ಲೇಪಾಕ್ಷಿ ಅಂದರೆ " ಎದ್ದುಳು ಪಕ್ಷಿ " ಎಂದು ಅರ್ಥ. ಈ ಪಾದ ಶ್ರೀ ರಾಮ ಚಂದ್ರ ಪಕ್ಷಿಗೆ ನುಡಿದ ಮಾತು. ರಾವಣ ಸಂಗಡ ಹೋರಾಟದಲ್ಲಿ ಸೋತ " ಜಟಾಯು " ಪಕ್ಷಿಯನ್ನು ಸಂತ್ಯೆಸಲು ರಭಸವಾಗಿ ಸೀತಾಮಾತೆ ಹೆಜ್ಜೆಯೂರಿದಾಗ ಈ ಸ್ಟಳ " ಸೀತಾಪಾದ " ಇಷ್ಟು ದೊಡ್ಡ ಪಾದನಾ ... !! ಅಂತ ಗ್ಯೆಡ್ ಗೆ ಕೇಳಿದಾಗ " ಸರ್ ರಾಮಾಯಣ ಕಾಲದಲ್ಲಿ ಸೀತಾಮಾತೆ 24 ಅಡಿ ಮತ್ತು ಶ್ರೀರಾಮ ಚಂದ್ರ 36 ಅಡಿ ಎತ್ತರ. ರಾಕ್ಷಸ ರಾವಣ 104 ಅಡಿ " ಅಂದ . ನನಗೆ ಏಕ ಕಾಲಕ್ಕೆ ವಿಸ್ಮಯ ಮತ್ತು ಆಶ್ಚರ್ಯ. ನಾನು ಓದಿದ ಪ್ರಕಾರ ಐದು ಸಾವಿರ ವರ್ಷದ ಹಿಂದೆ ಮನುಜನ ಆಯುಸ್ಸು 175 ವರ್ಷ. ಕಾಲ ಸರಿಯುತ್ತಾ ..... ಈಗ 50 ವರ್ಷಕ್ಕೆ ನಿಂತಿದೆ. ಈ ರೀತಿಯ ಎತ್ತರ ಸಹ 36 ರಿಂದ 7--8 ಅಡಿ ಗೆ ನಿಂತಿರ ಬಹುದೆ ...???!!!. ಚಿತ್ರ ವಿಚಿತ್ರ ಪ್ರಶ್ನೆ ಈ ಕ್ಷಣ ಸಹ ಕಾಡುತ್ತಿದೆ . ಈ ದೇವಾಲಯ ಏಕ ಶಿಲಾ ಬಂಡೆ ಮೇಲೆ ಕೆತ್ತಿರುವು ವಿಶೇಷ .
ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Thursday, August 31, 2017
Saturday, August 26, 2017
Tuesday, August 22, 2017
Monday, August 21, 2017
Thursday, August 17, 2017
Tuesday, August 8, 2017
ಕಲುಬುರ್ಗಿ = ಗುಲ್ಬರ್ಗ
ಕಲಬುರ್ಗಿ ಕನ್ನಡದಲ್ಲಿ(ಕಲ್ಲಿನ ಕೋಟೆ) -- ಉರ್ದು ಗುಲ್ಬರ್ಗ(ಹೂ ತೋಟ ) . ಇತಿಹಾಸದಲ್ಲಿ "ರಾಷ್ಟ್ರಕೂಟರು ಚಾಲುಕ್ಯರು " ನಂತರ ಮೊಘಲು ದೊರೆಗಳು ಈ ಪ್ರದೇಶ ಆಳಿದ್ದಾರೆ. ಅದ್ಭುತವಾದ ಕೋಟೆ . ಕೋಟೆ ಒಳಗೆ ಪ್ಯಾಲೇಸ್ ,ಫಿರಂಗಿ ,ಶಾಶನಗಳು.... ಇವೆ. ಆದ್ರೆ ಕೋಟೆ ಭಾಗಶ: ಬಿದ್ದು ಹೋಗಿದೆ. ಕೋಟೆ ಒಳಗೆ ಮನೆಗಳು ಆಕ್ರಮಿಸಿಕೊಂಡಿದೆ. ನೋಡುವುದಕ್ಕೆ ಸುಂದರ ಮತ್ತು ಅದ್ಭುತ ಪ್ರದೇಶ . ಒಮ್ಮೆ ನೋಡಿದರೆ ನಮ್ಮ ಪೂರ್ವಿಕರು ನೆನಪಾಗುತ್ತಾರೆ .
Thursday, July 27, 2017
ಗೌರಿಬಿದನೂರು ಗೆ ನಾಮಾಕರಣವಾದುದು
ಗೌರಿಬಿದನೂರು ಗೆ ನಾಮಾಕರಣವಾದುದು
------------------------------------------
ನಮ್ಮ ಗೌರಿಬಿದನೂರು ಊರಿಗೆ ಮಹಾಭಾರತದ ಇತಿಹಾಸ ಬಳುವಳಿ ಇದೆ . ಗೌರಿಬಿದನೂರು ಹೆಸರು ಸಾಗಿ ಬಂದ ಹಾದಿ ಈ ರೀತಿ ಇದೆ .
------------------------------------------
ನಮ್ಮ ಗೌರಿಬಿದನೂರು ಊರಿಗೆ ಮಹಾಭಾರತದ ಇತಿಹಾಸ ಬಳುವಳಿ ಇದೆ . ಗೌರಿಬಿದನೂರು ಹೆಸರು ಸಾಗಿ ಬಂದ ಹಾದಿ ಈ ರೀತಿ ಇದೆ .
ಮಹಾಭಾರತ ಯುದ್ಧ ಪೂರ್ಣಗೊಂಡ ನಂತರ ... ವಿದುರ ರರು ವ್ಯಾಸರ ಆಜ್ಞೆ ಯಂತೆ ಮೋಕ್ಷ ಹೊಂದಲು ಉತ್ತರಪಿನಾಕಿನಿ ನದಿದಡ ದಲ್ಲಿರುವ ಮ್ಯೇತ್ರಿಯಿ ಋಷಿಗಳ ಬಳಿ ಆಶ್ರಯ ಪಡೆದರು . ಅವರ ಆದೇಶ ಮೇರೆಗೆ ನಾರಾಯಣ ಮಂತ್ರ ಪಟಿಸುತ್ತ ಅಶ್ವತ್ಥ ವೃಕ್ಷ ನೆಟ್ಟು ಪುಜಿಸಿದರು . ನಂತರ ಅಶ್ವತ್ಥ ನಾರಾಯಣ ಸ್ವಾಮಿ ಕೃಪೆ ಇಂದ ಮೋಕ್ಷ ಪಡೆದರು. ಈ ಪವಿತ್ರ ಸ್ಥಳಕ್ಕೆ "ವಿದೂರೂರು"ಎಂದು ಹೆಸರು ಗಳಿಸಿ ಸಾವಿರಾರು ವರ್ಷ ಪ್ರಸಿದ್ದಿ ಪಡೆಯಿತು . ನಂತರ ಕಾಲಕ್ರಮೇಣ ವಿದೂರೂರು ಆಳ್ವಿಕೆಯಲ್ಲಿ ಒಳಪಟ್ಟಿದ್ದ ದಾರಿನಾಯನಕನ ಪಾಳ್ಯದ ಪಾಳೆಗಾರ ತನ್ನ ಕಿರಿ ಮಗಳಾದ ಗೌರಿ ಗೆ ವಿದೂರೂರು ನ್ನು ಬಳುವಳಿಯಾಗಿಕೊಟ್ಟ ನಂತರ.... ಗೌರಿ ವಿದೂರೂರು ನಂತರ " ಗೌರಿಬಿದನೂರು" ಹೆಸರಲ್ಲಿ ಪ್ರಸಿದ್ದಿ ಪಡೆಯಿತು .ನಮ್ಮ ಗೌರಿಬಿದನೂರು ಜನತೆ ಈ ಬರಹ ಇತರರಿಗೆ ತಿಳಿಸಿ ಮತ್ತು share ಮಾಡಿ .
Saturday, July 22, 2017
"ಅವಳು ಚೆಲುವೆ" ಯ ಸಂತೋಷದ ಸುದ್ದಿ
ಏನು ಅಂದರೆ "ಅವಳು ಚೆಲುವೆ" ಕಥಾ ಸಂಕಲನ ಕರ್ನಾಟಕ ಪುಸ್ತಕ ಗ್ರಂಥಾಲಯಕ್ಕೆ ಆಯ್ಕೆ ಆಗಿದೆ.
ಈ ಚೆಲುವೆ ಈಗ ಪ್ರಥಮ ಸುತ್ತಿನಲ್ಲಿ ಬೆಂಗಳೂರು ನಾಲ್ಕು ಜೋನ್ ಗೆ ಕಪಾಟು (ಬೀರು) ನಲ್ಲಿ ಅಲಂಕರಿಸಿ, ನಂತರ ಓದುಗರ ಆಸಕ್ತಿಗೆ ನೆರವಾಗುತ್ತಾಳೆ. ನಂತರ ಹಂತ ಹಂತವಾಗಿ ಕರ್ನಾಟಕದ ವಿವಿಧ ಜಿಲ್ಲೆಗಳ ಗ್ರಂಥಾಲಯಕ್ಕೆ ಚೆಲುವೆ ಕಥಾ ಸಂಕಲನ ಕಪಾಟು ಅಲಂಕರಿಸುತ್ತಾಳೆ . ಈ ಸಂತೋಷದ ನಿಮ್ಮಲ್ಲಿ (ನನ್ನ ಓದುಗ ಗೆಳೆಯರಲ್ಲಿ) ಹಂಚಿ ಕೊಳ್ಳಬೇಕೆನಿಸಿತು. ನಮಸ್ತೆ .
Saturday, July 15, 2017
ಬಸ್ಸು ಅಥವಾ ರೈಲು ಆಟ
ಈ ಆಟ ನಮ್ಮ ಕಾಲದಲ್ಲಿ ಆಡ್ತಾ ಇದ್ದೀವಿ. ಇದಕ್ಕೆ ಬಸ್ಸು ಅಥವಾ ರೈಲು ಆಟ ಅಂತ ಇದ್ದೀವಿ. ಈ ಆಟ ಆಡ್ತಾ ಸುಮಾರು 3-4 ಕಿ ಮೀ ಓಡಾಡುತಾ ಇದ್ದೀವಿ. ನಮ್ಮ ಪಟ್ಟಣ ಮತ್ತು ನಗರಗಳಲ್ಲಿ ಎಲ್ಲೂ ನನಗೆ ಇದುವರೆಗೆ ಕಾಣಾಲಿಲ್ಲಾ . ನಮ್ಮ ಹಳ್ಳಿಗಳಲ್ಲಿ ಈ ದಿನಕ್ಕೂ ... ಈ ಕ್ಷಣಕ್ಕೂ ... ಮಕ್ಕಳು ಕೇಕೆ ಹಾಕಿ ಕೊಂಡು ಆಟವಾಡುತ್ತಾ ಇರುತ್ತಾರೆ. ಆಟ ಆದ ನಂತರ ತುಂಬು ಸಂತೋಷದಿಂದ ಹೊಟ್ಟೆ ತುಂಬಾ ಉಂಡು ಮತ್ತು ಕಣ್ಣು ತುಂಬಾ ನಿದ್ದೆ ಮಾಡುತ್ತಾರೆ. ಇದು ನನ್ನ ಸ್ವಂತ ಮತ್ತು ಗೆಳೆಯರ ಅನುಭವ.
ನಿಮಗೆ ????????
Friday, July 14, 2017
Monday, July 3, 2017
Saturday, June 24, 2017
Friday, June 16, 2017
ಬೊಂಬೆಗಳಿಗೆ ಆಲಂಕಾರ
ನಮ್ಮ ಹಿಂದೂ ಸಂಪ್ರದಾಯದ ದಸರಾ ಹಬ್ಬಕ್ಕೆ " ಬೊಂಬೆ " ಹಬ್ಬ ಅಂತ್ತಾರೆ ಯಾಕೆಂದ್ರೆ ಆ ಹಬ್ಬದಲ್ಲಿ ಎಲ್ಲಾ ರೀತಿಯ ವಿವಿಧ ಬೊಂಬೆ ಗಳನ್ನಾ ಹಬ್ಬಕ್ಕೆ ಮುಂಚೆಯೇ.... ಭಕ್ತಿ ಮತ್ತು ಶ್ರದ್ಧೆಯಿಂದ ಅಲಂಕಾರ ಮಾಡಿ ಹಬ್ಬಕ್ಕೆ ಪೀಠ ದಲ್ಲಿ ಜೋಡಿಸುತ್ತಾರೆ . ಆ ಹಬ್ಬದ ಸಂಜೆ ಎಲ್ಲರನ್ನ ಆಹ್ವಾನಿಸಿ ಬೊಂಬೆಗಳನ್ನ ತೋರಿಸಿ ... ನಂತರ ಸತ್ಕರಿಸಿ ಫಲ ತಾಂಬೂಲ ಕೊಡುತ್ತಾರೆ . ಶುಭ ಕಾರ್ಯಗಳಲ್ಲಿ ಈ ಬೊಂಬೆಗಳನ್ನಾ ನೆನಪಿನ ಕಾಣಿಕೆಗಳಾಗಿ ಕೊಡುತ್ತಾರೆ .
ಇಂತಹ ಬೊಂಬೆಗಳಿಗೆ ಅಂದವಾಗಿ ಅಲಂಕಾರ ಮಾಡುವುದರಲ್ಲಿ ನನ್ನ ಆಗ್ರ ತಂಗಿ ಭಾರತಿ ನಮ್ಮ ಮನೆಯಲ್ಲಿ ಪ್ರಥಮಳು. ನಮ್ಮ ಮನೆಯಲ್ಲಿ ಮಾದುವೆ,ಉಪನಯನ,ಹಬ್ಬ,ಹರಿದಿನ.... ಎಲ್ಲದಕ್ಕೂ ಭಾರತಿ
ಅಲಂಕರಿಸಿದ ಬೊಂಬೆ ಗಳೆ ಖಂಡಿತ ಬೇಕು . ಈ ಹವ್ಯಾಸ ಕಲಿತಿತುದು ನಮ್ಮ ತಾಯಿ ಇಂದ. ನಮ್ಮ ತಾಯಿ ಆ ಕಾಲದಲ್ಲಿ ಬಣ್ಣ ಕಾಗದದಿಂದ ಬೊಂಬೆ ಅಲಂಕಾರ ಮಾಡುತಿದ್ದರು. ಅಮ್ಮನ ರೂಪ ಮತ್ತು ಕಲೆ ಪಡೆದವಳು ನನ್ನ ತಂಗಿ ಭಾರತಿ .
Wednesday, June 7, 2017
Sunday, May 28, 2017
Friday, March 31, 2017
Saturday, March 18, 2017
Thursday, March 9, 2017
ಅಮ್ಮ ಕ್ಲಿಕ್ ಮಾಡಿದ PHOTO
ನನ್ನ ಫೋಟೋ ಹುಚ್ಚು ನೋಡಿ ಅಪ್ಪಾಜಿ 1989 ರಲ್ಲಿ 2.500 ರೂ ಸಾಲ ತಂದು ನನಗೆ YESHIKA MF 2 ಫಿಲಂ ರೋಲ್ ಕ್ಯಾಮರಾ ತರುವುದಕ್ಕೆ ಹಣ ಕೊಟ್ಟರು. ನಾನು ಅಂದ್ರೆ ಅಪ್ಪಾಜಿಗೆ ಎಂಟು ಮಕ್ಕಳಲ್ಲಿ ತುಂಬಾ ಪ್ರೀತಿ ಹೆಚ್ಚು. ಏಕೆಂದ್ರೆ ನಾನು ಅವರ ರೀತಿ ಬಣ್ಣ ಮತ್ತು ಮೈಕಟ್ಟು ಹೊಂದಿದ್ದೆ.
ಯಶಿಕ MF 2 ಕ್ಯಾಮರಾಗೆ ಕೊಡಕ್ ಫಿಲಂ ರೋಲ್ ಹಾಕಿ ಅಪ್ಪ ಅಮ್ಮನ ಫೋಟೋ ತೆಗೆಯೋಣ ಅಂತ ಮನೆಗೆ ಬಂದೆ, ಅಪ್ಪ ತರಕಾರಿ ಮಾರುಕಟ್ಟೆಗೆ. ಅಮ್ಮ ಫೋಟೋ ತೆಗಿಸಿಕೊಳ್ಳಕೆ ಸುತರಾಂ ಒಪ್ಪಲ್ಲಿಲ್ಲಾ. ಆದರೆ ಆಶ್ಚರ್ಯ ಅಂದ್ರೆ ಅಮ್ಮನೇ ನನ್ನ ಫೋಟೋ ಕ್ಲಿಕ್ಕ್ಸಿದರು.
ಅಮ್ಮನಿಗೆ ಒಂದುಚೂರು ಕ್ಯಾಮಾರ ಬಗ್ಗೆ ಅರಿವಿಲ್ಲಾ. ಈಗ ಈ ಫೋಟೋ ನೋಡ್ತಾಯಿದ್ದರೆ ಎಷ್ಟು ಸೊಗಸಾಗಿ ಚಿತ್ರಿಸಿದ್ದಾರೆ ಅಂತ ಸಂತಸದಿಂದ ಹಕ್ಕಿಯಂತೆ ಹಾರಾಡುತ್ತೆ.
ಫೋಟೋ ಒಂದು ಕ್ಷಣ ಆಳವಾಗಿ ವೀಕ್ಷಿಸಿ ಹಾಲಿವುಡ್ ನಟ ಸ್ಟೆಲೊನ್ ಮತ್ತು ಬಾಕ್ಸಿಂಗ್ ಪಟು ಮೈಕ್ ಟೈಸನ್ ಪೋಸ್ಟರ್ ನೋಡಿದ್ರೆ ಅಂದಿನ ನನ್ನ ಅಭಿರುಚಿ ಹೇಳುತ್ತೆ.
Saturday, February 4, 2017
Thursday, December 22, 2016
Monday, December 5, 2016
೨೦೧೬- ೮೨ ನೇ ಕನ್ನಡ ಸಾಹಿತ್ಯ ಸಮ್ಮೇಳನ
೮೨ ನೇ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಇತಿಹಾಸ
ಪುಟದಲ್ಲಿ ದಾಖಲಾಯ್ತು. ಸಮ್ಮೇಳನ ಎನ್ನುವುದಕ್ಕಿಂತ ಕನ್ನಡ ಜಾತ್ರೆ ಎಂದರೆ ಹೆಚ್ಚು
ಸೂಕ್ತ. ಈ ಜಾತ್ರೆ ಯಲ್ಲಿ ಸಾಹಿತ್ಯ ಗೋಷ್ಠಿ,ಸಂಗೀತ,ನೃತ್ಯ,ಪುಸ್ತಕಪ್ರದರ್ಶನಮತ್ತುಮಾರಾಟ,ಭಾಷಣ,ಉತ್ಸಾಹ,ಉಲ್ಲಾಸ,ಸಡಗರ,ಜಯಕಾರ,ಧಿಕ್ಕಾರ,ತಿರಸ್ಕಾರ.....
ಹೀಗೆ ನೋಡ್ತಾ ಹೋಗುತ್ತಿದ್ದರೆ .. ಉಕ್ಕೇರಿದ ತುಂಗಭದ್ರೆಯ ಹರಿಯುವ ನದಿಯ
ಏರಿಳಿತದಂತೆ ಇದೆ.
ರಾಯಚೂರು ನಲ್ಲಿ ಮದುವೆಯಾದ ನನ್ನ ಗೆಳೆಯ ವೆಂಕಿ ರಾಯಚೂರುನಲ್ಲಿ ಇರುವುದು " ಬೆಸೆಗೆ ಕಾಲ ಮತ್ತು ಜಾಸ್ತಿ ಬೆಸೆಗೆ ಕಾಲ " ಎರಡು ಕಾಲ ಅಂತ ಹೇಳಿದ್ದು ಸತ್ಯ ಎನಿಸಿತು
ರಾಯಚೂರು ನಲ್ಲಿ ಮದುವೆಯಾದ ನನ್ನ ಗೆಳೆಯ ವೆಂಕಿ ರಾಯಚೂರುನಲ್ಲಿ ಇರುವುದು " ಬೆಸೆಗೆ ಕಾಲ ಮತ್ತು ಜಾಸ್ತಿ ಬೆಸೆಗೆ ಕಾಲ " ಎರಡು ಕಾಲ ಅಂತ ಹೇಳಿದ್ದು ಸತ್ಯ ಎನಿಸಿತು
Saturday, November 12, 2016
Saturday, November 5, 2016
ಪುಸ್ತಕ ಲೋಕಕ್ಕೆ "ಚೆಲುವೆ" ಲಗ್ಗೆ
ಗೆಳೆಯರೇ ಮತ್ತು ಪುಸ್ತಕ ಪ್ರೇಮಿಗಳೆ ನನ್ನ "ಅವಳು ಚೆಲುವೆ" ಕಥಾ ಸಂಕಲನ ಮಾರುಕಟ್ಟೆ ಯನ್ನುಪ್ರವೇಶ ಮಾಡಿದೆ . ಗೌರಿಬಿದನೂರು ನಲ್ಲಿ ಓದುವ ಮತ್ತು ಕೊಳ್ಳುವ ಆಸಕ್ತಿ
ಇದ್ದವರು ನನ್ನ " ಶ್ರೀ ರಾಘವೇಂದ್ರ ಕೊಂಡಿಮೆಂಡ್ಸ್ " ಮಹಾತ್ಮಾ ಗಾಂಧಿ ಚೌಕ ದಲ್ಲಿ
ಪ್ರಯತ್ನನಿಸಬಹುದು. ಮತ್ತು ನಮ್ಮ
ಸರ್ಕಾರಿ ವಾಚನಾಲಯ ದಲ್ಲಿ ಓದಬಹುದು . ಬೇರೆ ಊರಿನ ಸಾಹಿತ್ಯ ಓದುಗರು ಅಂಚೆ ಮೂಲಕ ಅಥವಾ ನೇರವಾಗಿ ಸಂಪರ್ಕಿಸಬಹುದು.
ನಿವೇದಿತಾ ಪ್ರಕಾಶನ
ಉಮೇಶ್
ನಂ. ೩೪೩೭,(೧ ನೇ ಮಹಡಿ) ೪ನೇ ಮುಖ್ಯ ರಸ್ತೆ,
೯ನೇ ಅಡ್ಡ ರಸ್ತೆ,ಶಾಸ್ತ್ರಿ ನಗರ, ಬನಶಂಕರಿ ,
೨ ನೇ ಹಂತ , ಬೆಂಗಳೂರು --೨೮ .
ಮೊಬೈಲ್ -9448733323
ಸರ್ಕಾರಿ ವಾಚನಾಲಯ ದಲ್ಲಿ ಓದಬಹುದು . ಬೇರೆ ಊರಿನ ಸಾಹಿತ್ಯ ಓದುಗರು ಅಂಚೆ ಮೂಲಕ ಅಥವಾ ನೇರವಾಗಿ ಸಂಪರ್ಕಿಸಬಹುದು.
ನಿವೇದಿತಾ ಪ್ರಕಾಶನ
ಉಮೇಶ್
ನಂ. ೩೪೩೭,(೧ ನೇ ಮಹಡಿ) ೪ನೇ ಮುಖ್ಯ ರಸ್ತೆ,
೯ನೇ ಅಡ್ಡ ರಸ್ತೆ,ಶಾಸ್ತ್ರಿ ನಗರ, ಬನಶಂಕರಿ ,
೨ ನೇ ಹಂತ , ಬೆಂಗಳೂರು --೨೮ .
ಮೊಬೈಲ್ -9448733323
Subscribe to:
Posts (Atom)

















































