Saturday, November 26, 2011

ಅಮ್ಮನ ಅರಿಯೋ

  ಅಮ್ಮನ ಅರಿಯೋ

ಅಮ್ಮನ ಪ್ರೀತಿಯ  ಸವಿಯೋ
ಸವಿಯಲಿ ಪ್ರೀತಿಯ  ಅರಿಯೋ

  ದುಡಿಮೆಯ  ಗುರಿಯಲಿ   ಹಣದ ಹೊಳೆಯಲಿ
  ಸುತ್ತುತಾ ಜಗದಲಿ  ಸಾಧನೆಯ  ರಥದಲಿ
  ಮಡದಿಯ  ತೋಳಲಿ   ಸುಖದ  ಸಾಗರದಿ
  ಅಮ್ಮನ  ಮರೆಯುವೆ  ಯಾಕೋ ..?--ನೀ  ಯಾಕೋ ..?

ಅಮ್ಮನ ಪ್ರೀತಿಯ  ಸವಿಯೋ
ಸವಿಯಲಿ ಪ್ರೀತಿಯ  ಅರಿಯೋ

  ನೆನ್ನೆಯ  ಬೆರತಿನರಮನೆಗೆ
  ಸೊಬಗಿನ  ಕಣ್ಣು ಮನಕೆ  ಸಕಲಕೆ
  ಅಮ್ಮನೆ  ಆದಿ  ಅರಿಯೋ
  ಅರಗಿನ  ಅರಸೊತ್ತಿಗೆ  ತೊರೆಯೋ--ಅಮ್ಮನ ಅರಿಯೋ

ಅಮ್ಮನ ಪ್ರೀತಿಯ  ಸವಿಯೋ
ಸವಿಯಲಿ ಪ್ರೀತಿಯ  ಅರಿಯೋ

Monday, November 21, 2011

ಬೆಳಕಿನ ಸೊಗಸು


                          ಉತ್ತರ ಪಿನಾಕಿನಿ ನದಿಯಲ್ಲಿ  ನೀರು ನಿಂತಿರುವ  ಸುಂದರ ನೋಟ

ಬಿಸಿಲಿನ ಜಳಕ


Friday, November 11, 2011

ಸಂಗಮ----ಸಂಭ್ರಮ



                                      ತಗಲೊಕ್ಕೊಂಡೆ ನಾನು ....ತಗಲಕ್ಕೊಂಡೆ ನಾನು

Wednesday, November 2, 2011

ಶ್ರೀನಿವಾಸ ಸಾಗರ

ಗೌರಿಬಿದನೂರ್ ನಿಂದ  ಕೇವಲ ಇಪ್ಪತು  ಕಿ.ಮಿ. ದೂರದಲ್ಲಿ  ಶ್ರೀನಿವಾಸ ಸಾಗರ ಇದೆ.
ಸುತ್ತಾ ಮುತ್ತ  ಹಳ್ಳಿಗಳಿಗೆ  ಅದ್ಬುತ  ಪ್ರವಾಸಿ  ತಾಣ. ಮಳೆ ಬಂದರೆ  ಉಬ್ಬಿಬ್ಬಿ  ಉಕ್ಕಿ

ಹರಿಯುತ್ತದೆ.ನೋಡಲು  ಎರಡು  ಕಣ್ಣು ಸಾಲದು. ಈ  ಕಟ್ಟೆಯ  ಉದ್ದ  ಸುಮಾರು ಇನ್ನೂರು
ಆಡಿ ಗಿಂತ  ದೂರವಿದೆ. ಎತ್ತರ  ನೂರು ಇದೆ. ಎತ್ತರದ ಕಟ್ಟೆಯ ಬಲ ಬಾಗದಲ್ಲಿ
ಶ್ರೀ ವೆಂಕಟರಮಣ ದೇವಸ್ಥಾನ ಇದೆ. ತುಂಬಾ  ಹಳೆಯ ಕಾಲದ ಸೊಗಸಿನ  ದೇವಸ್ಥಾನ.
ಈಗ  ತಿರುಪತಿ  ಟ್ರಸ್ಟ್  ರವರ  ಜೀರ್ನೋದ್ಧರ  ನೆಡುಯುತ್ತಿದೆ. ಮಕ್ಕಳಿಗಂತೂ ಇಲ್ಲಿ
ಇರುವತನಕ ಸಂತಸದ  ಕ್ಷಣ. ನಮ್ಮ  ಊರಿಗೆ  ಬಂದಾಗ  ಇಲ್ಲಿಗೆ  ಒಮ್ಮೆ ಭೇಟಿ  ಕೊಡಿ.