Monday, August 4, 2014

ರತ್ನ ಗಿರಿ ಬೆಟ್ಟ 2




   ಮೊನ್ನೆ  ಬಂದ್ ಇತ್ತು .  ನಮ್ಮ ಹುಡುಗರಿಗೆ  ಬಂದ್  ಅಂದ್ರೆ ಹಬ್ಬ.....  ಯಾಕೆಂದರೆ ಟ್ರಿಪ್ ಹಾಕೋಕೆ.
"ರತ್ನಗಿರಿ" ಬೆಟ್ಟಕ್ಕೆ  ಹೋಗುವುದು ತೀರ್ಮಾನ ಆಯಿತು .  ಗೌರಿಬಿದನೂರು - ಮದುಗಿರಿ-ಹೊಸಕೆರೆ- ರತ್ನಗಿರಿ (ಪಾವಗಡ)ರಸ್ತೆ .... ೫೫  ಕಿ ಮಿ . ರತ್ನಗಿರಿ ಬೆಟ್ಟ ನೋಡುವುದುಕ್ಕೆ , ಹತ್ತುವುದಕ್ಕೆ ಮಜಾ ನೆ ಬೇರೆ. ಬೆಟ್ಟದ ವಿಶೇಷ ಅಂದ್ರೆ ಮೂರು  ಬೆಟ್ಟಕ್ಕೆ ಸೇರಿ ಕೋಟೆ ಕಟ್ಟಿದ್ದಾರೆ.  ಮಧ್ಯದ ಬೆಟ್ಟದ ನೆತ್ತಿಯಲ್ಲಿ  ಶೀತಲವಾದ  ಮಹಾ ವಿಷ್ಣು ದೇವಾಲಯ ವಿದೆ . ಆ ನಂತರ  ತುಸು ಮೇಲೇರಿದರೆ ಬೃಹತ್ ಆಕಾರದ ಕಾವಲು  ಗೋಪುರ. ಬಲಗಡೆ - ಎಡಗಡೆ ತುಸು ಚಿಕ್ಕದಾದ ವಿಶಾಲವಾದ ಬೆಟ್ಟ .  ಈ ಬೆಟ್ಟದಲ್ಲಿರುವ ಕಲ್ಲಿನ   ಪ್ರವೇಶ ದ್ವಾರ , ಮಂಟಪ ,ಕವಲು ಗೋಪುರ , ನೀರಿನ ದೊನ್ನೆ , ಕಣಜ ..... ಒಂದುಂದು ಅದ್ಬುತ . ಇವೆಲ್ಲಾ   ಮೇಲೇರಿ  ಸವಿಬೇಕೆಂದ್ರೆ ನಿಮ್ಮ ತೊಡೆಯಲ್ಲಿ ತುಸು ಕಸವು ಮತ್ತು ಮನದಲ್ಲಿ ಆಸಕ್ತಿ ಇದ್ದರೆ  ಸಾಕು .   ಇಷ್ಟ ಪಟ್ಟು ಕಷ್ಟ ದಿಂದ  ಬೆಟ್ಟ ಹತ್ತಿ ಬೆಟ್ಟದ ತುದಿಯಲ್ಲಿ  ಬೀಸುವ ಗಾಳಿಗೆ ಮೈ ಒಡ್ಡಿದರೆ  ಸ್ವರ್ಗಕ್ಕೆ  ಒಂದೇ ... ಅಡಿ ಅಷ್ಟೇ . ಬೇಕಾದರೆ ನೀವು ಅನುಭವಿಸಿ ಗೆಳೆಯರೆ.

No comments:

Post a Comment