Sunday, May 29, 2016

ಜಕ್ಕಲ ಮಡುಗು



   ಈ  ಹೆಸರೇ ...  ತುಸು ಸಂತಸ ಕೊಡುತ್ತೆ .  ಸುತ್ತಾ  ನೂರಾರು  ಬೆಟ್ಟಗಳು   ಅದರ ನಡುವೆ  ಜಕ್ಕಲ  ಮಡುಗು ಹೆಸರನಿಂದ  ನಿರ್ಮಿತವಾದ  ಜಲಾಶಯಈ ಜಲಾಶಯ  ಸುಮಾರು ೭೦೦ ಅಡಿ   ಆಳ  ಇದೆ  ಮತ್ತು ೧ - ೩ ಕಿ ಮಿ  ವಿಸ್ತೀರ್ಣ  ಹೊಂದಿದೆ . ವಿಶೇಷವಾಗಿ ಮೂರೂ  ಬೆಟ್ಟಗಳು  ಮುಳಿಗಿವೆ. ಇಲ್ಲಿ ನೀರಿನ ಸೆಲೆಯಿಂದ ಸುತ್ತಾ ಸಂಮೃದ್ದಿ ಯಾಗಿ  ಸಸ್ಯ ಸಂಪತ್ತು  ಹಸಿರುನಿಂದ  ಕಂಗುಳಿಸುತ್ತಿದೆ  ಈ ಪ್ರದೇಶವನ್ನಾ ' ಹಚ್ಹ ಹಸಿರಿನ ಕಾನಾನ ' ಎಂದರೆ ಸುಳ್ಳಾಗದು . ಚಿಕ್ಕಬಳ್ಳಾಪುರ  ಮತ್ತು ದೊಡ್ಡಬಳ್ಳಾಪುರ ತಾಲೂಕುಗಳಿಗೆ  ಕುಡಿಯುವ ನೀರ ನ್ನಾ  ಜನಗಳಿಗೆ ದಾಹ ತಣಿಸುತ್ತಿದೆ . ಈ  ಜಲಾಶಯ ಗೌರಿಬಿದನೂರು ನಿಂದ ಕೇವಲ ೨೫ ಕಿ ಮಿ . ಇದೆ . ಮನಸ್ಸು ಮಾಡಿದರೆ  ಇಲ್ಲಿನ  ಜನನಾಯಕರು  ನಮ್ಮ ಊರಿಗೆ ಕುಡಿಯುದಕ್ಕೆ  ನೀರು ನ್ನಾ  ತರಬಹುದು . ನೋಡನಾ ..???

Wednesday, May 18, 2016

ಗೌರಿಬಿದನೂರು ಗೆ ನಾಮಾಕರಣವಾದುದು

     ನಮ್ಮ ಗೌರಿಬಿದನೂರು ಊರಿಗೆ ಮಹಾಭಾರತದ ಇತಿಹಾಸ ಬಳುವಳಿ ಇದೆ . ಗೌರಿಬಿದನೂರು ಹೆಸರು ಸಾಗಿ ಬಂದ ಹಾದಿ ಈ ರೀತಿ ಇದೆ .ಮಹಾಭಾರತ ಯುದ್ಧ ಪೂರ್ಣಗೊಂಡ ನಂತರ ... ವಿದುರ ರರು ವ್ಯಾಸರ ಆಜ್ಞೆ ಯಂತೆ ಮೋಕ್ಷ ಹೊಂದಲು ಉತ್ತರಪಿನಾಕಿನಿ ನದಿದಡ ದಲ್ಲಿರುವ ಮ್ಯೇತ್ರಿಯಿ ಋಷಿಗಳ ಬಳಿ ಆಶ್ರಯ ಪಡೆದರು . ಅವರ ಆದೇಶ ಮೇರೆಗೆ ನಾರಾಯಣ ಮಂತ್ರ ಪಟಿಸುತ್ತ ಅಶ್ವತ್ಥ ವೃಕ್ಷ ನೆಟ್ಟು ಪುಜಿಸಿದರು . ನಂತರ ಅಶ್ವತ್ಥ ನಾರಾಯಣ ಸ್ವಾಮಿ ಕೃಪೆ ಇಂದ ಮೋಕ್ಷ ಪಡೆದರು. ಈ ಪವಿತ್ರ ಸ್ಥಳಕ್ಕೆ "ವಿದೂರೂರು"ಎಂದು ಹೆಸರು ಗಳಿಸಿ ಸಾವಿರಾರು ವರ್ಷ ಪ್ರಸಿದ್ದಿ ಪಡೆಯಿತು . ನಂತರ ಕಾಲಕ್ರಮೇಣ ವಿದೂರೂರು ಆಳ್ವಿಕೆಯಲ್ಲಿ ಒಳಪಟ್ಟಿದ್ದ ದಾರಿನಾಯನಕನ ಪಾಳ್ಯದ ಪಾಳೆಗಾರ ತನ್ನ ಕಿರಿ ಮಗಳಾದ ಗೌರಿ ಗೆ ವಿದೂರೂರು ನ್ನು ಬಳುವಳಿಯಾಗಿಕೊಟ್ಟ ನಂತರ.... ಗೌರಿ ವಿದೂರೂರು ನಂತರ " ಗೌರಿಬಿದನೂರು" ಹೆಸರಲ್ಲಿ ಪ್ರಸಿದ್ದಿ ಪಡೆಯಿತು .

Sunday, May 8, 2016

ದಂಡಿಗನ ಹಳ್ಳಿ ಕೆರೆ



ದಂಡಿಗನ ಹಳ್ಳಿ ಕೆರೆ  ತಾಲೂಕು ಕೆಂದ್ರೆದಿಂದ  ೨೦ ಕಿ. ಮಿ  ಇದೆ . ತುಂಬಾ ದೊಡ್ಡ  ಕೆರೆ .  ಸುತ್ತಾ ಬೆಟ್ಟ ಮತ್ತು ತಂಬಾ ಎತ್ತರ ವಾದ  ಏರಿ .  ಬಹಳ ಸುಂದರವಾದ  ಪ್ರವಾಸದ ಸ್ಥಳ . ಕುಟುಂಬ ಸಮೇತ  ಹೋಗಿ  ಆನಂದಿಸಬಹುದು .   ಇನ್ನುಂದು ವಿಷ್ಯ ಅಂದ್ರೆ ....  ವಾಟದ ಹೊಸಹಳ್ಳಿ ಯಾ  ಆಮಾನಿಕೆರೆ,ದಂಡಿಗನಹಳ್ಳಿ ಕೆರೆ,ಜಕ್ಕಲಮಡುಗು ,ಶ್ರೀನಿವಾಸ ಸಾಗರ  ......  ತಾಲೂಕು  ಕೇಂದ್ರದಿಂದ  ೨೦  ಕಿಮಿ ...  ಆದೂರು
ಕುಡಿಯುವ ನೀರಿಗೆ  ತಾಲುಕುಗೆ  ತೊಂದರೆ .   " ದೀಪದ ಕೆಳಗೆ  ಕತ್ತಲೆ ".