Tuesday, December 24, 2013

ದನದ ಕೊಟ್ಟಿಗೆ



     ಹಳ್ಳಿಗಳಲ್ಲಿ  ದನಗಳನ್ನಾ  ಕಟ್ಟಿ ಹಾಕುವ  ತಾಣ. ಎರಡನೇ ಛಾಯಾಚಿತ್ರದಲ್ಲಿ ತುಂಬಾ  ಹಿಂದಿನ ಕೊಟ್ಟಿಗೆ ಇದರಲ್ಲಿ ಸುಮಾರು ೨೦ ದನಗಳನ್ನಾಕಟ್ಟಿಹಾಕಬಹುದು .  ನಂತರ ಛಾಯಾಚಿತ್ರ ಬಯಲಲ್ಲಿ  ಕಟ್ಟಿ ಹಾಕುವತಾಣದ ಛಾಯಾಚಿತ್ರ .

Thursday, December 12, 2013

ಸ್ನೇಹಕ್ಕೆ ಸ್ನೇಹ


ಈ ಛಾಯಾ ಚಿತ್ರ  ನೋಡಿದಾಗ ..... ಸ್ನೇಹನೆ ಬಂಗಾರನ ಅಥವಾ ಬಂಗಾರದಂಥ ಸ್ನೇಹನಾ  ಅನಿಸುತ್ತಿದೆ ...!!!!!

Saturday, December 7, 2013

ಪಳಯುಳಿಕೆ


ಈ ಆವಸನದತ್ತ ಸಾಗಿರುವ ಪುರಾತನ ದೇವಾಲಯ  ಶಿವ ದೇವಾಲಯ . ಇದು ಗೌರಿಬಿದನೂರು ನ ಶ್ರೀನಿವಾಸ ಸಾಗರ ದ ಬಳಿ  ಇದೆ

ಬುಡಬುಡಿಕೆ


     
ಜಾನಪದ ಭವಿಷ್ಯಕಾರರ ಗುಂಪಿಗೆ ಸೇರಿದ ಇವರು ಸಾಮನ್ಯವಾಗಿ ಸುರ್ಯದೋಯದ  ನಂತರ ಭಿಕ್ಷೆಗೆ ಬರುತ್ತಾರೆ . ಭಿಕ್ಷೆಗೆ ಬಂದ ಮನೆ ಮನೆ ಯಜಮಾನ ನನ್ನು 
      ನಿನಗೆ ಲಕ್ಷಿಮಿ ಯೋಗವಿದೆ
      ನಿನ್ನ ಹಣೆ ವಿಶಾಲವಾಗಿದೆ
      ನಿನ್ನ ಮೂಗು ಗರುಡ ನ ತರಹ
      ನೀನು ಕೊಡೆಗ್ಯೆ  ದಾನಿ
       ನಿನ್ನ ನಂಬಿದರೆ ಕಲ್ಪ ವೃಕ್ಷ
       ನಿನ್ನ ನಂಬಿ ಕೆಟ್ಟವರಿಲ್ಲಾ .............
ಹೀಗೆ ಹೊಗಳಿ ಹೊಗಳಿ  ಯಜಮಾನನಾ ಮನಸ್ಸನ್ನು ಸುಪ್ರಿತ ಗೊಳಿಸಿ" ಹೊಗಳಿಕೆ ತೇರು-ಭವಿಷ್ಯ ಮಾರು"
ಎನ್ನುವಂತೆ ವರ್ತಿಸುತ್ತಾರೆ . ವಿಶೇಷ ಎಂದರೆ ಭಿಕ್ಷೆಗೆ ಇವರು ಹಣ ಬಯಸದೆ ದವಸ ಧನ್ಯ ಮತ್ತು ಬಳಸಿದ ಹಳೆ ಬಟ್ಟೆ ಗಳನ್ನೂ ಆಪೆಕ್ಷಿಸುತ್ತಾರೆ.
     ಕಾಲನ ಹೊಡೆತಕ್ಕೆ ಸಿಕ್ಕಿ ಬುಡುಬುಡುಕೆ ಸಂತತಿ ಮಾಯವಾಗುತ್ತಿದೆ . ಕೊನೆಯದಾಗಿ ಇವರು  ಪರಮ ಶಿವನ  ಆರಾಧಕರು.

Tuesday, December 3, 2013

ಬಾನು ಬಂಗಾರ


ಬಾನು ಬಂಗಾರ ........... ನೇಗಿಲ ಯೋಗಿಯ ಬಾಳು ......!!!!!!!???????????

ಶುಭ್ರತೆ

,ನಮ್ಮ ಹಳ್ಳಿಗಳಲ್ಲಿ ಬಟ್ಟೆ ಶುದ್ಧ ಮಾಡಬೇಕಾದರೆ   ಕೆರೆಯಲ್ಲಿ  ಶುದ್ಧ ಮಾಡುತ್ತಾರೆ .  ಆ ಒಂದು ನೋಟ

Saturday, November 30, 2013

ನೀರಿಗಾಗಿ ಹೆಜ್ಜೆ


                                               
ಕರಿ ಮೋಡ ಕರಿಗೆ
ಕೆರೆ ಕೋಡಿ ಹರಿಲಿಲ್ಲಾ ..................
ದಿಗಂತದಾಚೆ ಇರುವ ನೀರಿಗೆ
ದಾಪುಗಾಲು ನಿಲ್ಲಲಿಲ್ಲಾ ............. ....

Saturday, November 23, 2013

ಹಳ್ಳಿ ಹಕ್ಕಿಗಳು




ಸರ್ಕಾರ ಸಮೃದ್ಧಿಯಾಗಿ ಸಕಲ ಸವಲತ್ತು ಶಿಕ್ಷಣಕ್ಕೆ  ಕೊಟ್ಟರು ........... ಈ  ದೃಶ್ಯ  ಹಿಂದುಳಿದ ಹಳ್ಳಿಗಳಲ್ಲಿ  ಸರ್ವೆ  ಸಾಮಾನ್ಯವಾಗಿದೆ.

ತಾವರೆ ಹೂ



Wednesday, November 6, 2013

ಮರಳಿ ಮನೆಗೆ


ಸಂಜೆ ಹೊಲದ ಕೆಲಸ ಮುಗಿಸಿ....... ಸಂತೃಪ್ತಿ ಇಂದ  ಮನೆಗೆ ಹಿಂತಿರುಗುವ  ಬೇಸಾಯಗಾರರ ಹೆಜ್ಜೆಗಳು

Tuesday, October 29, 2013

ಹಳ್ಳಿ ಹೆಣ್ಣು

     ಹೊಲದಲ್ಲಿ ಸೊಪ್ಪು ಕತ್ತರಿಸಿ ಬಟ್ಟೆಯಲ್ಲಿ ಹೊರೆ ಕಟ್ಟಿ........... ಸಂತೆ ಅಥವಾ ಮಾರುಕಟ್ಟೆಯಲ್ಲಿ ಮಾರಿ ಬಂದ್ರು ... ನೆಡುಯುತ್ತಿರುವ ಹಾದಿ ಹಾಗೆ ಜೀವನ  ಅಂದ್ರೆ  ಹಾಗೆ ಗಮನಿಸಿ ಮುಂದೆ  ಇಳಿಜಾರು... ದುಡಿದಿದ್ದು ಬರಿ ಹೊಟ್ಟೆ ಮತ್ತು ಬಟ್ಟೆಗೆ ಮಾತ್ರ ...!!!!!!!!!!!!!!!!!!!!!!

Sunday, October 20, 2013

ಅವಸಾನ


  ಉರುಳಿ ಬಿದ್ದಿದೆ  
  ವಿದುರ ನೆಟ್ಟ ಮರ 
  ಶತ  ಶತಮಾನದ ಕೊಳಕು ಹುಳುಕುಗಳ.. ಕಂಡು
  ಸ್ಥಿತಪ್ರಜ್ಞನತೆ ಯಲಿ
 
ಮೆರದ ಆ-ಮರ     
            ಮರ  ಮುರಿದು ಬಿದ್ದಿದೆ     
            ಟೊಂಗೆ  ಟಿಸಿಲು ನುಚ್ಚು ನೂರಾಗಿದೆ     
           ಮತ್ತೆ ಭುವಿ ಯಿಂದ
           ಎದ್ದು ಗೆದ್ದು ಬರುವ ಹಂಬಲ     
           ಭ್ರಷ್ಟ ಗೆದ್ದಲು  ಹುಳುವಿನಿಂದಲ್ಲಾ ..... ಬೆಂಬಲ

Friday, September 6, 2013

ಮೇಘದಲ್ಲಿ ಕಲೆ





              ಮೊನ್ನೆ ಸಂಜೆ ಬ್ಯೆಕ್ ತಗೊಂಡು ಸುಮಾರು ೪೦ ಕಿ ಮಿ ಸುತ್ತಾಡಿದೆ ............... ಒಂದು  ಛಾಯಾಚಿತ್ರ ಸಿಗಲಿಲ್ಲಾ . ತುಂಬಾ ಬೇಸರ ಆಯ್ತು . ಬ್ಯೆಕ್ ಪಕ್ಕಕ್ಕೆ ಹಾಕಿ ಸುಮ್ಮನೆ ತಲೆ ಎತ್ತಿ  ಆಕಾಶ ನೋಡಿದೆ .  ಆಕಾಶ ದಲ್ಲಿ ರಂಗಿನ ಮೆರವಣಿಗೆ  ತುಂಬಾ ಸುಂದರವಾಗಿ ಸಾಗಿತ್ತು .   ವಿಶೇಷ ಸಿಗಬಹುದೆಂದು  ಕುತೂಹಲದಿಂದ  ಕ್ಯಾಮರಾ ಹಿಡಿದು ಕುಳಿತೆ . ವಾ.. ವಾ............ ಅದ್ಬುತ ಛಾಯಾಚಿತ್ರ  ಪ್ರಕೃತಿ  ದಯಾ ಪಾಲಿಸಿತು.
          ೧. ಈ ಛಾಯಾ ಚಿತ್ರ  ಇಲಿ ಯನ್ನು ಬೆಕ್ಕು ಬೇಟೆ  ಅಡುತ್ತಿರುವಂತಿದೆ.
          ೨. ಈ ಛಾಯಾಚಿತ್ರ ಕಾಡು ವಾಸಿಯ ಮಹಿಳೆ  ಘೋರ ಸರ್ಪವನ್ನು ಹೆದುರುಸುವಂತೆ ಕಾಣುತ್ತಿದೆ. ಈ ಛಾಯಾಚಿತ್ರ ವಿಶೇಷ ಅಂದ್ರೆ  ಕ್ಯಾಮರಾ ಕ್ಲಿಕ್ ಮಾಡಿದಾಗ ಮಾತ್ರ  ಈ ದೃಶ್ಯ  ಕಾಣುತ್ತಿತ್ತು . ಬರಿ ಕಣ್ಣಿನಲಿ ನೋಡಿದಾಗ  ಚಿದ್ರ ಚಿದ್ರ .. ಮೆಘದಂತೆ ಕಾಣುತ್ತಿತ್ತು . ಇದು ನನಗೆ ಮರೆಯಾಲಾರದ ಆನುಭವ.        
           ೩. ಖ್ಯಾತ ನವ್ಯ ಕಲಾವಿದ ಬಿಡಿಸಿದಂತೆ ಇದೆ.......... ಈ ಛಾಯಾ ಚಿತ್ರ .

ಅಗ್ನಿ ಪರ್ವತ


ಈ ಮೇಘದ ಛಾಯಾ ಚಿತ್ರ  ಭೊಮಿ ಇಂದ ಸ್ಪೋಟ ಗೊಂಡ ಅಗ್ನಿ ಪರ್ವತ ದಂತೆ ಕಾಣುತ್ತಿದೆ

Sunday, September 1, 2013

ಅಮ್ಮ ನಿನ್ನ ತೋಳಿನಲ್ಲಿ


ಈ ಛಾಯಾಚಿತ್ರ ನಮ್ಮ ಬಾಲ್ಯವನ್ನ ನೆನಪು ಮಾಡಿಕೊಡುತ್ತೆ.  ಅಮ್ಮನ ಕ್ಯೆ ತುತ್ತು,ಅಮ್ಮ ಬಿಡಿಸಿಕೊಟ್ಟ ಕಡಲೇಕಾಯಿ,ರಾಗಿ ತೆನೆ,ಜೋಳದ ಕಾಳು .............. ಕೊಡುತ್ತಿದ್ದರೆ ಎಷ್ಟು ಕೊಟ್ಟಷ್ಟು  ಅವೆಲ್ಲಾ ಅಮೃತ. ಆದ್ರೆ ಈ ಸೌಭಾಗ್ಯ  ಹೆಚ್ಚಾಗಿ ಹಳ್ಳಿ ಮಕ್ಕಳಿಗೆ ಸಿಕ್ಕುವುದು.  ಪಟ್ಟಣದ ಮಕ್ಕಳಿಗೆ  ಕಡಿಮೆ ಎಂದರೆ ತಪ್ಪಿಲ್ಲಾ.  ಭೂ ತಾಯಿ ಜೊತೆ ಬಾಲ್ಯ ಕಳೆಯೋ ಯೋಗ ಹೆಚ್ಚಾಗಿ  ಹಳ್ಳಿ ಹೈಕಳು ಗಳಿಗೆ.

Saturday, August 31, 2013

ಜಾನಪದ



ನಮ್ಮ  ಕಡೆ ಸಾಂಸ್ಕೃತಿಕ ಹಬ್ಬಗಳು ಆದಾಗ ಅನೇಕ ಕಡೆ ಇಂದ  ಈ ಜನಪದ ಕಲಾವಿದರನ್ನ  ಆಮಂತ್ರಿಸಿ ಹಬ್ಬದ ಹಿರಿಮೆಯನ್ನು ಹೆಚ್ಚಿಸುತ್ತಾರೆ .

Wednesday, July 3, 2013

ಶಿಲ್ಪ ಕಲೆ





ವೀರ ಆಂಜನೇಯ ದೇವಸ್ತಾನ  ನೋಡುವುದಕ್ಕೆ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತದೆ.  ಹೊಸತನದಲ್ಲಿ ಪುರಾತನದ ಶಿಲ್ಪಕಲೆ ಮೂಡಿದೆ. ಈ ದೇವಸ್ತಾನ ಚಿಕ್ಕಬಳ್ಳಾಪುರ ---ಬೆಂಗಳೂರು  ರಾಷ್ಟ್ರೀಯ ಹೆದ್ದಾರಿಯಲ್ಲಿದೆ .ಚಿಕ್ಕಬಳ್ಳಾಪುರದಿಂದ ಕೇವಲ 2  ಕಿ ಮಿ  ಇದೆ . ಒಮ್ಮೆ  ನೋಡಿ  ಅದ್ಬುತವಾಗಿದೆ.ಹೊಸ ಚಿಗುರು ಹಳೆ ಬೇರು ನಂತಿದೆ

ಆಸರೆ...!

ಭಾರ ಹೆಚ್ಚಾಗಿರಬೇಕು.....   ಅದಕ್ಕೆ  ಕುದುರೆಗೆ ಬ್ಯೆಕ್ ಆಸರೆ...!

Sunday, June 23, 2013

ಜಿಲ್ಲಾ ಸಾ. ಸಮ್ಮೇಳನ





 ಶಿಡ್ಲಘಟ್ಟ ದಲ್ಲಿ  13-14  ಜುಲೈ 2 0 1 4  ರಂದು ಜಿಲ್ಲಾ ಸಾಹಿತ್ಯ ಸಮ್ಮೇಳನ  ನಡೆಯಿತು .  ಆ ಸಮ್ಮೇಳನದಲ್ಲಿ ನನ್ನ ಸಾಮ್ರಾಟ್ ಅಶೋಕ  ಕಾದಂಬರಿ  ಪರಿಚಯ ಮಾಡಿ ಬಿಡುಗಡೆಮಾಡಿದರು.ಛಾಯಾಚಿತ್ರದಲ್ಲಿ ಸಮ್ಮೇಳನದ ಅಧ್ಯೇಕ್ಷೆ ಗುಡಿಬಂಡೆ ಪೂರ್ಣಿಮ ರವರು, ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷರು ಪುಂಡಲಿಕ  ಹಾಲಂಬಿ, ನಾನು ಮತ್ತು ಇತರರು. ಹಾಗು ಸಮ್ಮೇಳನದ ಸಂತಸದ ಕೆಲವು ಛಾಯಾಚಿತ್ರ........................