Friday, September 6, 2013

ಮೇಘದಲ್ಲಿ ಕಲೆ





              ಮೊನ್ನೆ ಸಂಜೆ ಬ್ಯೆಕ್ ತಗೊಂಡು ಸುಮಾರು ೪೦ ಕಿ ಮಿ ಸುತ್ತಾಡಿದೆ ............... ಒಂದು  ಛಾಯಾಚಿತ್ರ ಸಿಗಲಿಲ್ಲಾ . ತುಂಬಾ ಬೇಸರ ಆಯ್ತು . ಬ್ಯೆಕ್ ಪಕ್ಕಕ್ಕೆ ಹಾಕಿ ಸುಮ್ಮನೆ ತಲೆ ಎತ್ತಿ  ಆಕಾಶ ನೋಡಿದೆ .  ಆಕಾಶ ದಲ್ಲಿ ರಂಗಿನ ಮೆರವಣಿಗೆ  ತುಂಬಾ ಸುಂದರವಾಗಿ ಸಾಗಿತ್ತು .   ವಿಶೇಷ ಸಿಗಬಹುದೆಂದು  ಕುತೂಹಲದಿಂದ  ಕ್ಯಾಮರಾ ಹಿಡಿದು ಕುಳಿತೆ . ವಾ.. ವಾ............ ಅದ್ಬುತ ಛಾಯಾಚಿತ್ರ  ಪ್ರಕೃತಿ  ದಯಾ ಪಾಲಿಸಿತು.
          ೧. ಈ ಛಾಯಾ ಚಿತ್ರ  ಇಲಿ ಯನ್ನು ಬೆಕ್ಕು ಬೇಟೆ  ಅಡುತ್ತಿರುವಂತಿದೆ.
          ೨. ಈ ಛಾಯಾಚಿತ್ರ ಕಾಡು ವಾಸಿಯ ಮಹಿಳೆ  ಘೋರ ಸರ್ಪವನ್ನು ಹೆದುರುಸುವಂತೆ ಕಾಣುತ್ತಿದೆ. ಈ ಛಾಯಾಚಿತ್ರ ವಿಶೇಷ ಅಂದ್ರೆ  ಕ್ಯಾಮರಾ ಕ್ಲಿಕ್ ಮಾಡಿದಾಗ ಮಾತ್ರ  ಈ ದೃಶ್ಯ  ಕಾಣುತ್ತಿತ್ತು . ಬರಿ ಕಣ್ಣಿನಲಿ ನೋಡಿದಾಗ  ಚಿದ್ರ ಚಿದ್ರ .. ಮೆಘದಂತೆ ಕಾಣುತ್ತಿತ್ತು . ಇದು ನನಗೆ ಮರೆಯಾಲಾರದ ಆನುಭವ.        
           ೩. ಖ್ಯಾತ ನವ್ಯ ಕಲಾವಿದ ಬಿಡಿಸಿದಂತೆ ಇದೆ.......... ಈ ಛಾಯಾ ಚಿತ್ರ .

ಅಗ್ನಿ ಪರ್ವತ


ಈ ಮೇಘದ ಛಾಯಾ ಚಿತ್ರ  ಭೊಮಿ ಇಂದ ಸ್ಪೋಟ ಗೊಂಡ ಅಗ್ನಿ ಪರ್ವತ ದಂತೆ ಕಾಣುತ್ತಿದೆ

Sunday, September 1, 2013

ಅಮ್ಮ ನಿನ್ನ ತೋಳಿನಲ್ಲಿ


ಈ ಛಾಯಾಚಿತ್ರ ನಮ್ಮ ಬಾಲ್ಯವನ್ನ ನೆನಪು ಮಾಡಿಕೊಡುತ್ತೆ.  ಅಮ್ಮನ ಕ್ಯೆ ತುತ್ತು,ಅಮ್ಮ ಬಿಡಿಸಿಕೊಟ್ಟ ಕಡಲೇಕಾಯಿ,ರಾಗಿ ತೆನೆ,ಜೋಳದ ಕಾಳು .............. ಕೊಡುತ್ತಿದ್ದರೆ ಎಷ್ಟು ಕೊಟ್ಟಷ್ಟು  ಅವೆಲ್ಲಾ ಅಮೃತ. ಆದ್ರೆ ಈ ಸೌಭಾಗ್ಯ  ಹೆಚ್ಚಾಗಿ ಹಳ್ಳಿ ಮಕ್ಕಳಿಗೆ ಸಿಕ್ಕುವುದು.  ಪಟ್ಟಣದ ಮಕ್ಕಳಿಗೆ  ಕಡಿಮೆ ಎಂದರೆ ತಪ್ಪಿಲ್ಲಾ.  ಭೂ ತಾಯಿ ಜೊತೆ ಬಾಲ್ಯ ಕಳೆಯೋ ಯೋಗ ಹೆಚ್ಚಾಗಿ  ಹಳ್ಳಿ ಹೈಕಳು ಗಳಿಗೆ.