ಶ್ರೀ ರಂಗನಾಥ ಬೆಟ್ಟ. ಇದು ಗೌರಿಬಿದನೂರ್ ಗ್ರಾಮದ ಚಿಲೇನಹಳ್ಳಿಯಾ ಬುಡದಲ್ಲಿ ಇದೆ. ನೆಲಮಟ್ಟದಿಂದ ಸುಮಾರು ಸಾವಿರ ಆಡಿ ಎತ್ತರ ಇರಬಹುದು. ಬೆಟ್ಟದ ನೆತ್ತಿಯಲ್ಲಿ ರಂಗಂಥ ಸ್ವಾಮಿ ಯ ಪುರಾತನ ವಿಗ್ರಹ ಇದೆ. ನನಗೆ ಆಶ್ಚರ್ಯ ಅಂದ್ರೆ ಪ್ರತಿಯೊಂದು ಬೆಟ್ಟಕ್ಕೆ ತನ್ನದೇಆದ ಹೆಜ್ಜೆ,ಸೊಗಸು,ಸೊಬಗು,ಸೊಗಡು ......ತುಂಬಿ ಕೊಂಡಿರುತ್ತದೆ. ಈ ಬೆಟ್ಟದ ವಿಶೇಷ ಇದೆ ಅಗಿದೆ. ಬೆಟ್ಟ ನೆತ್ತಿಯಲ್ಲಿ ಹಕ್ಕಿಯ ಕಣ್ಣಾಡಿಸಿದರೆ ಈ ಪರಿಸರ ಸ್ವರ್ಗ ದಂತೆ ಕಾಣುತ್ತದೆ. ಮಾರ್ಗ ಮಂಚೇನ ಹಳ್ಳಿ ---ಹಳೇಹಳ್ಳಿ,ಚಿಲೇನಹಳ್ಳಿಅಂತರ ಗೌರಿಬಿದನೂರ್ ನಿಂದ ಇಪ್ಪತ್ತು km.
ಗೌರಿಬಿದನೂರ್ ೪ನೇ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಸಿದ್ದ ಪುಣ್ಯ ಸ್ಥಳ ವಿದುರಾಶ್ವತ್ಥ ದಲ್ಲಿ ನೆಡೆಯಿತು . ಸಮ್ಮೇಳನ ಅಧ್ಯಕ್ಷರು ಡಿ .ಎಸ್ . ಹನುಮಂತರಾಯ ವಹಿಸಿದ್ದರು. ಕಾರ್ಯ ಕ್ರಮದಲ್ಲಿ ನಾನು ಭಾಗವಹಿಸಿದ್ದೆ. ಕವಿಗೋಷ್ಠಿಯಲ್ಲಿ ನಾನು ಮಕ್ಕಳ ಕವನ ''ಉಪ್ಪಿಟ್ಟು '' ವಾಚಿಸಿದೆ.