Wednesday, September 10, 2014

ಬಾಗಿನದ ಮೊರ


ಗೌರಿ-ಗಣೇಶ ಹಬ್ಬ ಸಮೀಪಿಸುತಿದೆ . ಗಂಡು ಮಕ್ಕಳಿಗೆ ಗಣೇಶ ಹಬ್ಬ ವಿಶೇಷವಾಗಿ ಆಚರಿಸಿದರೆ , ಹೆಂಗೆಳೆಯರು ವಿಶಿಷ್ಟವಾಗಿ ಪುರಾತನ ಸಂಪ್ರಾಯದಂತೆ  ಆಚರಿಸುತ್ತಾರೆ . ಈ ಗೌರಿ ಹಬ್ಬದ ಆಚರಣೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವುದು "ಮೊರ". ಬಿದಿರಿನ ಮೊರ . ಈ ಹೊಸ ಮೊರದಲ್ಲಿ ಸುಮಂಗಲಿಯ "ಮಂಗಳದ್ರವ್ಯ "ವಿಟ್ಟು   ತಾಯಿ ಗೌರಿ ಮಾತೆಗೆ "ಬಾಗಿನ"ಅರ್ಪಿಸಿ , ತಾವು ಶ್ರದ್ಧೆಯಿಂದ ಬಾಗಿನ ಪಡೆಯುತ್ತಾರೆ . ಈ ಸಂಪ್ರಾದಾಯ ಹೆಚ್ಚಾಗಿ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬಳಕೆಯಲ್ಲಿದೆ . ನಂತರ ಈ ಮೊರಕ್ಕೆ "ಮೆಂತ್ಯ" ಲೇಪಿಸುವ ಆಂಧ್ರ ಪ್ರದೇಶದ ಹೆಂಗೆಳೆಯರು ಗುಂಪು ಗುಂಪಾಗಿ ಬರುತ್ತಾರೆ . "ಮೆಂತ್ಯ" ಅಂದ್ರೆ  ಮೆಂತ್ಯ ಕಾಳು , ಹರಿಶಿನ ಮತ್ತು ಕಾಗದಕ್ಕೆ  ನೀರನ್ನು ಬೆರೆಸಿ ಚನ್ನಾಗಿ ಕುದಿಸಿ ಗಂಜಿ(ಪೇಸ್ಟ್) ತಯಾರಿಸಿ ಮೊರಗಳಿಗೆ ಮಂದವಾಗಿ ಸವರುತ್ತಾರೆ . ಒಣಗಿದ  ಈ ಮೊರ ಅಡಿಗೆ ಮನೆ ಬಳಕೆಗೆ ಬರುತ್ತದೆ . ಅಂದರೆ ದವಸ ಧಾನ್ಯದಲ್ಲಿರುವ ಕಡ್ಡಿ ಕಸ ಕಲ್ಲು ಬೆರ್ಪಡಿಸುವುದಕ್ಕೆ  ಬಳಕೆಯಾಗುತ್ತದೆ . ಈ ಪ್ಲಾಸ್ಟಿಕ್ ಯುಗದಲ್ಲಿ ಮೊರ ತನ್ನ ವಿಶಿಷ್ಟ ಸ್ಥಾನ ಪಡೆದಿರುವುದು  ಸುಳ್ಳಲ್ಲಾ .

No comments:

Post a Comment