ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Saturday, August 31, 2013
Wednesday, July 3, 2013
Sunday, June 23, 2013
ಜಿಲ್ಲಾ ಸಾ. ಸಮ್ಮೇಳನ
Thursday, May 30, 2013
Monday, April 15, 2013
Thursday, March 21, 2013
Wednesday, March 20, 2013
Sunday, March 10, 2013
ಹಳೇ ಜಮಾನ
ಗರಡಿ ಮನೆ.
ಗರಡಿ ಮನೆ. ಈ ಪದ ಮತ್ತು ಗರಡಿ ಮನೆ ಸಹ ಮರೆಯಗ್ತಾ ಇದೆ. ೨೫ ವರ್ಷದ ಹಿಂದೆ ಗರಡಿ ಮನೆ ಅಂದ್ರೆ ನಮೆಗೆಲ್ಲ ಗೌರವ ಹಾಗು ಭಕ್ತಿ. ಅಲ್ಲಿ ಆಖಂಡ ಆಸಕ್ತಿ ಮತ್ತು ಸತತ ಏಕಗ್ರತೆ ಇದ್ರೆ ಮಾತ್ರ ಅಲ್ಲಿಗೆ ಪ್ರವೇಶ.ಗರಡಿ ಮನೆ ಪ್ರವೇಶಕ್ಕೆ ಮುನ್ನ " ಹನುಮನ ಲಂಗೋಟಿ "ಹೊಲಿಸಿಕೊಂಡು ಒಳಕ್ಕೆ ಹೆಜ್ಜೆ ಇಡಬೇಕು . ಆ ಲಂಗೋಟಿ ಕಟ್ಟುವುದು, ಅಂಗ ಸಾಧನೆ ಮತ್ತು ಕುಸ್ತಿ ಕಲಿಸುವ ಗುರುಗಳು ನಮಗೆ ದೇವರ ಸಮನ. ನಂತರ ಹಿರಿಯರು. ಅಂಗ ಸಾಧನೆಗೆ ಮುಂಜಾನೆ ೪ ಗಂಟೆಗೆ ಎದ್ದು ದಂಡ,ಬಸಿಕೆ, ಡಂಲ್ ಕರಲ,ಭಾರ ಎತ್ತುವುದು ................... ಹೀಗೆ ತರಹೇವಾರಿ ಕಸರತ್ತು ಮಾಡುವುದು . ಸುಮಾರು ತಿಂಗಳು ಅಥವಾ ವರ್ಷದ ಕಳೆದ ಮೇಲೆ ಮೈ ಗಟ್ಟಿ ಗೊಂಡು ಗುಂಡಿಗೆ ಗಟ್ಟಿಯಾಗಿದ್ದರೆ ಮಾತ್ರ ಕುಸ್ತಿಗೆ ಇಳುಸುತ್ತಾರೆ . ಕುಸ್ತಿ ಮಾಡಲು ಕೆಂಪಾದ ಮಣ್ಣು. ಇದಕ್ಕೆ ಗರಡಿ ಭಾಷೆಯಲ್ಲಿ ಗೋಧ. ಎನ್ನುತ್ತಾರೆ. ಇಂತಹ ಗರಡಿ ಮನೆ ಗೌರಿಬಿದನೂರು ಆಚಾರ್ಯ ಹೈ ಸ್ಕೂಲ್ ನ ಮೈದಾನ ಅಂಚಿನಲ್ಲಿ ವಿವೇಕಾನಂದ ವ್ಯಾಯಾಮ ಶಾಲೆ ಹೆಸರು ನಿಂದ ಪ್ರಸಿದ್ದಿ ಹೊಂದಿತ್ತು . ಇಲ್ಲಿ ಭಾರ ಎತ್ತುವ ಮತ್ತು ಕುಸ್ತಿ ಪಟುಗಳು ಸುಮಾರು ಹೆಸರು ಮಾಡಿದ್ದರು .ಇಂತಹ ಗರಡಿ ಮನೆಗೆ ನಾನು 1985 ರಲ್ಲಿ ಸೇರಿದೆ.ಅಲ್ಲಿ ಕಲಿತು ನಾನು ಕಾಲೇಜ್ ನಲ್ಲಿ 5 ವರ್ಷ ಭಾರ ಎತ್ತುವ ಸ್ಪರ್ಧೆ ಯಲ್ಲಿ ನಾನೇ ಮೊದಲಿಗನಾಗಿ ಪ್ರಶಸ್ತಿ ಪಡೆದೆ ಮತ್ತುಕುಸ್ತಿಸ್ಪರ್ಧೆಗೆ ರಾಜ್ಯ ಮಟ್ಟಕ್ಕೆಆಯ್ಕೆಯಾಗಿ ಕ್ರೀಡಾ ಪಂದ್ಯದಲ್ಲಿ ಗೆದ್ದೆ. ಆದ್ರೆ ನಮ್ಮ ಜಮಾನ ಗರಡಿ ಒರಟು ಈಗಿನಂತೆ 4 ಮತ್ತು 6ಪ್ಯಾಕ್ ಇರಲಿಲ್ಲಾ. ಯಾಕೋ ಹಿಂದಿನದು ನೆನಪು ಮಾಡಿಕೊಳ್ಳಬೇಕೆನಿಸಿತು.......
Wednesday, March 6, 2013
ಕತ್ತೆ
ಇತ್ತೀಚೆಗೆ ಕತ್ತೆಯ ಬಳಕೆ ಕಡಿಮೆ ಆಗಿದೆ. ಆದರೆ ಕತ್ತೆಗೆ ಸಾಕಷ್ಟು ಬೆಲೆ ಇದೆ.
ಕತ್ತೆಯ ಹಾಲು ಲೀಟರ್ ಗೆ ಇನ್ನೂರು ರೂ ಮಾರುತ್ತಾರೆ . ಈ ಹಾಲು ರೋಗ ವಾಸಿ ಆಗುವುದಕ್ಕೆ ಬಳಸುತ್ತಾರೆ. ಈಗಲೂ ಕಾಶ್ಮೀರ ಕಣಿವೆಗಳಲ್ಲಿ ಮದ್ದು ಗುಂಡು ಸಾಗಿಸುವುದಕ್ಕೆ ನಮ್ಮ ಸೇನಾಪಡೆ ಹೆಚ್ಚಾಗಿ ಬಳಸುವುದು ಈ ಕತ್ತೆಗಳನ್ನೇ . ಈಗ ಮಾರುಕಟ್ಟೆಯಲ್ಲಿ ಕತ್ತೆಯ ಬೆಲೆ ಸುಮಾರು ಹತ್ತರಿಂದ ಇಪ್ಪತ್ತು ಸಾವಿರ.
ಕತ್ತೆಯ ಹಾಲು ಲೀಟರ್ ಗೆ ಇನ್ನೂರು ರೂ ಮಾರುತ್ತಾರೆ . ಈ ಹಾಲು ರೋಗ ವಾಸಿ ಆಗುವುದಕ್ಕೆ ಬಳಸುತ್ತಾರೆ. ಈಗಲೂ ಕಾಶ್ಮೀರ ಕಣಿವೆಗಳಲ್ಲಿ ಮದ್ದು ಗುಂಡು ಸಾಗಿಸುವುದಕ್ಕೆ ನಮ್ಮ ಸೇನಾಪಡೆ ಹೆಚ್ಚಾಗಿ ಬಳಸುವುದು ಈ ಕತ್ತೆಗಳನ್ನೇ . ಈಗ ಮಾರುಕಟ್ಟೆಯಲ್ಲಿ ಕತ್ತೆಯ ಬೆಲೆ ಸುಮಾರು ಹತ್ತರಿಂದ ಇಪ್ಪತ್ತು ಸಾವಿರ.
Saturday, March 2, 2013
ಚಾಕೃತಿ
ಕಲೆಗಳಲ್ಲಿ ಹಲವು . ಆದರೆ ಸೂಕ್ಷ್ಮ ಕಲೆ ಕೆಲವು. ಅಂಥಹ ಚಾಕೃತಿ ಕಲೆಯನ್ನು ಹತ್ತು ವರ್ಷದಿಂದ ಏಕಲವ್ಯನಂತೆ ಸ್ವಯಂ ಕಲಿಕೆ ಇಂದ ಶ್ರದ್ಧೆ ಇಂದ ಸಾಧಿಸಿದ ನಮ್ಮ ಹೆಮ್ಮೆಯ ಗೌರಿದನೂರು ತಾಲುಕಿನ ಮುದುಗೆರೆಯ ಗ್ರಾಮದ ನನ್ನ ಗೆಳೆಯ ಎಂ ಜೆ ಸಚ್ಚಿನ್ ಸಂಘೆ . ಚಾಕೃತಿ ಕಲೆ ಅಂದ್ರೆ ಸಾಮಾನ್ಯ ಸೀಮೆಸುಣ್ಣ ದಲ್ಲಿ ಸೂಜಿ ಸಹಾಯದಿಂದ ಚಿತ್ರ ಕಲೆ ಯನ್ನು ಬಿಡಿಸಿವುದು . ಇದುವುರವೆಗೆ ಸುಮಾರು ೬೦ ಕಲಾಕೃತಿ ಬಿಡಿಸಿದ್ದಾರೆ. ಇವರ ಕಲೆ ಹಲವು ಕಡೆ ಯಶಸ್ವಿ ಯಾಗಿ ಪ್ರದರ್ಶನ ವಾಗಿದೆ. ಅವರ ಹೆಚ್ಚಿನ ಕಲಾಕೃತಿ
ನೋಡಲು ಇಲ್ಲಿ www.facebook.
Sunday, February 24, 2013
ಶ್ರೀ ರಂಗನಾಥ ಬೆಟ್ಟ
ಶ್ರೀ ರಂಗನಾಥ ಬೆಟ್ಟ. ಇದು ಗೌರಿಬಿದನೂರ್ ಗ್ರಾಮದ ಚಿಲೇನಹಳ್ಳಿಯಾ ಬುಡದಲ್ಲಿ ಇದೆ.
ನೆಲಮಟ್ಟದಿಂದ ಸುಮಾರು ಸಾವಿರ ಆಡಿ ಎತ್ತರ ಇರಬಹುದು. ಬೆಟ್ಟದ ನೆತ್ತಿಯಲ್ಲಿ ರಂಗಂಥ ಸ್ವಾಮಿ ಯ ಪುರಾತನ ವಿಗ್ರಹ ಇದೆ. ನನಗೆ ಆಶ್ಚರ್ಯ ಅಂದ್ರೆ ಪ್ರತಿಯೊಂದು ಬೆಟ್ಟಕ್ಕೆ ತನ್ನದೇ ಆದ ಹೆಜ್ಜೆ,ಸೊಗಸು,ಸೊಬಗು,ಸೊಗಡು ......ತುಂಬಿ ಕೊಂಡಿರುತ್ತದೆ. ಈ ಬೆಟ್ಟದ ವಿಶೇಷ ಇದೆ ಅಗಿದೆ. ಬೆಟ್ಟ ನೆತ್ತಿಯಲ್ಲಿ ಹಕ್ಕಿಯ ಕಣ್ಣಾಡಿಸಿದರೆ ಈ ಪರಿಸರ ಸ್ವರ್ಗ ದಂತೆ ಕಾಣುತ್ತದೆ. ಮಾರ್ಗ ಮಂಚೇನ ಹಳ್ಳಿ ---ಹಳೇಹಳ್ಳಿ,ಚಿಲೇನಹಳ್ಳಿಅಂತರ ಗೌರಿಬಿದನೂರ್ ನಿಂದ ಇಪ್ಪತ್ತು km.
Saturday, February 23, 2013
೪ನೇ ಸಮ್ಮೇಳನ
ಗೌರಿಬಿದನೂರ್ ೪ನೇ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಸಿದ್ದ ಪುಣ್ಯ ಸ್ಥಳ ವಿದುರಾಶ್ವತ್ಥ ದಲ್ಲಿ ನೆಡೆಯಿತು .
ಸಮ್ಮೇಳನ ಅಧ್ಯಕ್ಷರು ಡಿ .ಎಸ್ . ಹನುಮಂತರಾಯ ವಹಿಸಿದ್ದರು. ಕಾರ್ಯ ಕ್ರಮದಲ್ಲಿ ನಾನು ಭಾಗವಹಿಸಿದ್ದೆ. ಕವಿಗೋಷ್ಠಿಯಲ್ಲಿ ನಾನು ಮಕ್ಕಳ ಕವನ ''ಉಪ್ಪಿಟ್ಟು '' ವಾಚಿಸಿದೆ.
ಉಪ್ಪಿಟ್ಟು ಉಪ್ಪಿಟ್ಟು
ಕಾಂಕ್ರಿಟ್ ಕಾಂಕ್ರಿಟ್
ಗೋಧಿ ಕಾಳಿನ ಉಪ್ಪಿಟ್ಟು
ಅಕ್ಕಿ ನುಚ್ಚಿನ ಉಪ್ಪಿಟ್ಟು
ರಾಗಿ ರವೆಯ ಉಪ್ಪಿಟ್ಟು
ಜೋಳ ತರಿಯ ಉಪ್ಪಿಟ್ಟು
ಉಪ್ಪಿಟ್ಟು ಉಪ್ಪಿಟ್ಟು
ಕಾಂಕ್ರಿಟ್ ಕಾಂಕ್ರಿಟ್
ರವೆಯನು ಹುರಿದು
ಮಸಾಲೆ ತರಿದು
ಕೊಬ್ಬರಿ ತುರಿದು
ಒಗ್ಗರಣೆ ಸುರಿದು
ಉಪ್ಪಿಟ್ಟು ಉಪ್ಪಿಟ್ಟು
ಕಾಂಕ್ರಿಟ್ ಕಾಂಕ್ರಿಟ್
ಬಡವರ ಹಸಿವುಗೆ ಒಬ್ಬಟ್ಟು
ಆರೋಗ್ಯಕೆ ಉತ್ತಮ ಪೇಟೆಂಟ್
ಮದುಮೇಹಿಗೆ ಪರ್ಮೆನೆಂಟ್
ಡಾ.ಹೆಚ್.ನರಸಿಂಹಯ್ಯರವರ ರೂಂ ಮೆಟ್
ಉಪ್ಪಿಟ್ಟು ಉಪ್ಪಿಟ್ಟು
ಕಾಂಕ್ರಿಟ್ ಕಾಂಕ್ರಿಟ್
Thursday, February 21, 2013
Monday, February 18, 2013
Monday, February 4, 2013
Subscribe to:
Posts (Atom)




