Friday, September 6, 2013

ಮೇಘದಲ್ಲಿ ಕಲೆ





              ಮೊನ್ನೆ ಸಂಜೆ ಬ್ಯೆಕ್ ತಗೊಂಡು ಸುಮಾರು ೪೦ ಕಿ ಮಿ ಸುತ್ತಾಡಿದೆ ............... ಒಂದು  ಛಾಯಾಚಿತ್ರ ಸಿಗಲಿಲ್ಲಾ . ತುಂಬಾ ಬೇಸರ ಆಯ್ತು . ಬ್ಯೆಕ್ ಪಕ್ಕಕ್ಕೆ ಹಾಕಿ ಸುಮ್ಮನೆ ತಲೆ ಎತ್ತಿ  ಆಕಾಶ ನೋಡಿದೆ .  ಆಕಾಶ ದಲ್ಲಿ ರಂಗಿನ ಮೆರವಣಿಗೆ  ತುಂಬಾ ಸುಂದರವಾಗಿ ಸಾಗಿತ್ತು .   ವಿಶೇಷ ಸಿಗಬಹುದೆಂದು  ಕುತೂಹಲದಿಂದ  ಕ್ಯಾಮರಾ ಹಿಡಿದು ಕುಳಿತೆ . ವಾ.. ವಾ............ ಅದ್ಬುತ ಛಾಯಾಚಿತ್ರ  ಪ್ರಕೃತಿ  ದಯಾ ಪಾಲಿಸಿತು.
          ೧. ಈ ಛಾಯಾ ಚಿತ್ರ  ಇಲಿ ಯನ್ನು ಬೆಕ್ಕು ಬೇಟೆ  ಅಡುತ್ತಿರುವಂತಿದೆ.
          ೨. ಈ ಛಾಯಾಚಿತ್ರ ಕಾಡು ವಾಸಿಯ ಮಹಿಳೆ  ಘೋರ ಸರ್ಪವನ್ನು ಹೆದುರುಸುವಂತೆ ಕಾಣುತ್ತಿದೆ. ಈ ಛಾಯಾಚಿತ್ರ ವಿಶೇಷ ಅಂದ್ರೆ  ಕ್ಯಾಮರಾ ಕ್ಲಿಕ್ ಮಾಡಿದಾಗ ಮಾತ್ರ  ಈ ದೃಶ್ಯ  ಕಾಣುತ್ತಿತ್ತು . ಬರಿ ಕಣ್ಣಿನಲಿ ನೋಡಿದಾಗ  ಚಿದ್ರ ಚಿದ್ರ .. ಮೆಘದಂತೆ ಕಾಣುತ್ತಿತ್ತು . ಇದು ನನಗೆ ಮರೆಯಾಲಾರದ ಆನುಭವ.        
           ೩. ಖ್ಯಾತ ನವ್ಯ ಕಲಾವಿದ ಬಿಡಿಸಿದಂತೆ ಇದೆ.......... ಈ ಛಾಯಾ ಚಿತ್ರ .

ಅಗ್ನಿ ಪರ್ವತ


ಈ ಮೇಘದ ಛಾಯಾ ಚಿತ್ರ  ಭೊಮಿ ಇಂದ ಸ್ಪೋಟ ಗೊಂಡ ಅಗ್ನಿ ಪರ್ವತ ದಂತೆ ಕಾಣುತ್ತಿದೆ

Sunday, September 1, 2013

ಅಮ್ಮ ನಿನ್ನ ತೋಳಿನಲ್ಲಿ


ಈ ಛಾಯಾಚಿತ್ರ ನಮ್ಮ ಬಾಲ್ಯವನ್ನ ನೆನಪು ಮಾಡಿಕೊಡುತ್ತೆ.  ಅಮ್ಮನ ಕ್ಯೆ ತುತ್ತು,ಅಮ್ಮ ಬಿಡಿಸಿಕೊಟ್ಟ ಕಡಲೇಕಾಯಿ,ರಾಗಿ ತೆನೆ,ಜೋಳದ ಕಾಳು .............. ಕೊಡುತ್ತಿದ್ದರೆ ಎಷ್ಟು ಕೊಟ್ಟಷ್ಟು  ಅವೆಲ್ಲಾ ಅಮೃತ. ಆದ್ರೆ ಈ ಸೌಭಾಗ್ಯ  ಹೆಚ್ಚಾಗಿ ಹಳ್ಳಿ ಮಕ್ಕಳಿಗೆ ಸಿಕ್ಕುವುದು.  ಪಟ್ಟಣದ ಮಕ್ಕಳಿಗೆ  ಕಡಿಮೆ ಎಂದರೆ ತಪ್ಪಿಲ್ಲಾ.  ಭೂ ತಾಯಿ ಜೊತೆ ಬಾಲ್ಯ ಕಳೆಯೋ ಯೋಗ ಹೆಚ್ಚಾಗಿ  ಹಳ್ಳಿ ಹೈಕಳು ಗಳಿಗೆ.

Saturday, August 31, 2013

ಜಾನಪದ



ನಮ್ಮ  ಕಡೆ ಸಾಂಸ್ಕೃತಿಕ ಹಬ್ಬಗಳು ಆದಾಗ ಅನೇಕ ಕಡೆ ಇಂದ  ಈ ಜನಪದ ಕಲಾವಿದರನ್ನ  ಆಮಂತ್ರಿಸಿ ಹಬ್ಬದ ಹಿರಿಮೆಯನ್ನು ಹೆಚ್ಚಿಸುತ್ತಾರೆ .

Wednesday, July 3, 2013

ಶಿಲ್ಪ ಕಲೆ





ವೀರ ಆಂಜನೇಯ ದೇವಸ್ತಾನ  ನೋಡುವುದಕ್ಕೆ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತದೆ.  ಹೊಸತನದಲ್ಲಿ ಪುರಾತನದ ಶಿಲ್ಪಕಲೆ ಮೂಡಿದೆ. ಈ ದೇವಸ್ತಾನ ಚಿಕ್ಕಬಳ್ಳಾಪುರ ---ಬೆಂಗಳೂರು  ರಾಷ್ಟ್ರೀಯ ಹೆದ್ದಾರಿಯಲ್ಲಿದೆ .ಚಿಕ್ಕಬಳ್ಳಾಪುರದಿಂದ ಕೇವಲ 2  ಕಿ ಮಿ  ಇದೆ . ಒಮ್ಮೆ  ನೋಡಿ  ಅದ್ಬುತವಾಗಿದೆ.ಹೊಸ ಚಿಗುರು ಹಳೆ ಬೇರು ನಂತಿದೆ

ಆಸರೆ...!

ಭಾರ ಹೆಚ್ಚಾಗಿರಬೇಕು.....   ಅದಕ್ಕೆ  ಕುದುರೆಗೆ ಬ್ಯೆಕ್ ಆಸರೆ...!

Sunday, June 23, 2013

ಜಿಲ್ಲಾ ಸಾ. ಸಮ್ಮೇಳನ





 ಶಿಡ್ಲಘಟ್ಟ ದಲ್ಲಿ  13-14  ಜುಲೈ 2 0 1 4  ರಂದು ಜಿಲ್ಲಾ ಸಾಹಿತ್ಯ ಸಮ್ಮೇಳನ  ನಡೆಯಿತು .  ಆ ಸಮ್ಮೇಳನದಲ್ಲಿ ನನ್ನ ಸಾಮ್ರಾಟ್ ಅಶೋಕ  ಕಾದಂಬರಿ  ಪರಿಚಯ ಮಾಡಿ ಬಿಡುಗಡೆಮಾಡಿದರು.ಛಾಯಾಚಿತ್ರದಲ್ಲಿ ಸಮ್ಮೇಳನದ ಅಧ್ಯೇಕ್ಷೆ ಗುಡಿಬಂಡೆ ಪೂರ್ಣಿಮ ರವರು, ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷರು ಪುಂಡಲಿಕ  ಹಾಲಂಬಿ, ನಾನು ಮತ್ತು ಇತರರು. ಹಾಗು ಸಮ್ಮೇಳನದ ಸಂತಸದ ಕೆಲವು ಛಾಯಾಚಿತ್ರ........................



Thursday, June 13, 2013

ಕಳಸ

      ಈ ಕಲ್ಲಿನ ಗುಡ್ಡ ನೋಡಗರ ಕಣ್ಣಿಗೆ  ಏರು ಜವ್ವನೆಯ ಎದೆ  ಕಳಸದಂತೆ  ಅಂದವಾಗಿ ಕಾಣಿಸುತ್ತಿದೆ

ಹುತ್ತ



 ಹೊಸೂರ್ ಗ್ರಾಮದಿಂದ   ಹಳ್ಳಿಪುರಕ್ಕೆ  ಸಾಗುವ  ರಸ್ತೆಯಲ್ಲಿ ಕಾಣುವ   ನನ್ನ ಎತ್ತರದ  ಹುತ್ತ  ನನ್ನ ಮನ ಸೆಳೆಯಿತು'

Thursday, May 30, 2013

ಬಿಡುಗಡೆ



                         6.5.2013  ರ ಬೆಳಗ್ಗೆ ನನ್ನ ಇತಿಹಾಸದ ಸಾಮ್ರಾಟ್  ಅಶೋಕ 
                                   ಕಾದಂಬರಿ ಬಿಡುಗಡೆಯ  ಕ್ಷಣ

Monday, April 15, 2013

ವಿರಹ



                        ವಸಂತನ ಆಗಮನಕ್ಕೆ ಕಾತರಿಸುತ್ತಿರುವ....... ಸಸ್ಯ  ಕನ್ಯೆ 

Wednesday, March 20, 2013

ಮೇಘದ ಬೆರಗು



ಈ ಮೇಘದ ಛಾಯಾ ಚಿತ್ರ ದಲ್ಲಿ  ಒಂದರಲ್ಲಿ ಹಾವು  ಬೇಟೆಯನ್ನು
ಕಬಳಿ ಸುತಿರುವಂತೆ ಕಾಣುತ್ತಿದೆ
ಹಾಗು ಮತ್ತೊಂದರಲ್ಲಿ ಅಶ್ವ    ಸೂರ್ಯ ನಿಗೆ 
ಚುಂಬಿಸುತ್ತಿರುವಂತೆ ಕಾಣುತ್ತಿದೆ

Sunday, March 10, 2013

ಹಳೇ ಜಮಾನ



               
       ಗರಡಿ ಮನೆ.

ಗರಡಿ ಮನೆ. ಈ ಪದ ಮತ್ತು  ಗರಡಿ ಮನೆ ಸಹ ಮರೆಯಗ್ತಾ ಇದೆ. ೨೫ ವರ್ಷದ ಹಿಂದೆ ಗರಡಿ ಮನೆ  ಅಂದ್ರೆ ನಮೆಗೆಲ್ಲ ಗೌರವ ಹಾಗು ಭಕ್ತಿ. ಅಲ್ಲಿ ಆಖಂಡ ಆಸಕ್ತಿ ಮತ್ತು ಸತತ ಏಕಗ್ರತೆ  ಇದ್ರೆ ಮಾತ್ರ  ಅಲ್ಲಿಗೆ  ಪ್ರವೇಶ.ಗರಡಿ ಮನೆ ಪ್ರವೇಶಕ್ಕೆ ಮುನ್ನ " ಹನುಮನ ಲಂಗೋಟಿ "ಹೊಲಿಸಿಕೊಂಡು  ಒಳಕ್ಕೆ ಹೆಜ್ಜೆ ಇಡಬೇಕು . ಆ ಲಂಗೋಟಿ ಕಟ್ಟುವುದು,  ಅಂಗ ಸಾಧನೆ ಮತ್ತು ಕುಸ್ತಿ ಕಲಿಸುವ ಗುರುಗಳು ನಮಗೆ  ದೇವರ ಸಮನ. ನಂತರ ಹಿರಿಯರು. ಅಂಗ ಸಾಧನೆಗೆ  ಮುಂಜಾನೆ  ೪ ಗಂಟೆಗೆ ಎದ್ದು  ದಂಡ,ಬಸಿಕೆ, ಡಂಲ್ ಕರಲ,ಭಾರ ಎತ್ತುವುದು ................... ಹೀಗೆ ತರಹೇವಾರಿ  ಕಸರತ್ತು  ಮಾಡುವುದು .  ಸುಮಾರು ತಿಂಗಳು ಅಥವಾ ವರ್ಷದ ಕಳೆದ ಮೇಲೆ ಮೈ ಗಟ್ಟಿ ಗೊಂಡು  ಗುಂಡಿಗೆ ಗಟ್ಟಿಯಾಗಿದ್ದರೆ ಮಾತ್ರ  ಕುಸ್ತಿಗೆ  ಇಳುಸುತ್ತಾರೆ . ಕುಸ್ತಿ ಮಾಡಲು  ಕೆಂಪಾದ ಮಣ್ಣು.  ಇದಕ್ಕೆ ಗರಡಿ ಭಾಷೆಯಲ್ಲಿ ಗೋಧ. ಎನ್ನುತ್ತಾರೆ. ಇಂತಹ ಗರಡಿ ಮನೆ  ಗೌರಿಬಿದನೂರು ಆಚಾರ್ಯ ಹೈ ಸ್ಕೂಲ್ ನ ಮೈದಾನ ಅಂಚಿನಲ್ಲಿ ವಿವೇಕಾನಂದ ವ್ಯಾಯಾಮ ಶಾಲೆ  ಹೆಸರು ನಿಂದ ಪ್ರಸಿದ್ದಿ ಹೊಂದಿತ್ತು .  ಇಲ್ಲಿ ಭಾರ ಎತ್ತುವ ಮತ್ತು ಕುಸ್ತಿ ಪಟುಗಳು ಸುಮಾರು ಹೆಸರು ಮಾಡಿದ್ದರು .ಇಂತಹ ಗರಡಿ ಮನೆಗೆ ನಾನು 1985 ರಲ್ಲಿ ಸೇರಿದೆ.ಅಲ್ಲಿ ಕಲಿತು ನಾನು ಕಾಲೇಜ್ ನಲ್ಲಿ 5 ವರ್ಷ ಭಾರ ಎತ್ತುವ ಸ್ಪರ್ಧೆ ಯಲ್ಲಿ ನಾನೇ ಮೊದಲಿಗನಾಗಿ ಪ್ರಶಸ್ತಿ ಪಡೆದೆ ಮತ್ತುಕುಸ್ತಿಸ್ಪರ್ಧೆಗೆ ರಾಜ್ಯ ಮಟ್ಟಕ್ಕೆಆಯ್ಕೆಯಾಗಿ ಕ್ರೀಡಾ ಪಂದ್ಯದಲ್ಲಿ ಗೆದ್ದೆ. ಆದ್ರೆ ನಮ್ಮ ಜಮಾನ ಗರಡಿ ಒರಟು ಈಗಿನಂತೆ 4 ಮತ್ತು 6ಪ್ಯಾಕ್ ಇರಲಿಲ್ಲಾ.    ಯಾಕೋ ಹಿಂದಿನದು ನೆನಪು ಮಾಡಿಕೊಳ್ಳಬೇಕೆನಿಸಿತು........

Wednesday, March 6, 2013

ಕತ್ತೆ

ಇತ್ತೀಚೆಗೆ ಕತ್ತೆಯ ಬಳಕೆ ಕಡಿಮೆ ಆಗಿದೆ. ಆದರೆ ಕತ್ತೆಗೆ  ಸಾಕಷ್ಟು ಬೆಲೆ ಇದೆ.
ಕತ್ತೆಯ ಹಾಲು ಲೀಟರ್ ಗೆ  ಇನ್ನೂರು ರೂ ಮಾರುತ್ತಾರೆ . ಈ ಹಾಲು ರೋಗ ವಾಸಿ ಆಗುವುದಕ್ಕೆ ಬಳಸುತ್ತಾರೆ. ಈಗಲೂ ಕಾಶ್ಮೀರ  ಕಣಿವೆಗಳಲ್ಲಿ ಮದ್ದು ಗುಂಡು ಸಾಗಿಸುವುದಕ್ಕೆ ನಮ್ಮ ಸೇನಾಪಡೆ ಹೆಚ್ಚಾಗಿ ಬಳಸುವುದು ಈ ಕತ್ತೆಗಳನ್ನೇ .
ಈಗ ಮಾರುಕಟ್ಟೆಯಲ್ಲಿ ಕತ್ತೆಯ ಬೆಲೆ ಸುಮಾರು ಹತ್ತರಿಂದ ಇಪ್ಪತ್ತು ಸಾವಿರ.

Saturday, March 2, 2013

ಚಾಕೃತಿ





    ಕಲೆಗಳಲ್ಲಿ ಹಲವು . ಆದರೆ  ಸೂಕ್ಷ್ಮ ಕಲೆ ಕೆಲವು. ಅಂಥಹ ಚಾಕೃತಿ  ಕಲೆಯನ್ನು ಹತ್ತು ವರ್ಷದಿಂದ ಏಕಲವ್ಯನಂತೆ ಸ್ವಯಂ ಕಲಿಕೆ ಇಂದ ಶ್ರದ್ಧೆ ಇಂದ ಸಾಧಿಸಿದ ನಮ್ಮ ಹೆಮ್ಮೆಯ ಗೌರಿದನೂರು ತಾಲುಕಿನ ಮುದುಗೆರೆಯ ಗ್ರಾಮದ ನನ್ನ ಗೆಳೆಯ   ಎಂ ಜೆ ಸಚ್ಚಿನ್ ಸಂಘೆ . ಚಾಕೃತಿ ಕಲೆ ಅಂದ್ರೆ ಸಾಮಾನ್ಯ  ಸೀಮೆಸುಣ್ಣ ದಲ್ಲಿ ಸೂಜಿ ಸಹಾಯದಿಂದ  ಚಿತ್ರ ಕಲೆ ಯನ್ನು ಬಿಡಿಸಿವುದು . ಇದುವುರವೆಗೆ ಸುಮಾರು ೬೦ ಕಲಾಕೃತಿ ಬಿಡಿಸಿದ್ದಾರೆ. ಇವರ ಕಲೆ ಹಲವು ಕಡೆ  ಯಶಸ್ವಿ ಯಾಗಿ ಪ್ರದರ್ಶನ ವಾಗಿದೆ. ಅವರ ಹೆಚ್ಚಿನ ಕಲಾಕೃತಿ
ನೋಡಲು ಇಲ್ಲಿ  www.facebook.com/SachinSangheChalkArt ಹಾಗೂ www.chalkruthi.blogspot.com
ಕ್ಲಿಕ್  ಮಾಡಿ . 

Sunday, February 24, 2013

ಶ್ರೀ ರಂಗನಾಥ ಬೆಟ್ಟ





       

  ಶ್ರೀ ರಂಗನಾಥ ಬೆಟ್ಟ. ಇದು ಗೌರಿಬಿದನೂರ್ ಗ್ರಾಮದ ಚಿಲೇನಹಳ್ಳಿಯಾ  ಬುಡದಲ್ಲಿ ಇದೆ.
ನೆಲಮಟ್ಟದಿಂದ ಸುಮಾ
ರು ಸಾವಿರ ಆಡಿ ಎತ್ತರ ಇರಬಹುದು. ಬೆಟ್ಟದ ನೆತ್ತಿಯಲ್ಲಿ ರಂಗಂಥ ಸ್ವಾಮಿ ಯ  ಪುರಾತನ ವಿಗ್ರಹ ಇದೆ. ನನಗೆ  ಆಶ್ಚರ್ಯ ಅಂದ್ರೆ ಪ್ರತಿಯೊಂದು ಬೆಟ್ಟಕ್ಕೆ ತನ್ನದೇ ಆದ ಹೆಜ್ಜೆ,ಸೊಗಸು,ಸೊಬಗು,ಸೊಗಡು ......ತುಂಬಿ ಕೊಂಡಿರುತ್ತದೆ.  ಈ ಬೆಟ್ಟದ  ವಿಶೇಷ  ಇದೆ ಅಗಿದೆ. ಬೆಟ್ಟ ನೆತ್ತಿಯಲ್ಲಿ ಹಕ್ಕಿಯ ಕಣ್ಣಾಡಿಸಿದರೆ ಈ ಪರಿಸರ ಸ್ವರ್ಗ ದಂತೆ ಕಾಣುತ್ತದೆ. ಮಾರ್ಗ ಮಂಚೇನ ಹಳ್ಳಿ ---ಹಳೇಹಳ್ಳಿ,ಚಿಲೇನಹಳ್ಳಿಅಂತರ  ಗೌರಿಬಿದನೂರ್ ನಿಂದ ಇಪ್ಪತ್ತು km.