Tuesday, September 20, 2016

"ಅವಳು ಚೆಲುವೆ"

ನಾನು ೧೯೯೪ ರಿಂದ ಕಥೆ ಗಳನ್ನಾ ರಚಿಸುವುದಕ್ಕೆ ಪ್ರಾರಂಭ ಮಾಡಿದೆ. ಹೀಗೆ ಸುಮಾರು ೫೦ ಕಥೆಗಳು ನಾಡಿನ ವಿವಿಧ  ದಿನ,ವಾರ,ಪಾಕ್ಷಿಕ,ಮಾಸ  ಪತ್ರಿಕೆ ಯಲ್ಲಿ ಬೆಳಕು  ಕಂಡಿತು. ಈಗ   ತಾಯಿ  ಶಾರದೆ ಮಾತೆ ಮತ್ತು  ರಾಯರ ಕೃಪೆ ಇಂದ  "ಅವಳು ಚೆಲುವೆ" ಎಂಬ  ಕಥಾ ಸಂಕಲನ  ಮುದ್ರಣದ   ಹಾದಿಯಲ್ಲಿದೆ. ಇನ್ನಾ ಕೆಲೆವೇ  ದಿನಗಳಲ್ಲಿ  ಮುದ್ರಣ  ಕಾರ್ಯ   ಅಂತಿಮ ವಾಗಲಿದೆ.  ಕಥಾ ಸಂಕಲನ  ಮುಖ  ಈ ರೀತಿ  ಅಲಂಕಾರ ಗೊಂಡಿದೆ. ಈ  ಸಂತಸ  ನಿಮ್ಮಲ್ಲಿ ಹಂಚಿ ಕೊಳ್ಳಬೇಕೆನಿಸಿತು   ಹಂಚಿಕೊಳ್ಳುತ್ತಾ  ಇದ್ದೇನೆ .  ನಮಸ್ತೆ.

Saturday, September 17, 2016

ನಾಟಕಗಳ ಜಾತ್ರೆ 1970---1990




1970 ಇಂದ 1990 ರ ತನಕ  ಗೌರಿಬಿದನೂರು  ನ್ಯಾಷನಲ್ ಕಾಲೇಜು ನಲ್ಲಿ  ವರ್ಷದ ಸಾಂಸ್ಕೃತಿಕ ಕಾರ್ಯ ಕ್ರಮ ಗಳಲ್ಲಿ ಕಡಿಮೆ ಅಂದ್ರೆ  ಒಂದು ತಿಂಗಳು  " ನಾಟಕ " ದ  ಸ್ಪರ್ಧೆ  ನೆಡೆಯುತ್ತಿತ್ತು . ಆ  ಜಮಾನದಲ್ಲಿ ನಮ್ಮ ಕಾಲೇಜ್ ನಿಂದ   ಹಿರಿಯರಾದ ರವಿ ಸರ್,ಮುನಿಸಿಪಲ್ ಕಾಲೇಜಿನ ಎ. ಎಸ್.ಅರ್, ಎ . ಸುರೇಶ, ಜಿ.ಬಾಲಾಜಿ ,ವಕೀಲರಾದ ಶ್ಯಾಮಣ್ಣ, ಪ್ರತಾಪ್ ರೆಡ್ಡಿ....  ಇವರೆಲ್ಲಾ  ರಾಜ್ಯ ಮಟ್ಟದ  ನಾಟಕ ಸ್ಪರ್ಧೆಗೆ ಭಾಗವಹಿಸಿ  ಕರ್ನಾಟಕ ದಲ್ಲಿ  ಗೌರಿಬಿದನೂರು ನ ಕೀರ್ತಿ  ಪತಾಕೆ  ಹಾರಿಸಿದ್ದರು . ಈ  ಹಿರಿಯರ ನಂತರ  ನಾವು ಬಂದೆವು .
ನಾವು ವರ್ಷ  ವರ್ಷ  ಸಹ   ನಾಟಕ ಗಳಲ್ಲಿ  ಭಾಗವಹಿಸಿದೆವು.  ೧. " ಕಾಲೇಜ್ ಎಲೆಕ್ಶನ್"  ೨. "ಗುರ್ತಿನವರು " ೩.ಪಿತಾಮಹ ರಾದ ಶ್ರೀ ಮಾಸ್ಟರ್ ಹಿರಣಯ್ಯ  ರಚಿಸಿದ   "ಅಳಿಯವತಾರ "  ಈ  ನಾಟಕ ಕಾಲೇಜ್ ಸ್ಪರ್ಧೆ ಯಲ್ಲಿ  ಮೊದಲ ಬಹುಮಾನ ಲಭಿಸಿತು .  ಆ  ಬಹುಮಾನ  ಮುಖ್ಯ ಮಂತ್ರಿಗಳ   ಶ್ರೀ  ಅರ್. ಗುಂಡೂರಾಯರು  ನಮ್ಮ ತಂಡಕ್ಕೆ  ಕೊಟ್ಟರು .  ಈ  ಮದುರ ಕ್ಶಣ ಗಳನ್ನಾ  ನಿಮ್ಮ ಬಳಿ ಹಂಚಿ ಕೊಳ್ಳಬೇಕೆನಿಸಿತು