ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Saturday, February 10, 2018
Tuesday, February 6, 2018
ಲಂಗೋಟ,ಗರಡಿ,ಗೋಧಾ,ಕುಸ್ತಿ... ಕಣ್ಮರೆಯ..!!??
ಲಂಗೋಟ,ಗರಡಿ,ಗೋಧಾ,ಕುಸ್ತಿ... ಕಣ್ಮರೆಯ..!!??
ಈ ಪದಗಳು ಈಗೀನ ಪೀಳಿಗೆ ಬಾಗಶ: ಕೇಳಿರೋದು ಕಡಿಮೆ.. ಲಂಗೋಟ ಅಥವಾ ಹನುಮಾನ್ ಲಂಗೋಟಿ ಅಂದರೆ ಗರಡಿ ಮನೆಗಳಲ್ಲಿ ದೇಹ ಕಟ್ಟುಮಸ್ತ್ ಗೆ ಅಂಗ ಸಾಧನೆ ಮತ್ತು ಕುಸ್ತಿ ಮಾಡುವಾಗ ಕಡ್ಡಾಯವಾಗಿ ಧರಿಸ-ಬೇಕಾದಂಥ ಬಿಗಿಯಾಗಿ ಕಟ್ಟುವ " ಒಳ ಬಟ್ಟೆ ". ನಮ್ಮ(ಹಿಂದಿನ)1980 ರ ಕಾಲ ಘಟ್ಟದಲ್ಲಿ ನಮ್ಮ "ವಿವೇಕಾನಂದ ಗರಡಿ " ಮನೆಯಲ್ಲಿ ಲಂಗೋಟಿ ಇಲ್ಲದೆ ಪ್ರವೇಶ ಇರಲಿಲ್ಲಾ. ನಮ್ಮ ಗರಡಿ ಗುರುಗಳು ನಾರಾಯಣಪ್ಪ ಸಾಧನೆ ಮಾಡಲು ಅವಕಾಶ ಕೊಡುತ್ತಿರಲಿಲ್ಲಾ. ನಾನು 1984--2005 ರ ಸಮಯದಲ್ಲಿ ಸೊಂಟಕ್ಕೆ ಕಟ್ಟುತ್ತಿದ್ದ ಹನುಮಾನ್ ಲಂಗೋಟ ಈ ಛಾಯಾಚಿತ್ರ ದಲ್ಲಿರುವುದು. ಈ ಕ್ಷಣ ಸಹ ಈ ಲಂಗೋಟ ನೋಡಿದರೆ ನನ್ನ ಜಮಾನ ನೆನಪಾಗಿ ನನ್ನ ಮಾಗಿದ ದೇಹ ಬಿಸಿಯಾಗಿ ಮಾಂಸ ಖಂಡ ಉಬ್ಬಿ.... ಅಂದು ಗೋಧ(ಕುಸ್ತಿ ಮಣ್ಣಿನ ಅಖಾಡ) ದಲ್ಲಿ ದೋಬಿ ಶಾಟ್,ಕೊಕ್ಕರೆ,ಉಖಾಡ,ಏಕ್ ಲಾಂಗ್,ದೋ ಲಾಂಗ್,ಬಗಲಿ,ಕಾಲಾವರ್ ಜಂಗ್........ ಕುಸ್ತಿ ಪಟ್ಟು ಪ್ರಯೋಗಿಸಿ ಸೆಣಿಸುತ್ತಿದ್ದ ಗಂಡುಗಲಿ ಕುಸ್ತಿ ನೆನಪಾಗುತ್ತದೆ. ಅಂದಿನ ಹಿರಿಯರಾದ ಲಚ್ಚಿ ಅಣ್ಣ,ಗರಡಿ ಪ್ರಕಾಶ್,ರಸೂಲ್,ಶಿವಣ್ಣ ......... ಮತ್ತು ಗಂಗಾ,ರಮೇಶ,ಮುಖ್ತರ್,ಪೀರು,GT ಸಹೋದರರು ...... ಖುಷಿಯಿಂದ ನೆನಪಾಗುತ್ತಾರೆ. ಸಾವಿರಾರು ಸನ್ನಿವೇಶಗಳು ನೆನಪುಗಳ ತೋಟದಲ್ಲಿ ಹೂ ನಂತೆ ಅರಳುತ್ತದೆ.
ಮತ್ತೊಂದು ವಿಶೇಷ ಅಂದ್ರೆ ಈ ಕುಸ್ತಿ ಮಣ್ಣಿನ ಅಖಾಡನ " ದಸರಾ " ಹಬ್ಬದ ದಿನ ಗೋಪುರವಾಗಿ
ಅಲಂಕಾರ ಮಾಡಿ ಪೂಜೆ ಸಲ್ಲಿಸುತ್ತಿದ್ದೆವು. ಈಗ ನಮ್ಮ ಗೌರಿಬಿದನೂರು ನಲ್ಲಿ ಗರಡಿ ಮನೆ ಕಣ್ಮರೆ ಆಗಿದೆ. ಆ ಜಾಗಕ್ಕೆ ದುಬಾರಿ ಜಿಮ್ ಗಳು ಅಲಂಕರಿಸಿವೆ.
Saturday, January 20, 2018
Saturday, December 23, 2017
Saturday, December 16, 2017
Wednesday, December 13, 2017
ಜಾನಪದ ಕಲೆ
Wednesday, December 6, 2017
ಆಳ್ವಾಸ್ ನುಡಿಸಿರಿಯ ಮಡಿಲಲ್ಲಿ ಸೂರ್ಯ ಮತ್ತು ಚಂದ್ರ ರ ದರ್ಶನ
ಆಳ್ವಾಸ್ ನುಡಿಸಿರಿಯ ಮಡಿಲಲ್ಲಿ ಸೂರ್ಯ ಮತ್ತು ಚಂದ್ರ ರ ದರ್ಶನ
Saturday, November 11, 2017
Saturday, October 7, 2017
Saturday, September 23, 2017
Sunday, September 17, 2017
Monday, September 11, 2017
Thursday, September 7, 2017
ಪಿತೃ ಪಕ್ಷ
ಪಿತೃ ಪಕ್ಷ
ಹುಟ್ಟಿಗೆ ಅಂದ್ರೆ ಹುಟ್ಟಿದ ಹಬ್ಬಕ್ಕೆ ಸಂತೋಷ,ಸಡಗರ,ಸಂಭ್ರಮ.... ಪ್ರಾಮುಖ್ಯತೆ ಹೆಚ್ಚು. ಏಕೆಂದ್ರೆ ಹುಟ್ಟು ಕಣ್ಣಿಗೆ ಕಾಣುತ್ತೆ..!!!.
ಸಾವಿನ ನಂತರದ ಲೋಕವನ್ನಾ ಕಂಡಿರುವ ಮಹಾಭಾವರು ಬೆರಳೆಣಿಕೆ.
ಗತಿಸಿದ ಗುರು ಹಿರಿಯರಿಗೆ ಸ್ಮರಿಸುವುದಕ್ಕೆ ಸರ್ವ ಪಿತೃ ಮಹಾಲಯ(ಪಿತೃ)ಪಕ್ಷ ಶ್ರೇಷ್ಠ ಮತ್ತು ಜೇಷ್ಠವಾಗಿದೆ.
ಪ್ರತಿವರ್ಷ ಶ್ರಾದ್ಧ ಅಥಾವ ಎಡೆ ಆಚರಿಸಿ ಹಿರಿಯರಿಗೆ ಗೌರವ ಸೂಚಿಸಿ ಋಣ ಸಂದಾಯ ಮಾಡುವುದು ರಾಮಾಯಣ ಕಾಲದಿಂದ ಶ್ರೀ ರಾಮಚಂದ್ರ ಪ್ರಭು ಯುಗದಿಂದ ಶ್ರಾದ್ದ ಆಚರಣೆಯಿದೆ.
ಪ್ರಥಮವಾಗಿ ಶಾದ್ಧಚರಣೆ ಸಾಗರದ ತೀರದಲ್ಲಿ ನೆರವೇರತ್ತಿತ್ತು. ನಂತರ ಕಾಲ ಸರಿಯುತ್ತಿದ್ದ ಹಾಗೆ
ಜೀವನದಿಯ ದಡದಲ್ಲಿ,ಸಮೃದ್ಧಿವಾಗಿ ನೀರು ತುಂಬಿರುವ ಕೆರೆ,ನೀರು ತುಂಬಿರುವ ಭಾವಿ,ವಾಸಿಸವ ಮನೆ.....
ಈಗ ಮಠಗಳಲ್ಲಿ ಆಚರಿಸುತ್ತಿದ್ದೇವೆ. ಸ್ಥಳ ಬದಲಾದರು ಶ್ರದ್ಧೆ,ನಂಬಿಕೆ,ಆಚರಣೆ... ಬದಲಾಗಿಲಾಗಿದೆರುವುದು ವಿಶೇಷ. ಶ್ರಾದ್ಧ ಬಗ್ಗೆ "ಗೀತೆ"ಯಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಸೂಕ್ಶ್ಮವಾಗಿ ವಿವರಿಸಿದ್ದಾನೆ.
ಶ್ರಾದ್ಧ,ಎಡೆ,ತರ್ಪಣ,ಸ್ವಯಂಪಾಕ..... ಆಚರಿಸಲು ಮತ್ತು ಆಚರಿಸದಿರಲು ಸಂಪೂರ್ಣ ಹಕ್ಕು ಎಲ್ಲರಿಗೂ ಇದೆ. ಅದು ಅವರ ನಂಬಿಕೆಗೆ ಸೇರಿದ್ದು.
ಇದರ ಬಗ್ಗೆ ತುಸು ತಿಳಿಯುವ ಆಸಕ್ತಿ ಇದ್ದರೆ "ಅವಳು ಚೆಲುವೆ" ನನ್ನ ಕಥಾ ಸಂಕಲನ ಓದಬಹುದು. ನನ್ನೂರಿನ ಸರಕಾರಿ ಗ್ರಂಥಾಲಯದಲ್ಲಿ ಲಭ್ಯವಿದೆ.
Thursday, August 31, 2017
ಸೀತಾಪಾದ
ಲೇಪಾಕ್ಷಿ ಅಂದರೆ " ಎದ್ದುಳು ಪಕ್ಷಿ " ಎಂದು ಅರ್ಥ. ಈ ಪಾದ ಶ್ರೀ ರಾಮ ಚಂದ್ರ ಪಕ್ಷಿಗೆ ನುಡಿದ ಮಾತು. ರಾವಣ ಸಂಗಡ ಹೋರಾಟದಲ್ಲಿ ಸೋತ " ಜಟಾಯು " ಪಕ್ಷಿಯನ್ನು ಸಂತ್ಯೆಸಲು ರಭಸವಾಗಿ ಸೀತಾಮಾತೆ ಹೆಜ್ಜೆಯೂರಿದಾಗ ಈ ಸ್ಟಳ " ಸೀತಾಪಾದ " ಇಷ್ಟು ದೊಡ್ಡ ಪಾದನಾ ... !! ಅಂತ ಗ್ಯೆಡ್ ಗೆ ಕೇಳಿದಾಗ " ಸರ್ ರಾಮಾಯಣ ಕಾಲದಲ್ಲಿ ಸೀತಾಮಾತೆ 24 ಅಡಿ ಮತ್ತು ಶ್ರೀರಾಮ ಚಂದ್ರ 36 ಅಡಿ ಎತ್ತರ. ರಾಕ್ಷಸ ರಾವಣ 104 ಅಡಿ " ಅಂದ . ನನಗೆ ಏಕ ಕಾಲಕ್ಕೆ ವಿಸ್ಮಯ ಮತ್ತು ಆಶ್ಚರ್ಯ. ನಾನು ಓದಿದ ಪ್ರಕಾರ ಐದು ಸಾವಿರ ವರ್ಷದ ಹಿಂದೆ ಮನುಜನ ಆಯುಸ್ಸು 175 ವರ್ಷ. ಕಾಲ ಸರಿಯುತ್ತಾ ..... ಈಗ 50 ವರ್ಷಕ್ಕೆ ನಿಂತಿದೆ. ಈ ರೀತಿಯ ಎತ್ತರ ಸಹ 36 ರಿಂದ 7--8 ಅಡಿ ಗೆ ನಿಂತಿರ ಬಹುದೆ ...???!!!. ಚಿತ್ರ ವಿಚಿತ್ರ ಪ್ರಶ್ನೆ ಈ ಕ್ಷಣ ಸಹ ಕಾಡುತ್ತಿದೆ . ಈ ದೇವಾಲಯ ಏಕ ಶಿಲಾ ಬಂಡೆ ಮೇಲೆ ಕೆತ್ತಿರುವು ವಿಶೇಷ .
Saturday, August 26, 2017
Tuesday, August 22, 2017
Monday, August 21, 2017
Thursday, August 17, 2017
Tuesday, August 8, 2017
ಕಲುಬುರ್ಗಿ = ಗುಲ್ಬರ್ಗ
ಕಲಬುರ್ಗಿ ಕನ್ನಡದಲ್ಲಿ(ಕಲ್ಲಿನ ಕೋಟೆ) -- ಉರ್ದು ಗುಲ್ಬರ್ಗ(ಹೂ ತೋಟ ) . ಇತಿಹಾಸದಲ್ಲಿ "ರಾಷ್ಟ್ರಕೂಟರು ಚಾಲುಕ್ಯರು " ನಂತರ ಮೊಘಲು ದೊರೆಗಳು ಈ ಪ್ರದೇಶ ಆಳಿದ್ದಾರೆ. ಅದ್ಭುತವಾದ ಕೋಟೆ . ಕೋಟೆ ಒಳಗೆ ಪ್ಯಾಲೇಸ್ ,ಫಿರಂಗಿ ,ಶಾಶನಗಳು.... ಇವೆ. ಆದ್ರೆ ಕೋಟೆ ಭಾಗಶ: ಬಿದ್ದು ಹೋಗಿದೆ. ಕೋಟೆ ಒಳಗೆ ಮನೆಗಳು ಆಕ್ರಮಿಸಿಕೊಂಡಿದೆ. ನೋಡುವುದಕ್ಕೆ ಸುಂದರ ಮತ್ತು ಅದ್ಭುತ ಪ್ರದೇಶ . ಒಮ್ಮೆ ನೋಡಿದರೆ ನಮ್ಮ ಪೂರ್ವಿಕರು ನೆನಪಾಗುತ್ತಾರೆ .
Thursday, July 27, 2017
ಗೌರಿಬಿದನೂರು ಗೆ ನಾಮಾಕರಣವಾದುದು
ಗೌರಿಬಿದನೂರು ಗೆ ನಾಮಾಕರಣವಾದುದು
------------------------------------------
ನಮ್ಮ ಗೌರಿಬಿದನೂರು ಊರಿಗೆ ಮಹಾಭಾರತದ ಇತಿಹಾಸ ಬಳುವಳಿ ಇದೆ . ಗೌರಿಬಿದನೂರು ಹೆಸರು ಸಾಗಿ ಬಂದ ಹಾದಿ ಈ ರೀತಿ ಇದೆ .
------------------------------------------
ನಮ್ಮ ಗೌರಿಬಿದನೂರು ಊರಿಗೆ ಮಹಾಭಾರತದ ಇತಿಹಾಸ ಬಳುವಳಿ ಇದೆ . ಗೌರಿಬಿದನೂರು ಹೆಸರು ಸಾಗಿ ಬಂದ ಹಾದಿ ಈ ರೀತಿ ಇದೆ .
ಮಹಾಭಾರತ ಯುದ್ಧ ಪೂರ್ಣಗೊಂಡ ನಂತರ ... ವಿದುರ ರರು ವ್ಯಾಸರ ಆಜ್ಞೆ ಯಂತೆ ಮೋಕ್ಷ ಹೊಂದಲು ಉತ್ತರಪಿನಾಕಿನಿ ನದಿದಡ ದಲ್ಲಿರುವ ಮ್ಯೇತ್ರಿಯಿ ಋಷಿಗಳ ಬಳಿ ಆಶ್ರಯ ಪಡೆದರು . ಅವರ ಆದೇಶ ಮೇರೆಗೆ ನಾರಾಯಣ ಮಂತ್ರ ಪಟಿಸುತ್ತ ಅಶ್ವತ್ಥ ವೃಕ್ಷ ನೆಟ್ಟು ಪುಜಿಸಿದರು . ನಂತರ ಅಶ್ವತ್ಥ ನಾರಾಯಣ ಸ್ವಾಮಿ ಕೃಪೆ ಇಂದ ಮೋಕ್ಷ ಪಡೆದರು. ಈ ಪವಿತ್ರ ಸ್ಥಳಕ್ಕೆ "ವಿದೂರೂರು"ಎಂದು ಹೆಸರು ಗಳಿಸಿ ಸಾವಿರಾರು ವರ್ಷ ಪ್ರಸಿದ್ದಿ ಪಡೆಯಿತು . ನಂತರ ಕಾಲಕ್ರಮೇಣ ವಿದೂರೂರು ಆಳ್ವಿಕೆಯಲ್ಲಿ ಒಳಪಟ್ಟಿದ್ದ ದಾರಿನಾಯನಕನ ಪಾಳ್ಯದ ಪಾಳೆಗಾರ ತನ್ನ ಕಿರಿ ಮಗಳಾದ ಗೌರಿ ಗೆ ವಿದೂರೂರು ನ್ನು ಬಳುವಳಿಯಾಗಿಕೊಟ್ಟ ನಂತರ.... ಗೌರಿ ವಿದೂರೂರು ನಂತರ " ಗೌರಿಬಿದನೂರು" ಹೆಸರಲ್ಲಿ ಪ್ರಸಿದ್ದಿ ಪಡೆಯಿತು .ನಮ್ಮ ಗೌರಿಬಿದನೂರು ಜನತೆ ಈ ಬರಹ ಇತರರಿಗೆ ತಿಳಿಸಿ ಮತ್ತು share ಮಾಡಿ .
Saturday, July 22, 2017
"ಅವಳು ಚೆಲುವೆ" ಯ ಸಂತೋಷದ ಸುದ್ದಿ
ಏನು ಅಂದರೆ "ಅವಳು ಚೆಲುವೆ" ಕಥಾ ಸಂಕಲನ ಕರ್ನಾಟಕ ಪುಸ್ತಕ ಗ್ರಂಥಾಲಯಕ್ಕೆ ಆಯ್ಕೆ ಆಗಿದೆ.
ಈ ಚೆಲುವೆ ಈಗ ಪ್ರಥಮ ಸುತ್ತಿನಲ್ಲಿ ಬೆಂಗಳೂರು ನಾಲ್ಕು ಜೋನ್ ಗೆ ಕಪಾಟು (ಬೀರು) ನಲ್ಲಿ ಅಲಂಕರಿಸಿ, ನಂತರ ಓದುಗರ ಆಸಕ್ತಿಗೆ ನೆರವಾಗುತ್ತಾಳೆ. ನಂತರ ಹಂತ ಹಂತವಾಗಿ ಕರ್ನಾಟಕದ ವಿವಿಧ ಜಿಲ್ಲೆಗಳ ಗ್ರಂಥಾಲಯಕ್ಕೆ ಚೆಲುವೆ ಕಥಾ ಸಂಕಲನ ಕಪಾಟು ಅಲಂಕರಿಸುತ್ತಾಳೆ . ಈ ಸಂತೋಷದ ನಿಮ್ಮಲ್ಲಿ (ನನ್ನ ಓದುಗ ಗೆಳೆಯರಲ್ಲಿ) ಹಂಚಿ ಕೊಳ್ಳಬೇಕೆನಿಸಿತು. ನಮಸ್ತೆ .
Subscribe to:
Posts (Atom)

















































