ನಾನು ೧೯೯೪ ರಿಂದ ಕಥೆ ಗಳನ್ನಾ ರಚಿಸುವುದಕ್ಕೆ ಪ್ರಾರಂಭ ಮಾಡಿದೆ. ಹೀಗೆ ಸುಮಾರು ೫೦ ಕಥೆಗಳು ನಾಡಿನ ವಿವಿಧ ದಿನ,ವಾರ,ಪಾಕ್ಷಿಕ,ಮಾಸ ಪತ್ರಿಕೆ ಯಲ್ಲಿ ಬೆಳಕು ಕಂಡಿತು. ಈಗ ತಾಯಿ ಶಾರದೆ ಮಾತೆ ಮತ್ತು
ರಾಯರ ಕೃಪೆ ಇಂದ "ಅವಳು ಚೆಲುವೆ" ಎಂಬ ಕಥಾ ಸಂಕಲನ ಮುದ್ರಣದ ಹಾದಿಯಲ್ಲಿದೆ.
ಇನ್ನಾ ಕೆಲೆವೇ ದಿನಗಳಲ್ಲಿ ಮುದ್ರಣ ಕಾರ್ಯ ಅಂತಿಮ ವಾಗಲಿದೆ. ಕಥಾ ಸಂಕಲನ ಮುಖ
ಈ ರೀತಿ ಅಲಂಕಾರ ಗೊಂಡಿದೆ. ಈ ಸಂತಸ ನಿಮ್ಮಲ್ಲಿ ಹಂಚಿ ಕೊಳ್ಳಬೇಕೆನಿಸಿತು
ಹಂಚಿಕೊಳ್ಳುತ್ತಾ ಇದ್ದೇನೆ . ನಮಸ್ತೆ.
ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Tuesday, September 20, 2016
Saturday, September 17, 2016
ನಾಟಕಗಳ ಜಾತ್ರೆ 1970---1990
1970 ಇಂದ 1990 ರ ತನಕ ಗೌರಿಬಿದನೂರು ನ್ಯಾಷನಲ್ ಕಾಲೇಜು ನಲ್ಲಿ ವರ್ಷದ ಸಾಂಸ್ಕೃತಿಕ ಕಾರ್ಯ ಕ್ರಮ ಗಳಲ್ಲಿ ಕಡಿಮೆ ಅಂದ್ರೆ ಒಂದು ತಿಂಗಳು " ನಾಟಕ " ದ ಸ್ಪರ್ಧೆ ನೆಡೆಯುತ್ತಿತ್ತು . ಆ ಜಮಾನದಲ್ಲಿ ನಮ್ಮ ಕಾಲೇಜ್ ನಿಂದ ಹಿರಿಯರಾದ ರವಿ ಸರ್,ಮುನಿಸಿಪಲ್ ಕಾಲೇಜಿನ ಎ. ಎಸ್.ಅರ್, ಎ . ಸುರೇಶ, ಜಿ.ಬಾಲಾಜಿ ,ವಕೀಲರಾದ ಶ್ಯಾಮಣ್ಣ, ಪ್ರತಾಪ್ ರೆಡ್ಡಿ.... ಇವರೆಲ್ಲಾ ರಾಜ್ಯ ಮಟ್ಟದ ನಾಟಕ ಸ್ಪರ್ಧೆಗೆ ಭಾಗವಹಿಸಿ ಕರ್ನಾಟಕ ದಲ್ಲಿ ಗೌರಿಬಿದನೂರು ನ ಕೀರ್ತಿ ಪತಾಕೆ ಹಾರಿಸಿದ್ದರು . ಈ ಹಿರಿಯರ ನಂತರ ನಾವು ಬಂದೆವು .
ನಾವು ವರ್ಷ ವರ್ಷ ಸಹ ನಾಟಕ ಗಳಲ್ಲಿ ಭಾಗವಹಿಸಿದೆವು. ೧. " ಕಾಲೇಜ್ ಎಲೆಕ್ಶನ್" ೨. "ಗುರ್ತಿನವರು " ೩.ಪಿತಾಮಹ ರಾದ ಶ್ರೀ ಮಾಸ್ಟರ್ ಹಿರಣಯ್ಯ ರಚಿಸಿದ "ಅಳಿಯವತಾರ " ಈ ನಾಟಕ ಕಾಲೇಜ್ ಸ್ಪರ್ಧೆ ಯಲ್ಲಿ ಮೊದಲ ಬಹುಮಾನ ಲಭಿಸಿತು . ಆ ಬಹುಮಾನ ಮುಖ್ಯ ಮಂತ್ರಿಗಳ ಶ್ರೀ ಅರ್. ಗುಂಡೂರಾಯರು ನಮ್ಮ ತಂಡಕ್ಕೆ ಕೊಟ್ಟರು . ಈ ಮದುರ ಕ್ಶಣ ಗಳನ್ನಾ ನಿಮ್ಮ ಬಳಿ ಹಂಚಿ ಕೊಳ್ಳಬೇಕೆನಿಸಿತು
Saturday, September 10, 2016
Wednesday, September 7, 2016
Monday, August 22, 2016
Monday, August 15, 2016
Tuesday, August 9, 2016
Thursday, August 4, 2016
ಎಮ್ಮೆ ಗುಡ್ಡ
ಇಂದು ಮುಂಜಾನೆ ಆರು ಗಂಟೆಗ್ ಗೆ ನಮ್ಮ MLA ಶಿವಶಂಕರ ರೆಡ್ಡಿ ಅವರ ಸಂಗಡ BEO ,KSF ,ಶ್ರೀನಿವಾಸ,ಗೌಡ್ರು ನಾನು ........ ಸುಮಾರು ೨೫ ಜನ ಈ ಎಮ್ಮೆ ಗುಡ್ಡ ಏರಲು ಪ್ರಾರಂಭಸಿದೆವು. MLA ಸಾಹೇಬ್ರು ನವ ಯುವಕರಂತೆ ನಮ್ಮ ತಂಡಕ್ಕೆ ಮುಂದೆ ಇದ್ದರು . ಈ ಗುಡ್ಡ ಗೌರಿಬಿದನೂರು ನ ಸೋನಾಗನಹಳ್ಳಿ ಯಾ ಬಲಗಡೆ ಅರಣ್ಯ ಪ್ರದೇಶದಲ್ಲಿದೆ . ಈ ಎಮ್ಮೆ ಗುಡ್ಡ ಸುಮಾರು ಮುನ್ನೂರ್ (೩೦೦) ಎಕರೆ ಸಸ್ಯ ಸಂಪತ್ತು ಹೊಂದಿದೆ . ಬಹಳ ಒತ್ತಾದ ಗಿಡಗಳು . ಅರಣ್ಯ ಮಧ್ಯದಲ್ಲಿ ಐದು ನೀರಿನ ಕುಂಟೆ ಗಳಿವೆ . ಇಲ್ಲಿ ನರಿ,ಜಿಂಕೆ,ನವಿಲು,ಮೊಲ ..... ಪ್ರಾಣಿಗಳು ನೀರು ಕುಡಿಯುವುದಕ್ಕೆ ಬರುತ್ತವೆ . ವಿಶೇಷ ಅಂದ್ರೆ ಇನ್ನೂರು ವರ್ಷದ ಹಳೆಯ ಬೇಟೆಯ ಚಿಕ್ಕ ಮನೆ ಬ್ರಿಟಿಷ್ ರವರು ಕಟ್ಟಿದ ಕಟ್ಟಡ ಇಂದಿಗೂ ಗಟ್ಟಿಮುಟ್ಟಾಗಿದೆ. ಇಂತಹ ಸುಂದರ ಅರಣ್ಯ ಗೌರಿಬಿದನೂರು ನಲ್ಲಿ ಇರುವುದು ನನಗೆ ಸಂತಸ ತಂದಿದೆ .
Tuesday, August 2, 2016
Saturday, July 30, 2016
Wednesday, July 13, 2016
Thursday, July 7, 2016
Subscribe to:
Posts (Atom)











































