Tuesday, February 24, 2015

ಚಿತ್ರ ಕಲೆ






ಶ್ರವಣ ಬೆಳಗೊಳ ದ  ನಡೆದ ಸಾಹಿತ್ಯ ಸಮ್ಮೇಳನದಲ್ಲಿ  ಚಿತ್ರ ಕಲೆ ಯಲ್ಲಿ ಚಿತ್ರಿಸಿದ  ಛಾಯಾಚಿತ್ರ

Monday, February 16, 2015

ಅನ್ನದಾಸೋಹ



ಡೋಳಿ


ಶ್ರವಣ ಬೆಳಗೊಳ ದಲ್ಲಿ  ಮಹಾವೀರ  ನ  ದರ್ಶಿಸಲು   ... ದೇಹ ಶಕ್ತಿ ಕಡಿಮೆ ಇರುವವರಿಗೆ  ಈ ಡೋಳಿ 

Wednesday, February 11, 2015

ಬಾಹುಬಲಿ





       ಬಾಹುಬಲಿ ಅಂದ್ರೆ .. ಮಾನವನ ಶರೀರ ರಚನೆಯಲ್ಲಿ ಅಗತ್ಯ ಕ್ಕಿಂತ  ಉದ್ದವಾಗಿರುವಬಲಿಷ್ಠ ವಾಗಿರುವ ತೋಳುಗಳು  ಇದ್ದರೆ  ಅವರಿಗೆ ಬಾಹುಬಲಿ  ಎನ್ನುತ್ತಾರೆ .  ಇತಿಹಾಸದಲ್ಲಿ ಈ ಕಂಡು ಬರುವ ವ್ಯಕ್ತಿ ಗಳು ಅಂದ್ರೆ  ಪ್ರಥಮವಾಗಿ ಮಹಾಭಾರತದ  ಭೀಮಸೇನ  ನಂತರ ಸ್ಥಾನ  ಬಾಹುಬಲಿ ಮಹಾನುಭಾವನಿಗೆ.  ಮಹಾವೀರ  ಅಂದರೆ .... ಶತ್ರು ನ ಗೆದ್ದರೆ ವೀರ ಎನ್ನುತ್ತಾರೆ .  ತನ್ನ ಮನಸ್ಸನ್ನಗೆದ್ದರೆ ಮಹಾವೀರ ಎನ್ನುತ್ತಾರೆ .  ಈಮಹಾನುಭಾವನ ನೋಡಲು  ಮತ್ತು ಸಾಹಿತ್ಯ ಸಮ್ಮೇಳನ  ನೋಡಲುನಾನು ನನ್ನ ಗೆಳಯ  ನನ್ನ victor GLX ಬ್ಯೆಕ್ ಲ್ಲಿ  ಹೋಗಿದ್ದಿವಿ . ಒಂದು ಅದ್ಬುತ ಅನುಭವ.

Thursday, February 5, 2015

ತೂರ್ಪು


ನಮ್ಮ ನೇಗಿಲ ಯೋಗಿ   ಧಾನ್ಯಗಳನ್ನ ಗಾಳಿಗೆ ತೂ(ರಿ)ರ್ಪಿ ............ ಕಸ ಕಡ್ಡಿ ಹೂಟ್ಟು ಧೂಳು ..... ಬೇರ್ಪಡಿಸಿ  ಶುದ್ದ ಧಾನ್ಯ ಕಣ ಮಾಡುತ್ತಿರುವುದು .  ನಂತರ  ನಮ್ಮ ಕೆಲವು  ಕಳ್ಳ ವ್ಯಾಪಾರಿಗಳು  ಕಸ ಕಡ್ಡಿ ಹೊಟ್ಟು  ಧೂಳು .. ತುಂಬುವುದು .

Friday, January 30, 2015

ಅಚ್ಚರಿ



ಪ್ರಥಮ ಛಾಯಾಚಿತ್ರ ಗಮನಿಸಿ ..... ಆ ಕಲ್ಲು ಗುಂಡುಗಳ ಮೇಲೆ ಬೋಗೆಸೆ ಯಷ್ಟು  ಮಣ್ಣು ಮೇಲೆ ಹಕ್ಕಿ ಹಿಕ್ಕೆಯಲ್ಲಿ ಚಿಗುರಿದ  ಈ ಹಸರು ಏಳೆ ....  ಗುಂಡು ಮೇಲೆ ಇಂದ ಕೆಳೆಗೆ ಇಳಿದು ..... ಭುವಿ ಸಿಕ್ಕ ತಕ್ಷಣ ಬೇರು ಬಿಟ್ಟು ಭೃಹತ್ ಕಾರವಾಗಿ  ಬೆಳೆದು  ಅಚ್ಚರಿ ಮೂಡಿಸುತ್ತದೆ .

Thursday, January 22, 2015

ಗುಡಿಸಲು



ಗುಡಿಸಲು  ಮುಕ್ತ ಗ್ರಾಮ .... ಅಂತ ಹೇಳುತ್ತೆ ಸರಕಾರ  ಇದಕ್ಕೆ ಆಪವಾದ  ಅನ್ನುವಂತೆ ಅವುಲಾ ಬೆಟ್ಟ ದಿಂದ ಗುಡಿಬಂಡೆ  ಸಾಗುವ ಮಂಡಿಕಲ್ಲು  ಮಾರ್ಗದಲ್ಲಿ    ಕರೆ ಕದಿರೆನ ಹಳ್ಳಿ ಯಲ್ಲಿ ಹಳ್ಳಿಯಲ್ಲಾ .... ಭಾಗಶ; ಎಲ್ಲಾ ಗುಡಿಸಿಲಿನ ಮನೆಗಳೇ  ಆದರೆ ದವಸ ದಾನ್ಯ ಕಾಳು  ಕಡ್ಡಿ ಸಾಕು ಪ್ರಾಣಿ .... ಎಲ್ಲಾ ಸಮೃದ್ದಿ ಇಂದ  ನಳನಳಿಸಿ  ಮನಸ್ಸನ್ನು ಖುಷಿ  ಪಡಿಸುತ್ತೆ . ಕಣ್ಣು ಹಾಯಸಿದಷ್ಟು ....ದಿಗಂತದ ಅಂಚಿನವರೆಗೆ ಹಸುರಿನ ಹೊದಿಕೆ .  ತುಂಬಿ ತುಳುಕುವ  ಕೆರೆ, ಕುಂಟೆ,ಬದು ,ಬಾವಿ ,ಗದ್ದೆ .,..... ನೀರಿನಿಂದ ತೊನೆದಾಡುತ್ತೆ . ನಮ್ಮ ಬಯಲು ಸೀಮೆಯ ಚಿಕ್ಕಬಳ್ಳಾಪುರ  ಜಿಲ್ಲೆ ಯಾ  ಈ ಹಳ್ಳಿ  ಈ ರೀತಿ ಇರವುದು  ವಿಶೇಷ .

Tuesday, January 20, 2015

ವಿಸ್ಮಯ



ಸೂರ್ಯನ ನೆರಳು ಭುವಿ ಮೇಲೆ ಬಿದ್ದಾಗ ಚಿತ್ರ-ವಿಚಿತ್ರವಾಗಿ ಕಾಣ್ತಾ ........ ಮನಸ್ಸಿನಲ್ಲಿ ಹಲವಾರು ವಿಸ್ಮಯ ಮೂಡಿ  ಒಂದು ರೂಪ ಕಾಣುತ್ತೆ .   ಆ  ರೂಪನೆ  ಈ ಛಾಯಾ ಚಿತ್ರ .  ಒಂದನೇ  ಛಾಯಾಚಿತ್ರದಲ್ಲಿ  ಫ್ಯಾನ್ , ಎರಡನೇ  ಚಿತ್ರದಲ್ಲಿ  ಹಿಂದಿ ಲಿಪಿ  ರೀತಿ ಕಾಣುತ್ತೆ .

Friday, January 9, 2015

ಜೇನಿನ ಸಂಭ್ರಮ


ಮರೆಯಲಾರದ ಕ್ಷಣಗಳು




ಶಾಲಾ ವಾರ್ಷಿಕೋತ್ಸವ ದ  ಸುಂದರ ಕ್ಷಣಗಳು . ತಾಲೂಕು ಕೇಂದ್ರದಿಂದ ೫ ಕಿ ಮಿ ದೂರವಿರುವ ಪ್ರಕೃತಿ ಮಡಿಲುನಲ್ಲಿರುವ  ಶ್ರೀ ಶಾರದ  ರಾಮ ಕೃಷ್ಣ  ಶಾಲೆ .

Friday, November 7, 2014

ಗೊದ್ದ


ಈ ಮಳೆಕಾಲದಲ್ಲಿ ಜೀವ  ಸೃಷ್ಟಿಯ ವ್ಯೆಚಿತ್ರಗಳು  ಅನೇಕೆನೆಕ ....  ಅದರಲ್ಲಿ ಗೊದ್ದ ಜೀವ ಸೃಷ್ಟಿಯು ಒಂದು . ಇವು ತಮ್ಮ ಬೇಟೆಗಾಗಿ ೧-೨  ಕಿ. ಮಿ  ಸಾಗುತ್ತದೆ . ವಿಚಿತ್ರ ಅಂದ್ರೆ ಪಕ್ಕದಲ್ಲಿರುವ    ೪-೬   ಹೆಜ್ಜೆಗೆ  ಒಂದುಕಿ ಮಿ ಸುತ್ತು ಹೊಡೆದಿರುತ್ತದೆ . ಇವು ಶಿಸ್ತಿನ  ಸಿಪಾಯಿ ಯಂತೆ ಸಾಗುವಾಗ ಬೇಟೆಯ ದಿಕ್ಕನ್ನು  ತಿಳಿಸುತ್ತಾ ಸಾಗುತ್ತವೆ .  ಈ ಗೊದ್ದದ ಗೋಡು  ನೋಡಲು ವಿಶಿಷ್ಟವಾಗಿ ಅಂದವಾಗಿ   ಕಾಣುತ್ತದೆ .

Monday, November 3, 2014

ಲಗ್ನ





ಈ ನವ ವರ ನನ್ನ ಸೋದರಮಾವನ ಮಗ... ಪುಟ್ಟದಾಗಿ ಚಾಕ್ಲೆಟ್  ತರಹ ಇದ್ದ . ಈಗ ಚಾಕ್ಲೆಟ್ ಹೀರೊ  ತರವರ ನ ಸಂಪ್ರದಾಯದ ಉಡುಪಿನಲ್ಲಿ ನೋಡ್ತಾ ಇದ್ದರೆ  ತುಂಬಾ ಸಂತೋಷ ವಾಯಿತು .  ಆ ಸಂತೋಷತಡಿಲಾರದೆ ಈ ಛಾಯಾಚಿತ್ರ ಕ್ಲಿಕ್ ಮಾಡಿದೆ ಹ್ಯಾಗಿದೆಯೆಂದು ನೀವೇ ಹೇಳಬೇಕು .

Wednesday, September 10, 2014

ಪತಂಗ



ಬಾಗಿನದ ಮೊರ


ಗೌರಿ-ಗಣೇಶ ಹಬ್ಬ ಸಮೀಪಿಸುತಿದೆ . ಗಂಡು ಮಕ್ಕಳಿಗೆ ಗಣೇಶ ಹಬ್ಬ ವಿಶೇಷವಾಗಿ ಆಚರಿಸಿದರೆ , ಹೆಂಗೆಳೆಯರು ವಿಶಿಷ್ಟವಾಗಿ ಪುರಾತನ ಸಂಪ್ರಾಯದಂತೆ  ಆಚರಿಸುತ್ತಾರೆ . ಈ ಗೌರಿ ಹಬ್ಬದ ಆಚರಣೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವುದು "ಮೊರ". ಬಿದಿರಿನ ಮೊರ . ಈ ಹೊಸ ಮೊರದಲ್ಲಿ ಸುಮಂಗಲಿಯ "ಮಂಗಳದ್ರವ್ಯ "ವಿಟ್ಟು   ತಾಯಿ ಗೌರಿ ಮಾತೆಗೆ "ಬಾಗಿನ"ಅರ್ಪಿಸಿ , ತಾವು ಶ್ರದ್ಧೆಯಿಂದ ಬಾಗಿನ ಪಡೆಯುತ್ತಾರೆ . ಈ ಸಂಪ್ರಾದಾಯ ಹೆಚ್ಚಾಗಿ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬಳಕೆಯಲ್ಲಿದೆ . ನಂತರ ಈ ಮೊರಕ್ಕೆ "ಮೆಂತ್ಯ" ಲೇಪಿಸುವ ಆಂಧ್ರ ಪ್ರದೇಶದ ಹೆಂಗೆಳೆಯರು ಗುಂಪು ಗುಂಪಾಗಿ ಬರುತ್ತಾರೆ . "ಮೆಂತ್ಯ" ಅಂದ್ರೆ  ಮೆಂತ್ಯ ಕಾಳು , ಹರಿಶಿನ ಮತ್ತು ಕಾಗದಕ್ಕೆ  ನೀರನ್ನು ಬೆರೆಸಿ ಚನ್ನಾಗಿ ಕುದಿಸಿ ಗಂಜಿ(ಪೇಸ್ಟ್) ತಯಾರಿಸಿ ಮೊರಗಳಿಗೆ ಮಂದವಾಗಿ ಸವರುತ್ತಾರೆ . ಒಣಗಿದ  ಈ ಮೊರ ಅಡಿಗೆ ಮನೆ ಬಳಕೆಗೆ ಬರುತ್ತದೆ . ಅಂದರೆ ದವಸ ಧಾನ್ಯದಲ್ಲಿರುವ ಕಡ್ಡಿ ಕಸ ಕಲ್ಲು ಬೆರ್ಪಡಿಸುವುದಕ್ಕೆ  ಬಳಕೆಯಾಗುತ್ತದೆ . ಈ ಪ್ಲಾಸ್ಟಿಕ್ ಯುಗದಲ್ಲಿ ಮೊರ ತನ್ನ ವಿಶಿಷ್ಟ ಸ್ಥಾನ ಪಡೆದಿರುವುದು  ಸುಳ್ಳಲ್ಲಾ .