Sunday, May 29, 2011

ಬಸವನ ಹುಳು






            ನೆರಳಲಿ  ತಂಪಾಗಿ  ಚಿಪ್ಪಿನೊಳಗೆ ಮುದುಡಿ ಮಲಗಿದ್ದ  ಬಸವನ ಹುಳುವನ್ನ,
        ಎಬ್ಬಿಸಿ  ಬಿಸಿಲಲ್ಲಿ ಇಟ್ಟಾಗ  ಅದರ  ನಡಿಗೆಯ ಭಂಗಿಗಳು..............!!!!!!!.

Monday, May 23, 2011

ಹೊಟ್ಟೆ ಪಾಡು

ಕೆರೆಯಲ್ಲಿ ನೀರು ಕಡಿಮೆ  ಆಗುತ್ತಾ  ಬರುತ್ತಿದೆ. ಈ ಹಕ್ಕಿಗಳಿಗೆ  ಮೀನು ಗಳ  ಸುಗ್ಗಿ.




Saturday, May 14, 2011

ಸಿಂಗಾರ



      ಈ  ಹಕ್ಕಿಗಳು    ಮುಂಜಾನೆಯ  ಸೂರ್ಯನಿಗೆ ಮಧು  ಮಗನಂತೆ  ಸಿಂಗಾರ 
     ಮಾಡುವದರಲ್ಲಿ  ಸಂಬ್ರಮದಿಂದ  ತೊಡಗಿಸಿ ಕೊಂಡಿವೆ.

ಕುರ್ರ ಮಾಮ


  ಇವರು ನಮ್ಮ ಕಡೆ  ಹಾಲಕ್ಕಿ ಶಾಸ್ತ್ರ ನುಡಿಯುವರಂತೆ........ ನಮ್ಮ ಗಡಿಗೆ ಹೊಂದಿ ಕೊಂಡಂತೆ  ಆಂಧ್ರ  ಪ್ರದೇಶದ  ಇವರನ್ನು " ಕುರ್ರ  ಮಾಮ  ಅಥವಾ ಕೊಂಡ ದೇವಡು "  ಅಂತ  ಕರೆಯುತ್ತಾರೆ. ಇವರು   ಶಾಸ್ತ್ರ  ಹೇಳುವ ಮುನ್ನ  ಈ  ರೀತಿ  ಪದಗಳನ್ನು  ಹೇಳುತ್ತಾರೆ.
                         ಕೊಂಡ ದೇವುಡ 
                         ಜಾಗ್ನುನಾಥುಡ
                         ಮಸ್ತಚಂದ್ರ 
                         ಕುರ್ರ ಮಾಮಡ
ಒನ್ನದಿ  ಒಂನತ್ಲ ..............ಲೇನದಿ  ಲೇನತ್ಲ  ಚಬುತಾನು................ ಎಂದು  ಪ್ರಾರಂಬಿಸಿ  ಬಹಳ ಚಾಲಾಕಿ  ತನದಿಂದ ಭವಿಷ್ಯ  ನುಡಿಯುತ್ತಾರೆ. ಇವರು ಹೆಚ್ಹಾಗಿ  ಕೋರುವುದಿಲ್ಲ. ಒಂದು  ಹಳೇ ಬಟ್ಟೆಗೂ  ಅಥವಾ  ೧೦ ರೂಪಾಯಿಗು  ತೃಪ್ತಿ  ಹೊಂದುತ್ತಾರೆ. ಇವರು  ಇತ್ತೀಚಿಗೆ  ಕಾಣೆ ಆಗುತ್ತಿದ್ದಾರೆ. ತುಸು  ದಿನ ಕಳೆದರೆ
ಜಾನಪದ  ಕೊಂಡಿ  ಕಳಿಚಿದಂತೆ ಸರಿ.

Thursday, May 5, 2011

ಚಿಕ್ಕಬಳ್ಳಾಪುರ-೨೦೧೧ ರ ಸಾಹಿತ್ಯ ಸಮ್ಮೇಳನದಲ್ಲಿ




        ೪.೫.೨೦೧೧ ಮತ್ತು ೫.೫.೨೦೧೧ ಎರಡು  ದಿನ   ಅದ್ಬುರಿಯಾಗಿ  ಸಾಹಿತ್ಯ ಸಮ್ಮೇಳನ ಚಿಕ್ಕಬಳ್ಳಾಪುರದ ನಂದಿ ರಂಗ ಮಂದಿರ ದಲ್ಲಿ ಶ್ರೀ ಕ್ಯೆಪು  ಲಕ್ಷ್ಮಿ ನರಸಿಂಹ  ಶಾಸ್ತ್ರೀ  ಸಮ್ಮೇಳನ ಅಧ್ಯಕ್ಷರಾಗಿ  ನೆರವೇರಿಸಿ  ಕೊಟ್ಟರು. 
ಶಿಕ್ಷಣ ಸ್ಥಿತಿ -ಗತಿಗಳು,ಜಿಲ್ಲೆಯ  ಆಧ್ಯಾತ್ಮಿಕ  ಚಿಂತಕರು, ತಾತಯ್ಯ,ನೀರಾವರಿ  ಯೋಜನೆಗಳು,ಮಹಿಳೆ ಮತ್ತು  ಅಭಿವುದ್ದಿ , ಸಾಹಿತ್ಯ ಮತ್ತು  ಸಾಂಸ್ಕೃತಿಕ ಪರಂಪರೆ, ಕವಿಗೋಷ್ಠಿ .............ಇತರ  ಕಾರ್ಯ ಕ್ರಮ  ಸೊಗಸಾಗಿ 
ನಡೆಯುತು.
       ಈ  ಕವಿಗೋಷ್ಠಿ ಯಲ್ಲಿ  ನಾನು ಒಬ್ಬನಾಗಿ ಕವನ ವಚನ  ಮಾಡಿದೆ . ಆ  ಕವನ  ಈ  ಕೆಳಗಿನಂತೆ  ಇದೆ.

 
     ಕೊಲಿಗಳು
     ಕೂಲಿಗಳು 
    ನಾವು ಕೂಲಿ ಆಳುಗಳು
    ನಮಗಿಲ್ಲ ಸರಿ ದಾರಿಗಳು
    ಸಾಗಲಾರೆವು ನೇರ  ದಾರಿಗಳು 
 
    ಸುಗ್ಗಿಯ ನೋಡದ   ದವಸಗಳು
    ದವಸವು ಮೊಡದ ತೆನೆಗಳ
    ತೆನೆಗಳೇ  ಇಲ್ಲದ ಕಾಳುಗಳು
    ಕಾಳೆ  ಕಾಣದ   ಕಡ್ಡಿಗಳು
    ಕಡ್ಡಿಯೇ  ಮೊಳೆಯದ   ಭೂಮಿಗಳು
    ಭೂಮಿಯೇ  ಇಲ್ಲದ  ಕೂಲಿಗಳು

    ಸಿರಿಯರ ಹರಿಕೆಯಾ ಕುರಿಗಳು 

    ಗೆಲುವೇ ಗೆಲ್ಲದ ಸೋಲುಗಳು
    ಸೋಲುನು ಹಾಸೋದ್ದ  ಸಾವುಗಳು
    ಸಾವಿನ ಮುಳ್ಳಲಿ  ಹೆಜ್ಜೆಗಳು
    ಹೆಜ್ಜೆಯು ಊರದ ಜೀವಿಗಳು
    ಜೀವವು ಬೆಳಗದ ಬದುಕುಗಳು
    ಬದುಕೇ  ಏರದ  ಜೀತದಾಳುಗಳು
    ಜೀತದ ನೋವಿನ  ಮೇಘಗಳು
    ಮೇಘವು  ಪ್ರಸವಿಸಿದ  ಹನಿಗಳು
    ಹನಿಯನು ಹೀರುವ  ಅರಸರು
    ಅರಸರ ಪಾದಕೆ ಮೆಟ್ಟುಗಳು
    ಅರಸೊತ್ತಿಗೆಗೆ  ನಮ್ಮ ಗೋರಿಗಳೇ ಮೆಟ್ಟಿಲುಗಳು