೪.೫.೨೦೧೧ ಮತ್ತು ೫.೫.೨೦೧೧ ಎರಡು ದಿನ ಅದ್ಬುರಿಯಾಗಿ ಸಾಹಿತ್ಯ ಸಮ್ಮೇಳನ ಚಿಕ್ಕಬಳ್ಳಾಪುರದ ನಂದಿ ರಂಗ ಮಂದಿರ ದಲ್ಲಿ ಶ್ರೀ ಕ್ಯೆಪು ಲಕ್ಷ್ಮಿ ನರಸಿಂಹ ಶಾಸ್ತ್ರೀ ಸಮ್ಮೇಳನ ಅಧ್ಯಕ್ಷರಾಗಿ ನೆರವೇರಿಸಿ ಕೊಟ್ಟರು.
ಶಿಕ್ಷಣ ಸ್ಥಿತಿ -ಗತಿಗಳು,ಜಿಲ್ಲೆಯ ಆಧ್ಯಾತ್ಮಿಕ ಚಿಂತಕರು, ತಾತಯ್ಯ,ನೀರಾವರಿ ಯೋಜನೆಗಳು,ಮಹಿಳೆ ಮತ್ತು ಅಭಿವುದ್ದಿ , ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆ, ಕವಿಗೋಷ್ಠಿ .............ಇತರ ಕಾರ್ಯ ಕ್ರಮ ಸೊಗಸಾಗಿ
ನಡೆಯುತು.
ಈ ಕವಿಗೋಷ್ಠಿ ಯಲ್ಲಿ ನಾನು ಒಬ್ಬನಾಗಿ ಕವನ ವಚನ ಮಾಡಿದೆ . ಆ ಕವನ ಈ ಕೆಳಗಿನಂತೆ ಇದೆ.
ಕೊಲಿಗಳು
ಕೂಲಿಗಳು
ನಾವು ಕೂಲಿ ಆಳುಗಳು
ನಾವು ಕೂಲಿ ಆಳುಗಳು
ನಮಗಿಲ್ಲ ಸರಿ ದಾರಿಗಳು
ಸಾಗಲಾರೆವು ನೇರ ದಾರಿಗಳು
ಸುಗ್ಗಿಯ ನೋಡದ ದವಸಗಳು
ದವಸವು ಮೊಡದ ತೆನೆಗಳ
ತೆನೆಗಳೇ ಇಲ್ಲದ ಕಾಳುಗಳು
ಕಾಳೆ ಕಾಣದ ಕಡ್ಡಿಗಳು
ಕಡ್ಡಿಯೇ ಮೊಳೆಯದ ಭೂಮಿಗಳು
ಭೂಮಿಯೇ ಇಲ್ಲದ ಕೂಲಿಗಳು
ಸಿರಿಯರ ಹರಿಕೆಯಾ ಕುರಿಗಳು
ಗೆಲುವೇ ಗೆಲ್ಲದ ಸೋಲುಗಳು
ಸೋಲುನು ಹಾಸೋದ್ದ ಸಾವುಗಳು
ಸಾವಿನ ಮುಳ್ಳಲಿ ಹೆಜ್ಜೆಗಳು
ಹೆಜ್ಜೆಯು ಊರದ ಜೀವಿಗಳು
ಜೀವವು ಬೆಳಗದ ಬದುಕುಗಳು
ಬದುಕೇ ಏರದ ಜೀತದಾಳುಗಳು
ಜೀತದ ನೋವಿನ ಮೇಘಗಳು
ಮೇಘವು ಪ್ರಸವಿಸಿದ ಹನಿಗಳು
ಹನಿಯನು ಹೀರುವ ಅರಸರು
ಅರಸರ ಪಾದಕೆ ಮೆಟ್ಟುಗಳು
ಅರಸೊತ್ತಿಗೆಗೆ ನಮ್ಮ ಗೋರಿಗಳೇ ಮೆಟ್ಟಿಲುಗಳು
tumba chennagide e kavana
ReplyDelete