Wednesday, June 22, 2016

ಅಪ್ಪನ ಸ್ಮರಿಸುತ್ತಾ


ಅಪ್ಪನ ಮನಸ್ಸಿನ ಅರಬ್ಬೀ ಸಾಗರದ ತಳದಲ್ಲಿ ಮುತ್ತು,ರತ್ನ,ವಜ್ರ,ಹವಳ,ಪಚ್ಚೆ ..... ಅನರ್ಘ್ಯ ಅಪರೂಪದ ಸಂಪತ್ತಿನ ಶಿಖರಗಳೇ ಅಡಗಿವೆ. ಅಪ್ಪನ್ನಾ ಕೆಲವರು ಬಾಲ್ಯದಲ್ಲೇ ಅರ್ಥ ಮಾಡಿಕೊಳ್ಳುತ್ತಾರೆ . ಹಲವಾರು ಅವರು ಅಪ್ಪ ಆದ ನಂತ್ರ ಅರ್ಥ ಮಾಡಿಕೊಳ್ಳುತ್ತಾರೆ. ಇನ್ನಾ ಕೆಲವರು ಅವರು ಅಪ್ಪ ಆದ್ರೂ ,ಆಪ್ಪ ಕಣ್ಮರೆಯಾದರು .. ಅರ್ಥ ಮಾಡಿಕೊಳ್ಳಲ್ಲಾ ಅದು ಅವರ ಕರ್ಮ . ನಾನು ಅಪ್ಪನ ಪ್ರೀತಿ,ಪ್ರೇಮ,ಕೋಪ,ಹುಸಿ ಜಗಳ ..... ಈ ಜಗದ ಗಾಳಿಯಷ್ಟು ಸವಿದು ...... "ಪಿತೃದೇವುಭವ " ಕಥೆ ಬರೆದು ನನ್ನ ಕಥಾ ಸಂಕಲನಕ್ಕೆ ಸೇರ್ಪಡಿಸಿ ಗೌರವ ಸೂಚಿಸಿದ್ದೇನೆ ಮತ್ತು ಅಪ್ಪನ ಹೆಸರನ್ನಾ ನನ್ನ ಮಗನಿಗೆ ನಾಮಕರಣ ಮಾಡಿ ನನ್ನ ಉಸಿರು ಇರುವರೆಗೆ ಉಚ್ಚಾರ ಮಾಡಲಿದ್ದೇನೆ .


ಅಪ್ಪ ಅಂದರೆ ಜನ್ಮ ಪ್ರಾಸಿದವ
ಅಪ್ಪನ ಹೆಗಲು ಪ್ರೀತಿ ಅಂಬಾರಿ
ಅಪ್ಪನ ಜೊತೆ ಹೆಜ್ಜೆ ಆತ್ಮವಿಶ್ವಾಸದ ಪ್ರತೀಕ
ಅಪ್ಪನ ಪ್ರೀತಿ ಸಾಗರದೊಳಗಿನ ಲಕ್ಷ್ಮಿ ಸಂಪತ್ತು
ಅಪ್ಪನ ಪ್ರೇಮ್ ಶ್ರೀಗಂಧಕ್ಕೆ ಗಾಳಿ ಉಜ್ಜಿದಂತೆ
ಅಪ್ಪನಿದ್ದಾನೆಂಬ ನಂಬಿಕೆ ದಿಗಂತ ಅಂಚಿನವರೆಗೆ
ಅಪ್ಪನ ಜವಾಬ್ದಾರಿ ಮನೆ ತೊಲೆ ಯಂತೆ
ಅಪ್ಪನ ಬೆಂಬಲ ಸಿಕ್ಕರೆ ಸಹ್ಯಾದ್ರಿಯ ಸಾಲಿನಂತೆ 



ಡಿ.ಎ. ರಾಘವೇಂದ್ರ ರಾವ್