ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Sunday, September 11, 2011
ದಾಸಯ್ಯ
ನಮ್ಮ ಪ್ರಾಚೀನ ಜನಪದ ಕಲೆಗಳಲ್ಲಿ ಈ ದಾಸಯ್ಯ ಪಾತ್ರವು ಒಂದು.
ಇವರ ಕ್ಯೆಲ್ಲಿ ಇರುವ ಪಾತ್ರೆ ಯನ್ನು " ಅಕ್ಷಯಾ " ಪಾತ್ರೆ ಎಂದು
ಇದನ್ನು ಶ್ರೀ ಕೃಷ್ಣ ಕರಣಿಸಿದ್ದು.....ಎನ್ನುತ್ತಾರೆ. ಈ ಪಾತ್ರೆ ಯಲ್ಲಿ
ನೀರನ್ನು ತುಂಬಿ ತಲೆ ಮೇಲೆ ಹಾಕಿಸಿ ಕೊಂಡರೆ ಶುಭ ಎನುತ್ತಾರೆ.
ಜೀವ ನದಿ,ಕಲ್ಯಾಣಿ... ಗಳ ಹತ್ತಿರ ಈ ಸನ್ನಿವೇಶ ಇರುತ್ತದೆ. ಈ ಜಾಗಟೆ
ದುಷ್ಟ ಶಕ್ತಿ ಗಳನ್ನೂ ಓಡಿಸಲು.
Sunday, July 31, 2011
Monday, July 4, 2011
Tuesday, June 28, 2011
Thursday, June 23, 2011
Thursday, June 9, 2011
Sunday, May 29, 2011
Monday, May 23, 2011
Saturday, May 14, 2011
ಕುರ್ರ ಮಾಮ
ಇವರು ನಮ್ಮ ಕಡೆ ಹಾಲಕ್ಕಿ ಶಾಸ್ತ್ರ ನುಡಿಯುವರಂತೆ........ ನಮ್ಮ ಗಡಿಗೆ ಹೊಂದಿ ಕೊಂಡಂತೆ ಆಂಧ್ರ ಪ್ರದೇಶದ ಇವರನ್ನು " ಕುರ್ರ ಮಾಮ ಅಥವಾ ಕೊಂಡ ದೇವಡು " ಅಂತ ಕರೆಯುತ್ತಾರೆ. ಇವರು ಶಾಸ್ತ್ರ ಹೇಳುವ ಮುನ್ನ ಈ ರೀತಿ ಪದಗಳನ್ನು ಹೇಳುತ್ತಾರೆ.
ಕೊಂಡ ದೇವುಡ
ಜಾಗ್ನುನಾಥುಡ
ಮಸ್ತಚಂದ್ರ
ಕುರ್ರ ಮಾಮಡ
ಒನ್ನದಿ ಒಂನತ್ಲ ..............ಲೇನದಿ ಲೇನತ್ಲ ಚಬುತಾನು................ ಎಂದು ಪ್ರಾರಂಬಿಸಿ ಬಹಳ ಚಾಲಾಕಿ ತನದಿಂದ ಭವಿಷ್ಯ ನುಡಿಯುತ್ತಾರೆ. ಇವರು ಹೆಚ್ಹಾಗಿ ಕೋರುವುದಿಲ್ಲ. ಒಂದು ಹಳೇ ಬಟ್ಟೆಗೂ ಅಥವಾ ೧೦ ರೂಪಾಯಿಗು ತೃಪ್ತಿ ಹೊಂದುತ್ತಾರೆ. ಇವರು ಇತ್ತೀಚಿಗೆ ಕಾಣೆ ಆಗುತ್ತಿದ್ದಾರೆ. ತುಸು ದಿನ ಕಳೆದರೆ
ಜಾನಪದ ಕೊಂಡಿ ಕಳಿಚಿದಂತೆ ಸರಿ.
Thursday, May 5, 2011
ಚಿಕ್ಕಬಳ್ಳಾಪುರ-೨೦೧೧ ರ ಸಾಹಿತ್ಯ ಸಮ್ಮೇಳನದಲ್ಲಿ
೪.೫.೨೦೧೧ ಮತ್ತು ೫.೫.೨೦೧೧ ಎರಡು ದಿನ ಅದ್ಬುರಿಯಾಗಿ ಸಾಹಿತ್ಯ ಸಮ್ಮೇಳನ ಚಿಕ್ಕಬಳ್ಳಾಪುರದ ನಂದಿ ರಂಗ ಮಂದಿರ ದಲ್ಲಿ ಶ್ರೀ ಕ್ಯೆಪು ಲಕ್ಷ್ಮಿ ನರಸಿಂಹ ಶಾಸ್ತ್ರೀ ಸಮ್ಮೇಳನ ಅಧ್ಯಕ್ಷರಾಗಿ ನೆರವೇರಿಸಿ ಕೊಟ್ಟರು.
ಶಿಕ್ಷಣ ಸ್ಥಿತಿ -ಗತಿಗಳು,ಜಿಲ್ಲೆಯ ಆಧ್ಯಾತ್ಮಿಕ ಚಿಂತಕರು, ತಾತಯ್ಯ,ನೀರಾವರಿ ಯೋಜನೆಗಳು,ಮಹಿಳೆ ಮತ್ತು ಅಭಿವುದ್ದಿ , ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆ, ಕವಿಗೋಷ್ಠಿ .............ಇತರ ಕಾರ್ಯ ಕ್ರಮ ಸೊಗಸಾಗಿ
ನಡೆಯುತು.
ಈ ಕವಿಗೋಷ್ಠಿ ಯಲ್ಲಿ ನಾನು ಒಬ್ಬನಾಗಿ ಕವನ ವಚನ ಮಾಡಿದೆ . ಆ ಕವನ ಈ ಕೆಳಗಿನಂತೆ ಇದೆ.
ಕೊಲಿಗಳು
ಕೂಲಿಗಳು
ನಾವು ಕೂಲಿ ಆಳುಗಳು
ನಾವು ಕೂಲಿ ಆಳುಗಳು
ನಮಗಿಲ್ಲ ಸರಿ ದಾರಿಗಳು
ಸಾಗಲಾರೆವು ನೇರ ದಾರಿಗಳು
ಸುಗ್ಗಿಯ ನೋಡದ ದವಸಗಳು
ದವಸವು ಮೊಡದ ತೆನೆಗಳ
ತೆನೆಗಳೇ ಇಲ್ಲದ ಕಾಳುಗಳು
ಕಾಳೆ ಕಾಣದ ಕಡ್ಡಿಗಳು
ಕಡ್ಡಿಯೇ ಮೊಳೆಯದ ಭೂಮಿಗಳು
ಭೂಮಿಯೇ ಇಲ್ಲದ ಕೂಲಿಗಳು
ಸಿರಿಯರ ಹರಿಕೆಯಾ ಕುರಿಗಳು
ಗೆಲುವೇ ಗೆಲ್ಲದ ಸೋಲುಗಳು
ಸೋಲುನು ಹಾಸೋದ್ದ ಸಾವುಗಳು
ಸಾವಿನ ಮುಳ್ಳಲಿ ಹೆಜ್ಜೆಗಳು
ಹೆಜ್ಜೆಯು ಊರದ ಜೀವಿಗಳು
ಜೀವವು ಬೆಳಗದ ಬದುಕುಗಳು
ಬದುಕೇ ಏರದ ಜೀತದಾಳುಗಳು
ಜೀತದ ನೋವಿನ ಮೇಘಗಳು
ಮೇಘವು ಪ್ರಸವಿಸಿದ ಹನಿಗಳು
ಹನಿಯನು ಹೀರುವ ಅರಸರು
ಅರಸರ ಪಾದಕೆ ಮೆಟ್ಟುಗಳು
ಅರಸೊತ್ತಿಗೆಗೆ ನಮ್ಮ ಗೋರಿಗಳೇ ಮೆಟ್ಟಿಲುಗಳು
Tuesday, April 19, 2011
Wednesday, March 30, 2011
Subscribe to:
Posts (Atom)