Tuesday, February 6, 2018

ಲಂಗೋಟ,ಗರಡಿ,ಗೋಧಾ,ಕುಸ್ತಿ... ಕಣ್ಮರೆಯ..!!??



        ಲಂಗೋಟ,ಗರಡಿ,ಗೋಧಾ,ಕುಸ್ತಿ... ಕಣ್ಮರೆಯ..!!??
     ಈ ಪದಗಳು   ಈಗೀನ  ಪೀಳಿಗೆ ಬಾಗಶ: ಕೇಳಿರೋದು ಕಡಿಮೆ..   ಲಂಗೋಟ ಅಥವಾ ಹನುಮಾನ್ ಲಂಗೋಟಿ  ಅಂದರೆ ಗರಡಿ ಮನೆಗಳಲ್ಲಿ ದೇಹ ಕಟ್ಟುಮಸ್ತ್ ಗೆ  ಅಂಗ ಸಾಧನೆ ಮತ್ತು ಕುಸ್ತಿ  ಮಾಡುವಾಗ ಕಡ್ಡಾಯವಾಗಿ ಧರಿಸ-ಬೇಕಾದಂಥ ಬಿಗಿಯಾಗಿ ಕಟ್ಟುವ " ಒಳ ಬಟ್ಟೆ ". ನಮ್ಮ(ಹಿಂದಿನ)1980  ರ ಕಾಲ ಘಟ್ಟದಲ್ಲಿ ನಮ್ಮ "ವಿವೇಕಾನಂದ  ಗರಡಿ " ಮನೆಯಲ್ಲಿ  ಲಂಗೋಟಿ  ಇಲ್ಲದೆ ಪ್ರವೇಶ ಇರಲಿಲ್ಲಾ. ನಮ್ಮ ಗರಡಿ ಗುರುಗಳು  ನಾರಾಯಣಪ್ಪ ಸಾಧನೆ  ಮಾಡಲು  ಅವಕಾಶ ಕೊಡುತ್ತಿರಲಿಲ್ಲಾ. ನಾನು  1984--2005  ರ  ಸಮಯದಲ್ಲಿ ಸೊಂಟಕ್ಕೆ  ಕಟ್ಟುತ್ತಿದ್ದ  ಹನುಮಾನ್ ಲಂಗೋಟ  ಈ ಛಾಯಾಚಿತ್ರ ದಲ್ಲಿರುವುದು. ಈ ಕ್ಷಣ ಸಹ  ಈ  ಲಂಗೋಟ ನೋಡಿದರೆ ನನ್ನ ಜಮಾನ  ನೆನಪಾಗಿ  ನನ್ನ  ಮಾಗಿದ ದೇಹ ಬಿಸಿಯಾಗಿ ಮಾಂಸ ಖಂಡ ಉಬ್ಬಿ.... ಅಂದು ಗೋಧ(ಕುಸ್ತಿ ಮಣ್ಣಿನ ಅಖಾಡ) ದಲ್ಲಿ ದೋಬಿ ಶಾಟ್,ಕೊಕ್ಕರೆ,ಉಖಾಡ,ಏಕ್ ಲಾಂಗ್,ದೋ ಲಾಂಗ್,ಬಗಲಿ,ಕಾಲಾವರ್ ಜಂಗ್........ ಕುಸ್ತಿ ಪಟ್ಟು ಪ್ರಯೋಗಿಸಿ  ಸೆಣಿಸುತ್ತಿದ್ದ  ಗಂಡುಗಲಿ ಕುಸ್ತಿ ನೆನಪಾಗುತ್ತದೆ. ಅಂದಿನ ಹಿರಿಯರಾದ  ಲಚ್ಚಿ ಅಣ್ಣ,ಗರಡಿ ಪ್ರಕಾಶ್,ರಸೂಲ್,ಶಿವಣ್ಣ ......... ಮತ್ತು ಗಂಗಾ,ರಮೇಶ,ಮುಖ್ತರ್,ಪೀರು,GT ಸಹೋದರರು ...... ಖುಷಿಯಿಂದ ನೆನಪಾಗುತ್ತಾರೆ. ಸಾವಿರಾರು ಸನ್ನಿವೇಶಗಳು  ನೆನಪುಗಳ ತೋಟದಲ್ಲಿ ಹೂ ನಂತೆ  ಅರಳುತ್ತದೆ.
      ಮತ್ತೊಂದು ವಿಶೇಷ ಅಂದ್ರೆ  ಈ ಕುಸ್ತಿ ಮಣ್ಣಿನ  ಅಖಾಡನ " ದಸರಾ "  ಹಬ್ಬದ ದಿನ ಗೋಪುರವಾಗಿ 
ಅಲಂಕಾರ  ಮಾಡಿ ಪೂಜೆ  ಸಲ್ಲಿಸುತ್ತಿದ್ದೆವು.  ಈಗ   ನಮ್ಮ ಗೌರಿಬಿದನೂರು ನಲ್ಲಿ ಗರಡಿ  ಮನೆ  ಕಣ್ಮರೆ ಆಗಿದೆ. ಆ  ಜಾಗಕ್ಕೆ ದುಬಾರಿ  ಜಿಮ್  ಗಳು ಅಲಂಕರಿಸಿವೆ.