ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Thursday, November 29, 2012
Saturday, November 17, 2012
ಭೀಮೇಶ್ವರ ಬೆಟ್ಟ
ಈ ಭೀಮೇಶ್ವರ ಬೆಟ್ಟ ಸುಮಾರು 6 ಬಾರಿ ಹತ್ತಿದ್ದಿನಿ. ಆದ್ರೆ ಈ ಬಾರಿ ನನ್ನ ನೆಚ್ಚಿನ ಗೆಳಯ ಕ್ಯಾಮರ ಜೊತೆ ಸೇರಿ ಹಾಗು ನನ್ನ ಸಂಗಡಿಗರೊಂದಿಗೆ ಹತ್ತಿದೆ. ಬೆಟ್ಟದ ನೆತ್ತಿಯಲ್ಲಿ ನಿಂತು ಹಕ್ಕಿ ನೋಟಹರಿಸಿದಾಗ ಕಾಣುವನೋಟ ಸ್ವರ್ಗಕ್ಕೆ ಎರಡೇ ಅಂಗುಲ. ಆ ಪ್ರಕೃತಿ ಸೊಗಸು ನಾ ನೋಡಿದಕ್ಕೆನನ್ನ ಕಣ್ಣು ಧನ್ಯ. ಈ ಬೆಟ್ಟದ ವಿಶೇಷ ಅಂದ್ರೆ ಬೆಟ್ಟದ ಮೇಲೆ ಕಲ್ಲಿನ ದೀಪಾ ಸ್ತಂಭ ಇದೆ. ಇದಕ್ಕೆ ವರ್ಷಕ್ಕೆ ಎರಡು ಬಾರಿ ರಾತ್ರಿ ಎಣ್ಣೆ ದೀಪ ಹಚ್ಚಿತ್ತಾರೆ ಅದು ಮುಂಜಾನೆ ತನಕ ಬೆಳಗುತ್ತೆ. ಸುತ್ತಾ ನೋಡಿದಾಗ ನಮ್ಮ ಉತ್ತರ ಪಿನಾಕಿನಿ ನದಿಯ ಹೆಜ್ಜೆಯ ಜಾಡು ಕಣ್ಣು ಹಾಯಿಸಿದಷ್ಟು ಕಾಣುತ್ತದೆ,ನನ್ನ ಕ್ಯಾಮರ ಕಣ್ಣಿಗೆಕಂಡದ್ದುಇಷ್ಟುಮಾತ್ರ.ಬೆಟ್ಟದ ಬುಡದಲ್ಲಿ ಧ್ಯಾನಕ್ಕೆ ಕಲ್ಲಿನ ಗುಹೆ ಇದೆ.ಈ ಬೆಟ್ಟದ ವಿಶೇಷ ಎಂದರೆ ಮಹಾಭಾರತದ ಸಮಯದಲ್ಲಿ ಪಾಂಡವರು ಈ ಬೆಟ್ಟದಲ್ಲಿ ತುಸು ಹೊತ್ತು ಕಾಲ ಕಳೆದಿದ್ದರು ಎಂಬ ಪ್ರತೀತಿ ಇದೆ.
Sunday, November 11, 2012
Thursday, October 25, 2012
Wednesday, October 24, 2012
ಗುಡಿಬಂಡೆ ಬೆಟ್ಟ
ನಾನು ನನ್ನ ಗೆಳೆಯರು ಗುಡಿಬಂಡೆ ಬೆಟ್ಟ ಹತ್ತುವುದಕ್ಕೆ ಹೋಗಿದ್ದಿವಿ.
ತುಂಬಾ ಸುಂದರವಾಗಿ ಇದೆ. ಈ ಬೆಟ್ಟದ ಮೇಲೆ ಕೆಳಗೆ ಕೋಟೆ ಇಂದ ಸುತ್ತುವರೆದಿದೆ. ಬೆಟ್ಟದ ಮೇಲೆ
ಯುದ್ದ ಖ್ಯೆದಿಗಳ ಬಂದಿಕಾನೆ,ಶಿವನ ದೇವಸ್ತಾನ,ನೀರಿನ ದೊನ್ನೆ ,ಗೋಪುರ ..........ಇದೆ.ಒಂದು ಸಮಯದಲ್ಲಿ ಚನ್ನಾಗಿ ಆಳಿಸಿಕೊಂಡ ಕೋಟೆ. ಜೇನು ಗೊಡು ಸಮೃದ್ದಿಯಾಗಿ ನೇತಾಡುತಿದೆ. ಈ ಬೆಟ್ಟ ಹತ್ತುವಿಕೆ ಒಳ್ಳೆ ಸಂತೋಷದ ಅನುಭವ ನೀಡಿತು. ಬೆಟ್ಟ ದ ಮೊದಲ ಮೆಟ್ಟಿಲಲ್ಲಿ ಶಂಖ ಕೃತಿಯ ಬಂಡೆ ಮತ್ತು ಮಾನವನ ತಲೆಯ ಆಕೃತಿಯ ಬಂದೆ ಕಾಣುತ್ತದೆ.
Sunday, October 21, 2012
Monday, October 15, 2012
Wednesday, September 12, 2012
ಸಹಸ್ರ ಪದಿ
ಮೊನ್ನೆ ನಾನು ನನ್ನ ಗೆಳೆಯರು ಗುಂಡ್ಲ ಹಳ್ಳಿ ಮತ್ತು ನಾಮಗೊಂಡ್ಲು ಬೆಟ್ಟ ಸುತ್ತುವುದಕ್ಕೆ
ಹೋಗಿದ್ದಾಗ ಈ ಅಪರೂಪದ ಸಹಸ್ರ ಪದಿ ಯಾ ಮಿಲನದ ದೃಶ್ಯ ಕಣ್ಣಿಗೆ ಹಬ್ಬವನ್ನು
ಒಂಟು ಮಾಡಿತು. ಆದ್ರೆ ನಮ್ಮುಗಳ ಹೆಜ್ಜೆಯ ಸಪ್ಪಳದಿಂದ ಅವು ತಮ್ಮ ಕ್ರಿಯೆ ಬಿಟ್ಟು
ದೂರ ಸರಿದವು. ಯಾಕೋ ............ಮಾರನೇ ದಿನ ಅವುಗಳ ಮಿಲನ ಕ್ರಿಯೆ ನಮ್ಮಿಂದ
ತೋರೆದವು ಎಂದು ತುಸು ಬೇಸರದಿಂದ ಮನಸ್ಸು ಹಿಂಡಿತ್ತು.
Friday, August 3, 2012
ಕಲ್ಲಿನಲ್ಲಿ ಆಕೃತಿಗಳು
ನನ್ನ " ಕಾಂಡಿಮೆಂಟ್ಸ್ " ರಜ ಮಾಡಿ ನನ್ನ ಗೆಳೆಯರು ಸೇರಿ.....ನನ್ನ ಊರಿಂದ ಚಿಕ್ಕ ಬಳ್ಳಾಪುರ ರಸ್ತೆ ಯಲ್ಲಿ ಬರುವ ಬಿಸಲಹಳ್ಳಿ ಇರುವ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ತಾನದ ಹಿಂದೆ ಇರುವ ಚಿಕ್ಕ ಬೆಟ್ಟ ನಾವೆಲ್ಲ ಏರಿದಾಗ ನನ್ನ ಕ್ಯಾಮರ ಕಣ್ಣಿಗೆ ಈ ಕಲ್ಲಿನ ಬಂಡೆಗಳು ನನ್ನ ಮನದ ಭಾವನೆ ಗೆ ಹೀಗೆ ಕಂಡಿತು.
೧.ಮಾನವ ಮಲಿಗಿದಂತೆ
೨.ನಾಯಿ ಮೂತಿಯಂತೆ
೩.ಜೋಡಿ ಹಾವು,ಮೀನು ......
೪.ಏಡಿ ಅಥವಾ ಭರ್ಗರ್
೫.ಆದಿ ಮಾನವನ ಪಾದರಕ್ಷೆ
೬.ಸಣ್ಣ ಗುಹೆಯ ಹೆಬ್ಬಾಗಿಲು
೧.ಮಾನವ ಮಲಿಗಿದಂತೆ
೨.ನಾಯಿ ಮೂತಿಯಂತೆ
೩.ಜೋಡಿ ಹಾವು,ಮೀನು ......
೪.ಏಡಿ ಅಥವಾ ಭರ್ಗರ್
೫.ಆದಿ ಮಾನವನ ಪಾದರಕ್ಷೆ
೬.ಸಣ್ಣ ಗುಹೆಯ ಹೆಬ್ಬಾಗಿಲು
Friday, July 20, 2012
ಬೀದಿ ಕಲಾವಿದ
ಈ ಹಿರಿಯನ ಹೆಸರು ಷೇಕ್ ಷರೀಫ್ .ವಯಸ್ಸು ೬೬. ಮೂಲ ಚಿಲಕಲುರು ಪೇಟ.ಗುಂಟೂರು ಜಿಲ್ಲೆ,ಆಂಧ್ರ.ನಲವತ್ತು ವರ್ಷದಿಂದ ರಸ್ತೆ ಮೇಲೆ ಚಿತ್ರ ಗಳನ್ನೂಸುಂದರವಾಗಿಬಿಡಿಸುವುದು.ಬಾಂಬೆ,ಕರ್ನಾಟಕ ,ತಮಿಳುನಾಡು,ಕೇರಳ.....ಸುತ್ತುವುದು ಆ ಕ್ಷಣಕ್ಕೆ ಹೊಳೆವ ಭಾರತ ಮಾತೆ, ಹಿಂದೂ ದೇವರ ಚಿತ್ರ, ದರ್ಗಾ,ಕ್ರಿಸ್ತ.... ಚಿತ್ರ ಬಿಡಿಸುವುದು. ಕನ್ನಡ ಚಿತ್ರ ರಂಗದಲ್ಲಿ ಭಕ್ತ ಪ್ರಹ್ಲಾದ ಡಾ: ರಾಜ್ ರವರ 76 ಅಡಿಯ ಹಿರಣ್ಯಕ್ಷ ಪಾತ್ರದ ಚಿತ್ರ ಬಿಡಿಸಿದ್ದು...ಹೆಮ್ಮೆಯಿಂದ ಹೇಳುತ್ತಾರೆ. ಒಮ್ಮೆ ಹೀಗೆ ಚಿತ್ರ ಬಿಡಿಸುತ್ತಿದಾಗ ಎತ್ತರದಿಂದ ಬಿದ್ದು ಕಾಲು ಮುರಿದು ... ಕಾಲಿಗೆ ಸ್ಟಿಲ್ ರಾಡು ಹಾಕಿಸಿಕೊಂಡು ಚಿತ್ರ ರಂಗದ ನಂಟು ತೊರೆದರು. ಈಗ ಊರೂರು ಅಲೆವುದು ಮನಸ್ಸು ಇದ್ದಷ್ಟು ದಿನ ಇದ್ದು ಚಿತ್ರ ಬಿಡಿಸುವುದು. ಈ ಚಿತ್ರ ಬಿಡಿಸುದು ಆತ್ಮ ಸಂತೃಪ್ತಿಗೆ. ಹೊಟ್ಟೆ ಪಾಡಿಗೆ ಹಣ್ಣು ವ್ಯಾಪಾರ ಮಾಡುತ್ತಾರೆ.
ತಮಗೆ ಇವರನ್ನು ಮಾತಾಡ ಬೇಕೆಂದರೆ ಈ 08142646953 ಸಂಖ್ಯೆ ಗೆ ಮಾಡಿ.
Monday, April 30, 2012
Monday, April 23, 2012
Thursday, April 5, 2012
ಮರಿ ದಾಸಯ್ಯ
ಈ ಛಾಯಾ ಚಿತ್ರ ನೋಡುವುದಕ್ಕೆ ತುಂಬಾ ಸುಂದರವಾಗಿದೆ. ಆದ್ರೆ ಎಲ್ಲೂ ಒಂದು ಕಡೆ ನೋವು. ಎಂದರೆ ಆಟ ಆಡಿ ಓದುಕೊಂಡು ಇರಬೇಕಾದ ಹುಡುಗು ವಯಸ್ಸಿನಲ್ಲಿ ಈ ಸಂಪ್ರದಾಯದ ಉಡುಪು ತೊಟ್ಟು ಪ್ರದರ್ಶನ(ಭಿಕ್ಷೆ)ಗೆ ಇಳಿದಾಗ ಛೇ... ಅನ್ನಿಸುತ್ತೆ.ಹಬ್ಬ ಹರಿ ದಿನಗಳಲ್ಲಿ ಈ ಉಡುಪು ತೊಟ್ಟು ಶಾಸ್ತ್ರಕ್ಕೆ ಮೂರು ಮನೆ ಸುತ್ತಿ ದರೆ ಚೆನ್ನ.ಆದ್ರೆ ದಿನ ಪೂರ್ತಿ ಇದೆ ಆದ್ರೆ ಏನು ಚೆನ್ನಾಗಿರುತ್ತೆ .......?
Sunday, March 25, 2012
ಮಾಕಳಿ ಬೆಟ್ಟ
ನಮ್ಮ ತಾಲೂಕು ನಿಂದ ಬೆಂಗಳೊರು ರಸ್ತೆಗೆ ೫ ಕಿ.ಮಿ ರಸ್ತೆಗೆ ದಾಟಿದರೆ .....ಬಲಕ್ಕೆ ಕಾಣುವ ಬೆಟ್ಟಗಳ ಸಾಲುಗಳು ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ.ಆ ಬೆಟ್ಟ ಏರಿದಾಗ ಈ ಸುಂದರ ಮನ ಮೋಹಕ ದೃಶ್ಯ ಕಾಣುತ್ತದೆ. ಈ ರಸ್ತೆ ಯಲ್ಲಿ ಓಡಾಡಿದಾಗ ನನ್ನ ಮಗ ಈ ಬೆಟ್ಟ ಹತ್ತಬೇಕೆಂಬ ಒಂದೇ ಹಠ... ಸರಿ ಯಂದು ಶಿವರಾತ್ರಿ ಹಬ್ಬದ ದಿನ ಮುಂಜಾನೆ ೫.೪೫ ಕ್ಕೆ ಬೆಟ್ಟದ ಬುಡದಲ್ಲಿ ಇದ್ದೆವು.ತುಸು ಬೆಳಕು ಹರಿದಾಗ ಹತ್ತುವುದಕ್ಕೆ ಶುರು ಮಾಡಿದಾಗ ಅದರ ಮಜ ವೇ ಖುಷಿ ಕೊಡುವಂತದ್ದು.ಇದು ಎರಡನೇ ಬಾರಿ ಈ ಹತ್ತುತ್ತಿರುವುದು.
Subscribe to:
Posts (Atom)