ವ ಪಿತೃ ಮಹಾಲಯ(ಪಿತೃ)ಪಕ್ಷ  ಶ್ರೇಷ್ಠ ಮತ್ತು ಜೇಷ್ಠವಾಗಿದೆ. 
     ಪ್ರತಿವರ್ಷ ಶ್ರಾದ್ಧ ಅಥಾವ ಎಡೆ ಆಚರಿಸಿ ಹಿರಿಯರಿಗೆ ಗೌರವ ಸೂಚಿಸಿ ಋಣ ಸಂದಾಯ ಮಾಡುವುದು  ರಾಮಾಯಣ ಕಾಲದಿಂದ ಶ್ರೀ ರಾಮಚಂದ್ರ  ಪ್ರಭು ಯುಗದಿಂದ ಶ್ರಾದ್ದ ಆಚರಣೆಯಿದೆ. 
    ಪ್ರಥಮವಾಗಿ ಶಾದ್ಧಚರಣೆ ಸಾಗರದ ತೀರದಲ್ಲಿ ನೆರವೇರತ್ತಿತ್ತು. ನಂತರ  ಕಾಲ  ಸರಿಯುತ್ತಿದ್ದ ಹಾಗೆ 
ಜೀವನದಿಯ ದಡದಲ್ಲಿ,ಸಮೃದ್ಧಿವಾಗಿ ನೀರು ತುಂಬಿರುವ ಕೆರೆ,ನೀರು ತುಂಬಿರುವ  ಭಾವಿ,ವಾಸಿಸವ ಮನೆ..... 
ಈಗ ಮಠಗಳಲ್ಲಿ  ಆಚರಿಸುತ್ತಿದ್ದೇವೆ. ಸ್ಥಳ ಬದಲಾದರು  ಶ್ರದ್ಧೆ,ನಂಬಿಕೆ,ಆಚರಣೆ... ಬದಲಾಗಿಲಾಗಿದೆರುವುದು ವಿಶೇಷ. ಶ್ರಾದ್ಧ  ಬಗ್ಗೆ "ಗೀತೆ"ಯಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ  ಸೂಕ್ಶ್ಮವಾಗಿ ವಿವರಿಸಿದ್ದಾನೆ. 
     ಶ್ರಾದ್ಧ,ಎಡೆ,ತರ್ಪಣ,ಸ್ವಯಂಪಾಕ..... ಆಚರಿಸಲು ಮತ್ತು ಆಚರಿಸದಿರಲು   ಸಂಪೂರ್ಣ  ಹಕ್ಕು ಎಲ್ಲರಿಗೂ ಇದೆ. ಅದು  ಅವರ  ನಂಬಿಕೆಗೆ  ಸೇರಿದ್ದು.   
     ಇದರ ಬಗ್ಗೆ ತುಸು ತಿಳಿಯುವ  ಆಸಕ್ತಿ ಇದ್ದರೆ "ಅವಳು ಚೆಲುವೆ" ನನ್ನ ಕಥಾ ಸಂಕಲನ ಓದಬಹುದು. ನನ್ನೂರಿನ ಸರಕಾರಿ ಗ್ರಂಥಾಲಯದಲ್ಲಿ ಲಭ್ಯವಿದೆ. 

Thursday, August 31, 2017

ಸೀತಾಪಾದ

ಲೇಪಾಕ್ಷಿ  ಅಂದರೆ  " ಎದ್ದುಳು  ಪಕ್ಷಿ " ಎಂದು  ಅರ್ಥ. ಈ ಪಾದ  ಶ್ರೀ ರಾಮ ಚಂದ್ರ ಪಕ್ಷಿಗೆ   ನುಡಿದ ಮಾತು. ರಾವಣ ಸಂಗಡ ಹೋರಾಟದಲ್ಲಿ  ಸೋತ " ಜಟಾಯು " ಪಕ್ಷಿಯನ್ನು ಸಂತ್ಯೆಸಲು  ರಭಸವಾಗಿ ಸೀತಾಮಾತೆ  ಹೆಜ್ಜೆಯೂರಿದಾಗ  ಈ ಸ್ಟಳ " ಸೀತಾಪಾದ " ಇಷ್ಟು  ದೊಡ್ಡ  ಪಾದನಾ ... !!  ಅಂತ ಗ್ಯೆಡ್ ಗೆ  ಕೇಳಿದಾಗ   "  ಸರ್  ರಾಮಾಯಣ ಕಾಲದಲ್ಲಿ ಸೀತಾಮಾತೆ  24 ಅಡಿ ಮತ್ತು ಶ್ರೀರಾಮ ಚಂದ್ರ  36 ಅಡಿ ಎತ್ತರ. ರಾಕ್ಷಸ ರಾವಣ  104 ಅಡಿ " ಅಂದ . ನನಗೆ ಏಕ ಕಾಲಕ್ಕೆ  ವಿಸ್ಮಯ  ಮತ್ತು  ಆಶ್ಚರ್ಯ.  ನಾನು   ಓದಿದ ಪ್ರಕಾರ  ಐದು  ಸಾವಿರ ವರ್ಷದ ಹಿಂದೆ ಮನುಜನ ಆಯುಸ್ಸು  175 ವರ್ಷ.  ಕಾಲ ಸರಿಯುತ್ತಾ ..... ಈಗ  50  ವರ್ಷಕ್ಕೆ  ನಿಂತಿದೆ. ಈ ರೀತಿಯ ಎತ್ತರ ಸಹ  36 ರಿಂದ  7--8  ಅಡಿ ಗೆ  ನಿಂತಿರ ಬಹುದೆ ...???!!!.  ಚಿತ್ರ ವಿಚಿತ್ರ  ಪ್ರಶ್ನೆ  ಈ ಕ್ಷಣ ಸಹ  ಕಾಡುತ್ತಿದೆ . ಈ ದೇವಾಲಯ  ಏಕ ಶಿಲಾ  ಬಂಡೆ ಮೇಲೆ ಕೆತ್ತಿರುವು ವಿಶೇಷ . 

Saturday, August 26, 2017

ಭತ್ತದ ಕೃಷಿ




ನಮ್ಮ ಗೌರಿಬಿದನೂರು  ತಾಲೂಕಿನ  ಡಿ ಪಾಳ್ಯ ಪಕ್ಕದಲ್ಲಿರುವ ವೆಂಕಟಾಪುರ ಹಳ್ಳಿಯಲ್ಲಿ ಭತ್ತದ ಗದ್ದೆಯ ಕೃಷಿ ಚಟುವಟಿಕೆಯ  ಕೆಲವು  ದೃಶ್ಯ . 

Monday, August 21, 2017

Thursday, August 17, 2017

ನಾಚಿಕೆ=ಸಂಕೋಚ



ಈ ಛಾಯಾಚಿತ್ರ  ಕಲ್ಬುರ್ಗಿಯ  ಒಂದು  ಹಳ್ಳಿಯಲ್ಲಿ ಚಿತ್ರಿಸಿದ್ದು ಸ್ನಾನ  ಮಾಡುತ್ತಿದ್ದ ಬಾಲಕ ಕ್ಯಾಮರಾ ನೋಡಿ .. ತಕ್ಷಣ  ಓಡಿ  ಹೋಗಿ  ಮರೆಯಲಿ ನಿಂತು  ಇಣುಕಿ   ನೋಡಿದ  ...ನನಗೆ   ಈ ದೃಶ್ಯ ತುಂಬಾ ಮನ ಸೆಳೆಯಿತು. 

Tuesday, August 8, 2017

ಕಲುಬುರ್ಗಿ = ಗುಲ್ಬರ್ಗ





     ಕಲಬುರ್ಗಿ ಕನ್ನಡದಲ್ಲಿ(ಕಲ್ಲಿನ ಕೋಟೆ) --  ಉರ್ದು  ಗುಲ್ಬರ್ಗ(ಹೂ ತೋಟ ) . ಇತಿಹಾಸದಲ್ಲಿ  "ರಾಷ್ಟ್ರಕೂಟರು ಚಾಲುಕ್ಯರು "   ನಂತರ  ಮೊಘಲು  ದೊರೆಗಳು   ಈ ಪ್ರದೇಶ  ಆಳಿದ್ದಾರೆ. ಅದ್ಭುತವಾದ  ಕೋಟೆ .  ಕೋಟೆ ಒಳಗೆ ಪ್ಯಾಲೇಸ್ ,ಫಿರಂಗಿ ,ಶಾಶನಗಳು.... ಇವೆ.  ಆದ್ರೆ ಕೋಟೆ  ಭಾಗಶ: ಬಿದ್ದು ಹೋಗಿದೆ. ಕೋಟೆ ಒಳಗೆ  ಮನೆಗಳು  ಆಕ್ರಮಿಸಿಕೊಂಡಿದೆ.  ನೋಡುವುದಕ್ಕೆ ಸುಂದರ ಮತ್ತು ಅದ್ಭುತ ಪ್ರದೇಶ .  ಒಮ್ಮೆ ನೋಡಿದರೆ ನಮ್ಮ ಪೂರ್ವಿಕರು ನೆನಪಾಗುತ್ತಾರೆ . 
 

Thursday, July 27, 2017

ಗೌರಿಬಿದನೂರು ಗೆ ನಾಮಾಕರಣವಾದುದು

ಗೌರಿಬಿದನೂರು ಗೆ ನಾಮಾಕರಣವಾದುದು
------------------------------------------
ನಮ್ಮ ಗೌರಿಬಿದನೂರು ಊರಿಗೆ ಮಹಾಭಾರತದ ಇತಿಹಾಸ ಬಳುವಳಿ ಇದೆ . ಗೌರಿಬಿದನೂರು ಹೆಸರು ಸಾಗಿ ಬಂದ ಹಾದಿ ಈ ರೀತಿ ಇದೆ .
ಮಹಾಭಾರತ ಯುದ್ಧ ಪೂರ್ಣಗೊಂಡ ನಂತರ ... ವಿದುರ ರರು ವ್ಯಾಸರ ಆಜ್ಞೆ ಯಂತೆ ಮೋಕ್ಷ ಹೊಂದಲು ಉತ್ತರಪಿನಾಕಿನಿ ನದಿದಡ ದಲ್ಲಿರುವ ಮ್ಯೇತ್ರಿಯಿ ಋಷಿಗಳ ಬಳಿ ಆಶ್ರಯ ಪಡೆದರು . ಅವರ ಆದೇಶ ಮೇರೆಗೆ ನಾರಾಯಣ ಮಂತ್ರ ಪಟಿಸುತ್ತ ಅಶ್ವತ್ಥ ವೃಕ್ಷ ನೆಟ್ಟು ಪುಜಿಸಿದರು . ನಂತರ ಅಶ್ವತ್ಥ ನಾರಾಯಣ ಸ್ವಾಮಿ ಕೃಪೆ ಇಂದ ಮೋಕ್ಷ ಪಡೆದರು. ಈ ಪವಿತ್ರ ಸ್ಥಳಕ್ಕೆ "ವಿದೂರೂರು"ಎಂದು ಹೆಸರು ಗಳಿಸಿ ಸಾವಿರಾರು ವರ್ಷ ಪ್ರಸಿದ್ದಿ ಪಡೆಯಿತು . ನಂತರ ಕಾಲಕ್ರಮೇಣ ವಿದೂರೂರು ಆಳ್ವಿಕೆಯಲ್ಲಿ ಒಳಪಟ್ಟಿದ್ದ ದಾರಿನಾಯನಕನ ಪಾಳ್ಯದ ಪಾಳೆಗಾರ ತನ್ನ ಕಿರಿ ಮಗಳಾದ ಗೌರಿ ಗೆ ವಿದೂರೂರು ನ್ನು ಬಳುವಳಿಯಾಗಿಕೊಟ್ಟ ನಂತರ.... ಗೌರಿ ವಿದೂರೂರು ನಂತರ " ಗೌರಿಬಿದನೂರು" ಹೆಸರಲ್ಲಿ ಪ್ರಸಿದ್ದಿ ಪಡೆಯಿತು .ನಮ್ಮ ಗೌರಿಬಿದನೂರು ಜನತೆ ಈ ಬರಹ ಇತರರಿಗೆ ತಿಳಿಸಿ ಮತ್ತು share ಮಾಡಿ .

Saturday, July 22, 2017

"ಅವಳು ಚೆಲುವೆ" ಯ ಸಂತೋಷದ ಸುದ್ದಿ


ಏನು  ಅಂದರೆ "ಅವಳು ಚೆಲುವೆ" ಕಥಾ ಸಂಕಲನ  ಕರ್ನಾಟಕ ಪುಸ್ತಕ ಗ್ರಂಥಾಲಯಕ್ಕೆ  ಆಯ್ಕೆ ಆಗಿದೆ. 
ಈ  ಚೆಲುವೆ  ಈಗ  ಪ್ರಥಮ  ಸುತ್ತಿನಲ್ಲಿ  ಬೆಂಗಳೂರು  ನಾಲ್ಕು ಜೋನ್ ಗೆ ಕಪಾಟು (ಬೀರು) ನಲ್ಲಿ  ಅಲಂಕರಿಸಿ, ನಂತರ ಓದುಗರ  ಆಸಕ್ತಿಗೆ  ನೆರವಾಗುತ್ತಾಳೆ. ನಂತರ  ಹಂತ ಹಂತವಾಗಿ  ಕರ್ನಾಟಕದ  ವಿವಿಧ ಜಿಲ್ಲೆಗಳ ಗ್ರಂಥಾಲಯಕ್ಕೆ ಚೆಲುವೆ ಕಥಾ ಸಂಕಲನ  ಕಪಾಟು  ಅಲಂಕರಿಸುತ್ತಾಳೆ . ಈ ಸಂತೋಷದ  ನಿಮ್ಮಲ್ಲಿ (ನನ್ನ ಓದುಗ ಗೆಳೆಯರಲ್ಲಿ) ಹಂಚಿ ಕೊಳ್ಳಬೇಕೆನಿಸಿತು.  ನಮಸ್ತೆ .

Saturday, July 15, 2017

ಬಸ್ಸು ಅಥವಾ ರೈಲು ಆಟ

ಈ ಆಟ   ನಮ್ಮ  ಕಾಲದಲ್ಲಿ   ಆಡ್ತಾ  ಇದ್ದೀವಿ.  ಇದಕ್ಕೆ  ಬಸ್ಸು  ಅಥವಾ ರೈಲು  ಆಟ  ಅಂತ  ಇದ್ದೀವಿ. ಈ  ಆಟ ಆಡ್ತಾ  ಸುಮಾರು 3-4 ಕಿ ಮೀ   ಓಡಾಡುತಾ ಇದ್ದೀವಿ.  ನಮ್ಮ  ಪಟ್ಟಣ ಮತ್ತು ನಗರಗಳಲ್ಲಿ  ಎಲ್ಲೂ ನನಗೆ ಇದುವರೆಗೆ  ಕಾಣಾಲಿಲ್ಲಾ . ನಮ್ಮ  ಹಳ್ಳಿಗಳಲ್ಲಿ  ಈ ದಿನಕ್ಕೂ ...  ಈ ಕ್ಷಣಕ್ಕೂ ...  ಮಕ್ಕಳು  ಕೇಕೆ  ಹಾಕಿ ಕೊಂಡು  ಆಟವಾಡುತ್ತಾ  ಇರುತ್ತಾರೆ.  ಆಟ  ಆದ ನಂತರ  ತುಂಬು  ಸಂತೋಷದಿಂದ   ಹೊಟ್ಟೆ  ತುಂಬಾ  ಉಂಡು ಮತ್ತು  ಕಣ್ಣು ತುಂಬಾ  ನಿದ್ದೆ ಮಾಡುತ್ತಾರೆ.  ಇದು  ನನ್ನ ಸ್ವಂತ ಮತ್ತು ಗೆಳೆಯರ ಅನುಭವ.  
ನಿಮಗೆ ????????

Friday, June 16, 2017

ಬೊಂಬೆಗಳಿಗೆ ಆಲಂಕಾರ



      ನಮ್ಮ  ಹಿಂದೂ  ಸಂಪ್ರದಾಯದ   ದಸರಾ  ಹಬ್ಬಕ್ಕೆ  " ಬೊಂಬೆ " ಹಬ್ಬ  ಅಂತ್ತಾರೆ  ಯಾಕೆಂದ್ರೆ  ಆ ಹಬ್ಬದಲ್ಲಿ  ಎಲ್ಲಾ ರೀತಿಯ  ವಿವಿಧ ಬೊಂಬೆ ಗಳನ್ನಾ  ಹಬ್ಬಕ್ಕೆ ಮುಂಚೆಯೇ....  ಭಕ್ತಿ  ಮತ್ತು ಶ್ರದ್ಧೆಯಿಂದ  ಅಲಂಕಾರ  ಮಾಡಿ  ಹಬ್ಬಕ್ಕೆ  ಪೀಠ ದಲ್ಲಿ  ಜೋಡಿಸುತ್ತಾರೆ .   ಆ ಹಬ್ಬದ  ಸಂಜೆ ಎಲ್ಲರನ್ನ  ಆಹ್ವಾನಿಸಿ  ಬೊಂಬೆಗಳನ್ನ ತೋರಿಸಿ ... ನಂತರ ಸತ್ಕರಿಸಿ  ಫಲ ತಾಂಬೂಲ  ಕೊಡುತ್ತಾರೆ . ಶುಭ ಕಾರ್ಯಗಳಲ್ಲಿ  ಈ ಬೊಂಬೆಗಳನ್ನಾ ನೆನಪಿನ ಕಾಣಿಕೆಗಳಾಗಿ  ಕೊಡುತ್ತಾರೆ . 

ಇಂತಹ   ಬೊಂಬೆಗಳಿಗೆ  ಅಂದವಾಗಿ  ಅಲಂಕಾರ   ಮಾಡುವುದರಲ್ಲಿ   ನನ್ನ   ಆಗ್ರ  ತಂಗಿ  ಭಾರತಿ ನಮ್ಮ  ಮನೆಯಲ್ಲಿ  ಪ್ರಥಮಳು.  ನಮ್ಮ  ಮನೆಯಲ್ಲಿ ಮಾದುವೆ,ಉಪನಯನ,ಹಬ್ಬ,ಹರಿದಿನ.... ಎಲ್ಲದಕ್ಕೂ  ಭಾರತಿ 
ಅಲಂಕರಿಸಿದ  ಬೊಂಬೆ ಗಳೆ  ಖಂಡಿತ ಬೇಕು . ಈ ಹವ್ಯಾಸ ಕಲಿತಿತುದು  ನಮ್ಮ  ತಾಯಿ ಇಂದ.  ನಮ್ಮ ತಾಯಿ ಆ   ಕಾಲದಲ್ಲಿ ಬಣ್ಣ ಕಾಗದದಿಂದ  ಬೊಂಬೆ  ಅಲಂಕಾರ  ಮಾಡುತಿದ್ದರು.  ಅಮ್ಮನ ರೂಪ ಮತ್ತು ಕಲೆ ಪಡೆದವಳು ನನ್ನ ತಂಗಿ  ಭಾರತಿ .