Sunday, August 30, 2015

ದಾರಿ

ನಮ್ಮ ಜೀವನ ನೆ    ಈ  ಹಾದಿ  ತರಹ .  ಯಾರು ಪುಣ್ಯಾತ್ಮ ರಿಗೆ  ಎಲ್ಲಾ ಕೊಡ್ತಾನೆ . ಕೆಲವರಿಗೆ ತುಸು ಕೊಟ್ಟು
ಜಾಸ್ತಿ  ಕಿತ್ತು ಕೊಳ್ಳತ್ತಾನೆ.  ಇಂಥವನು  ಇವು  ಸರಿ ಮಾಡಿಕೊಂಡು  ಕಾಣಿಸಿಕೊಳ್ಳಬೇಕಾದರೆ .......

ಅಣ್ಣ-ತಂಗಿ


ಜಳಕ


Saturday, August 15, 2015

ಗುಮ್ಮನಾಯಕನಪಾಳ್ಯ





ಈ  ಕೋಟೆ  ಬಾಗೆಪಲ್ಲಿ  ತಾಲೂಕಿನಲ್ಲಿದೆ.  ಇದೊಂದು ಸುಂದರ ಕೋಟೆ. ಶಿಲಾ  ಕಲೆಯೇ ಮೈದುಂಬಿದೆ.
ಬೆಟ್ಟದ ತುದಿಯಲ್ಲಿ   ಪಕ್ಷಿ ನೋಟ ಹರಿಸಿದಾಗ  ಅದ್ಬುತ  ಪರಿಸರ ಮನ ಸೆಳೆಯುತ್ತೆ.

Wednesday, July 22, 2015

ಹಳ್ಳಿಯ ನೋಟ


ಈ ಛಾಯಾಚಿತ್ರ ದಲ್ಲಿ  ಬೆಳಕಿನ ಸೊಬಗು  ಮತ್ತು  ಒಬ್ಬ ಹಳ್ಳಿಹಯ್ದ  ದನಗಳ ಸಗಣಿ ಯನ್ನು ರಾಶಿ  ಹಾಕಿ
ಗೊಬ್ಬರವನ್ನಾಗಿ ಮಾಡುತ್ತಿದ್ದಾನೆ .  ಈ ಗೊಬ್ಬರದಲ್ಲಿ ಬೆಳದ  ದವಸ-ಧಾನ್ಯ  ಸಾಕಷ್ಟು  ರುಚಿ-ಸತ್ವ  ಇರುತ್ತದೆ .
ಆದರೆ  ಈಗಿನ  ಪೀಳಿಗೆಗೆ ಈ ರುಚಿ-ಸತ್ವ  ಸಿಗುವುದು  ತೀರಾ  ಕಡಿಮೆ .

Sunday, July 19, 2015

ಬುಡಗಿ

ನಮ್ಮ ಕಾಲದಲ್ಲಿ (೧೯೭೦) ಹಣವನ್ನು ಈ ಬುಡುಗಿ ಯಲ್ಲಿ ಸಂಗ್ರಹ ಮಾಡುತ್ತಿದ್ದೆವು . ಏಕೆಂದರೆ ಆಗ
ಬ್ಯಾಂಕ್ ವಹಿವಾಟು ಕಡಿಮೆ .

sun set


ಕಲ್ಲಿನ ಜಡೆ





ನಮ್ಮ ಭಾರತೀಯ  ಹೆಣ್ಣು ಮಕ್ಕಳ ಪುರಾತನ  ಆಲಂಕಾರ ದಲ್ಲಿ   ಈ  ಕಲ್ಲಿನ ಜಡೆ  ಆಲಂಕಾರ ವು  ಒಂದು . ಈ  ಅಲಂಕಾರದಲ್ಲಿ  ಹೆಣ್ಣು ಮಕ್ಕಳು   ಸಾಕ್ಷತ್  ಮಹಾಲಕ್ಷ್ಮಿ  ಪ್ರತಿರೂಪ ದಂತೆ  ಕಾಣುತ್ತಾರೆ .

Sunday, July 5, 2015

೪/೭/೨೦೧೫ ರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ



೪/೭/೨೦೧೫ ರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ  ಮುಂಜಾನೆ ೮೦೦ ರಿಂದ ರಾತ್ರಿ  ತನಕ ನಡೆಯಿತು .   ಸಮ್ಮೇಳನ  ಅಧ್ಯಕ್ಷತೆ  ಡಾ    ಎಮ್  ಎಸ್  ಅನಂತ ರಾಜು .  ನಮ್ಮ ಗೌರಿಬಿದನೂರು    ತಾಲೂಕಿಗೆ   ಪ್ರಥಮವಾಗಿ  MBBS  ಓದಿದರು, ನಾಟಕ ಸಾಹಿತ್ಯ , ಸಿನಮಾಗೆ  ಇವರ ಕಾದಂಬರಿ  ಸಿನಿಮಾ ಆಗಿದೆ . ಹೇಳುತ್ತಾ ಹೋದರೆ  ಇವರ  ಸಾಧನೆ   ಆಕಾಶದಲ್ಲಿರುವ  ನಕ್ಷತ್ರ ದಷ್ಟು . ಇವರ ಸ್ವಂತ ಹಳ್ಳಿ ಮುದುಗೆರೆ .   ಇವರ  ಸಮ್ಮುಕದಲ್ಲಿ  ನಾನು ೪/೭/೨೦೧೫ ರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ  ಮುಂಜಾನೆ ೮೦೦ ರಿಂದ ರಾತ್ರಿ  ತನಕ ನಡೆಯಿತು .   ಸಮ್ಮೇಳನ  ಅಧ್ಯಕ್ಷತೆ  ಡಾ    ಎಮ್  ಎಸ್  ಅನಂತ ರಾಜು .  ನಮ್ಮ ಗೌರಿಬಿದನೂರು    ತಾಲೂಕಿಗೆ   ಪ್ರಥಮವಾಗಿ  MBBS  ಓದಿದರು, ನಾಟಕ ಸಾಹಿತ್ಯ , ಸಿನಮಾಗೆ  ಇವರ ಕಾದಂಬರಿ  ಸಿನಿಮಾ ಆಗಿದೆ . ಹೇಳುತ್ತಾ ಹೋದರೆ  ಇವರ  ಸಾಧನೆ   ಆಕಾಶದಲ್ಲಿರುವ  ನಕ್ಷತ್ರ ದಷ್ಟು . ಇವರ ಸ್ವಂತ ಹಳ್ಳಿ ಮುದುಗೆರೆ .   ಇವರ  ಸಮ್ಮುಕದಲ್ಲಿ  ನಾನು  ನನ್ನ  ಶಿಕ್ಷಣ  ಕವನ  ವಾಚಿಸಿದೆ  ಅದು ನನ್ನ  ಭಾಗ್ಯ ಅನಿಸುತ್ತೆ . ನನ್ನ  ಶಿಕ್ಷಣ  ಕವನ  ವಾಚಿಸಿದೆ  ಅದು ನನ್ನ  ಭಾಗ್ಯ ಅನಿಸುತ್ತೆ .
ಶಿಕ್ಷಣ
ಶಿಕ್ಷಣ
ಜ್ಞಾನದ ಲಕ್ಷಣ
ಮಾನವ ಕುಲಕೆ ಮಾರ್ಗ ದರ್ಶನ
ಶಿಕ್ಷಣ
ಮಹಾನುಬಾವರಿಂದ ಕಲಿಯೋಣ 
ಮಕ್ಕಳಿಗೆಲ್ಲಾ ಕಲಿಸೋಣ
ಶಿಕ್ಷಣದಿಂದ
ಭಾರತವೆಲ್ಲಾ ಅಕ್ಷರ ಕಸ್ತೂರಿ ಕಂಪು ಹರಡೋಣ
ವಿಶ್ವದೆಲ್ಲೆಡೆ ಶ್ರೇಷ್ಟ  ಜೇಷ್ಟ ಬಲಿಷ್ಠ
ಅ ಖಂಡ ಭಾರ ನಿರ್ಮಿಸೋಣ
ತಾಯಿ ಶಾರದೆಯ ಉತ್ತಂಗದ ವ್ಯೆಭವವ
ನಾವೆಲ್ಲಾ ಪುನರ್ ಪ್ರತಿಷ್ಟಾಪಿಸೋಣ

Friday, June 26, 2015

ಗೆದೆರೆ ಬೆಟ್ಟ



 ಗೆದೆರೆ ಬೆಟ್ಟ .   ಈ  ಬೆಟ್ಟ  ಚಿಕ್ಕ ಬೆಟ್ಟ . ಆದ್ರೆ  ಗಿಡ ಮೊಲಿಕೆಗೆ ಪ್ರಸಿದ್ದಿ . ತುಸು ಮೇಲೆ  ಧ್ಯಾನಕ್ಕೆ  ಚಿಕ್ಕ ಗುಹೆ
ಇದೆ.   ದೊಡ್ಡ ದೊಡ್ಡ  ಕಲ್ಲಿನ ದೀಪದ ಸ್ತಂಭ  ಸುಂದರವಾಗಿದೆ .  ನಮ್ಮ  ತಾಲೂಕು ಕೇಂದ್ರದಿಂದ   ಸುಮಾರು  ೮ ಕಿ ಮಿ  ಆಗುತ್ತೆ

ಸ್ವರ್ಗ


Saturday, May 23, 2015

ಹಳ್ಳಿ ಗೋಡೆ


ಈ ಹಳ್ಳಿ  ಗೋಡೆ ನೋಡೆಕ್ಕೆ  ಒರಟಗಿದ್ದರು .....  ಸುಂದರ ಕಲಾತ್ಮಕತೆ ಇಂದ ಕೊಡಿದೆ . ನೋಡುಕೆ   ಸಾಕಷ್ಟು
ಸಂತಸ  ಆಗುತ್ತೆ .

Sunday, May 10, 2015

ಅಮ್ಮನ ಅರಿಯೋ

  ಅಮ್ಮನ ಅರಿಯೋ
ಅಮ್ಮನ ಪ್ರೀತಿಯ  ಸವಿಯೋ
ಸವಿಯಲಿ ಪ್ರೀತಿಯ  ಅರಿಯೋ

  ದುಡಿಮೆಯ  ಗುರಿಯಲಿ   ಹಣದ ಹೊಳೆಯಲಿ
  ಸುತ್ತುತಾ ಜಗದಲಿ  ಸಾಧನೆಯ  ರಥದಲಿ
  ಮಡದಿಯ  ತೋಳಲಿ   ಸುಖದ  ಸಾಗರದಿ
  ಅಮ್ಮನ  ಮರೆಯುವೆ  ಯಾಕೋ ..?--ನೀ  ಯಾಕೋ ..?

ಅಮ್ಮನ ಪ್ರೀತಿಯ  ಸವಿಯೋ
ಸವಿಯಲಿ ಪ್ರೀತಿಯ  ಅರಿಯೋ

  ನೆನ್ನೆಯ  ಬೆರತಿನರಮನೆಗೆ
  ಸೊಬಗಿನ  ಕಣ್ಣು ಮನಕೆ  ಸಕಲಕೆ
  ಅಮ್ಮನೆ  ಆದಿ  ಅರಿಯೋ
  ಅರಗಿನ  ಅರಸೊತ್ತಿಗೆ  ತೊರೆಯೋ--ಅಮ್ಮನ ಅರಿಯೋ

ಅಮ್ಮನ ಪ್ರೀತಿಯ  ಸವಿಯೋ
ಸವಿಯಲಿ ಪ್ರೀತಿಯ  ಅರಿಯೋ

Saturday, April 25, 2015

ದಾರಿ

ಜೀವನ   ಹೀಗೆ   ತಾನೇ ..........  ರೈಲ್ವೆ  ಕಂಬಿಗಳಂತೆ   ನೇರ  ಇರೋಲ್ಲಾ .

ಕುಟಾನಿ


  ಕುಟಾಣಿ ,  ನನ್ನ ಉಹೇ ...  ಪ್ರಕಾರ  ಈಗಿನ ಪೀಳಿಗೆಗೆ  ಈ ಪದ ಮತ್ತು ಈ ವಸ್ತು  ತಿಳಿದಿರೋಲ್ಲಾ  ಅಂತ ನನ್ನ ಭಾವನೆ . ಇರ್ಲಿ ...  ಸುಮಾರು ೪೦ ವರ್ಷದ ಹಿಂದೆ  ಈ ಕುಟಾಣಿ ಯನ್ನು  ವಯಸ್ಸಾದ  ಹಿರಿಯರು ಎಲೆ ಅಡಿಕೆ ಕುಟ್ಟಿ ಮೆದು ಮಾಡಿ  ತಮ್ಮ ಬೊಚ್ಚು  ಬಾಯಿಗೆ ಹಾಕಿ ಕೊಂಡು  ಮೆಲ್ಲುತ್ತಿದ್ದರು .  ಆಗ  ನಾವುಸಣ್ಣವರಿದ್ದಾಗ   ಈ ಕುಟಾನಿಗೆ   ಚಕ್ಕಲಿ ,ಕೋಡುಬಳೆ ,ತಂಬಿಟ್ಟು .... ಇಂತಹ  ಗಡುಸು  ತಿನಸನ್ನು  ಆಟಕ್ಕೆ ಜಜ್ಜಿ  ಪುಡಿ ಮಾಡಿ  ಗೆಳೆಯರಲ್ಲಾ  ಒಟ್ಟಾಗಿ   ತಿನ್ನುತ್ತಿದ್ದೆವು .  ಆದರೆ    ಆಬಾಲ್ಯ ,   ಆ ಕುಟಾಣಿ ,   ಆ ಬಟಾಣಿ......   ಸವಿ ಸವಿ ನೆನಪು .  ಅಂದ   ಹಾಗೆ  ಈ ಛಾಯಾಚಿತ್ರ  ಮೊನ್ನೆ  ವಿದುರಶ್ವತ್ತ  ಜಾತ್ರೆ ಯಲ್ಲಿ ಚಿತ್ರಿಸಿದ್ದು

Monday, April 13, 2015

ಜೀವ ಜಲ


ಕುಡಿಯುವ  ನೀರಿಗೆ  ನಮ್ಮ  ಗೌರಿಬಿದನೂರು  ಬಯಲುಸೀಮೆ ಯಲ್ಲಿ  ಎಷ್ಟು  ಕಷ್ಟ  ಅಂದ್ರೆ  ಆ ದೇವರು(ಜನಪ್ರತಿನಿಧಿ) ಗೆ ಪ್ರೀತಿ . ಮಕ್ಕಳು ಪರೀಕ್ಷೆ ಸಮಯ ಅನ್ನದೆ ....... ೩/೪ ಕಿ ಮಿ ನೆಡೆದು  ನೀರು  ತರಬೇಕು. ನೀರು  ತರಬೇಕಾದರೆ ತಲೆಸುತ್ತಿ ಬಿದ್ದ ಮಕ್ಕಳೆಷ್ಟು.........  ಆದರೂ   ವಿಧಿ  ಇಲ್ಲಾ  ತರಲೇ  ಬೇಕು. ಈಗ  ಬೇಸಿಗೆ  ಪ್ರಾರಂಭ  ನೀರಿನ  ಸೆಲೆ ... ನಮಗೆ ಚಿನ್ನದ ರೇಖೆ ಗಿಂತ  ಹಿರಿದು .

Wednesday, March 18, 2015

ಸ್ವರ್ಣ ಸಂಜೆ


ಬಾಲ್ಯಾದಾಟ

ಈ ಛಾಯಾ ಚಿತ್ರ ತುಸು ಗಮನಿಸಿ ..... ನಮ್ಮ ಬಾಲ್ಯ ತೆರೆದು ಕೊಳ್ಳುತ್ತೆ ಮನದಲ್ಲಿ .