Monday, December 27, 2010

ಪ್ರಕೃತಿಗೆ ಚಿನ್ನ ಬೆಳ್ಳಿಯ ಮೆರಗು

ಚಿನ್ನದ ಲೋಕಕ್ಕೆ.............ಪಯಣ

ಚಿನ್ನದ  ನಾಡಿಂದ ಚಿನ್ನದ ಕೋಲು ತಂದ hallihyda

    

ಗೀಜಗನ ಗೂಡುಗಳು



                ಈ  ಗೀಜಗನ  ಮತ್ತು  ಗುಬ್ಬಿಯ  ಗೂಡುಗಳು  ಎಲ್ಲಾ ಕಡೆ  ಕಣ್ಮರೆ ಆಗುತ್ತಿದೆ. ಕಾರಣ  ಮೊಬೈಲ್ ಫೋನು  ಟವರು  ಈ  ಛಾಯಚಿತ್ರ  ಸಿದ್ದರ ಬೆಟ್ಟಕ್ಕೆ  ಹೋಗುವ ರಸ್ತೆಯ  " ಮಲ್ಲೆ ಕಾವು " ಎಂಬ  ಹಳ್ಳಿಯಲ್ಲಿ  ಸಿಕ್ಕಿದ್ದು. ಕಾರಣ  ಅಲ್ಲಿ  ಸುತ್ತ  ಮುತ್ತ ಟವರು  20 km  ಸಿಕ್ಕುವುದಿಲ್ಲ.ಅದ್ದರಿಂದ ಗುಬ್ಬಿಯ  ಗೂಡುಗಳು  ಅಲ್ಲೆಲ್ಲಾ ಹೇರಳವಾಗಿ  ತುಂಬಿ  ಕಣ್ಣಿಗೆ  ಹಬ್ಬವನ್ನು  ಉಂಟುಮಾಡುತ್ತವೆ.

Sunday, December 26, 2010

ಚುಟುಕು ಜೇನು ಗುಟುಕು

                                                 

                                            
           ಕವನ  

   ಕವನ  ಅಂದರೆ
   ಕವಿಯ ಅಂತರಂಗದ ...ಗಾನ

            ಜನನ 
  ಮಳೆ  ಬಿಸಿಲಿನ  ಮಿಲನ
  ಕಾಮನ  ಬಿಲ್ಲಿನ  ಜನನ

           ದೇವರು 

  ದೇವರೆಂದರೆ  ತುರಿಕೆ
  ಕೆರೆದರೆ  ಆನಂದ
  ಅರಿತರೆ  ಒಬ್ಬನೇ....
  ಗೋವಿಂದ

          ಬೆಳ್ಳಕ್ಕಿ  ಸಾಲು 

   ಬೆಳ್ಳ೦
   ಬೆಳ್ಳಗ್ಗೆ
   ಬೆಡಗಿಯ  ಕೊರಳಲಿ
   ಬೆಳಗುವ
   ಬೆಳ್ಳಿಯ ಸರ
                                    
          ಅರಿವು 
         ಅ ರಿ ವು 
         ಹಿ ರಿ ದಲ್ಲಾ 
         ಅ ರಿ ವಿನ 
         ಇ ರಿ ವು 
         ಹಿ ರಿ ದು

           ಕವಿತೆ 
                                        
     ಕ ವಿತೆ  ಅಂದರೆ
     ಕ ವಿಯ
     ಕ ಲ್ಪನೆ
     ಕ ನಸು
     ಕ ಸದ
     ಕ ೦ತೆ

                        ಚೆಂದ 

     ಇನಿಯಳ   ಉಬ್ಬು ತಗ್ಗುಗಳಿಗೆ  ಸೀರೆ
                      ಚೆಂದ
    ಇಳೆಯ     ಉಬ್ಬು ತಗ್ಗುಗಳಿಗೆ ಹಸಿರೇ
                      ಚೆಂದ

                    ಮಹಾತ್ಮ 

      ಸ್ವಾತಿ  ಮಳೆಯ  ಕೋಟಿ  ಹನಿಗಳು
                   ಮುತ್ತಾಗಲ್ಲಾ
      ಭೂ  ತಾಯಿ  ಹಡೆದ  ಮಕ್ಕಳೆಲ್ಲಾ
                    ಮಹಾತ್ಮರರಾಗೋಲ್ಲಾ

                       ಮೌನ 

              ಮೌನ  ಅಂದರೆ
              ಧ್ಯಾನದಾಳದ
             ಶ್ವಾಸ ಗಾನ

                     ಸಂತೋಷ 

      ಕನಸಲಿ  ಮೊಳೆತ  ಮೊಗ್ಗುಗಳು
      ಜೀವನದಲಿ  ಅರಿಳಿದಾಗ
      ಆಗುವ  ಅನುಭವ
                                                    
                    ನಿರಾಸೆ 

       ಕನಸಲಿ  ಅರಳಿ ನಗುವ ಹೂ ಗಳು
       ಜೀವನದ ಬೇಗುದಿಗೆ  ಬಾಡಿ ಬೆಂದಾಗ
       ಆಗುವ  ಅನುಭವ



             ಕವನಗಳು 

             ಚಿತ್ತಾರ 
  ಬ ಯಲು   ಸೀಮೆಯ 
  ಬ ಲಾಡ್ಯ   ತುಡುಗ
  ಬ ರಿವೆಂದು   ಈ 
  ಬ ಡವಿಯ ಹೃದಯದಿ 
  ಬ ಣ್ಣ ಬಣ್ಣದ  ಚಿತ್ತಾರ 
  ಬ ರೆಯಲು 


                     

Sunday, December 19, 2010

Friday, December 17, 2010

ಅಲೆಮಾರಿ ಬದುಕು

ಈ  ಅಲೆಮಾರಿ  ಹೆಜ್ಜೆಗಳು  ಅಭಿವೃದ್ದಿ ಪಥದಲ್ಲಿ  ಸೇರುವುದು ಎಂದು..????
ಈ  ಛಾಯಾ ಚಿತ್ರಕ್ಕೆ  ಅಲೆಮಾರಿ ಬದುಕು  ಅಥವಾ  ಅಲೆಮಾರಿ ವ್ಯಾಪಾರ ಅನ್ನಬಹುದು.

ಹಕ್ಕಿಗಳು ಭಾಗ-೨

                                                    

Thursday, December 9, 2010

ಬುಗುರಿ ಆಟ



 
          ಈ ಆಟವನ್ನು  ಸಾಮಾನ್ಯವಾಗಿ  ಗಂಡು  ಮಕ್ಕಳು ಹಳ್ಳಿಗಳಲ್ಲಿ  ಬುಗುರಿ  ಆಟವನ್ನು  ಹೆಚ್ಚಾಗಿ  ಆಡುತ್ತಾರೆ. ಈ   ಬುಗುರಿ  ಆಟಕ್ಕೆ ಇತಿಹಾಸದ  ಹಿನ್ನೆಲೆ  ಸಮೃದ್ದಿಯಾಗಿ  ಮಹಾಭಾರತ  ಕಥೆಯಲ್ಲಿ ಪಾಂಡವರು  ಮತ್ತು  ಕೌರವರು  ಆಟದ  ಸನ್ನಿವೇಶದಲ್ಲಿ  ಕಾಣಿಸುತ್ತದೆ.
          ಹಳ್ಳಿಗಳಲ್ಲಿ  ಈಗಲೂ  ಕೆಲುವು ಕಡೆ  ಈ  ಆಟದ ಕುರುಹು  ಕಾಣಬರುತ್ತದೆ. ಉದಾ:  ಗೌರಿಬಿದನೂರಿನ  ತಾಲೂಕಿನ ಮಂಚೇನ ಹಳ್ಳಿಯಾ " ಭೀಮನ ಬುಗುರಿ (ಬೆಟ್ಟ).

            ಈ ಆಟದ ನಿಯಮ ಈ ರೀತಿ:
         ಚಿತ್ರದಲ್ಲಿ  ಕಾಣುವಂತೆ  ಮೊದಲು  ಹುಡಗರು  ಬುಗುರಿಯನ್ನು  ದಾರದಿಂದ ಹೊಸೆದ  ಚಾಟಿಯನ್ನು ಸುತ್ತಿ  ಆಟದಲ್ಲಿ ಇರುವ  ಹುಡುಗುರು ಬಂಗರವನ್ನು ಸ್ಪರ್ಶಿಸಿ  ತಕ್ಷಣ  ನೆಲಕ್ಕೆ  ಹಾಕಿ  ನಂತರ  ಚಾಟಿಯ  ಸಹಾಯದಿಂದ ಯಾರು ಕ್ಯಲ್ಲಿ ಹಿಡಿಯುತ್ತಾರು......... ಅವರು  ಆಟ  ಆಡಲು  ಸಿದ್ದವಾಗುತ್ತಾರೆ. ಅಂತಿಮವ  ಬುಗುರಿಯನ್ನು  ನೆಲದಲ್ಲಿ  ಇಡುತ್ತಾನೆ.  ಮಿಕ್ಕವರು  ನೆಲದಲ್ಲಿ ಬಿದ್ದ ಬುಗುರಿಗೆ  ಗುರಿ ಇಟ್ಟು ಹೋಡೆದು  ಗುನ್ನ (ತೂತು) ಮಾಡುತ್ತಾರೆ.

          ಹೀಗೆಯೇ  ಆಟ ಮುಂದುವರೆಯುತ್ತದೆ. ಈ  ಆಟದಲ್ಲಿ  ಬುಗುರಿಗಳು ಎರಡು  ಹೋಳು  ಆಗುವುದು  ಸರ್ವೇ  ಸಾಮಾನ್ಯ.
           ನೆಲಕ್ಕೆ  ಬುಗುರಿ  ಬೀಳದ ಹಾಗೆ  ಕ್ಯೆಲ್ಲಿ  ಹಿಡಿದರೆ  ಅದಕ್ಕೆ "ಅಂತರ  ಮಂಗ" ಎನ್ನುತ್ತಾರೆ. ಆಟಗಾರನ ಅನುಭವದಿಂದ  ಬುಗುರಿಯನ್ನು ಅನೇಕ  ರೀತಿ ಆಡಿಸುತ್ತಾನೆ.

Tuesday, December 7, 2010

ಈಜಿನಾ........ಮೋಜು


ಈ ಚಿತ್ರ  ಗೌರಿಬಿದನೂರಿನ  ಗೆದರೆ  ಬೆಟ್ಟದ ಕೆಳಗೆ  ನೀರಿನ  ಹೊಂಡದಲ್ಲಿ  ಸಂತೋಷದ  ಎಲ್ಲೇ  ಮೀರಿ  ಈಜುತ್ತಿರುವ  ಮುಗ್ದ  ಬಾಲಕರು.

Thursday, December 2, 2010

ಹಳ್ಳಿಯ ಮುಂಜಾನೆಯ ದಿನಚರಿ

  ಈ ಚಿತ್ರ " ರಾಜ್ಯ ಮಟ್ಟದ ಚಿತ್ರ ಪ್ರದರ್ಶನ " ಶಿವಮೊಗ್ಗ (ಸಾಗರ ತಾಲೂಕು ) ಸಾಗರ ಫೋಟ್ ಕಮಿಟಿಗೆ ೨೬-೧೧-೨೦೧೦ ಆಯ್ಕೆ ಆಗಿದೆ.

ಪ್ರಕೃತಿ ಚಿತ್ರಗಳು


ಈ  ಹುತ್ತ ಏಳು ಅಡಿಗಳು ಬೆಳದು ನಿಂತಿದೆ.
ಮಣ್ಣಿನ  ಮೊಸಳೆ

                         ಈ ಛಾಯಾ ಚಿತ್ರ  ನಂದಿ ಬೆಟ್ಟದಲ್ಲಿರುವ  ಮೆಟ್ಟಿಲು ಗಳಲ್ಲಿ ಇದು ಒಂದು.

ಹಳ್ಳಿ ಜೀವನ






ರಂಗು ರಂಗಿನ ಮೇಘಗಳು

ಮೀನಿನ  ಆಕೃತಿಯ  ಮೇಘ




ಈ  ಮೇಘ  ಛಾಯಾ ಚಿತ್ರದಲ್ಲಿ ಆರೇಳು  ರಂಗು ರಂಗಿನ ಬಣ್ಣ ಇದೆ


ಈ  ಮೇಘ ಛಾಯಾ ಚಿತ್ರದಲ್ಲಿ ಅಖಂಡ  ಭಾರತದ ಭೂ ಪಟ  ಕಾಣುತ್ತಿದೆ.

ಕಾಡು ಕೋಳಿಗಳು


ಹಕ್ಕಿಗಳು

ಒಂಟಿ ಗುಬ್ಬಿಯ   ಹಾಡು..............





ಈ ದೊಡ್ಡ(ದಾಸ) ಕೊಕ್ಕರೆ ಇರುವ ತಾಣ "ವೀರಾಪುರ" ಇದು  ಗೌರಿಬಿದನೂರ್ ನಿಂದ ೩೦ km ಆದಿನಾರಾಯಣ ಸ್ವಾಮಿ ಬೆಟ್ಟದ ರಸ್ತೆಯಲ್ಲಿ  ಇದೆ.