ಸವಿದರೆ ಬಿಸಿ ಬಿಸಿ ಬೆಲ್ಲ
ನಲ್ಲೆಯ ಗಲ್ಲದಷ್ಟೇ ಸಿಹಿ ಎಲ್ಲಾ .!!!!
ಮೂವತ್ತು ವರ್ಷಗಳ ಹಿಂದೆ ಹಿಂತಿರುಗಿ ನೋಡಿದಾಗ...........
ಗೌರಿಬಿದನೂರ್ ನ ಆಲೆಮನೆ ಯಾ ವ್ಯೆಭವ ಭಾರತ ದಲ್ಲೇ ಪ್ರಸಿದ್ದಿ. ಇಲ್ಲಿನ ನೇಗಿಲ ಯೋಗಿಗಳು
ಕಬ್ಬಿನ ಬೆಳೆಯನ್ನು ಭಾರತದಲ್ಲೇ ಅತಿ ಹೆಚ್ಚಾಗಿ ಬೆಳೆಯುತ್ತಿದ್ದರು ಮತ್ತು ಒಂದು ಎಕರೆಗೆ ಸಾವಯವ ಗೊಬ್ಬರ ಬಳಸಿ ಹೆಚ್ಚು ಇಳವರಿ ತೆಗಯುತ್ತಿದ್ದರು. ಅನೇಕ ಕೃಷಿ ಪ್ರಶಶ್ತಿ ಹೊಡುಕಿಕೊಂಡು ಬರುತ್ತಿತ್ತು.,ಈ ತಾಲೂಕಿನ " ನಾಮಗೊಂಡ್ಲು " ಕಬ್ಬಿನ ಜಲ್ಲೆಯಂತು ಅಮೃತ ದಷ್ಟು ರುಚಿ ಕಾರಣ ಈ ಮಣ್ಣಿನ ಗುಣ ವಿಶೇಷ ವಾದದು. ಈ ಹಳ್ಳಿಯ ಸುತ್ತಾ ಹತ್ತು ಕಿ.ಮಿ. ತಯಾರಿಸಿದ ಬೆಲ್ಲ ವಂತೂ ಇತರೆ ಯಾವ ಬೆಲ್ಲಕ್ಕು ಸರಿಸಾಟಿ ಬರುವುದಿಲ್ಲ.ಅದಕ್ಕೆ ಈ ಸಮಯದಲ್ಲೂ ನಾಮಗೊಂಡ್ಲು ಬೆಲ್ಲ ಅಂದ್ರೆ ಮುಗಿಬಿದ್ದು ಕೊಳ್ಳುತ್ತಾರೆ. ಆಗಾ ತಾಲೂಕಿನಲ್ಲಿ ಸಾವಿರಾರು ಅಲೆಮನೆಗಳು ಈಗ ದುರ್ಬಿನು ಹಾಕಿ ಹುಡುಕಿದರೂ ಕಾಣುವುದು ಕಷ್ಟ. ಈ ಛಾಯಾ ಚಿತ್ರ ನಾಮಗೊಂಡ್ಲು ಪಕ್ಕದ ಹಳ್ಳಿಯ "ಬಾಲರೆಡ್ಡಿ ಹಳ್ಳಿ ".
ಮೊಟ್ಟ ಮೊದಲ ಬಾರಿಗೆ ಕಬ್ಬನ್ನು ಗಾಣಕ್ಕೆ ಇಟ್ಟು..ಕಬ್ಬಿನ ಹಾಲನ್ನು ಬಕೇಟು ಮೂಲಕ ಹೂತ್ತು , ಎರಡನೇ ಛಾಯಾಚಿತ್ರ ದಲ್ಲಿ ತೋರಿಸಿದಂತೆ ದೊಡ್ಡ ಕೊಪ್ಪರಿಕೆಗೆ ಸುರಿದು ಚನ್ನಾಗಿ ಕಾಯಸಿ ಹದಕ್ಕೆ ಬಂದ ಮೇಲೆ , ಕೆಳೆಗಿನ ಕೊಪ್ಪಕರಿಗೆ ಸುರಿದು ........ನಂತರ ಚೌಕಾರದ ಗುಣಿಗೆ ಸುರಿದು (ಮೂರನೆ ಚಿತ್ರ ನೋಡಿ)ಚನ್ನಾಗಿ ಕಲಕಿ .........ನಂತರ ಬಿಸಿ ಆರಿದ ಮೇಲೆ
ಸಣ್ಣ ಉಂಡೆ ಮಾಡಿದರೆ ಅಪ್ಪಟ ಬೆಲ್ಲ ಸಿದ್ದ.
I really enjoyed all photos from this blog good job by Raghavendra,I am from Gauribidanur brings back all my childhood feelings
ReplyDeleteಧನ್ಯವಾದಗಳು ಚಿಕ್ಕ ರವರೆ, ನಮ್ಮ ಹೆಮ್ಮೆಯ ಗೌರಿಬಿದನೂರ್ ಪರಿಸರದ ಬಗ್ಗೆ ನಿಮ್ಮ ಗೆಳೆಯರರೊಂದಿಗೆ
ReplyDeleteಸಂತಸವನ್ನಾ ಹಂಚಿಕೊಳ್ಳಿ.