Sunday, March 10, 2013

ಹಳೇ ಜಮಾನ



               
       ಗರಡಿ ಮನೆ.

ಗರಡಿ ಮನೆ. ಈ ಪದ ಮತ್ತು  ಗರಡಿ ಮನೆ ಸಹ ಮರೆಯಗ್ತಾ ಇದೆ. ೨೫ ವರ್ಷದ ಹಿಂದೆ ಗರಡಿ ಮನೆ  ಅಂದ್ರೆ ನಮೆಗೆಲ್ಲ ಗೌರವ ಹಾಗು ಭಕ್ತಿ. ಅಲ್ಲಿ ಆಖಂಡ ಆಸಕ್ತಿ ಮತ್ತು ಸತತ ಏಕಗ್ರತೆ  ಇದ್ರೆ ಮಾತ್ರ  ಅಲ್ಲಿಗೆ  ಪ್ರವೇಶ.ಗರಡಿ ಮನೆ ಪ್ರವೇಶಕ್ಕೆ ಮುನ್ನ " ಹನುಮನ ಲಂಗೋಟಿ "ಹೊಲಿಸಿಕೊಂಡು  ಒಳಕ್ಕೆ ಹೆಜ್ಜೆ ಇಡಬೇಕು . ಆ ಲಂಗೋಟಿ ಕಟ್ಟುವುದು,  ಅಂಗ ಸಾಧನೆ ಮತ್ತು ಕುಸ್ತಿ ಕಲಿಸುವ ಗುರುಗಳು ನಮಗೆ  ದೇವರ ಸಮನ. ನಂತರ ಹಿರಿಯರು. ಅಂಗ ಸಾಧನೆಗೆ  ಮುಂಜಾನೆ  ೪ ಗಂಟೆಗೆ ಎದ್ದು  ದಂಡ,ಬಸಿಕೆ, ಡಂಲ್ ಕರಲ,ಭಾರ ಎತ್ತುವುದು ................... ಹೀಗೆ ತರಹೇವಾರಿ  ಕಸರತ್ತು  ಮಾಡುವುದು .  ಸುಮಾರು ತಿಂಗಳು ಅಥವಾ ವರ್ಷದ ಕಳೆದ ಮೇಲೆ ಮೈ ಗಟ್ಟಿ ಗೊಂಡು  ಗುಂಡಿಗೆ ಗಟ್ಟಿಯಾಗಿದ್ದರೆ ಮಾತ್ರ  ಕುಸ್ತಿಗೆ  ಇಳುಸುತ್ತಾರೆ . ಕುಸ್ತಿ ಮಾಡಲು  ಕೆಂಪಾದ ಮಣ್ಣು.  ಇದಕ್ಕೆ ಗರಡಿ ಭಾಷೆಯಲ್ಲಿ ಗೋಧ. ಎನ್ನುತ್ತಾರೆ. ಇಂತಹ ಗರಡಿ ಮನೆ  ಗೌರಿಬಿದನೂರು ಆಚಾರ್ಯ ಹೈ ಸ್ಕೂಲ್ ನ ಮೈದಾನ ಅಂಚಿನಲ್ಲಿ ವಿವೇಕಾನಂದ ವ್ಯಾಯಾಮ ಶಾಲೆ  ಹೆಸರು ನಿಂದ ಪ್ರಸಿದ್ದಿ ಹೊಂದಿತ್ತು .  ಇಲ್ಲಿ ಭಾರ ಎತ್ತುವ ಮತ್ತು ಕುಸ್ತಿ ಪಟುಗಳು ಸುಮಾರು ಹೆಸರು ಮಾಡಿದ್ದರು .ಇಂತಹ ಗರಡಿ ಮನೆಗೆ ನಾನು 1985 ರಲ್ಲಿ ಸೇರಿದೆ.ಅಲ್ಲಿ ಕಲಿತು ನಾನು ಕಾಲೇಜ್ ನಲ್ಲಿ 5 ವರ್ಷ ಭಾರ ಎತ್ತುವ ಸ್ಪರ್ಧೆ ಯಲ್ಲಿ ನಾನೇ ಮೊದಲಿಗನಾಗಿ ಪ್ರಶಸ್ತಿ ಪಡೆದೆ ಮತ್ತುಕುಸ್ತಿಸ್ಪರ್ಧೆಗೆ ರಾಜ್ಯ ಮಟ್ಟಕ್ಕೆಆಯ್ಕೆಯಾಗಿ ಕ್ರೀಡಾ ಪಂದ್ಯದಲ್ಲಿ ಗೆದ್ದೆ. ಆದ್ರೆ ನಮ್ಮ ಜಮಾನ ಗರಡಿ ಒರಟು ಈಗಿನಂತೆ 4 ಮತ್ತು 6ಪ್ಯಾಕ್ ಇರಲಿಲ್ಲಾ.    ಯಾಕೋ ಹಿಂದಿನದು ನೆನಪು ಮಾಡಿಕೊಳ್ಳಬೇಕೆನಿಸಿತು........

No comments:

Post a Comment