Wednesday, July 11, 2018

NSS ಕ್ಯಾಂಪ್ 1985

        ಮೊನ್ನೆ ಏಕೋ  ಇದ್ದಕ್ಕಿದ್ದ ಹಾಗೆ  ನನ್ನ  ಕಾಲೇಜು ೧೯೮೫೮ ದಿನಗಳ   NSS  ಕ್ಯಾಂಪ್  ನೆನಪಿಗೆ  ಬಂತು. ನನ್ನ ಕಾಲೇಜ್  ಆಲ್ಬಮ್  ತೆರೆದಾಗ  ಈ ಛಾಯಾಚಿತ್ರ  ನೋಡಿದಾಗ  ನನ್ನ  ನೆನಪಿನ  ಬುತ್ತಿ  ಬಿಚ್ಚಿತು.  ಅಂದಿನ ಒಂದು ಕ್ಯಾಂಪ್ ಚಿಕ್ಕ ಕುರುಬರ ಹಳ್ಳಿಯ  ರಸ್ತೆಯ  ಎಡ ಬಾಗದಲ್ಲಿರುವ  ಆಂಜನೇಯ ಸ್ವಾಮಿ ದೇವಸ್ಥಾನ  ಆವರಣದಲ್ಲಿ  ಭೂಮಿಯನ್ನು  ಹದ ಮಾಡಿ  ಗುಣಿ ತೆಗೇದು  ೧೦೦ ಗಿಡಗಳನ್ನು  ಅಂದಿನ YR  ಮಾಸ್ಟರ್ ಮಾರ್ಗ ದರ್ಶನ ದಲ್ಲಿ  ನೆಟ್ಟವು.  ಆ ಗಿಡಗಳು  ತುಸು ಮರಗಳಾಗಿವೆ.  ಇವೆಲ್ಲಾ  ಒಂದು  ಸುಂದರ  ನೆನಪುಗಳು . ಕಲ್ಲು  ಎತ್ತಿರುವುದು  ನಾನು ಮತ್ತು ನನ್ನ ಗೆಳೆಯ  ಆದಿ .  ಇಂತಹ  ಸುಮಾರು  ಛಾಯಾಚಿತ್ರ ಇತ್ತು..  ಪ್ರೀತಿಯಿಂದ  ನನ್ನ ಗೆಳೆಯರು  ಕೆಲವು   ಆಲ್ಬಮ್  ನೋಡುವಾಗ  ಕದ್ದಿದ್ದಾರೆ. 

Saturday, June 30, 2018

ಲಾಳ

     ನಾಗರಿಕತೆ  ಬೆಳೆಯುತ್ತಾ ..  ಇಂತಹ ದೃಶ್ಯ   ಕಡಿಮೆ  ಆಗ್ತಾಯಿದೆ. ದುಡಿಯುವ  ಎತ್ತುಗಳಿಗೆ  ಪಾದದ ಉಗುರು  ಸವೆಯ ಬಾರದೆಂದು  ಕಬ್ಬಿಣದ ದಪ್ಪ ತಗಡು ಹೊಡೆಯುತ್ತಾರೆ.   ಆ  ತಗಡಿಗೆ  "ಲಾಳ "  ಎನ್ನುತ್ತಾರೆ.  ಈ  ದೃಶ್ಯ   ದನಗಳ  ಜಾತ್ರೆಯಲ್ಲಿ   ಕಾಣಬಹುದು.  ನಾವು  ಚಿಕ್ಕವರಿದ್ದಾಗ  ದಿನ  ನಿತ್ಯ  ಸಾಮಾನ್ಯ  ದೃಶ್ಯ ವಾಗಿರುತ್ತಿತ್ತು. 

Saturday, April 7, 2018

ಜೋಡಿ


ಬಣ್ಣದ ಕ್ರೀಡೆ

ಹಳ್ಳಿಹೈದ   ಎಮ್ಮೆ  ಮೈ ತೊಳೆಯುವ ದೃಶ್ಯ  ನಮ್ಮ  ಗೊಟಕನಾಪುರ ಹಳ್ಳಿಯ  ಕೆರೆಯಲ್ಲಿ 

Saturday, March 31, 2018

ಅಂದು---ಇಂದು 2010--2018


ನಮ್ಮ ಉತ್ತರ ಪಿನಾಕಿನಿಯ  ಉತ್ತಂಗ ಮತ್ತು ಅವನೀತಿಯ  ಛಾಯಾಚಿತ್ರ

Tuesday, March 27, 2018

ಅಂದು---ಇಂದು 2011--2018



ನಮ್ಮ ಹೆಮ್ಮೆಯ ಉತ್ತರ ಪಿನಾಕಿನಿಯ ನದಿಯ ಉತ್ತಂಗ ಮತ್ತು ಅವನತಿಯ ಛಾಯಾಚಿತ್ರ...

Sunday, March 18, 2018

ಬಾವಲಿಗಳ ಸಾಮ್ರಾಜ್ಯ



ಬಾವಲಿಗಳ ಸಾಮ್ರಾಜ್ಯ  ಇದನ್ನು  ಪುಣ್ಯಕ್ಷೇತ್ರವಾದ  ವಿದುರಶ್ವಥಾ  ವೀರಸೌಧ ದಲ್ಲಿ  ಕಾಣಬಹುದು 

Saturday, March 3, 2018

ನಾಮದ ಚಿಲುಮೆ



ಈ  ನಾಮದ ಚಿಲುಮೆ  ದೇವರಾಯನ  ದುರ್ಗಾ ದಿಂದ  ಕೇವಲ  ನಾಲ್ಕು ಕಿ ಮೀ .  ಶ್ರೀ ರಾಮ ಚಂದ್ರ  ನಿರ್ಮಿಸಿದ ನೀರಿನ  ಚಿಲುಮೆ  ಎಂದು  ನಂಬಿಕೆ.  ಇಲ್ಲಿ  ಒಳ್ಳೆ  ಜಿಂಕೆ  ವನ ಇದೆ . ಕುಟುಂಬ  ವೀಕ್ಷೆಣೆಗೆ  ತುಂಬಾ ಸುಂದರವಾಗಿದೆ. ಬೆಂಗಳೂರು  ನಿಂದ್ ಸುಮಾರು ೯೦ ಕಿ ಮೀ  ಆಗಬಹುದು . 

Tuesday, February 6, 2018

ಲಂಗೋಟ,ಗರಡಿ,ಗೋಧಾ,ಕುಸ್ತಿ... ಕಣ್ಮರೆಯ..!!??



        ಲಂಗೋಟ,ಗರಡಿ,ಗೋಧಾ,ಕುಸ್ತಿ... ಕಣ್ಮರೆಯ..!!??
     ಈ ಪದಗಳು   ಈಗೀನ  ಪೀಳಿಗೆ ಬಾಗಶ: ಕೇಳಿರೋದು ಕಡಿಮೆ..   ಲಂಗೋಟ ಅಥವಾ ಹನುಮಾನ್ ಲಂಗೋಟಿ  ಅಂದರೆ ಗರಡಿ ಮನೆಗಳಲ್ಲಿ ದೇಹ ಕಟ್ಟುಮಸ್ತ್ ಗೆ  ಅಂಗ ಸಾಧನೆ ಮತ್ತು ಕುಸ್ತಿ  ಮಾಡುವಾಗ ಕಡ್ಡಾಯವಾಗಿ ಧರಿಸ-ಬೇಕಾದಂಥ ಬಿಗಿಯಾಗಿ ಕಟ್ಟುವ " ಒಳ ಬಟ್ಟೆ ". ನಮ್ಮ(ಹಿಂದಿನ)1980  ರ ಕಾಲ ಘಟ್ಟದಲ್ಲಿ ನಮ್ಮ "ವಿವೇಕಾನಂದ  ಗರಡಿ " ಮನೆಯಲ್ಲಿ  ಲಂಗೋಟಿ  ಇಲ್ಲದೆ ಪ್ರವೇಶ ಇರಲಿಲ್ಲಾ. ನಮ್ಮ ಗರಡಿ ಗುರುಗಳು  ನಾರಾಯಣಪ್ಪ ಸಾಧನೆ  ಮಾಡಲು  ಅವಕಾಶ ಕೊಡುತ್ತಿರಲಿಲ್ಲಾ. ನಾನು  1984--2005  ರ  ಸಮಯದಲ್ಲಿ ಸೊಂಟಕ್ಕೆ  ಕಟ್ಟುತ್ತಿದ್ದ  ಹನುಮಾನ್ ಲಂಗೋಟ  ಈ ಛಾಯಾಚಿತ್ರ ದಲ್ಲಿರುವುದು. ಈ ಕ್ಷಣ ಸಹ  ಈ  ಲಂಗೋಟ ನೋಡಿದರೆ ನನ್ನ ಜಮಾನ  ನೆನಪಾಗಿ  ನನ್ನ  ಮಾಗಿದ ದೇಹ ಬಿಸಿಯಾಗಿ ಮಾಂಸ ಖಂಡ ಉಬ್ಬಿ.... ಅಂದು ಗೋಧ(ಕುಸ್ತಿ ಮಣ್ಣಿನ ಅಖಾಡ) ದಲ್ಲಿ ದೋಬಿ ಶಾಟ್,ಕೊಕ್ಕರೆ,ಉಖಾಡ,ಏಕ್ ಲಾಂಗ್,ದೋ ಲಾಂಗ್,ಬಗಲಿ,ಕಾಲಾವರ್ ಜಂಗ್........ ಕುಸ್ತಿ ಪಟ್ಟು ಪ್ರಯೋಗಿಸಿ  ಸೆಣಿಸುತ್ತಿದ್ದ  ಗಂಡುಗಲಿ ಕುಸ್ತಿ ನೆನಪಾಗುತ್ತದೆ. ಅಂದಿನ ಹಿರಿಯರಾದ  ಲಚ್ಚಿ ಅಣ್ಣ,ಗರಡಿ ಪ್ರಕಾಶ್,ರಸೂಲ್,ಶಿವಣ್ಣ ......... ಮತ್ತು ಗಂಗಾ,ರಮೇಶ,ಮುಖ್ತರ್,ಪೀರು,GT ಸಹೋದರರು ...... ಖುಷಿಯಿಂದ ನೆನಪಾಗುತ್ತಾರೆ. ಸಾವಿರಾರು ಸನ್ನಿವೇಶಗಳು  ನೆನಪುಗಳ ತೋಟದಲ್ಲಿ ಹೂ ನಂತೆ  ಅರಳುತ್ತದೆ.
      ಮತ್ತೊಂದು ವಿಶೇಷ ಅಂದ್ರೆ  ಈ ಕುಸ್ತಿ ಮಣ್ಣಿನ  ಅಖಾಡನ " ದಸರಾ "  ಹಬ್ಬದ ದಿನ ಗೋಪುರವಾಗಿ 
ಅಲಂಕಾರ  ಮಾಡಿ ಪೂಜೆ  ಸಲ್ಲಿಸುತ್ತಿದ್ದೆವು.  ಈಗ   ನಮ್ಮ ಗೌರಿಬಿದನೂರು ನಲ್ಲಿ ಗರಡಿ  ಮನೆ  ಕಣ್ಮರೆ ಆಗಿದೆ. ಆ  ಜಾಗಕ್ಕೆ ದುಬಾರಿ  ಜಿಮ್  ಗಳು ಅಲಂಕರಿಸಿವೆ. 

Saturday, January 20, 2018

Saturday, December 23, 2017

"ಗಂಗೆತ್ತು " ಆಟ




     ಈ ಜಾನಪದ ಕಲೆಯಲ್ಲಿ  ಎತ್ತನ್ನು  ಸಾಕಿ  ಇದಕ್ಕೆ ಶ್ರಮದ  ಆಟಗಳನ್ನು ಕಲಿಸುತ್ತಾರೆ .  ಹಾಗು ಒಂದು  ಹಸುವಿನ ಜೊತೆ ಮದುವೆ ಮಾಡಿಸುವ  ಆಟ ಸಹ  ಮಾಡಿಸುತ್ತಾರೆ.  ಸಾಮಾನ್ಯವಾಗಿ  ಈ  "ಗಂಗೆತ್ತು "  ಆಟ  ನಮ್ಮ ಕರುನಾಡಿನ  ಕಡೆ ನಶಿಸುತ್ತಿದೆ. ಆಂಧ್ರ ಪ್ರದೇಶದ  ಗ್ರಾಮೀಣ ಪ್ರದೇಶಗಳಲ್ಲಿ   ಇನ್ನು  ಜೀವಂತವಾಗಿದೆ .  

Wednesday, December 13, 2017

ಜಾನಪದ ಕಲೆ

ಈ ಜಾನಪದ  ಕಲೆಯಲ್ಲಿ  ನಮ್ಮ   ಪುರಾಣ,ಇತಿಹಾಸ,ಸಮಾಜ ..... ವ್ಯಕ್ತಿಗಳನ್ನಾ  ಮರು ರೂಪಿಸಿ ಜನತೆಗೆ  ರಂಜನೆ ಮುಖಾಂತರ  ತಮ್ಮ  ಪ್ರತಿಭೆ ತೋರಿಸುತ್ತಾರೆ

Wednesday, December 6, 2017

Saturday, October 7, 2017

ಕತ್ತಲಾಚೆಯ ಛಾಯಾಚಿತ್ರ






ಕತ್ತಲಾಚೆಯ ಛಾಯಾಚಿತ್ರ   ಸೊಬಗು ವಿಶೇಷವಾಗಿರುತ್ತೆ.