Monday, December 5, 2016

೨೦೧೬- ೮೨ ನೇ ಕನ್ನಡ ಸಾಹಿತ್ಯ ಸಮ್ಮೇಳನ







    ೮೨ ನೇ ಕನ್ನಡ ಸಾಹಿತ್ಯ ಸಮ್ಮೇಳನ  ಕನ್ನಡ ಇತಿಹಾಸ ಪುಟದಲ್ಲಿ   ದಾಖಲಾಯ್ತು. ಸಮ್ಮೇಳನ ಎನ್ನುವುದಕ್ಕಿಂತ  ಕನ್ನಡ ಜಾತ್ರೆ ಎಂದರೆ  ಹೆಚ್ಚು ಸೂಕ್ತ.  ಈ  ಜಾತ್ರೆ ಯಲ್ಲಿ  ಸಾಹಿತ್ಯ ಗೋಷ್ಠಿ,ಸಂಗೀತ,ನೃತ್ಯ,ಪುಸ್ತಕಪ್ರದರ್ಶನಮತ್ತುಮಾರಾಟ,ಭಾಷಣ,ಉತ್ಸಾಹ,ಉಲ್ಲಾಸ,ಸಡಗರ,ಜಯಕಾರ,ಧಿಕ್ಕಾರ,ತಿರಸ್ಕಾರ..... ಹೀಗೆ  ನೋಡ್ತಾ  ಹೋಗುತ್ತಿದ್ದರೆ .. ಉಕ್ಕೇರಿದ  ತುಂಗಭದ್ರೆಯ ಹರಿಯುವ  ನದಿಯ  ಏರಿಳಿತದಂತೆ ಇದೆ.
   ರಾಯಚೂರು ನಲ್ಲಿ   ಮದುವೆಯಾದ  ನನ್ನ ಗೆಳೆಯ ವೆಂಕಿ   ರಾಯಚೂರುನಲ್ಲಿ  ಇರುವುದು  "  ಬೆಸೆಗೆ ಕಾಲ ಮತ್ತು ಜಾಸ್ತಿ ಬೆಸೆಗೆ ಕಾಲ  "   ಎರಡು  ಕಾಲ
ಅಂತ ಹೇಳಿದ್ದು  ಸತ್ಯ ಎನಿಸಿತು


Saturday, November 12, 2016

ಕಲೆ






 ಮಾನವನ  ಸ್ವಾರ್ಥ ಕ್ಕೆ   ಕೆರೆ ಯಲ್ಲಿ  ಮಣ್ಣು  ಅಗೆದಾಗ ..... ಬೀಳುವ  ಗುಳಿಗಳಲಿ  ನೀರು ತುಂಬಿದಾಗ ಕಾಣುವ   ಸುಂದರವಾದ  ಚಿತ್ರ ಕಲೆ

Saturday, November 5, 2016

ಪುಸ್ತಕ ಲೋಕಕ್ಕೆ "ಚೆಲುವೆ" ಲಗ್ಗೆ

      ಗೆಳೆಯರೇ ಮತ್ತು ಪುಸ್ತಕ ಪ್ರೇಮಿಗಳೆ ನನ್ನ "ಅವಳು ಚೆಲುವೆ" ಕಥಾ ಸಂಕಲನ ಮಾರುಕಟ್ಟೆ ಯನ್ನುಪ್ರವೇಶ ಮಾಡಿದೆ . ಗೌರಿಬಿದನೂರು ನಲ್ಲಿ ಓದುವ ಮತ್ತು ಕೊಳ್ಳುವ ಆಸಕ್ತಿ ಇದ್ದವರು ನನ್ನ " ಶ್ರೀ ರಾಘವೇಂದ್ರ ಕೊಂಡಿಮೆಂಡ್ಸ್ " ಮಹಾತ್ಮಾ ಗಾಂಧಿ ಚೌಕ ದಲ್ಲಿ ಪ್ರಯತ್ನನಿಸಬಹುದು. ಮತ್ತು ನಮ್ಮ
ಸರ್ಕಾರಿ ವಾಚನಾಲಯ ದಲ್ಲಿ ಓದಬಹುದು . ಬೇರೆ ಊರಿನ ಸಾಹಿತ್ಯ ಓದುಗರು ಅಂಚೆ ಮೂಲಕ ಅಥವಾ ನೇರವಾಗಿ ಸಂಪರ್ಕಿಸಬಹುದು.
ನಿವೇದಿತಾ ಪ್ರಕಾಶನ
ಉಮೇಶ್
ನಂ. ೩೪೩೭,(೧ ನೇ ಮಹಡಿ) ೪ನೇ ಮುಖ್ಯ ರಸ್ತೆ,
೯ನೇ ಅಡ್ಡ ರಸ್ತೆ,ಶಾಸ್ತ್ರಿ ನಗರ, ಬನಶಂಕರಿ ,
೨ ನೇ ಹಂತ , ಬೆಂಗಳೂರು --೨೮ .
ಮೊಬೈಲ್ -9448733323

Saturday, October 22, 2016

ಕಲ್ಲಿನಾಥೇಶ್ವರ ದೇಗುಲ





ಕಲ್ಲಿನಾಥೇಶ್ವರ   ದೇಗುಲ  ಈ ದೇವಾಲಯಕ್ಕೆ  ಶತಮಾನಗಳ  ಇತಿಹಾಸ ಇದೆ.  ಈ ಶಿವಲಿಂಗ  ಭೀಮ ಪ್ರತಿಷ್ಠೆ ಮಾಡಿದ ಎಂದು  ಪ್ರತೀತಿ.೨೫ ವರ್ಷಗಳ  ಹಿಂದೆ ಕಾರ್ತೀಕ  ಸೋಮವಾರ ಗಳು ಅದ್ದೂರಿಯಾಗಿ ಮತ್ತು ಸಂಪ್ರಾದಾಯ ದ ಭಕ್ತಿ ಭಜನೆ ಯನ್ನಾ  ಸಾಧು  ಸಂತರು ನೆರವೇರಸುತ್ತಿದ್ದರು.    ಈಗ ಈ ದೇವಾಲಯಕ್ಕೆ ನವೀನ ಸ್ಪರ್ಶ  ಕೊಟ್ಟು  ಈ ರೀತಿ  ಅಲಂಕಾರ ಮಾಡಿದ್ದಾರೆ.  ನಿತ್ಯ ಪೂಜೆ  ಇರುತ್ತೆ   ಹಾಗು  ಸೋಮವಾರ  ದೇವರ ಪ್ರಸಾದ  ಇರುತ್ತೆ.

Tuesday, September 20, 2016

"ಅವಳು ಚೆಲುವೆ"

ನಾನು ೧೯೯೪ ರಿಂದ ಕಥೆ ಗಳನ್ನಾ ರಚಿಸುವುದಕ್ಕೆ ಪ್ರಾರಂಭ ಮಾಡಿದೆ. ಹೀಗೆ ಸುಮಾರು ೫೦ ಕಥೆಗಳು ನಾಡಿನ ವಿವಿಧ  ದಿನ,ವಾರ,ಪಾಕ್ಷಿಕ,ಮಾಸ  ಪತ್ರಿಕೆ ಯಲ್ಲಿ ಬೆಳಕು  ಕಂಡಿತು. ಈಗ   ತಾಯಿ  ಶಾರದೆ ಮಾತೆ ಮತ್ತು  ರಾಯರ ಕೃಪೆ ಇಂದ  "ಅವಳು ಚೆಲುವೆ" ಎಂಬ  ಕಥಾ ಸಂಕಲನ  ಮುದ್ರಣದ   ಹಾದಿಯಲ್ಲಿದೆ. ಇನ್ನಾ ಕೆಲೆವೇ  ದಿನಗಳಲ್ಲಿ  ಮುದ್ರಣ  ಕಾರ್ಯ   ಅಂತಿಮ ವಾಗಲಿದೆ.  ಕಥಾ ಸಂಕಲನ  ಮುಖ  ಈ ರೀತಿ  ಅಲಂಕಾರ ಗೊಂಡಿದೆ. ಈ  ಸಂತಸ  ನಿಮ್ಮಲ್ಲಿ ಹಂಚಿ ಕೊಳ್ಳಬೇಕೆನಿಸಿತು   ಹಂಚಿಕೊಳ್ಳುತ್ತಾ  ಇದ್ದೇನೆ .  ನಮಸ್ತೆ.

Saturday, September 17, 2016

ನಾಟಕಗಳ ಜಾತ್ರೆ 1970---1990




1970 ಇಂದ 1990 ರ ತನಕ  ಗೌರಿಬಿದನೂರು  ನ್ಯಾಷನಲ್ ಕಾಲೇಜು ನಲ್ಲಿ  ವರ್ಷದ ಸಾಂಸ್ಕೃತಿಕ ಕಾರ್ಯ ಕ್ರಮ ಗಳಲ್ಲಿ ಕಡಿಮೆ ಅಂದ್ರೆ  ಒಂದು ತಿಂಗಳು  " ನಾಟಕ " ದ  ಸ್ಪರ್ಧೆ  ನೆಡೆಯುತ್ತಿತ್ತು . ಆ  ಜಮಾನದಲ್ಲಿ ನಮ್ಮ ಕಾಲೇಜ್ ನಿಂದ   ಹಿರಿಯರಾದ ರವಿ ಸರ್,ಮುನಿಸಿಪಲ್ ಕಾಲೇಜಿನ ಎ. ಎಸ್.ಅರ್, ಎ . ಸುರೇಶ, ಜಿ.ಬಾಲಾಜಿ ,ವಕೀಲರಾದ ಶ್ಯಾಮಣ್ಣ, ಪ್ರತಾಪ್ ರೆಡ್ಡಿ....  ಇವರೆಲ್ಲಾ  ರಾಜ್ಯ ಮಟ್ಟದ  ನಾಟಕ ಸ್ಪರ್ಧೆಗೆ ಭಾಗವಹಿಸಿ  ಕರ್ನಾಟಕ ದಲ್ಲಿ  ಗೌರಿಬಿದನೂರು ನ ಕೀರ್ತಿ  ಪತಾಕೆ  ಹಾರಿಸಿದ್ದರು . ಈ  ಹಿರಿಯರ ನಂತರ  ನಾವು ಬಂದೆವು .
ನಾವು ವರ್ಷ  ವರ್ಷ  ಸಹ   ನಾಟಕ ಗಳಲ್ಲಿ  ಭಾಗವಹಿಸಿದೆವು.  ೧. " ಕಾಲೇಜ್ ಎಲೆಕ್ಶನ್"  ೨. "ಗುರ್ತಿನವರು " ೩.ಪಿತಾಮಹ ರಾದ ಶ್ರೀ ಮಾಸ್ಟರ್ ಹಿರಣಯ್ಯ  ರಚಿಸಿದ   "ಅಳಿಯವತಾರ "  ಈ  ನಾಟಕ ಕಾಲೇಜ್ ಸ್ಪರ್ಧೆ ಯಲ್ಲಿ  ಮೊದಲ ಬಹುಮಾನ ಲಭಿಸಿತು .  ಆ  ಬಹುಮಾನ  ಮುಖ್ಯ ಮಂತ್ರಿಗಳ   ಶ್ರೀ  ಅರ್. ಗುಂಡೂರಾಯರು  ನಮ್ಮ ತಂಡಕ್ಕೆ  ಕೊಟ್ಟರು .  ಈ  ಮದುರ ಕ್ಶಣ ಗಳನ್ನಾ  ನಿಮ್ಮ ಬಳಿ ಹಂಚಿ ಕೊಳ್ಳಬೇಕೆನಿಸಿತು 

Monday, August 22, 2016

ಮುಳ್ಳಯ್ಯನ ಗಿರಿ




ಮುಳ್ಳಯ್ಯನ  ಗಿರಿ  ಕರುನಾಡಿನ ಕಿರೀಟಕ್ಕೆ  ವಜ್ರದ  ಮಣಿ

Thursday, August 4, 2016

ಎಮ್ಮೆ ಗುಡ್ಡ




ಇಂದು ಮುಂಜಾನೆ ಆರು ಗಂಟೆಗ್ ಗೆ ನಮ್ಮ MLA ಶಿವಶಂಕರ ರೆಡ್ಡಿ ಅವರ ಸಂಗಡ BEO ,KSF ,ಶ್ರೀನಿವಾಸ,ಗೌಡ್ರು ನಾನು ........ ಸುಮಾರು ೨೫ ಜನ ಈ ಎಮ್ಮೆ ಗುಡ್ಡ ಏರಲು ಪ್ರಾರಂಭಸಿದೆವು. MLA ಸಾಹೇಬ್ರು ನವ ಯುವಕರಂತೆ ನಮ್ಮ ತಂಡಕ್ಕೆ ಮುಂದೆ ಇದ್ದರು . ಈ ಗುಡ್ಡ ಗೌರಿಬಿದನೂರು ನ ಸೋನಾಗನಹಳ್ಳಿ ಯಾ ಬಲಗಡೆ ಅರಣ್ಯ ಪ್ರದೇಶದಲ್ಲಿದೆ . ಈ ಎಮ್ಮೆ ಗುಡ್ಡ ಸುಮಾರು ಮುನ್ನೂರ್ (೩೦೦) ಎಕರೆ ಸಸ್ಯ ಸಂಪತ್ತು ಹೊಂದಿದೆ . ಬಹಳ ಒತ್ತಾದ ಗಿಡಗಳು . ಅರಣ್ಯ ಮಧ್ಯದಲ್ಲಿ ಐದು ನೀರಿನ ಕುಂಟೆ ಗಳಿವೆ . ಇಲ್ಲಿ ನರಿ,ಜಿಂಕೆ,ನವಿಲು,ಮೊಲ ..... ಪ್ರಾಣಿಗಳು ನೀರು ಕುಡಿಯುವುದಕ್ಕೆ ಬರುತ್ತವೆ . ವಿಶೇಷ ಅಂದ್ರೆ ಇನ್ನೂರು ವರ್ಷದ ಹಳೆಯ ಬೇಟೆಯ ಚಿಕ್ಕ ಮನೆ ಬ್ರಿಟಿಷ್ ರವರು ಕಟ್ಟಿದ ಕಟ್ಟಡ ಇಂದಿಗೂ ಗಟ್ಟಿಮುಟ್ಟಾಗಿದೆ. ಇಂತಹ ಸುಂದರ ಅರಣ್ಯ ಗೌರಿಬಿದನೂರು ನಲ್ಲಿ ಇರುವುದು ನನಗೆ ಸಂತಸ ತಂದಿದೆ .

Tuesday, August 2, 2016

ಮೇಣಸಿನ ಕಾಯಿಯ ಪ್ರೇಮ



ಈ ಛಾಯಾಚಿತ್ರದಲ್ಲಿರುವ   ಮೇಣಸಿನಕಾಯಿ  ನೋಡುವುದಕ್ಕೆ 'ಬಸವನ ಹುಳು' ರೀತಿ  ಕಾಣುತ್ತಿದೆ . ಹೀಗೆ  ತಮಾಷೆಗೆ  ಜೋಡಿಸಿದಾಗ  ಒಂದು ಚಿಕ್ಕ ಪ್ರಣಯ ಕತೆ  ಸೃಷ್ಟಿ  ಅಯ್ತು .