Tuesday, October 25, 2011

ಗೊರವಯೈ




 ಇವರು  ಸಹ ನಮ್ಮ ಜಾನಪದ ಕೊಂಡಿಗಳು. ನನ್ನ ತಾಲೂಕಿನ  ಗೆದೆರೆ  ಹಾಗು ಗೆದೆರೆ ಬೊಮ್ಮಸಂದ್ರ
ಹಳ್ಳಿಯಲ್ಲಿ  ವಾಸವಾಗಿ ಇಂದಿಗೂ ತಮ್ಮ ಕುಲ  ವೃತ್ತಿಯನ್ನು  ಬಿಟ್ಟಿಲ್ಲಾ.ಇವರು  ವ್ಯಕ್ತಿಯ  ಮುಖ ಚಹರೆ
ನೋಡಿ  ತುಸು ಹೊಗಳಿಕೆ  ಮಾತು  ಹಾಡಿ ಹೊಗಳಿ  ಜಾತಕ ಹೇಳುತ್ತಾರೆ . ಇವರಿಗೂ  ತಮ್ಮದೇ  ಆದಾ
ಪರಂಪರೆ  ಇದೆ.


Monday, October 10, 2011

ಪಾಪಸು ಕಳ್ಳಿ



ಈ  ಪಾಪಸು  ಕಳ್ಳಿ  ನೋಡುವುದಕ್ಕೆ  ಸುಂದರ  ಆದರೆ  ಈ ಮುಳ್ಳು ಚುಚ್ಚಿದರೆ  ಅಷ್ಟೇ
ವಿಷಕಾರಿ. ಆದರೆ  ವಿಸ್ಮಯ  ಅಂದರೆ  ಇದರ  ಹಣ್ಣು. ಬಹಳ  ರುಚಿಕರ.! ಈ ಹಣ್ಣನ್ನು
ಬಹಳ  ಹುಷಾರಿನಿಂದ  ತಿನ್ನಬೇಕು.  ಈ ಹಣ್ಣಿನ ಮೇಲಲ್ಲ ಧೋಳಿನಂತ ಮುಳ್ಳುಗಳು
ಅದರ  ಒಳಗೆ  ರಕ್ತ ವರ್ಣದ  ಹಣ್ಣಿನ ತಿರುಳು. ರುಚಿ  ಸ್ವರ್ಗಕ್ಕೆ  ಒಂದು ಗೇಣು. ತಪ್ಪಿದರೆ
ಬಾಯೆಲ್ಲ  ಧೋಳು ನ   ಮುಳ್ಳು. ಹೊಸಬರು  ಇದನ್ನು  ತಿನ್ನದಿರುವುದು  ಲೇಸು.

Friday, October 7, 2011

ಬಲಿ


            ಹಳ್ಳಿಗಳಲ್ಲಿ  ದಸರಾ, ದೀಪಾವಳಿ,ಯುಗಾದಿ..... ಹಬ್ಬಗಳಲ್ಲಿ ದುಷ್ಟ  ಶಕ್ತಿ ಗಳು  ಹಳ್ಳಿ ಪ್ರವೇಶ  ಮಾಡ ಕುಡುದೆಂದು ಈ ರೀತಿ  ಕೋಳಿಯನ್ನು  ಹಳ್ಳಿಯ ಮುಖ್ಯ  ದಾರಿಯಲ್ಲಿ  ಬಲಿ ಕೊಟ್ಟಿರುವುದು.      
            ಇದರಿಂದ   ಹಳ್ಳಿಯಲ್ಲಿ   ನೆಮ್ಮದಿ ಇಂದ  ಇರುತ್ತದೆ ಎಂದು ಅವರ  ನಂಬಿಕೆ.