Sunday, March 27, 2016

ಚಳಿ



ಈ ಮುಂಜಾನೆ ಚಳಿಗೆ  ಮೈ ಬೆಚ್ಚಗೆ ಆಗಲು  ನಮ್ಮ  ಹಳ್ಳಿಗಳ ಕಡೆ  ಈ ದೃಶ್ಯ  ಸರ್ವೆ  ಸಾಮಾನ್ಯ

Sunday, March 6, 2016

ಲೇಪಾಕ್ಷಿ










ಲೇಪಾಕ್ಷಿ ಪುಣ್ಯಕ್ಷೇತ್ರ . 
ಈ ಪುಣ್ಯಕ್ಷೇತ್ರ ಕ್ಕೆ  ಆಗಮಿಸುವ ಪ್ರವಾಸಿಗರಿಗೆ ಮತ್ತು ಭಕ್ತರಿಗೆ...  ಪ್ರಥಮವಾಗಿ  ಉತ್ತಮ ಸಾರಿಗೆ ಸೌಕರ್ಯ -ಗುಂಡಿ ಇಲ್ಲದ ರಸ್ತೆ . ಕ್ಷೇತ್ರದಲ್ಲಿ ವಾಹನ ಪಾರ್ಕಿಂಗ್ , ದೇವಸ್ತಾನದ  ಒಳ-ಹೊರಗೆ ಸ್ವಚ್ಚತೆ. ಲೇಪಾಕ್ಷಿ ದೇವಾಸ್ತಾನದ ಮಹಿಮೆ ತಿಳಿಸಲು ಉತ್ತಮ ಮಾರ್ಗದರ್ಶಿ . ಹಣ ಪಿಕದೇ ... ಎಲ್ಲರನ್ನ ಏಕ ರೀತಿ ನೋಡುವ ಅರ್ಚಕ ಮಹಾಶಯರು . ಮಕ್ಕಳಿಗೆ ಆಡಲು ಅಂದ ಉದ್ಯಾವನ . 
ಬಹ್ರಿದೆಷೆಗೆ ಅನುಕೂಲವಾದ ಕಟ್ಟಡ . 
ಇವೆಲ್ಲಾ ಕನಸು ಎಂದು ಅಂತ ನಗಬಹುದು.  ಖಂಡಿತ ಅನುಮಾನ ಬೇಡ. ಒಮ್ಮೆ  ಲೀಪಾಕ್ಷಿಗೆ ಬೇಟಿ ಕೊಡಿ. ನಂತರ ನೋಡಿ .  ಮನಸಿಗೆ 'ಆನೊಂದೊಬ್ರಹ್ಮ ' . ಹಿಂದುಪುರದಿಂದ ಕೇವಲ ೧೩ ಕಿ ಮಿ . 
ಲೇಪಾಕ್ಷಿ ಕ್ಷೇತ್ರ ವನ್ನಾ ಅಭಿವೃದ್ದಿ ತಂದು  ಮತ್ತಷ್ಟು  ಅಭಿವೃದ್ದಿ ಶ್ರಮಿಸುತ್ತಿರುವ ಅಲ್ಲಿನ TDP  MLA  ಶ್ರೀ ನಂದಮೊರಿ ಬಾಲಕೃಷ್ಣ.  ಇವರಿಗೆ ಪ್ರವಾಸಿಗರ ಪರವಾಗಿ ನನ್ನ ಅಭಿವಂದನೆ . 
100 MLA =1 ನಂದಮೊರಿ ಬಾಲಕೃಷ್ಣ 

Friday, February 26, 2016

ಹಳ್ಳಿ ಹಾದಿಯ ಚಿತ್ರಣ







ಸರಳತೆ ಅಂದ್ರೆ  ನನ್ನ ದೃಷ್ಟಿಯಲ್ಲಿ  ಹಳ್ಳಿಯ ಜೀವನ ಅನಿಸುತ್ತೆ . ಹೇಗೆಂದರೆ  ಹಳ್ಳಿಯ ಮಣ್ಣು ರಸ್ತೆಯ ಅಂಕು-ಡೊಂಕು  ರಸ್ತೆ ,ಕೆರೆ ಏರಿಯ ಮೇಲೆ , ಗದ್ದೆಗಳ ಗೆಣಿವೆಗಳ ........ ಓಡಾಡುತ್ತಾ  ನೋಟ ಹರಿಸಿದಾಗ  ನೇಗಿಲ ಯೋಗಿಯ ಹೊಲದಲ್ಲಿ  ಕಾಯುವ ಗೋಡು(ಚಿಕ್ಕ ಶೆಡ್),ಅವರ ಸರಳ ಮುದ್ದೆ-ಗೊಜ್ಜು ,ಜೀವನ ......  ಒಂದ ...  ಏರಡ. ವಿಶ್ವಾಸಕ್ಕೆ ಮತ್ತೊಂದು  ಹೆಸರೇ  ಹಳ್ಳಿಯ ಜನ . ಅವರನ್ನಾ  ಹಳ್ಳಿಯಲ್ಲಿ ಮಾತಾಡಿಸಿದ್ದರೆ  ಅದರ  ಅನುಭವ ಆಗಿರುತ್ತೆ . ಸರಳತೆಯ ಕೆಲೆವು ಛಾಯಾಚಿತ್ರ ಇಲ್ಲಿದೆ

Tuesday, February 9, 2016

ನೆನ್ನೆಯ ನೆನಪು -- ನಾಳೆಯ ಬೆಳಕು

ನೆನ್ನೆಯ ನೆನಪು -- ನಾಳೆಯ ಬೆಳಕು ಸಮಾರಂಭದಲ್ಲಿ  ' ವೀರಪ್ಪ ಮೊಯ್ಲಿ '  ರವರಿಗೆ  ಸರಸ್ವತಿ ಸಮ್ಮಾನ್
ಪ್ರಶಸ್ತಿ  ಬಂದಿರುವುದರಿಂದ  ಚಿಕ್ಕಬಳ್ಳಾಪುರ  ಜಿಲ್ಲೆ ಇಂದ   ಅಭಿವಂದನೆ  ಸಲ್ಲಿಸಲಾಯಿತು .  ಆ  ಸಮಯದಲ್ಲಿ ಕವನ  ವಾಚಿಸುತ್ತಿರುವುದು .

Saturday, February 6, 2016

ಬಾನಾಡಿ ಜಗತ್ತು

ನಮ್ಮ  ಗೊಟಕನಪುರ  ಕೆರೆಯಲ್ಲಿ  ನೂರಾರು ಪ್ರಭೇದ  ಹಕ್ಕಿಗಳು  ಸಂತಾನ  ಅಭಿವೃದ್ದಿಗೆ  ವಾಸ ಸ್ಥಳವನ್ನಾಗಿ ಆಯ್ಕೆ  ಮಾಡಿ ಕೊಂಡಿವೆ .  ಈ  ದಿನಕ್ಕೆ   ಲಕ್ಷ  ಲಕ್ಷ  ಹಕ್ಕಿಗಳು  ಆಕಾಶದಲ್ಲಿ   ಹಾರಾಟ ನೋಡುವುದಕ್ಕೆ ಖಂಡಿತ  ಕಣ್ಣಿಗೆ    ದೀಪಾವಳಿ ಹಬ್ಬ .  ನಾವೆಲ್ಲಾ  ನ್ಯಾಷನಲ್ ಜಿಯಾಗ್ರಫಿ  ನೋಡಿ  ಸಂತೋಷ  ಪಡುತಿವಿ ...     ಗೌರಿಬಿದನೂರು  ನಾಗರಿಕರೆ   ಒಮ್ಮೆ  ನಿಮ್ಮ ಕುಟುಂಬ  ಸಮೇತ  ನೋಡಿ .

Sunday, January 10, 2016

ನೀರು

ಮುಂಜಾನೆಯೇ  ನೀರಿಗೆ  ಹೊರಟರೆ  ಜನ ಇರುವುದಿಲ್ಲಾ .......  ಅದಕ್ಕೆ ಈ ಪೋರನ  ಸೈಕಲ್ ತುಳಿತ .

Saturday, December 19, 2015

ಸೊಗಸು


ಈ ಛಾಯಾ ಚಿತ್ರದಲ್ಲಿ  ಪ್ರಕೃತಿ ಸೊಗಸು  ಎಷ್ಟು ಅಮೋಘವಾಗಿ  ಕಾಣಿಸ್ತಿದೆ .   ಆದ್ರೆ  ಈ ಸೊಗಸು  ಕೆಲವೇ .....  ದಿನಗಳು  ಮಾತ್ರ !!!!!!!!. ಏಕೆಂದರೆ ಈ ರಸ್ತೆ  ಈಗ ಮುಳುಬಾಗಿಲು ----ಮೂಡುಬಿದಿರೆ  NH ೪  ಸೇರಿಕೊಳ್ಳುತ್ತಿದೆ

Monday, November 23, 2015

ರಂಗ ಸ್ಥಳ





ರಂಗ ಸ್ಥಳ  ಈ  ದೇವಾಲಯ ಪುರಾತನವಾದುದು .   ಇದರ ವಿಶೇಷ  ಮಕರ ಸಂಕ್ರಾಂತಿಗೆ ಸೂರ್ಯನ  ಪ್ರಥಮ ಕಿರಣ ಶ್ರೀ ರಂಗನಾಥ ಸ್ವಾಮಿ ಯಾ ಪದ ಸ್ಪರ್ಶಿಸುತ್ತದೆ . ದೇವಾಲಯ ಅದ್ಬುತ ಕೆತ್ತನೆ ಇಂದ ಕೂಡಿದೆ. ಮಾರ್ಗ .. ಗೌರಿಬಿದನೂರು ನಿಂದ ಚಿಕ್ಕಬಲ್ಲಪುರ  ರಸ್ತೆಯಲ್ಲಿ  ಮೂವತ್ತು ಕಿ ಮಿ  ಸಾಗಿ ತಲಪಬಹುದು .