Saturday, November 30, 2013

ನೀರಿಗಾಗಿ ಹೆಜ್ಜೆ


                                               
ಕರಿ ಮೋಡ ಕರಿಗೆ
ಕೆರೆ ಕೋಡಿ ಹರಿಲಿಲ್ಲಾ ..................
ದಿಗಂತದಾಚೆ ಇರುವ ನೀರಿಗೆ
ದಾಪುಗಾಲು ನಿಲ್ಲಲಿಲ್ಲಾ ............. ....

Saturday, November 23, 2013

ಹಳ್ಳಿ ಹಕ್ಕಿಗಳು




ಸರ್ಕಾರ ಸಮೃದ್ಧಿಯಾಗಿ ಸಕಲ ಸವಲತ್ತು ಶಿಕ್ಷಣಕ್ಕೆ  ಕೊಟ್ಟರು ........... ಈ  ದೃಶ್ಯ  ಹಿಂದುಳಿದ ಹಳ್ಳಿಗಳಲ್ಲಿ  ಸರ್ವೆ  ಸಾಮಾನ್ಯವಾಗಿದೆ.

ತಾವರೆ ಹೂ



Wednesday, November 6, 2013

ಮರಳಿ ಮನೆಗೆ


ಸಂಜೆ ಹೊಲದ ಕೆಲಸ ಮುಗಿಸಿ....... ಸಂತೃಪ್ತಿ ಇಂದ  ಮನೆಗೆ ಹಿಂತಿರುಗುವ  ಬೇಸಾಯಗಾರರ ಹೆಜ್ಜೆಗಳು

Tuesday, October 29, 2013

ಹಳ್ಳಿ ಹೆಣ್ಣು

     ಹೊಲದಲ್ಲಿ ಸೊಪ್ಪು ಕತ್ತರಿಸಿ ಬಟ್ಟೆಯಲ್ಲಿ ಹೊರೆ ಕಟ್ಟಿ........... ಸಂತೆ ಅಥವಾ ಮಾರುಕಟ್ಟೆಯಲ್ಲಿ ಮಾರಿ ಬಂದ್ರು ... ನೆಡುಯುತ್ತಿರುವ ಹಾದಿ ಹಾಗೆ ಜೀವನ  ಅಂದ್ರೆ  ಹಾಗೆ ಗಮನಿಸಿ ಮುಂದೆ  ಇಳಿಜಾರು... ದುಡಿದಿದ್ದು ಬರಿ ಹೊಟ್ಟೆ ಮತ್ತು ಬಟ್ಟೆಗೆ ಮಾತ್ರ ...!!!!!!!!!!!!!!!!!!!!!!

Sunday, October 20, 2013

ಅವಸಾನ


  ಉರುಳಿ ಬಿದ್ದಿದೆ  
  ವಿದುರ ನೆಟ್ಟ ಮರ 
  ಶತ  ಶತಮಾನದ ಕೊಳಕು ಹುಳುಕುಗಳ.. ಕಂಡು
  ಸ್ಥಿತಪ್ರಜ್ಞನತೆ ಯಲಿ
 
ಮೆರದ ಆ-ಮರ     
            ಮರ  ಮುರಿದು ಬಿದ್ದಿದೆ     
            ಟೊಂಗೆ  ಟಿಸಿಲು ನುಚ್ಚು ನೂರಾಗಿದೆ     
           ಮತ್ತೆ ಭುವಿ ಯಿಂದ
           ಎದ್ದು ಗೆದ್ದು ಬರುವ ಹಂಬಲ     
           ಭ್ರಷ್ಟ ಗೆದ್ದಲು  ಹುಳುವಿನಿಂದಲ್ಲಾ ..... ಬೆಂಬಲ

Friday, September 6, 2013

ಮೇಘದಲ್ಲಿ ಕಲೆ





              ಮೊನ್ನೆ ಸಂಜೆ ಬ್ಯೆಕ್ ತಗೊಂಡು ಸುಮಾರು ೪೦ ಕಿ ಮಿ ಸುತ್ತಾಡಿದೆ ............... ಒಂದು  ಛಾಯಾಚಿತ್ರ ಸಿಗಲಿಲ್ಲಾ . ತುಂಬಾ ಬೇಸರ ಆಯ್ತು . ಬ್ಯೆಕ್ ಪಕ್ಕಕ್ಕೆ ಹಾಕಿ ಸುಮ್ಮನೆ ತಲೆ ಎತ್ತಿ  ಆಕಾಶ ನೋಡಿದೆ .  ಆಕಾಶ ದಲ್ಲಿ ರಂಗಿನ ಮೆರವಣಿಗೆ  ತುಂಬಾ ಸುಂದರವಾಗಿ ಸಾಗಿತ್ತು .   ವಿಶೇಷ ಸಿಗಬಹುದೆಂದು  ಕುತೂಹಲದಿಂದ  ಕ್ಯಾಮರಾ ಹಿಡಿದು ಕುಳಿತೆ . ವಾ.. ವಾ............ ಅದ್ಬುತ ಛಾಯಾಚಿತ್ರ  ಪ್ರಕೃತಿ  ದಯಾ ಪಾಲಿಸಿತು.
          ೧. ಈ ಛಾಯಾ ಚಿತ್ರ  ಇಲಿ ಯನ್ನು ಬೆಕ್ಕು ಬೇಟೆ  ಅಡುತ್ತಿರುವಂತಿದೆ.
          ೨. ಈ ಛಾಯಾಚಿತ್ರ ಕಾಡು ವಾಸಿಯ ಮಹಿಳೆ  ಘೋರ ಸರ್ಪವನ್ನು ಹೆದುರುಸುವಂತೆ ಕಾಣುತ್ತಿದೆ. ಈ ಛಾಯಾಚಿತ್ರ ವಿಶೇಷ ಅಂದ್ರೆ  ಕ್ಯಾಮರಾ ಕ್ಲಿಕ್ ಮಾಡಿದಾಗ ಮಾತ್ರ  ಈ ದೃಶ್ಯ  ಕಾಣುತ್ತಿತ್ತು . ಬರಿ ಕಣ್ಣಿನಲಿ ನೋಡಿದಾಗ  ಚಿದ್ರ ಚಿದ್ರ .. ಮೆಘದಂತೆ ಕಾಣುತ್ತಿತ್ತು . ಇದು ನನಗೆ ಮರೆಯಾಲಾರದ ಆನುಭವ.        
           ೩. ಖ್ಯಾತ ನವ್ಯ ಕಲಾವಿದ ಬಿಡಿಸಿದಂತೆ ಇದೆ.......... ಈ ಛಾಯಾ ಚಿತ್ರ .

ಅಗ್ನಿ ಪರ್ವತ


ಈ ಮೇಘದ ಛಾಯಾ ಚಿತ್ರ  ಭೊಮಿ ಇಂದ ಸ್ಪೋಟ ಗೊಂಡ ಅಗ್ನಿ ಪರ್ವತ ದಂತೆ ಕಾಣುತ್ತಿದೆ

Sunday, September 1, 2013

ಅಮ್ಮ ನಿನ್ನ ತೋಳಿನಲ್ಲಿ


ಈ ಛಾಯಾಚಿತ್ರ ನಮ್ಮ ಬಾಲ್ಯವನ್ನ ನೆನಪು ಮಾಡಿಕೊಡುತ್ತೆ.  ಅಮ್ಮನ ಕ್ಯೆ ತುತ್ತು,ಅಮ್ಮ ಬಿಡಿಸಿಕೊಟ್ಟ ಕಡಲೇಕಾಯಿ,ರಾಗಿ ತೆನೆ,ಜೋಳದ ಕಾಳು .............. ಕೊಡುತ್ತಿದ್ದರೆ ಎಷ್ಟು ಕೊಟ್ಟಷ್ಟು  ಅವೆಲ್ಲಾ ಅಮೃತ. ಆದ್ರೆ ಈ ಸೌಭಾಗ್ಯ  ಹೆಚ್ಚಾಗಿ ಹಳ್ಳಿ ಮಕ್ಕಳಿಗೆ ಸಿಕ್ಕುವುದು.  ಪಟ್ಟಣದ ಮಕ್ಕಳಿಗೆ  ಕಡಿಮೆ ಎಂದರೆ ತಪ್ಪಿಲ್ಲಾ.  ಭೂ ತಾಯಿ ಜೊತೆ ಬಾಲ್ಯ ಕಳೆಯೋ ಯೋಗ ಹೆಚ್ಚಾಗಿ  ಹಳ್ಳಿ ಹೈಕಳು ಗಳಿಗೆ.

Saturday, August 31, 2013

ಜಾನಪದ



ನಮ್ಮ  ಕಡೆ ಸಾಂಸ್ಕೃತಿಕ ಹಬ್ಬಗಳು ಆದಾಗ ಅನೇಕ ಕಡೆ ಇಂದ  ಈ ಜನಪದ ಕಲಾವಿದರನ್ನ  ಆಮಂತ್ರಿಸಿ ಹಬ್ಬದ ಹಿರಿಮೆಯನ್ನು ಹೆಚ್ಚಿಸುತ್ತಾರೆ .

Wednesday, July 3, 2013

ಶಿಲ್ಪ ಕಲೆ





ವೀರ ಆಂಜನೇಯ ದೇವಸ್ತಾನ  ನೋಡುವುದಕ್ಕೆ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತದೆ.  ಹೊಸತನದಲ್ಲಿ ಪುರಾತನದ ಶಿಲ್ಪಕಲೆ ಮೂಡಿದೆ. ಈ ದೇವಸ್ತಾನ ಚಿಕ್ಕಬಳ್ಳಾಪುರ ---ಬೆಂಗಳೂರು  ರಾಷ್ಟ್ರೀಯ ಹೆದ್ದಾರಿಯಲ್ಲಿದೆ .ಚಿಕ್ಕಬಳ್ಳಾಪುರದಿಂದ ಕೇವಲ 2  ಕಿ ಮಿ  ಇದೆ . ಒಮ್ಮೆ  ನೋಡಿ  ಅದ್ಬುತವಾಗಿದೆ.ಹೊಸ ಚಿಗುರು ಹಳೆ ಬೇರು ನಂತಿದೆ

ಆಸರೆ...!

ಭಾರ ಹೆಚ್ಚಾಗಿರಬೇಕು.....   ಅದಕ್ಕೆ  ಕುದುರೆಗೆ ಬ್ಯೆಕ್ ಆಸರೆ...!

Sunday, June 23, 2013

ಜಿಲ್ಲಾ ಸಾ. ಸಮ್ಮೇಳನ





 ಶಿಡ್ಲಘಟ್ಟ ದಲ್ಲಿ  13-14  ಜುಲೈ 2 0 1 4  ರಂದು ಜಿಲ್ಲಾ ಸಾಹಿತ್ಯ ಸಮ್ಮೇಳನ  ನಡೆಯಿತು .  ಆ ಸಮ್ಮೇಳನದಲ್ಲಿ ನನ್ನ ಸಾಮ್ರಾಟ್ ಅಶೋಕ  ಕಾದಂಬರಿ  ಪರಿಚಯ ಮಾಡಿ ಬಿಡುಗಡೆಮಾಡಿದರು.ಛಾಯಾಚಿತ್ರದಲ್ಲಿ ಸಮ್ಮೇಳನದ ಅಧ್ಯೇಕ್ಷೆ ಗುಡಿಬಂಡೆ ಪೂರ್ಣಿಮ ರವರು, ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷರು ಪುಂಡಲಿಕ  ಹಾಲಂಬಿ, ನಾನು ಮತ್ತು ಇತರರು. ಹಾಗು ಸಮ್ಮೇಳನದ ಸಂತಸದ ಕೆಲವು ಛಾಯಾಚಿತ್ರ........................



Thursday, June 13, 2013

ಕಳಸ

      ಈ ಕಲ್ಲಿನ ಗುಡ್ಡ ನೋಡಗರ ಕಣ್ಣಿಗೆ  ಏರು ಜವ್ವನೆಯ ಎದೆ  ಕಳಸದಂತೆ  ಅಂದವಾಗಿ ಕಾಣಿಸುತ್ತಿದೆ

ಹುತ್ತ



 ಹೊಸೂರ್ ಗ್ರಾಮದಿಂದ   ಹಳ್ಳಿಪುರಕ್ಕೆ  ಸಾಗುವ  ರಸ್ತೆಯಲ್ಲಿ ಕಾಣುವ   ನನ್ನ ಎತ್ತರದ  ಹುತ್ತ  ನನ್ನ ಮನ ಸೆಳೆಯಿತು'

Thursday, May 30, 2013

ಬಿಡುಗಡೆ



                         6.5.2013  ರ ಬೆಳಗ್ಗೆ ನನ್ನ ಇತಿಹಾಸದ ಸಾಮ್ರಾಟ್  ಅಶೋಕ 
                                   ಕಾದಂಬರಿ ಬಿಡುಗಡೆಯ  ಕ್ಷಣ

Monday, April 15, 2013

ವಿರಹ



                        ವಸಂತನ ಆಗಮನಕ್ಕೆ ಕಾತರಿಸುತ್ತಿರುವ....... ಸಸ್ಯ  ಕನ್ಯೆ 

Wednesday, March 20, 2013

ಮೇಘದ ಬೆರಗು



ಈ ಮೇಘದ ಛಾಯಾ ಚಿತ್ರ ದಲ್ಲಿ  ಒಂದರಲ್ಲಿ ಹಾವು  ಬೇಟೆಯನ್ನು
ಕಬಳಿ ಸುತಿರುವಂತೆ ಕಾಣುತ್ತಿದೆ
ಹಾಗು ಮತ್ತೊಂದರಲ್ಲಿ ಅಶ್ವ    ಸೂರ್ಯ ನಿಗೆ 
ಚುಂಬಿಸುತ್ತಿರುವಂತೆ ಕಾಣುತ್ತಿದೆ