Saturday, May 23, 2015

ಹಳ್ಳಿ ಗೋಡೆ


ಈ ಹಳ್ಳಿ  ಗೋಡೆ ನೋಡೆಕ್ಕೆ  ಒರಟಗಿದ್ದರು .....  ಸುಂದರ ಕಲಾತ್ಮಕತೆ ಇಂದ ಕೊಡಿದೆ . ನೋಡುಕೆ   ಸಾಕಷ್ಟು
ಸಂತಸ  ಆಗುತ್ತೆ .

Sunday, May 10, 2015

ಅಮ್ಮನ ಅರಿಯೋ

  ಅಮ್ಮನ ಅರಿಯೋ
ಅಮ್ಮನ ಪ್ರೀತಿಯ  ಸವಿಯೋ
ಸವಿಯಲಿ ಪ್ರೀತಿಯ  ಅರಿಯೋ

  ದುಡಿಮೆಯ  ಗುರಿಯಲಿ   ಹಣದ ಹೊಳೆಯಲಿ
  ಸುತ್ತುತಾ ಜಗದಲಿ  ಸಾಧನೆಯ  ರಥದಲಿ
  ಮಡದಿಯ  ತೋಳಲಿ   ಸುಖದ  ಸಾಗರದಿ
  ಅಮ್ಮನ  ಮರೆಯುವೆ  ಯಾಕೋ ..?--ನೀ  ಯಾಕೋ ..?

ಅಮ್ಮನ ಪ್ರೀತಿಯ  ಸವಿಯೋ
ಸವಿಯಲಿ ಪ್ರೀತಿಯ  ಅರಿಯೋ

  ನೆನ್ನೆಯ  ಬೆರತಿನರಮನೆಗೆ
  ಸೊಬಗಿನ  ಕಣ್ಣು ಮನಕೆ  ಸಕಲಕೆ
  ಅಮ್ಮನೆ  ಆದಿ  ಅರಿಯೋ
  ಅರಗಿನ  ಅರಸೊತ್ತಿಗೆ  ತೊರೆಯೋ--ಅಮ್ಮನ ಅರಿಯೋ

ಅಮ್ಮನ ಪ್ರೀತಿಯ  ಸವಿಯೋ
ಸವಿಯಲಿ ಪ್ರೀತಿಯ  ಅರಿಯೋ

Saturday, April 25, 2015

ದಾರಿ

ಜೀವನ   ಹೀಗೆ   ತಾನೇ ..........  ರೈಲ್ವೆ  ಕಂಬಿಗಳಂತೆ   ನೇರ  ಇರೋಲ್ಲಾ .

ಕುಟಾನಿ


  ಕುಟಾಣಿ ,  ನನ್ನ ಉಹೇ ...  ಪ್ರಕಾರ  ಈಗಿನ ಪೀಳಿಗೆಗೆ  ಈ ಪದ ಮತ್ತು ಈ ವಸ್ತು  ತಿಳಿದಿರೋಲ್ಲಾ  ಅಂತ ನನ್ನ ಭಾವನೆ . ಇರ್ಲಿ ...  ಸುಮಾರು ೪೦ ವರ್ಷದ ಹಿಂದೆ  ಈ ಕುಟಾಣಿ ಯನ್ನು  ವಯಸ್ಸಾದ  ಹಿರಿಯರು ಎಲೆ ಅಡಿಕೆ ಕುಟ್ಟಿ ಮೆದು ಮಾಡಿ  ತಮ್ಮ ಬೊಚ್ಚು  ಬಾಯಿಗೆ ಹಾಕಿ ಕೊಂಡು  ಮೆಲ್ಲುತ್ತಿದ್ದರು .  ಆಗ  ನಾವುಸಣ್ಣವರಿದ್ದಾಗ   ಈ ಕುಟಾನಿಗೆ   ಚಕ್ಕಲಿ ,ಕೋಡುಬಳೆ ,ತಂಬಿಟ್ಟು .... ಇಂತಹ  ಗಡುಸು  ತಿನಸನ್ನು  ಆಟಕ್ಕೆ ಜಜ್ಜಿ  ಪುಡಿ ಮಾಡಿ  ಗೆಳೆಯರಲ್ಲಾ  ಒಟ್ಟಾಗಿ   ತಿನ್ನುತ್ತಿದ್ದೆವು .  ಆದರೆ    ಆಬಾಲ್ಯ ,   ಆ ಕುಟಾಣಿ ,   ಆ ಬಟಾಣಿ......   ಸವಿ ಸವಿ ನೆನಪು .  ಅಂದ   ಹಾಗೆ  ಈ ಛಾಯಾಚಿತ್ರ  ಮೊನ್ನೆ  ವಿದುರಶ್ವತ್ತ  ಜಾತ್ರೆ ಯಲ್ಲಿ ಚಿತ್ರಿಸಿದ್ದು

Monday, April 13, 2015

ಜೀವ ಜಲ


ಕುಡಿಯುವ  ನೀರಿಗೆ  ನಮ್ಮ  ಗೌರಿಬಿದನೂರು  ಬಯಲುಸೀಮೆ ಯಲ್ಲಿ  ಎಷ್ಟು  ಕಷ್ಟ  ಅಂದ್ರೆ  ಆ ದೇವರು(ಜನಪ್ರತಿನಿಧಿ) ಗೆ ಪ್ರೀತಿ . ಮಕ್ಕಳು ಪರೀಕ್ಷೆ ಸಮಯ ಅನ್ನದೆ ....... ೩/೪ ಕಿ ಮಿ ನೆಡೆದು  ನೀರು  ತರಬೇಕು. ನೀರು  ತರಬೇಕಾದರೆ ತಲೆಸುತ್ತಿ ಬಿದ್ದ ಮಕ್ಕಳೆಷ್ಟು.........  ಆದರೂ   ವಿಧಿ  ಇಲ್ಲಾ  ತರಲೇ  ಬೇಕು. ಈಗ  ಬೇಸಿಗೆ  ಪ್ರಾರಂಭ  ನೀರಿನ  ಸೆಲೆ ... ನಮಗೆ ಚಿನ್ನದ ರೇಖೆ ಗಿಂತ  ಹಿರಿದು .

Wednesday, March 18, 2015

ಸ್ವರ್ಣ ಸಂಜೆ


ಬಾಲ್ಯಾದಾಟ

ಈ ಛಾಯಾ ಚಿತ್ರ ತುಸು ಗಮನಿಸಿ ..... ನಮ್ಮ ಬಾಲ್ಯ ತೆರೆದು ಕೊಳ್ಳುತ್ತೆ ಮನದಲ್ಲಿ .

Tuesday, February 24, 2015

ಚಿತ್ರ ಕಲೆ






ಶ್ರವಣ ಬೆಳಗೊಳ ದ  ನಡೆದ ಸಾಹಿತ್ಯ ಸಮ್ಮೇಳನದಲ್ಲಿ  ಚಿತ್ರ ಕಲೆ ಯಲ್ಲಿ ಚಿತ್ರಿಸಿದ  ಛಾಯಾಚಿತ್ರ

Monday, February 16, 2015

ಅನ್ನದಾಸೋಹ



ಡೋಳಿ


ಶ್ರವಣ ಬೆಳಗೊಳ ದಲ್ಲಿ  ಮಹಾವೀರ  ನ  ದರ್ಶಿಸಲು   ... ದೇಹ ಶಕ್ತಿ ಕಡಿಮೆ ಇರುವವರಿಗೆ  ಈ ಡೋಳಿ 

Wednesday, February 11, 2015

ಬಾಹುಬಲಿ





       ಬಾಹುಬಲಿ ಅಂದ್ರೆ .. ಮಾನವನ ಶರೀರ ರಚನೆಯಲ್ಲಿ ಅಗತ್ಯ ಕ್ಕಿಂತ  ಉದ್ದವಾಗಿರುವಬಲಿಷ್ಠ ವಾಗಿರುವ ತೋಳುಗಳು  ಇದ್ದರೆ  ಅವರಿಗೆ ಬಾಹುಬಲಿ  ಎನ್ನುತ್ತಾರೆ .  ಇತಿಹಾಸದಲ್ಲಿ ಈ ಕಂಡು ಬರುವ ವ್ಯಕ್ತಿ ಗಳು ಅಂದ್ರೆ  ಪ್ರಥಮವಾಗಿ ಮಹಾಭಾರತದ  ಭೀಮಸೇನ  ನಂತರ ಸ್ಥಾನ  ಬಾಹುಬಲಿ ಮಹಾನುಭಾವನಿಗೆ.  ಮಹಾವೀರ  ಅಂದರೆ .... ಶತ್ರು ನ ಗೆದ್ದರೆ ವೀರ ಎನ್ನುತ್ತಾರೆ .  ತನ್ನ ಮನಸ್ಸನ್ನಗೆದ್ದರೆ ಮಹಾವೀರ ಎನ್ನುತ್ತಾರೆ .  ಈಮಹಾನುಭಾವನ ನೋಡಲು  ಮತ್ತು ಸಾಹಿತ್ಯ ಸಮ್ಮೇಳನ  ನೋಡಲುನಾನು ನನ್ನ ಗೆಳಯ  ನನ್ನ victor GLX ಬ್ಯೆಕ್ ಲ್ಲಿ  ಹೋಗಿದ್ದಿವಿ . ಒಂದು ಅದ್ಬುತ ಅನುಭವ.

Thursday, February 5, 2015

ತೂರ್ಪು


ನಮ್ಮ ನೇಗಿಲ ಯೋಗಿ   ಧಾನ್ಯಗಳನ್ನ ಗಾಳಿಗೆ ತೂ(ರಿ)ರ್ಪಿ ............ ಕಸ ಕಡ್ಡಿ ಹೂಟ್ಟು ಧೂಳು ..... ಬೇರ್ಪಡಿಸಿ  ಶುದ್ದ ಧಾನ್ಯ ಕಣ ಮಾಡುತ್ತಿರುವುದು .  ನಂತರ  ನಮ್ಮ ಕೆಲವು  ಕಳ್ಳ ವ್ಯಾಪಾರಿಗಳು  ಕಸ ಕಡ್ಡಿ ಹೊಟ್ಟು  ಧೂಳು .. ತುಂಬುವುದು .

Friday, January 30, 2015

ಅಚ್ಚರಿ



ಪ್ರಥಮ ಛಾಯಾಚಿತ್ರ ಗಮನಿಸಿ ..... ಆ ಕಲ್ಲು ಗುಂಡುಗಳ ಮೇಲೆ ಬೋಗೆಸೆ ಯಷ್ಟು  ಮಣ್ಣು ಮೇಲೆ ಹಕ್ಕಿ ಹಿಕ್ಕೆಯಲ್ಲಿ ಚಿಗುರಿದ  ಈ ಹಸರು ಏಳೆ ....  ಗುಂಡು ಮೇಲೆ ಇಂದ ಕೆಳೆಗೆ ಇಳಿದು ..... ಭುವಿ ಸಿಕ್ಕ ತಕ್ಷಣ ಬೇರು ಬಿಟ್ಟು ಭೃಹತ್ ಕಾರವಾಗಿ  ಬೆಳೆದು  ಅಚ್ಚರಿ ಮೂಡಿಸುತ್ತದೆ .

Thursday, January 22, 2015

ಗುಡಿಸಲು



ಗುಡಿಸಲು  ಮುಕ್ತ ಗ್ರಾಮ .... ಅಂತ ಹೇಳುತ್ತೆ ಸರಕಾರ  ಇದಕ್ಕೆ ಆಪವಾದ  ಅನ್ನುವಂತೆ ಅವುಲಾ ಬೆಟ್ಟ ದಿಂದ ಗುಡಿಬಂಡೆ  ಸಾಗುವ ಮಂಡಿಕಲ್ಲು  ಮಾರ್ಗದಲ್ಲಿ    ಕರೆ ಕದಿರೆನ ಹಳ್ಳಿ ಯಲ್ಲಿ ಹಳ್ಳಿಯಲ್ಲಾ .... ಭಾಗಶ; ಎಲ್ಲಾ ಗುಡಿಸಿಲಿನ ಮನೆಗಳೇ  ಆದರೆ ದವಸ ದಾನ್ಯ ಕಾಳು  ಕಡ್ಡಿ ಸಾಕು ಪ್ರಾಣಿ .... ಎಲ್ಲಾ ಸಮೃದ್ದಿ ಇಂದ  ನಳನಳಿಸಿ  ಮನಸ್ಸನ್ನು ಖುಷಿ  ಪಡಿಸುತ್ತೆ . ಕಣ್ಣು ಹಾಯಸಿದಷ್ಟು ....ದಿಗಂತದ ಅಂಚಿನವರೆಗೆ ಹಸುರಿನ ಹೊದಿಕೆ .  ತುಂಬಿ ತುಳುಕುವ  ಕೆರೆ, ಕುಂಟೆ,ಬದು ,ಬಾವಿ ,ಗದ್ದೆ .,..... ನೀರಿನಿಂದ ತೊನೆದಾಡುತ್ತೆ . ನಮ್ಮ ಬಯಲು ಸೀಮೆಯ ಚಿಕ್ಕಬಳ್ಳಾಪುರ  ಜಿಲ್ಲೆ ಯಾ  ಈ ಹಳ್ಳಿ  ಈ ರೀತಿ ಇರವುದು  ವಿಶೇಷ .

Tuesday, January 20, 2015

ವಿಸ್ಮಯ



ಸೂರ್ಯನ ನೆರಳು ಭುವಿ ಮೇಲೆ ಬಿದ್ದಾಗ ಚಿತ್ರ-ವಿಚಿತ್ರವಾಗಿ ಕಾಣ್ತಾ ........ ಮನಸ್ಸಿನಲ್ಲಿ ಹಲವಾರು ವಿಸ್ಮಯ ಮೂಡಿ  ಒಂದು ರೂಪ ಕಾಣುತ್ತೆ .   ಆ  ರೂಪನೆ  ಈ ಛಾಯಾ ಚಿತ್ರ .  ಒಂದನೇ  ಛಾಯಾಚಿತ್ರದಲ್ಲಿ  ಫ್ಯಾನ್ , ಎರಡನೇ  ಚಿತ್ರದಲ್ಲಿ  ಹಿಂದಿ ಲಿಪಿ  ರೀತಿ ಕಾಣುತ್ತೆ .

Friday, January 9, 2015

ಜೇನಿನ ಸಂಭ್ರಮ


ಮರೆಯಲಾರದ ಕ್ಷಣಗಳು




ಶಾಲಾ ವಾರ್ಷಿಕೋತ್ಸವ ದ  ಸುಂದರ ಕ್ಷಣಗಳು . ತಾಲೂಕು ಕೇಂದ್ರದಿಂದ ೫ ಕಿ ಮಿ ದೂರವಿರುವ ಪ್ರಕೃತಿ ಮಡಿಲುನಲ್ಲಿರುವ  ಶ್ರೀ ಶಾರದ  ರಾಮ ಕೃಷ್ಣ  ಶಾಲೆ .