Sunday, March 4, 2012

ಕವಣೆ


         
         ಸೂರ್ಯ ಕಾಂತಿ,ಜೋಳ,ರಾಗಿ...............ಬೆಳೆಗಳು ಸಮೃದ್ದಿಯಾಗಿ ಬೆಳದು  ನಳನಲಿದಾಗ ಆದನ್ನು ಕಾಪಾಡುವುದೇ ನೇಗಿಲಯೋಗಿ ಗೆ ದೊಡ್ಡ ಶ್ರಮದಾಯಕ. ಹೇಗೆಂದರೆ ಪಕ್ಷಿಗಳಿಂದ  ಕಾಪಾಡುವುದು. ಹಿಂಡು ಹಿಂಡು ಹಕ್ಕಿಗಳು  ಬೆಳೆಗಳಿಗೆ  ದಾಳಿ ಇಟ್ಟಾಗ .....ಖಾಲಿ  ಡಬ್ಬ  ಹೊಡೆದು  ಶಬ್ದ  ಮಾಡಿ ಓಡಿಸುತ್ತಾರೆ. ಕೆಲವು ಬಾರಿ  ಈ ಶಬ್ದಕ್ಕೆ  ಈ  ಹಕ್ಕಿಗಳು  ಜಗ್ಗುವುದ್ದಿಲ್ಲ. ಆಗ ಅನಿವಾರ್ಯವಾಗಿ  ನೇಗಿಲಯೋಗಿ  " ಕವಣೆ " ಬಳಸುತ್ತಾನೆ. ಈ  ಕವಣೆ ಎರಡು ಕಡೆ ಕಾರವಾಗಿ ತಿರುಗಿಸುತ್ತಾ ಚಾವುಟಿಯ ಒಂದು ದಾರವನ್ನು ಬಿಟ್ಟಾಗ ಒಳಗಿದ್ದ ಕಲ್ಲು  ಹಕ್ಕಿಗಳ  ನಡುವೆ ಬೀಳುತ್ತದೆ. ಆಗ ಹಕ್ಕಿ ಹಾರಿ ಹೋಗುತ್ತದೆ. ಈ  ರೀತಿ ಒಬ್ಬನೇ  ೫-೬ ಎಕರೆ ಹೊಲವನ್ನು  ಕಾಯಬಹುದು.

No comments:

Post a Comment