Friday, November 7, 2014

ಗೊದ್ದ


ಈ ಮಳೆಕಾಲದಲ್ಲಿ ಜೀವ  ಸೃಷ್ಟಿಯ ವ್ಯೆಚಿತ್ರಗಳು  ಅನೇಕೆನೆಕ ....  ಅದರಲ್ಲಿ ಗೊದ್ದ ಜೀವ ಸೃಷ್ಟಿಯು ಒಂದು . ಇವು ತಮ್ಮ ಬೇಟೆಗಾಗಿ ೧-೨  ಕಿ. ಮಿ  ಸಾಗುತ್ತದೆ . ವಿಚಿತ್ರ ಅಂದ್ರೆ ಪಕ್ಕದಲ್ಲಿರುವ    ೪-೬   ಹೆಜ್ಜೆಗೆ  ಒಂದುಕಿ ಮಿ ಸುತ್ತು ಹೊಡೆದಿರುತ್ತದೆ . ಇವು ಶಿಸ್ತಿನ  ಸಿಪಾಯಿ ಯಂತೆ ಸಾಗುವಾಗ ಬೇಟೆಯ ದಿಕ್ಕನ್ನು  ತಿಳಿಸುತ್ತಾ ಸಾಗುತ್ತವೆ .  ಈ ಗೊದ್ದದ ಗೋಡು  ನೋಡಲು ವಿಶಿಷ್ಟವಾಗಿ ಅಂದವಾಗಿ   ಕಾಣುತ್ತದೆ .

Monday, November 3, 2014

ಲಗ್ನ





ಈ ನವ ವರ ನನ್ನ ಸೋದರಮಾವನ ಮಗ... ಪುಟ್ಟದಾಗಿ ಚಾಕ್ಲೆಟ್  ತರಹ ಇದ್ದ . ಈಗ ಚಾಕ್ಲೆಟ್ ಹೀರೊ  ತರವರ ನ ಸಂಪ್ರದಾಯದ ಉಡುಪಿನಲ್ಲಿ ನೋಡ್ತಾ ಇದ್ದರೆ  ತುಂಬಾ ಸಂತೋಷ ವಾಯಿತು .  ಆ ಸಂತೋಷತಡಿಲಾರದೆ ಈ ಛಾಯಾಚಿತ್ರ ಕ್ಲಿಕ್ ಮಾಡಿದೆ ಹ್ಯಾಗಿದೆಯೆಂದು ನೀವೇ ಹೇಳಬೇಕು .

Wednesday, September 10, 2014

ಪತಂಗ



ಬಾಗಿನದ ಮೊರ


ಗೌರಿ-ಗಣೇಶ ಹಬ್ಬ ಸಮೀಪಿಸುತಿದೆ . ಗಂಡು ಮಕ್ಕಳಿಗೆ ಗಣೇಶ ಹಬ್ಬ ವಿಶೇಷವಾಗಿ ಆಚರಿಸಿದರೆ , ಹೆಂಗೆಳೆಯರು ವಿಶಿಷ್ಟವಾಗಿ ಪುರಾತನ ಸಂಪ್ರಾಯದಂತೆ  ಆಚರಿಸುತ್ತಾರೆ . ಈ ಗೌರಿ ಹಬ್ಬದ ಆಚರಣೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವುದು "ಮೊರ". ಬಿದಿರಿನ ಮೊರ . ಈ ಹೊಸ ಮೊರದಲ್ಲಿ ಸುಮಂಗಲಿಯ "ಮಂಗಳದ್ರವ್ಯ "ವಿಟ್ಟು   ತಾಯಿ ಗೌರಿ ಮಾತೆಗೆ "ಬಾಗಿನ"ಅರ್ಪಿಸಿ , ತಾವು ಶ್ರದ್ಧೆಯಿಂದ ಬಾಗಿನ ಪಡೆಯುತ್ತಾರೆ . ಈ ಸಂಪ್ರಾದಾಯ ಹೆಚ್ಚಾಗಿ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬಳಕೆಯಲ್ಲಿದೆ . ನಂತರ ಈ ಮೊರಕ್ಕೆ "ಮೆಂತ್ಯ" ಲೇಪಿಸುವ ಆಂಧ್ರ ಪ್ರದೇಶದ ಹೆಂಗೆಳೆಯರು ಗುಂಪು ಗುಂಪಾಗಿ ಬರುತ್ತಾರೆ . "ಮೆಂತ್ಯ" ಅಂದ್ರೆ  ಮೆಂತ್ಯ ಕಾಳು , ಹರಿಶಿನ ಮತ್ತು ಕಾಗದಕ್ಕೆ  ನೀರನ್ನು ಬೆರೆಸಿ ಚನ್ನಾಗಿ ಕುದಿಸಿ ಗಂಜಿ(ಪೇಸ್ಟ್) ತಯಾರಿಸಿ ಮೊರಗಳಿಗೆ ಮಂದವಾಗಿ ಸವರುತ್ತಾರೆ . ಒಣಗಿದ  ಈ ಮೊರ ಅಡಿಗೆ ಮನೆ ಬಳಕೆಗೆ ಬರುತ್ತದೆ . ಅಂದರೆ ದವಸ ಧಾನ್ಯದಲ್ಲಿರುವ ಕಡ್ಡಿ ಕಸ ಕಲ್ಲು ಬೆರ್ಪಡಿಸುವುದಕ್ಕೆ  ಬಳಕೆಯಾಗುತ್ತದೆ . ಈ ಪ್ಲಾಸ್ಟಿಕ್ ಯುಗದಲ್ಲಿ ಮೊರ ತನ್ನ ವಿಶಿಷ್ಟ ಸ್ಥಾನ ಪಡೆದಿರುವುದು  ಸುಳ್ಳಲ್ಲಾ .

Friday, August 22, 2014

ಏರಿಯ ಸೊಗಸು


 ನಮ್ಮ ಗೊಟಕನಪುರಹಳ್ಳಿ  ಕೆರೆ ಏರಿಯ    ಮುಂಜಾನೆಯ  ರಮ್ಯ ನೋಟ

Saturday, August 16, 2014

ತೆನೆ ದೇವತೆ

ಮಟ ಮಟ  ಮಧ್ಯಹ್ನ ಉರಿ ಬಿಸಿಲಲಿ ಕುಳಿತು ಜೋಳದ ತೆನೆ ಬಿಡಿಸುತ್ತಿರುವ ಹಳ್ಳಿಯ ತಾಯಿ

Saturday, August 9, 2014

ರಾಷ್ಟ್ರ ಪಕ್ಷಿ


  ಗೌರಿಬಿದನೂರು ಇಂದ ಡಿ ಪಾಳ್ಯ ದ ಕೆರೆ ಹತ್ತಿರ ಇರುವುದು. ಬಲಗಡೆ ರಸ್ತೆಯಲ್ಲಿ   .... ೩ ಕಿ ಮಿ  ಸಾಗಿದರೆಗೊಲ್ಲರ ಹಟ್ಟಿ  ಸಿಗುತ್ತದೆ .  ಅಲ್ಲಿ ಒಂದು ಮನೆ ಎಡೆಗಡೆ....  ಅಲ್ಲಿ  ಕೋಳಿ ಪಿಳ್ಳೆ ಜೊತೆ ಕಡಿಮೆ  ಅಂದ್ರೆ೫-೬ ನವಿಲು ಕಾಳು  ತಿನ್ನತ್ತಾ ಇರುತ್ತೆ.  ಅಲ್ಲಿ  ಕಣ್ಣು ತುಂಬ ನೋಡಿ.  ಅಲ್ಲೇ ಕೆರೆ ಬಳಿ  ನಡೆದರೆ  ನಯನ ಮನೋಹರವಾದ  ನವಿಲಿನ ಗುಂಪು  ನೋಡಬಹುದು . ಖಂಡಿತ ಕಣ್ಣಿಗೆ ಹಬ್ಬ. ಇದೇ ರೀತಿ  ಗೆದೆರೆ ಬೆಟ್ಟ, ಮಾಕಳಿ ಬೆಟ್ಟ.....  ಸುಮಾರು ಕಡೆ ನವಿಲಿನ ಸಂತತಿ ಇದೆ .  ಸರ್ಕಾರ ಮನಸ್ಸು ಮಾಡಿದರೆ  " ವನಮಾಡಬಹುದು. 
   ಈ ಛಾಯಾಚಿತ್ರ  " ಕನ್ನಡಪ್ರಭ " ದ ೧೫/೯/೨೦೧೪ ರಲ್ಲಿ  ಬೆಳಕು ಕಂಡಿದೆ .

Monday, August 4, 2014

ರತ್ನ ಗಿರಿ ಬೆಟ್ಟ 1





   ಮೊನ್ನೆ  ಬಂದ್ ಇತ್ತು .  ನಮ್ಮ ಹುಡುಗರಿಗೆ  ಬಂದ್  ಅಂದ್ರೆ ಹಬ್ಬ.....  ಯಾಕೆಂದರೆ ಟ್ರಿಪ್ ಹಾಕೋಕೆ.
"ರತ್ನಗಿರಿ" ಬೆಟ್ಟಕ್ಕೆ  ಹೋಗುವುದು ತೀರ್ಮಾನ ಆಯಿತು .  ಗೌರಿಬಿದನೂರು - ಮದುಗಿರಿ-ಹೊಸಕೆರೆ- ರತ್ನಗಿರಿ (ಪಾವಗಡ)ರಸ್ತೆ .... ೫೫  ಕಿ ಮಿ . ರತ್ನಗಿರಿ ಬೆಟ್ಟ ನೋಡುವುದುಕ್ಕೆ , ಹತ್ತುವುದಕ್ಕೆ ಮಜಾ ನೆ ಬೇರೆ. ಬೆಟ್ಟದ ವಿಶೇಷ ಅಂದ್ರೆ ಮೂರು  ಬೆಟ್ಟಕ್ಕೆ ಸೇರಿ ಕೋಟೆ ಕಟ್ಟಿದ್ದಾರೆ. ಬೆಟ್ಟ ಏರುತ್ತ ಪ್ರಕೃತಿ ನಿರ್ಮಿಸಿದ  ವಿವಿಧ  ಆಕೃತಿಯ  ಶಿಲೆಗಳು  ಮನಸೆಳೆಯುತ್ತದೆ ಮಧ್ಯದ ಬೆಟ್ಟದ ನೆತ್ತಿಯಲ್ಲಿ  ಶೀತಲವಾದ  ಮಹಾ ವಿಷ್ಣು ದೇವಾಲಯ ವಿದೆ . ಆ ನಂತರ  ತುಸು ಮೇಲೇರಿದರೆ ಬೃಹತ್ ಆಕಾರದ ಕಾವಲು  ಗೋಪುರ. ಬಲಗಡೆ -ಎಡಗಡೆ ತುಸು ಚಿಕ್ಕದಾದ ವಿಶಾಲವಾದ ಬೆಟ್ಟ .  ಈ ಬೆಟ್ಟದಲ್ಲಿರುವ ಕಲ್ಲಿನ   ಪ್ರವೇಶ ದ್ವಾರ , ಮಂಟಪ ,ಕವಲು ಗೋಪುರ , ನೀರಿನ ದೊನ್ನೆ , ಕಣಜ ..... ಒಂದುಂದು ಅದ್ಬುತ . ಇವೆಲ್ಲಾ   ಮೇಲೇರಿ  ಸವಿಬೇಕೆಂದ್ರೆ ನಿಮ್ಮ ತೊಡೆಯಲ್ಲಿ ತುಸು ಕಸವು ಮತ್ತು ಮನದಲ್ಲಿ ಆಸಕ್ತಿ ಇದ್ದರೆ  ಸಾಕು .   ಇಷ್ಟ ಪಟ್ಟು ಕಷ್ಟ ದಿಂದ  ಬೆಟ್ಟ ಹತ್ತಿ ಬೆಟ್ಟದ ತುದಿಯಲ್ಲಿ  ಬೀಸುವ ಗಾಳಿಗೆ ಮೈ ಒಡ್ಡಿದರೆ  ಸ್ವರ್ಗಕ್ಕೆ  ಒಂದೇ ... ಅಡಿ ಅಷ್ಟೇ . ಬೇಕಾದರೆ ನೀವು ಅನುಭವಿಸಿ ಗೆಳೆಯರೆ.

ರತ್ನ ಗಿರಿ ಬೆಟ್ಟ 2




   ಮೊನ್ನೆ  ಬಂದ್ ಇತ್ತು .  ನಮ್ಮ ಹುಡುಗರಿಗೆ  ಬಂದ್  ಅಂದ್ರೆ ಹಬ್ಬ.....  ಯಾಕೆಂದರೆ ಟ್ರಿಪ್ ಹಾಕೋಕೆ.
"ರತ್ನಗಿರಿ" ಬೆಟ್ಟಕ್ಕೆ  ಹೋಗುವುದು ತೀರ್ಮಾನ ಆಯಿತು .  ಗೌರಿಬಿದನೂರು - ಮದುಗಿರಿ-ಹೊಸಕೆರೆ- ರತ್ನಗಿರಿ (ಪಾವಗಡ)ರಸ್ತೆ .... ೫೫  ಕಿ ಮಿ . ರತ್ನಗಿರಿ ಬೆಟ್ಟ ನೋಡುವುದುಕ್ಕೆ , ಹತ್ತುವುದಕ್ಕೆ ಮಜಾ ನೆ ಬೇರೆ. ಬೆಟ್ಟದ ವಿಶೇಷ ಅಂದ್ರೆ ಮೂರು  ಬೆಟ್ಟಕ್ಕೆ ಸೇರಿ ಕೋಟೆ ಕಟ್ಟಿದ್ದಾರೆ.  ಮಧ್ಯದ ಬೆಟ್ಟದ ನೆತ್ತಿಯಲ್ಲಿ  ಶೀತಲವಾದ  ಮಹಾ ವಿಷ್ಣು ದೇವಾಲಯ ವಿದೆ . ಆ ನಂತರ  ತುಸು ಮೇಲೇರಿದರೆ ಬೃಹತ್ ಆಕಾರದ ಕಾವಲು  ಗೋಪುರ. ಬಲಗಡೆ - ಎಡಗಡೆ ತುಸು ಚಿಕ್ಕದಾದ ವಿಶಾಲವಾದ ಬೆಟ್ಟ .  ಈ ಬೆಟ್ಟದಲ್ಲಿರುವ ಕಲ್ಲಿನ   ಪ್ರವೇಶ ದ್ವಾರ , ಮಂಟಪ ,ಕವಲು ಗೋಪುರ , ನೀರಿನ ದೊನ್ನೆ , ಕಣಜ ..... ಒಂದುಂದು ಅದ್ಬುತ . ಇವೆಲ್ಲಾ   ಮೇಲೇರಿ  ಸವಿಬೇಕೆಂದ್ರೆ ನಿಮ್ಮ ತೊಡೆಯಲ್ಲಿ ತುಸು ಕಸವು ಮತ್ತು ಮನದಲ್ಲಿ ಆಸಕ್ತಿ ಇದ್ದರೆ  ಸಾಕು .   ಇಷ್ಟ ಪಟ್ಟು ಕಷ್ಟ ದಿಂದ  ಬೆಟ್ಟ ಹತ್ತಿ ಬೆಟ್ಟದ ತುದಿಯಲ್ಲಿ  ಬೀಸುವ ಗಾಳಿಗೆ ಮೈ ಒಡ್ಡಿದರೆ  ಸ್ವರ್ಗಕ್ಕೆ  ಒಂದೇ ... ಅಡಿ ಅಷ್ಟೇ . ಬೇಕಾದರೆ ನೀವು ಅನುಭವಿಸಿ ಗೆಳೆಯರೆ.

Sunday, July 20, 2014

ಗಿಟ್ಲೆ ಗಿಟ್ಲೆ ಗಿರಗಿಟ್ಲೆ


ಗಿಟ್ಲೆ  ಗಿಟ್ಲೆ  ಗಿರಗಿಟ್ಲೆ
ಮಗುವಿದ್ದಾಗ ಅಮ್ಮನ ಸುತ್ತಾ ಗಿರಗಿಟ್ಲೆ
ಮಕ್ಕಳಿದ್ದಾಗ ಆಟದತ್ತಾ ಗಿರಿಗಿಟ್ಲೆ
ಯೌವನದಲಿ ಸಾಧನೆ-ಪ್ರೀತಿಯತ್ತಾ ಗಿರಿಗಿಟ್ಲೆ
ಮದುವೆಯಾದಾಗ ಸಂಗಾತಿಯತ್ತಾ ಗಿರಿಗಿಟ್ಲೆ
ಸಂಸಾರದಲಿ ಜವಾಬ್ದಾರಿ ಸುರಳಿಯ ಗಿರಿಗಿಟ್ಲೆ
ಮುಪ್ಪಿನಲಿ ಮೊಮ್ಮಕ್ಕಳ ಸುತ್ತಾ ಗಿರಿಗಿಟ್ಲೆ
ಅಂತ್ಯದಲಿ  ಸಾವು-ನೋವಿನ  ಗಿರಿಗಿಟ್ಲೆ
ಶ್ವಾಸ ನಿಂತ ನಂತರ ಆತ್ಮ-ಪರಮಾತ್ಮ ಗಿರಿಗಿಟ್ಲೆ
ನಿಲ್ಲದು ಜನ್ಮ-ಪುನರಜನ್ಮ ಗಿರಿಗಿಟ್ಲೆ
ಗಿಟ್ಲೆ ಗಿಟ್ಲೆ  ಗಿರಿಗಿಟ್ಲೆ


Saturday, July 12, 2014

ಗೋಲಿ ಆಟ


ಭಾನುವಾರ ಬಂದ್ರೆ  ಹಳ್ಳಿ ಹೈಕಳು  ಬುಗುರಿ, ಮರಕೋತಿ, ಈಜು,ತೋಟಕ್ಕೆ,ಗೋಲಿ ಆಟ .... ದೌಡು

ನಮ್ಮಳ್ಳಿಯ ಬಳ್ಳಿಗಳು



Thursday, July 10, 2014

ಧಮನಿಗಳು

ಮನುಜನನಿಗೆ ಧಮನಿಗಳು ಹೇಗೆ ಅವಶ್ಯವೂ ........... ಹಾಗೆ ಮರಗಳಿಗೆ ಬೇರುಗಳು ಅಷ್ಟೇ ಮುಖ್ಯ