Wednesday, January 11, 2012

ಗೌರಿಬಿದನೂರ್ ತಾಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ


ಸಮ್ಮೇಳನ ಅದ್ಯಕ್ಷರಿಗೆ ಸ್ವಾಗತದ ಮಾಲಾರ್ಪಣೆ
ಸಾಹಿತ್ಯದ  ಆಸಕ್ತರು
 
  1. ನನ್ನ" ಒಬ್ಬಟ್ಟು" ಮಕ್ಕಳ ಕವನ  ಹೇಳುತ್ತಿರುವುದು

ಸಮ್ಮೇಳನ ಛಾಯಾಚಿತ್ರಗಳನ್ನು  ಚಿತ್ರಿಸಲು ನೂಕು ನುಗ್ಗಲು  
**********************
ಗೌರಿಬಿದನೂರ್ ತಾಲೂಕು ತೃತೀಯ ಕನ್ನಡ ಸಾಹಿತ್ಯ  ಸಮ್ಮೇಳನ ೭ ಮತ್ತು ೮ ರಂದು  ಅದ್ಬುರಿಯಾಗಿ  ನಡೆಯಿತು.ಸಮ್ಮೇಳನ ಅಧ್ಯಕ್ಷರಾಗಿ ಕೆ.ನಾರಾಯಣಸ್ವಾಮಿ  ರವರು ನೆಡಿಸಿಕೊಟ್ಟರು. ಸಂಜೆ  ಕವಿಗೋಷ್ಠಿ  ಬಹಳ ಸುಂದರವಾಗಿ ನಡೆಯಿತು. ಅದರಲ್ಲಿ  ನಾನು ಈ ಮಕ್ಕಳ ಕವನ ಓದಿದೆ. ಸಮ್ಮೇಳನ ನೆನಪಿಗಾಗಿ  " ಗೌರಿ ಭಾಗಿನ " ಸ್ಮರಣ  ಸಂಚಿಕೆ ಬಿಡುಗಡೆ ಮಾಡಿದರು.
    
ಒಬ್ಬಟ್ಟು
ಒಬ್ಬಟ್ಟು  ಒಬ್ಬಟ್ಟು
ಹಬ್ಬಕೆ  ತಟ್ಟಿದ  ಒಬ್ಬಟ್ಟು
ಬೆಲ್ಲದ ಸಿಹಿಯ ಒಬ್ಬಟ್ಟು
ಪಾತ್ರೆ ತುಂಬಿತು  ಒಬ್ಬಟ್ಟು
ಘಮ ಘಮ  ವಾಸನೆ ಹರಡಿತ್ತು
     ನೆಂಟರು  ಬಂದರು  ಸಾಕಷ್ಟು
     ಬಂದರು ನೆಂಟರು ಮಳೆಯಸ್ಟು
     ಊಟಕೆ ಕುಳಿತರು  ಮತ್ತಷ್ಟು
     ತಿಂದರು  ಎಂಟೆಂಟು  ಹತ್ತತ್ತು
     ಹೊಟ್ಟೆಗೆ ತುರುಕಿದರು ಇನ್ನಸ್ಟು

     ಹಬ್ಬದ ಒಬ್ಬಟ್ಟು ಮುಗಿದೊಯ್ತು
     ತಿನ್ನುವ  ಆಸೆಯು  ಬತ್ತೋಯ್ತು
ಹೊಟ್ಟೆ ತುಂಬಾ  ಹಸಿದಿತ್ತು
ಸಿಕೂ ಬಾಕು  ಉಳಿದಿತ್ತು
ಬೇಳೆ ಸಾರು ಸುರಿದಾಯ್ತು
ಹೊಟ್ಟೆ ತುಂಬಾ ಕುಡಿದಾಯ್ತು
ಹಬ್ಬದ ಒಬ್ಬಟ್ಟು ಕನಸಾಯ್ತು 

No comments:

Post a Comment