ನನ್ನ ಕ್ಯಾಮರ ಕಣ್ಣಿಗೆ ಕಂಡಿದ್ದು ಇಷ್ಟು.... ನನ್ನ ಕಣ್ಣಿಗೆ ಕಂಡಿದ್ದು ಸಾಗರದಷ್ಟು ........9902858985
Monday, December 27, 2010
Sunday, December 26, 2010
ಚುಟುಕು ಜೇನು ಗುಟುಕು
ಕವನ
ಕವನ ಅಂದರೆ
ಕವಿಯ ಅಂತರಂಗದ ...ಗಾನ
ಜನನ
ಮಳೆ ಬಿಸಿಲಿನ ಮಿಲನ
ಕಾಮನ ಬಿಲ್ಲಿನ ಜನನ
ದೇವರು
ದೇವರೆಂದರೆ ತುರಿಕೆ
ಕೆರೆದರೆ ಆನಂದ
ಅರಿತರೆ ಒಬ್ಬನೇ....
ಗೋವಿಂದ
ಬೆಳ್ಳಕ್ಕಿ ಸಾಲು
ಬೆಳ್ಳ೦
ಬೆಳ್ಳಗ್ಗೆ
ಬೆಳ್ಳಗ್ಗೆ
ಬೆಡಗಿಯ ಕೊರಳಲಿ
ಬೆಳಗುವ
ಬೆಳ್ಳಿಯ ಸರ
ಅರಿವು
ಅ ರಿ ವು
ಹಿ ರಿ ದಲ್ಲಾ
ಅ ರಿ ವಿನ
ಇ ರಿ ವು
ಹಿ ರಿ ದು
ಕವಿತೆ
ಕ ವಿತೆ ಅಂದರೆ
ಕ ವಿಯ
ಕ ಲ್ಪನೆ
ಕ ನಸು
ಕ ಸದ
ಕ ೦ತೆ
ಚೆಂದ
ಇನಿಯಳ ಉಬ್ಬು ತಗ್ಗುಗಳಿಗೆ ಸೀರೆ
ಚೆಂದ
ಇಳೆಯ ಉಬ್ಬು ತಗ್ಗುಗಳಿಗೆ ಹಸಿರೇ
ಚೆಂದ
ಮಹಾತ್ಮ
ಸ್ವಾತಿ ಮಳೆಯ ಕೋಟಿ ಹನಿಗಳು
ಮುತ್ತಾಗಲ್ಲಾ
ಭೂ ತಾಯಿ ಹಡೆದ ಮಕ್ಕಳೆಲ್ಲಾ
ಮಹಾತ್ಮರರಾಗೋಲ್ಲಾ
ಮೌನ
ಮೌನ ಅಂದರೆ
ಧ್ಯಾನದಾಳದ
ಶ್ವಾಸ ಗಾನ
ಸಂತೋಷ
ಕನಸಲಿ ಮೊಳೆತ ಮೊಗ್ಗುಗಳು
ಜೀವನದಲಿ ಅರಿಳಿದಾಗ
ಆಗುವ ಅನುಭವ
ನಿರಾಸೆ
ಕನಸಲಿ ಅರಳಿ ನಗುವ ಹೂ ಗಳು
ಜೀವನದ ಬೇಗುದಿಗೆ ಬಾಡಿ ಬೆಂದಾಗ
ಆಗುವ ಅನುಭವ
ಕವನಗಳು
ಚಿತ್ತಾರ
ಬ ಯಲು ಸೀಮೆಯ
ಬ ಲಾಡ್ಯ ತುಡುಗ
ಬ ರಿವೆಂದು ಈ
ಬ ರಿವೆಂದು ಈ
ಬ ಡವಿಯ ಹೃದಯದಿ
ಬ ಣ್ಣ ಬಣ್ಣದ ಚಿತ್ತಾರ
ಬ ರೆಯಲು
Sunday, December 19, 2010
Friday, December 17, 2010
Thursday, December 9, 2010
ಬುಗುರಿ ಆಟ
ಚಿತ್ರದಲ್ಲಿ ಕಾಣುವಂತೆ ಮೊದಲು ಹುಡಗರು ಬುಗುರಿಯನ್ನು ದಾರದಿಂದ ಹೊಸೆದ ಚಾಟಿಯನ್ನು ಸುತ್ತಿ ಆಟದಲ್ಲಿ ಇರುವ ಹುಡುಗುರು ಬಂಗರವನ್ನು ಸ್ಪರ್ಶಿಸಿ ತಕ್ಷಣ ನೆಲಕ್ಕೆ ಹಾಕಿ ನಂತರ ಚಾಟಿಯ ಸಹಾಯದಿಂದ ಯಾರು ಕ್ಯಲ್ಲಿ ಹಿಡಿಯುತ್ತಾರು......... ಅವರು ಆಟ ಆಡಲು ಸಿದ್ದವಾಗುತ್ತಾರೆ. ಅಂತಿಮವ ಬುಗುರಿಯನ್ನು ನೆಲದಲ್ಲಿ ಇಡುತ್ತಾನೆ. ಮಿಕ್ಕವರು ನೆಲದಲ್ಲಿ ಬಿದ್ದ ಬುಗುರಿಗೆ ಗುರಿ ಇಟ್ಟು ಹೋಡೆದು ಗುನ್ನ (ತೂತು) ಮಾಡುತ್ತಾರೆ.
Tuesday, December 7, 2010
Thursday, December 2, 2010
Subscribe to:
Posts (Atom)