ಗಿಟ್ಲೆ ಗಿಟ್ಲೆ ಗಿರಗಿಟ್ಲೆ
ಗಿಟ್ಲೆ ಗಿಟ್ಲೆ ಗಿರಗಿಟ್ಲೆ
ಮಗುವಿದ್ದಾಗ ಅಮ್ಮನ ಸುತ್ತಾ ಗಿರಗಿಟ್ಲೆ
ಮಕ್ಕಳಿದ್ದಾಗ ಆಟದತ್ತಾ ಗಿರಿಗಿಟ್ಲೆ
ಯೌವನದಲಿ ಸಾಧನೆ-ಪ್ರೀತಿಯತ್ತಾ ಗಿರಿಗಿಟ್ಲೆ
ಮದುವೆಯಾದಾಗ ಸಂಗಾತಿಯತ್ತಾ ಗಿರಿಗಿಟ್ಲೆ
ಸಂಸಾರದಲಿ ಜವಾಬ್ದಾರಿ ಸುರಳಿಯ ಗಿರಿಗಿಟ್ಲೆ
ಮುಪ್ಪಿನಲಿ ಮೊಮ್ಮಕ್ಕಳ ಸುತ್ತಾ ಗಿರಿಗಿಟ್ಲೆ
ಅಂತ್ಯದಲಿ ಸಾವು-ನೋವಿನ ಗಿರಿಗಿಟ್ಲೆ
ಶ್ವಾಸ ನಿಂತ ನಂತರ ಆತ್ಮ-ಪರಮಾತ್ಮ ಗಿರಿಗಿಟ್ಲೆ
ನಿಲ್ಲದು ಜನ್ಮ-ಪುನರಜನ್ಮ ಗಿರಿಗಿಟ್ಲೆ
ಗಿಟ್ಲೆ ಗಿಟ್ಲೆ ಗಿರಿಗಿಟ್ಲೆ
No comments:
Post a Comment