Saturday, December 7, 2013

ಬುಡಬುಡಿಕೆ


     
ಜಾನಪದ ಭವಿಷ್ಯಕಾರರ ಗುಂಪಿಗೆ ಸೇರಿದ ಇವರು ಸಾಮನ್ಯವಾಗಿ ಸುರ್ಯದೋಯದ  ನಂತರ ಭಿಕ್ಷೆಗೆ ಬರುತ್ತಾರೆ . ಭಿಕ್ಷೆಗೆ ಬಂದ ಮನೆ ಮನೆ ಯಜಮಾನ ನನ್ನು 
      ನಿನಗೆ ಲಕ್ಷಿಮಿ ಯೋಗವಿದೆ
      ನಿನ್ನ ಹಣೆ ವಿಶಾಲವಾಗಿದೆ
      ನಿನ್ನ ಮೂಗು ಗರುಡ ನ ತರಹ
      ನೀನು ಕೊಡೆಗ್ಯೆ  ದಾನಿ
       ನಿನ್ನ ನಂಬಿದರೆ ಕಲ್ಪ ವೃಕ್ಷ
       ನಿನ್ನ ನಂಬಿ ಕೆಟ್ಟವರಿಲ್ಲಾ .............
ಹೀಗೆ ಹೊಗಳಿ ಹೊಗಳಿ  ಯಜಮಾನನಾ ಮನಸ್ಸನ್ನು ಸುಪ್ರಿತ ಗೊಳಿಸಿ" ಹೊಗಳಿಕೆ ತೇರು-ಭವಿಷ್ಯ ಮಾರು"
ಎನ್ನುವಂತೆ ವರ್ತಿಸುತ್ತಾರೆ . ವಿಶೇಷ ಎಂದರೆ ಭಿಕ್ಷೆಗೆ ಇವರು ಹಣ ಬಯಸದೆ ದವಸ ಧನ್ಯ ಮತ್ತು ಬಳಸಿದ ಹಳೆ ಬಟ್ಟೆ ಗಳನ್ನೂ ಆಪೆಕ್ಷಿಸುತ್ತಾರೆ.
     ಕಾಲನ ಹೊಡೆತಕ್ಕೆ ಸಿಕ್ಕಿ ಬುಡುಬುಡುಕೆ ಸಂತತಿ ಮಾಯವಾಗುತ್ತಿದೆ . ಕೊನೆಯದಾಗಿ ಇವರು  ಪರಮ ಶಿವನ  ಆರಾಧಕರು.

No comments:

Post a Comment