Monday, December 31, 2012

ಸೂರ್ಯ

ಬಲೆಗೆ ಬಿದ್ದನಾ...........ಈ ಸೂರ್ಯ

ಮುಸ್ಸಂಜೆಯ ಕ್ಷಣಗಳು



ಒಂದೇ ಸ್ಥಳ ದಲ್ಲಿ ಕಂಡುಬಂದ ವಿವಿಧ  ಚೆಂದದ ಹಳ್ಳಿಯ ದೃಶ್ಯ

ಚಪ್ಪಡಿ


                    ಕೆರೆಯಲ್ಲಿ ಬಟ್ಟೆ ಶುದ್ದ ಮಾಡುವ......ಕಲ್ಲುಚಪ್ಪಡಿ ಈ ರೀತಿ ಇರುತ್ತೆ.

ಆ..ಕ್ಷಣ

 ಕೋಟೆ ಬಾಗಿಲಲ್ಲಿ ನನ್ನ ಗೆಳೆಯರು ಛಾಯಾಚಿತ್ರ ಸನ್ನಿವೇಶದಲ್ಲಿ ತೊಡಗಿದ್ದಾಗ
ನನಗೆ ಈ ದೃಶ್ಯ ವಿಶೇಷವಾಗಿ ಕಂಡಿತು.

ಜೋಡಿ ಹೆಜ್ಜೆ



Saturday, December 22, 2012

ದೇವರಾಯನ ದುರ್ಗ






ದೇವರಾಯನ ದುರ್ಗ




ನಮ್ಮ  ಕಾಂಡಿಮೆಂಟ್ಸ್ ರಜ.ಈ ಬಾರಿ  ನಮ್ಮ ಗೆಳೆಯರ
ಜೊತೆ ದೇ
ವರಾಯನ ದುರ್ಗಾ ಕ್ಕೆ ಹೋಗಿದ್ದೆ. ಅದ್ಬುತ  ಅನುಭವ ತುಂಬಿದ ಬೆಟ್ಟದ ಹಾದಿಯ ಪಯಣ.
ಪಯಣದ ಹಾದಿಯಲ್ಲಿ ಕಂಡುಬಂದ   ಶಿಲಾ ಕೃತಿಯ ಬೆಟ್ಟ. ಸುತ್ತುಲಿನ ಹಚ್ಹ ಹಸುರಿನ ಪ್ರಕೃತಿ.
ಮನಸ್ಸಿಗೆ  ಸಂತಸದ ಅನುಭವ........

Monday, December 10, 2012

ದ್ಯೆತ್ಯ ಪ್ರಾಣಿ


  ಈ ಛಾಯಾ ಚಿತ್ರ ನೋಡುತ್ತಿದ್ದರೆ  ದ್ಯೆತ್ಯ  ಪ್ರಾಣಿಯಂತೆ  ಕಾಣುತ್ತಿದೆ.
  ಅದರ ಮುಂದೆ ಮನುಷ್ಯ  ನೆಡೆದು ಹೋಗುತ್ತಿದ್ದಾನೆ.

ಜೇನು




 ಮೊನ್ನೆ ಸಂಜೆ ನನ್ನ GLX  ಬ್ಯೆಕ್ ತಗೊಂಡು ಹಳ್ಳಿ ಸುತ್ತುವುದಕ್ಕೆ ಹೋಗಿದ್ದಾಗ....
ಈ ಪುಟಾಣಿ- ಬಟಾನಿಗಳು  ರಸ್ತೆಯ ಪಕ್ಕದಲ್ಲಿರುವ ಬೇಲಿಯಲ್ಲಿ ಕಟ್ಟಿದ ಸಣ್ಣ ಜೇನಿನ ತಟ್ಟೆಯನ್ನು ಕಿತ್ತು 
ತಮಗೆ ಸಾಕು ಬೇಕಷ್ಟು ಹೊಟ್ಟೆ ತುಂಬಾ ಕುಡಿದು..ನಂತರ ದಾರಿ ಯಲ್ಲಿ ಹೋಗುವವರಿಗೆ ಚಾಕಚಕ್ಯತೆ ಇಂದ 
ವ್ಯಾಪಾರ ಮಾಡುತ್ತಿದ್ದಾರೆ.

Thursday, November 29, 2012

ಬಲೆ

               ಅವರೇ ಬೇಳೆ  ಯಷ್ಟು  ಜೇಡ ತನ್ನ ಆಹಾರದ  ಬೇಟೆಗಾಗಿ ಹಣೆದ ಸುಂದರ ಬಲೆ

ಪಯಣ


              ಹಳೇ  ಬೇರು  ಹೊಸ ಚಿಗುರು ಮುಸುಕು ಮುಸುಕು ಮುಂಜಾನೆಯ ಗಾಳಿ ವಿಹಾರ 

Saturday, November 17, 2012

ಭೀಮೇಶ್ವರ ಬೆಟ್ಟ



ಈ ಭೀಮೇಶ್ವರ ಬೆಟ್ಟ ಸುಮಾರು  6 ಬಾರಿ ಹತ್ತಿದ್ದಿನಿ.  ಆದ್ರೆ ಈ ಬಾರಿ ನನ್ನ ನೆಚ್ಚಿನ ಗೆಳಯ  ಕ್ಯಾಮರ ಜೊತೆ ಸೇರಿ ಹಾಗು ನನ್ನ ಸಂಗಡಿಗರೊಂದಿಗೆ ಹತ್ತಿದೆ.  ಬೆಟ್ಟದ ನೆತ್ತಿಯಲ್ಲಿ ನಿಂತು ಹಕ್ಕಿ ನೋಟಹರಿಸಿದಾಗ ಕಾಣುವನೋಟ ಸ್ವರ್ಗಕ್ಕೆ ಎರಡೇ  ಅಂಗುಲ. ಆ ಪ್ರಕೃತಿ  ಸೊಗಸು ನಾ ನೋಡಿದಕ್ಕೆನನ್ನ ಕಣ್ಣು ಧನ್ಯ. ಈ ಬೆಟ್ಟದ ವಿಶೇಷ ಅಂದ್ರೆ ಬೆಟ್ಟದ ಮೇಲೆ ಕಲ್ಲಿನ ದೀಪಾ ಸ್ತಂಭ ಇದೆ. ಇದಕ್ಕೆ ವರ್ಷಕ್ಕೆ ಎರಡು ಬಾರಿ ರಾತ್ರಿ ಎಣ್ಣೆ ದೀಪ ಹಚ್ಚಿತ್ತಾರೆ ಅದು ಮುಂಜಾನೆ ತನಕ ಬೆಳಗುತ್ತೆ. ಸುತ್ತಾ  ನೋಡಿದಾಗ ನಮ್ಮ ಉತ್ತರ ಪಿನಾಕಿನಿ  ನದಿಯ  ಹೆಜ್ಜೆಯ ಜಾಡು ಕಣ್ಣು ಹಾಯಿಸಿದಷ್ಟು ಕಾಣುತ್ತದೆ,ನನ್ನ ಕ್ಯಾಮರ ಕಣ್ಣಿಗೆಕಂಡದ್ದುಇಷ್ಟುಮಾತ್ರ.ಬೆಟ್ಟದ ಬುಡದಲ್ಲಿ   ಧ್ಯಾನಕ್ಕೆ ಕಲ್ಲಿನ ಗುಹೆ ಇದೆ.ಬೆಟ್ಟದ  ವಿಶೇಷ  ಎಂದರೆ ಮಹಾಭಾರತದ   ಸಮಯದಲ್ಲಿ  ಪಾಂಡವರು ಈ ಬೆಟ್ಟದಲ್ಲಿ ತುಸು ಹೊತ್ತು ಕಾಲ ಕಳೆದಿದ್ದರು ಎಂಬ ಪ್ರತೀತಿ ಇದೆ.

Sunday, November 11, 2012

ಸಸ್ಯ ಕಲೆ

                ಈ ಕಾಷ್ಠ ಭಂಗಿ ನೋಡುತ್ತಿದ್ದರೆ  ಸರ್ಪಗಳ ಮಿಲನದಂತೆ,ಪ್ರಾಣಿಯಂತೆ ....ಕಾಣುತ್ತದೆ

Wednesday, October 24, 2012

ಗುಡಿಬಂಡೆ ಬೆಟ್ಟ







       ನಾನು ನನ್ನ ಗೆಳೆಯರು ಗುಡಿಬಂಡೆ ಬೆಟ್ಟ ಹತ್ತುವುದಕ್ಕೆ  ಹೋಗಿದ್ದಿವಿ.
ತುಂಬಾ ಸುಂದರವಾಗಿ ಇದೆ. ಈ ಬೆಟ್ಟದ  ಮೇಲೆ ಕೆಳಗೆ ಕೋಟೆ ಇಂದ ಸುತ್ತುವರೆದಿದೆ. ಬೆಟ್ಟದ ಮೇಲೆ
ಯುದ್ದ ಖ್ಯೆದಿಗಳ  ಬಂದಿಕಾನೆ,ಶಿವನ ದೇವಸ್ತಾನ,ನೀರಿನ ದೊನ್ನೆ ,ಗೋಪುರ ..........ಇದೆ.ಒಂದು ಸಮಯದಲ್ಲಿ ಚನ್ನಾಗಿ ಆಳಿಸಿಕೊಂಡ  ಕೋಟೆ.  ಜೇನು ಗೊಡು  ಸಮೃದ್ದಿಯಾಗಿ  ನೇತಾಡುತಿದೆ. ಈ  ಬೆಟ್ಟ ಹತ್ತುವಿಕೆ ಒಳ್ಳೆ ಸಂತೋಷದ  ಅನುಭವ ನೀಡಿತು. ಬೆಟ್ಟ ದ  ಮೊದಲ  ಮೆಟ್ಟಿಲಲ್ಲಿ  ಶಂಖ ಕೃತಿಯ  ಬಂಡೆ  ಮತ್ತು ಮಾನವನ  ತಲೆಯ ಆಕೃತಿಯ ಬಂದೆ ಕಾಣುತ್ತದೆ.