Thursday, December 9, 2010

ಬುಗುರಿ ಆಟ



 
          ಈ ಆಟವನ್ನು  ಸಾಮಾನ್ಯವಾಗಿ  ಗಂಡು  ಮಕ್ಕಳು ಹಳ್ಳಿಗಳಲ್ಲಿ  ಬುಗುರಿ  ಆಟವನ್ನು  ಹೆಚ್ಚಾಗಿ  ಆಡುತ್ತಾರೆ. ಈ   ಬುಗುರಿ  ಆಟಕ್ಕೆ ಇತಿಹಾಸದ  ಹಿನ್ನೆಲೆ  ಸಮೃದ್ದಿಯಾಗಿ  ಮಹಾಭಾರತ  ಕಥೆಯಲ್ಲಿ ಪಾಂಡವರು  ಮತ್ತು  ಕೌರವರು  ಆಟದ  ಸನ್ನಿವೇಶದಲ್ಲಿ  ಕಾಣಿಸುತ್ತದೆ.
          ಹಳ್ಳಿಗಳಲ್ಲಿ  ಈಗಲೂ  ಕೆಲುವು ಕಡೆ  ಈ  ಆಟದ ಕುರುಹು  ಕಾಣಬರುತ್ತದೆ. ಉದಾ:  ಗೌರಿಬಿದನೂರಿನ  ತಾಲೂಕಿನ ಮಂಚೇನ ಹಳ್ಳಿಯಾ " ಭೀಮನ ಬುಗುರಿ (ಬೆಟ್ಟ).

            ಈ ಆಟದ ನಿಯಮ ಈ ರೀತಿ:
         ಚಿತ್ರದಲ್ಲಿ  ಕಾಣುವಂತೆ  ಮೊದಲು  ಹುಡಗರು  ಬುಗುರಿಯನ್ನು  ದಾರದಿಂದ ಹೊಸೆದ  ಚಾಟಿಯನ್ನು ಸುತ್ತಿ  ಆಟದಲ್ಲಿ ಇರುವ  ಹುಡುಗುರು ಬಂಗರವನ್ನು ಸ್ಪರ್ಶಿಸಿ  ತಕ್ಷಣ  ನೆಲಕ್ಕೆ  ಹಾಕಿ  ನಂತರ  ಚಾಟಿಯ  ಸಹಾಯದಿಂದ ಯಾರು ಕ್ಯಲ್ಲಿ ಹಿಡಿಯುತ್ತಾರು......... ಅವರು  ಆಟ  ಆಡಲು  ಸಿದ್ದವಾಗುತ್ತಾರೆ. ಅಂತಿಮವ  ಬುಗುರಿಯನ್ನು  ನೆಲದಲ್ಲಿ  ಇಡುತ್ತಾನೆ.  ಮಿಕ್ಕವರು  ನೆಲದಲ್ಲಿ ಬಿದ್ದ ಬುಗುರಿಗೆ  ಗುರಿ ಇಟ್ಟು ಹೋಡೆದು  ಗುನ್ನ (ತೂತು) ಮಾಡುತ್ತಾರೆ.

          ಹೀಗೆಯೇ  ಆಟ ಮುಂದುವರೆಯುತ್ತದೆ. ಈ  ಆಟದಲ್ಲಿ  ಬುಗುರಿಗಳು ಎರಡು  ಹೋಳು  ಆಗುವುದು  ಸರ್ವೇ  ಸಾಮಾನ್ಯ.
           ನೆಲಕ್ಕೆ  ಬುಗುರಿ  ಬೀಳದ ಹಾಗೆ  ಕ್ಯೆಲ್ಲಿ  ಹಿಡಿದರೆ  ಅದಕ್ಕೆ "ಅಂತರ  ಮಂಗ" ಎನ್ನುತ್ತಾರೆ. ಆಟಗಾರನ ಅನುಭವದಿಂದ  ಬುಗುರಿಯನ್ನು ಅನೇಕ  ರೀತಿ ಆಡಿಸುತ್ತಾನೆ.

No comments:

Post a Comment