Friday, December 30, 2011

ಜನಪದ ಕುಣಿತ


 ಈ ಜನಪದ ಕುಣಿತದಲ್ಲಿ  ವಿವಿಧ ಭಂಗಿಗಳಲ್ಲಿ ಕುಣಿಯುತ್ತಾನೆ.
ಮಲಗಿ,ಕುಳಿತು,ಮಕ್ಕಳನ್ನು ಎತ್ತಿಕೊಂಡು....ಗಿರಗಿರನೆ  ಸುತ್ತುತ್ತಾ
ಕುಣಿಯುತ್ತಾನೆ.

Monday, December 26, 2011

ಮದುವೆಯ ಭೋಜನ

ಮದುವೆಯಲ್ಲಿ  ಮಿಕ್ಕ ತುಸು  ಅನ್ನವನು  ಈಚೆ  ಹಾಕಿದಾಗ ಅಳಿಲು   ಓಡಿ ಬಂದು
ತಿನ್ನುತ್ತಿರುವ ಸುಂದರ  ದೃಶ್ಯ

ಭರ್ಜರಿ ಭೋಜನ

ಮುಸ್ಸಂಜೆಯಲಿ ಬೆಳ್ಳಕ್ಕಿಗಳ ಸಾಮೂಹಿಕ ಮೀನಿನ  ಭೋಜನ  ಮರುಳೂರು ಕೆರೆಯಲಿ
ಮಟ ಮಟ  ಮಧ್ಯಾನ್ಹ ದಾಸ ಕೊಕ್ಕರೆಗಳು  ಮೀನಿನ  ಭೋಜನ ವೀರಪುರ ಕೆರೆಯಲ್ಲಿ

Tuesday, December 20, 2011

ಕಪ್ಪು ಹುಡುಗಿಯ ಹಾಡು

ಕಪ್ಪು ಕಪ್ಪೆಂದು
ಕಂಗೆಟ್ಟು  ನನ್ನ
ಕಡೆಗಣಿಸದಿರು
     ಕಪ್ಪು ಮೋಡವೆ
     ಭುವಿಯನು  ತಣಿಸುವುದು
     ಬಿಳಿ  ಮೋಡವಲ್ಲ
ಕಪ್ಪು ಮಣ್ಣಿನಿಂದಲೇ
ಪಸಲು ಸುಗ್ಗಿಯಾಗುವುದು
ಮಿನುಗು  ಮರಳಿಂದಲ್ಲಾ
     ಕಪ್ಪು ಕೋಗಿಲೆಯೇ
     ಗಾನ ಗಂಧರ್ವ ವಾದುದು
     ಬಿಳಿ ಬೆಳ್ಳಕ್ಕಿಯಲ್ಲಾ
ಕಪ್ಪು ಕಪ್ಪೆಂದು ಜರಿಯದೇ
ಯೋಚಿಸು ನನ್ನ ಪ್ರೀತಿಸು 
ನಿನ್ನ ಲಗ್ನ ಆಗ್ತೀನಿ
     ನಿನ್ನ ತನು ಮನಕೆ
     ಸಕಲ ಅಷ್ಟ ವ್ಯೆಭೋಗಕೆ
     ಕಾಮಧೇನು ಆಗ್ತೀನಿ



Sunday, December 4, 2011

ಕಳ್ಳಿ ಪೀರ

ಈ ಹಕ್ಕಿಯ ಹೆಸರು ಕಳ್ಳಿ ಪೀರ. ಬಹಳ ಸುಂದರವಾದ ಹಕ್ಕಿಗಳು. ಇವು ತಂತಿಗಳ ಮೇಲೆ ಕುಳಿತು
ಚಿಟ್ಟೆ,ಜೇನುಹುಳು,ಜೀರಂಗಿ,ಮಿಡತೆ ..........ಇವುಗಳ ಹಾರಾಟದ ಚಲನೆಯ ದಿಕ್ಕು ವೇಗ  ಅರಿತು
ಬೇಟೆಗೆ ಇಳಿಯುತ್ತವೆ. ಆ ಬೇಟೆಯಲ್ಲೂ ತಮ್ಮದೇ  ಆದ ಶ್ಯೆಲಿಯಲ್ಲಿ  ಉದ್ದವಾಗಿ...ಅಡ್ಡವಾಗಿ...ಕೆಳಮುಖವಾಗಿ
ಹರಡುತ್ತಾ  ವ್ಯೆವಿಧ್ಯತೆ ಹೊಂದಿದೆ.ಮೇ ತಿಂಗಳ ಅವದಿಯಲ್ಲಿ ಮೊಟ್ಟೆ ಇಟ್ಟು ಮರಿಗಳನ್ನು ಮಾಡುತ್ತದೆ. ಇವುಗಳ
ವಾಸ ನದಿ ದಡದಲ್ಲಿ. ಇವು  ನನಗೆ ಸಿಕ್ಕಿದ್ದು  ಉತ್ತರಪಿನಾಕಿನಿ  ನದಿ ದಡದಲ್ಲಿ.

ಬಳೆಗಾರ ಚನ್ನೆಯ್ಯ



Saturday, November 26, 2011

ಅಮ್ಮನ ಅರಿಯೋ

  ಅಮ್ಮನ ಅರಿಯೋ

ಅಮ್ಮನ ಪ್ರೀತಿಯ  ಸವಿಯೋ
ಸವಿಯಲಿ ಪ್ರೀತಿಯ  ಅರಿಯೋ

  ದುಡಿಮೆಯ  ಗುರಿಯಲಿ   ಹಣದ ಹೊಳೆಯಲಿ
  ಸುತ್ತುತಾ ಜಗದಲಿ  ಸಾಧನೆಯ  ರಥದಲಿ
  ಮಡದಿಯ  ತೋಳಲಿ   ಸುಖದ  ಸಾಗರದಿ
  ಅಮ್ಮನ  ಮರೆಯುವೆ  ಯಾಕೋ ..?--ನೀ  ಯಾಕೋ ..?

ಅಮ್ಮನ ಪ್ರೀತಿಯ  ಸವಿಯೋ
ಸವಿಯಲಿ ಪ್ರೀತಿಯ  ಅರಿಯೋ

  ನೆನ್ನೆಯ  ಬೆರತಿನರಮನೆಗೆ
  ಸೊಬಗಿನ  ಕಣ್ಣು ಮನಕೆ  ಸಕಲಕೆ
  ಅಮ್ಮನೆ  ಆದಿ  ಅರಿಯೋ
  ಅರಗಿನ  ಅರಸೊತ್ತಿಗೆ  ತೊರೆಯೋ--ಅಮ್ಮನ ಅರಿಯೋ

ಅಮ್ಮನ ಪ್ರೀತಿಯ  ಸವಿಯೋ
ಸವಿಯಲಿ ಪ್ರೀತಿಯ  ಅರಿಯೋ

Monday, November 21, 2011

ಬೆಳಕಿನ ಸೊಗಸು


                          ಉತ್ತರ ಪಿನಾಕಿನಿ ನದಿಯಲ್ಲಿ  ನೀರು ನಿಂತಿರುವ  ಸುಂದರ ನೋಟ

ಬಿಸಿಲಿನ ಜಳಕ


Friday, November 11, 2011

ಸಂಗಮ----ಸಂಭ್ರಮ



                                      ತಗಲೊಕ್ಕೊಂಡೆ ನಾನು ....ತಗಲಕ್ಕೊಂಡೆ ನಾನು

Wednesday, November 2, 2011

ಶ್ರೀನಿವಾಸ ಸಾಗರ

ಗೌರಿಬಿದನೂರ್ ನಿಂದ  ಕೇವಲ ಇಪ್ಪತು  ಕಿ.ಮಿ. ದೂರದಲ್ಲಿ  ಶ್ರೀನಿವಾಸ ಸಾಗರ ಇದೆ.
ಸುತ್ತಾ ಮುತ್ತ  ಹಳ್ಳಿಗಳಿಗೆ  ಅದ್ಬುತ  ಪ್ರವಾಸಿ  ತಾಣ. ಮಳೆ ಬಂದರೆ  ಉಬ್ಬಿಬ್ಬಿ  ಉಕ್ಕಿ

ಹರಿಯುತ್ತದೆ.ನೋಡಲು  ಎರಡು  ಕಣ್ಣು ಸಾಲದು. ಈ  ಕಟ್ಟೆಯ  ಉದ್ದ  ಸುಮಾರು ಇನ್ನೂರು
ಆಡಿ ಗಿಂತ  ದೂರವಿದೆ. ಎತ್ತರ  ನೂರು ಇದೆ. ಎತ್ತರದ ಕಟ್ಟೆಯ ಬಲ ಬಾಗದಲ್ಲಿ
ಶ್ರೀ ವೆಂಕಟರಮಣ ದೇವಸ್ಥಾನ ಇದೆ. ತುಂಬಾ  ಹಳೆಯ ಕಾಲದ ಸೊಗಸಿನ  ದೇವಸ್ಥಾನ.
ಈಗ  ತಿರುಪತಿ  ಟ್ರಸ್ಟ್  ರವರ  ಜೀರ್ನೋದ್ಧರ  ನೆಡುಯುತ್ತಿದೆ. ಮಕ್ಕಳಿಗಂತೂ ಇಲ್ಲಿ
ಇರುವತನಕ ಸಂತಸದ  ಕ್ಷಣ. ನಮ್ಮ  ಊರಿಗೆ  ಬಂದಾಗ  ಇಲ್ಲಿಗೆ  ಒಮ್ಮೆ ಭೇಟಿ  ಕೊಡಿ.

 


Tuesday, October 25, 2011

ಗೊರವಯೈ




 ಇವರು  ಸಹ ನಮ್ಮ ಜಾನಪದ ಕೊಂಡಿಗಳು. ನನ್ನ ತಾಲೂಕಿನ  ಗೆದೆರೆ  ಹಾಗು ಗೆದೆರೆ ಬೊಮ್ಮಸಂದ್ರ
ಹಳ್ಳಿಯಲ್ಲಿ  ವಾಸವಾಗಿ ಇಂದಿಗೂ ತಮ್ಮ ಕುಲ  ವೃತ್ತಿಯನ್ನು  ಬಿಟ್ಟಿಲ್ಲಾ.ಇವರು  ವ್ಯಕ್ತಿಯ  ಮುಖ ಚಹರೆ
ನೋಡಿ  ತುಸು ಹೊಗಳಿಕೆ  ಮಾತು  ಹಾಡಿ ಹೊಗಳಿ  ಜಾತಕ ಹೇಳುತ್ತಾರೆ . ಇವರಿಗೂ  ತಮ್ಮದೇ  ಆದಾ
ಪರಂಪರೆ  ಇದೆ.


Monday, October 10, 2011

ಪಾಪಸು ಕಳ್ಳಿ



ಈ  ಪಾಪಸು  ಕಳ್ಳಿ  ನೋಡುವುದಕ್ಕೆ  ಸುಂದರ  ಆದರೆ  ಈ ಮುಳ್ಳು ಚುಚ್ಚಿದರೆ  ಅಷ್ಟೇ
ವಿಷಕಾರಿ. ಆದರೆ  ವಿಸ್ಮಯ  ಅಂದರೆ  ಇದರ  ಹಣ್ಣು. ಬಹಳ  ರುಚಿಕರ.! ಈ ಹಣ್ಣನ್ನು
ಬಹಳ  ಹುಷಾರಿನಿಂದ  ತಿನ್ನಬೇಕು.  ಈ ಹಣ್ಣಿನ ಮೇಲಲ್ಲ ಧೋಳಿನಂತ ಮುಳ್ಳುಗಳು
ಅದರ  ಒಳಗೆ  ರಕ್ತ ವರ್ಣದ  ಹಣ್ಣಿನ ತಿರುಳು. ರುಚಿ  ಸ್ವರ್ಗಕ್ಕೆ  ಒಂದು ಗೇಣು. ತಪ್ಪಿದರೆ
ಬಾಯೆಲ್ಲ  ಧೋಳು ನ   ಮುಳ್ಳು. ಹೊಸಬರು  ಇದನ್ನು  ತಿನ್ನದಿರುವುದು  ಲೇಸು.

Friday, October 7, 2011

ಬಲಿ


            ಹಳ್ಳಿಗಳಲ್ಲಿ  ದಸರಾ, ದೀಪಾವಳಿ,ಯುಗಾದಿ..... ಹಬ್ಬಗಳಲ್ಲಿ ದುಷ್ಟ  ಶಕ್ತಿ ಗಳು  ಹಳ್ಳಿ ಪ್ರವೇಶ  ಮಾಡ ಕುಡುದೆಂದು ಈ ರೀತಿ  ಕೋಳಿಯನ್ನು  ಹಳ್ಳಿಯ ಮುಖ್ಯ  ದಾರಿಯಲ್ಲಿ  ಬಲಿ ಕೊಟ್ಟಿರುವುದು.      
            ಇದರಿಂದ   ಹಳ್ಳಿಯಲ್ಲಿ   ನೆಮ್ಮದಿ ಇಂದ  ಇರುತ್ತದೆ ಎಂದು ಅವರ  ನಂಬಿಕೆ.

Sunday, September 11, 2011

ತಾಯಿಯ ಮಮತೆ


ದಾಸಯ್ಯ



ನಮ್ಮ ಪ್ರಾಚೀನ ಜನಪದ ಕಲೆಗಳಲ್ಲಿ  ಈ ದಾಸಯ್ಯ  ಪಾತ್ರವು ಒಂದು.
ಇವರ  ಕ್ಯೆಲ್ಲಿ  ಇರುವ  ಪಾತ್ರೆ ಯನ್ನು  " ಅಕ್ಷಯಾ " ಪಾತ್ರೆ ಎಂದು
ಇದನ್ನು  ಶ್ರೀ ಕೃಷ್ಣ    ಕರಣಿಸಿದ್ದು.....ಎನ್ನುತ್ತಾರೆ. ಈ  ಪಾತ್ರೆ ಯಲ್ಲಿ
ನೀರನ್ನು ತುಂಬಿ  ತಲೆ ಮೇಲೆ  ಹಾಕಿಸಿ ಕೊಂಡರೆ    ಶುಭ  ಎನುತ್ತಾರೆ.
ಜೀವ ನದಿ,ಕಲ್ಯಾಣಿ... ಗಳ ಹತ್ತಿರ ಈ   ಸನ್ನಿವೇಶ ಇರುತ್ತದೆ. ಈ ಜಾಗಟೆ
ದುಷ್ಟ  ಶಕ್ತಿ  ಗಳನ್ನೂ ಓಡಿಸಲು.

Sunday, July 31, 2011

ಮಿಥುನ ಶಿಲ್ಪಗಳು

ಹಾವೂಗಳ  ಮಿಲನದಂತೆ

ಪ್ರಾಣಿಗಳ  ಮಿಲನದಂತೆ

ಮನುಜನ  ಮಿಲನದಂತೆ


ಈ ಛಾಯಾ ಚಿತ್ರದಲ್ಲಿ ಕಾಣುತ್ತಿರುವ ಶಿಲಾ ಕೃತಿಗಳು ಪ್ರಕ್ರತಿಯಲ್ಲಿ ನಿರ್ಮಾಣವಾಗಿರುವುದು. ಈ ಚಿತ್ರ 
ಗಳನ್ನು ಸೂಕ್ಷ್ಮವಾಗಿ  ಗಮನಿಸಿದಾಗ  ವಿವಿಧ ರೀತಿಯ  ರತಿ ಚಿತ್ರದಂತೆ  ಕಾಣುತ್ತದೆ. ಈ ಶಿಲಾ ಕೃತಿಗಳು ಗೌರಿಬಿದನೂರ್ ಸಕ್ಕರೆ ಫ್ಯಾಕ್ಟರಿ ಯಾ   ಹಿಂಭಾಗದಲ್ಲಿ  ಕಾಣುವ  ಶಿಲಾ ಚಿಕ್ಕ ಬೆಟ್ಟದಲ್ಲಿ ಇವೆ.


ಶಿಲೆಯಲಿ ನೀರಿನ ಬರಹ



ಹಳ್ಳಿ ನೋಟ