Saturday, December 1, 2018

ನನ್ನ ಸಾಹಿತ್ಯ ಹೆಜ್ಜೆಗಳು 1990--2018












     
       ಕಾಲೇಜ್ ಓದುತ್ತಿರುವ ಸಮಯದಲ್ಲಿ  ಹುಡುಗಾಟಕ್ಕೆ ಬರೆದ ಕೆಲವು ' ಚುಟುಕು ' ಗಳು  ೧೯೯೦ ರಂದು ಅಂತಿಮ ವಾಣಿಜ್ಯ ವಿಭಾಗ  ವರ್ಷದಲ್ಲಿ  ' ಕಾಲೇಜ್ ಡೇ ' ಹುಮ್ಮಸ್ಸಿನಿಂದ ಓದಿದ್ದು. ಅಂದು ಓದುವಾಗ ಓದಿನ ನಂತರ ಈ  ಸಾಹಿತ್ಯ ಹಾದಿಯಲ್ಲಿ  ಹೆಜ್ಜೆಗಳು  ಸಾಗುತ್ತವೆಂದು  ನಾನು ಖಂಡಿತ ಊಹಿಸಿರಲಿಲ್ಲಾ. ಆದ್ರೆ  ರಾಯರ ಮತ್ತು ಶಾರದಾ ಮಾತೆ ಕೃಪೆ ಇಂದ  ಚುಟುಕು,ಕವನ,ಕವಿತೆ,ಹಾಡು,ಬರಹ," ಅವಳು ಚೆಲುವೆ ",ಕಥಾ ಸಂಕಲನ , " ಸಾಮ್ರಾಟ್  ಅಶೋಕ್ " ಇತಿಹಾಸ ಕಾದಂಬರಿ ..... ಹೀಗೆ ೨೦೧೮ ರ ತನಕ ಸಾಗಿದೆ ಸಾಗುತ್ತಿದೆ ಮತ್ತು ಮಾತೆ ಕೃಪೆಯಿಂದ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ದಯಪಾಲಿಸಿದ್ದಾಳೆ. ೨೦೧೦ರಲ್ಲಿ  ಕಥೆ ಬರವಣಿಗೆ ಕಡಿಮೆ ಮಾಡಿ   ಛಾಯಾಚಿತ್ರದ ಬಗ್ಗೆ  ತೋರಿಸಿದೆ   ಅದರ ಪ್ರತಿಫಲ  facebook  ಮತ್ತು hallihyda.blogspot.com ಕಾಣಬಹುದು.  ಈ  ಸಾಹಿತ್ಯ ಪಯಣ  ನಿಮ್ಮಲ್ಲಿ  ಹಂಚಿಕೊಳ್ಳೋಣ  ಅನಿಸಿತು ಹಂಚಿಕೊಳ್ಳುತ್ತಿದ್ದೇನೆ. 

Wednesday, July 11, 2018

NSS ಕ್ಯಾಂಪ್ 1985

        ಮೊನ್ನೆ ಏಕೋ  ಇದ್ದಕ್ಕಿದ್ದ ಹಾಗೆ  ನನ್ನ  ಕಾಲೇಜು ೧೯೮೫೮ ದಿನಗಳ   NSS  ಕ್ಯಾಂಪ್  ನೆನಪಿಗೆ  ಬಂತು. ನನ್ನ ಕಾಲೇಜ್  ಆಲ್ಬಮ್  ತೆರೆದಾಗ  ಈ ಛಾಯಾಚಿತ್ರ  ನೋಡಿದಾಗ  ನನ್ನ  ನೆನಪಿನ  ಬುತ್ತಿ  ಬಿಚ್ಚಿತು.  ಅಂದಿನ ಒಂದು ಕ್ಯಾಂಪ್ ಚಿಕ್ಕ ಕುರುಬರ ಹಳ್ಳಿಯ  ರಸ್ತೆಯ  ಎಡ ಬಾಗದಲ್ಲಿರುವ  ಆಂಜನೇಯ ಸ್ವಾಮಿ ದೇವಸ್ಥಾನ  ಆವರಣದಲ್ಲಿ  ಭೂಮಿಯನ್ನು  ಹದ ಮಾಡಿ  ಗುಣಿ ತೆಗೇದು  ೧೦೦ ಗಿಡಗಳನ್ನು  ಅಂದಿನ YR  ಮಾಸ್ಟರ್ ಮಾರ್ಗ ದರ್ಶನ ದಲ್ಲಿ  ನೆಟ್ಟವು.  ಆ ಗಿಡಗಳು  ತುಸು ಮರಗಳಾಗಿವೆ.  ಇವೆಲ್ಲಾ  ಒಂದು  ಸುಂದರ  ನೆನಪುಗಳು . ಕಲ್ಲು  ಎತ್ತಿರುವುದು  ನಾನು ಮತ್ತು ನನ್ನ ಗೆಳೆಯ  ಆದಿ .  ಇಂತಹ  ಸುಮಾರು  ಛಾಯಾಚಿತ್ರ ಇತ್ತು..  ಪ್ರೀತಿಯಿಂದ  ನನ್ನ ಗೆಳೆಯರು  ಕೆಲವು   ಆಲ್ಬಮ್  ನೋಡುವಾಗ  ಕದ್ದಿದ್ದಾರೆ. 

Saturday, June 30, 2018

ಲಾಳ

     ನಾಗರಿಕತೆ  ಬೆಳೆಯುತ್ತಾ ..  ಇಂತಹ ದೃಶ್ಯ   ಕಡಿಮೆ  ಆಗ್ತಾಯಿದೆ. ದುಡಿಯುವ  ಎತ್ತುಗಳಿಗೆ  ಪಾದದ ಉಗುರು  ಸವೆಯ ಬಾರದೆಂದು  ಕಬ್ಬಿಣದ ದಪ್ಪ ತಗಡು ಹೊಡೆಯುತ್ತಾರೆ.   ಆ  ತಗಡಿಗೆ  "ಲಾಳ "  ಎನ್ನುತ್ತಾರೆ.  ಈ  ದೃಶ್ಯ   ದನಗಳ  ಜಾತ್ರೆಯಲ್ಲಿ   ಕಾಣಬಹುದು.  ನಾವು  ಚಿಕ್ಕವರಿದ್ದಾಗ  ದಿನ  ನಿತ್ಯ  ಸಾಮಾನ್ಯ  ದೃಶ್ಯ ವಾಗಿರುತ್ತಿತ್ತು. 

Saturday, April 7, 2018

ಜೋಡಿ


ಬಣ್ಣದ ಕ್ರೀಡೆ

ಹಳ್ಳಿಹೈದ   ಎಮ್ಮೆ  ಮೈ ತೊಳೆಯುವ ದೃಶ್ಯ  ನಮ್ಮ  ಗೊಟಕನಾಪುರ ಹಳ್ಳಿಯ  ಕೆರೆಯಲ್ಲಿ 

Saturday, March 31, 2018

ಅಂದು---ಇಂದು 2010--2018


ನಮ್ಮ ಉತ್ತರ ಪಿನಾಕಿನಿಯ  ಉತ್ತಂಗ ಮತ್ತು ಅವನೀತಿಯ  ಛಾಯಾಚಿತ್ರ