Thursday, November 29, 2012

ಬಲೆ

               ಅವರೇ ಬೇಳೆ  ಯಷ್ಟು  ಜೇಡ ತನ್ನ ಆಹಾರದ  ಬೇಟೆಗಾಗಿ ಹಣೆದ ಸುಂದರ ಬಲೆ

ಪಯಣ


              ಹಳೇ  ಬೇರು  ಹೊಸ ಚಿಗುರು ಮುಸುಕು ಮುಸುಕು ಮುಂಜಾನೆಯ ಗಾಳಿ ವಿಹಾರ 

Saturday, November 17, 2012

ಭೀಮೇಶ್ವರ ಬೆಟ್ಟ



ಈ ಭೀಮೇಶ್ವರ ಬೆಟ್ಟ ಸುಮಾರು  6 ಬಾರಿ ಹತ್ತಿದ್ದಿನಿ.  ಆದ್ರೆ ಈ ಬಾರಿ ನನ್ನ ನೆಚ್ಚಿನ ಗೆಳಯ  ಕ್ಯಾಮರ ಜೊತೆ ಸೇರಿ ಹಾಗು ನನ್ನ ಸಂಗಡಿಗರೊಂದಿಗೆ ಹತ್ತಿದೆ.  ಬೆಟ್ಟದ ನೆತ್ತಿಯಲ್ಲಿ ನಿಂತು ಹಕ್ಕಿ ನೋಟಹರಿಸಿದಾಗ ಕಾಣುವನೋಟ ಸ್ವರ್ಗಕ್ಕೆ ಎರಡೇ  ಅಂಗುಲ. ಆ ಪ್ರಕೃತಿ  ಸೊಗಸು ನಾ ನೋಡಿದಕ್ಕೆನನ್ನ ಕಣ್ಣು ಧನ್ಯ. ಈ ಬೆಟ್ಟದ ವಿಶೇಷ ಅಂದ್ರೆ ಬೆಟ್ಟದ ಮೇಲೆ ಕಲ್ಲಿನ ದೀಪಾ ಸ್ತಂಭ ಇದೆ. ಇದಕ್ಕೆ ವರ್ಷಕ್ಕೆ ಎರಡು ಬಾರಿ ರಾತ್ರಿ ಎಣ್ಣೆ ದೀಪ ಹಚ್ಚಿತ್ತಾರೆ ಅದು ಮುಂಜಾನೆ ತನಕ ಬೆಳಗುತ್ತೆ. ಸುತ್ತಾ  ನೋಡಿದಾಗ ನಮ್ಮ ಉತ್ತರ ಪಿನಾಕಿನಿ  ನದಿಯ  ಹೆಜ್ಜೆಯ ಜಾಡು ಕಣ್ಣು ಹಾಯಿಸಿದಷ್ಟು ಕಾಣುತ್ತದೆ,ನನ್ನ ಕ್ಯಾಮರ ಕಣ್ಣಿಗೆಕಂಡದ್ದುಇಷ್ಟುಮಾತ್ರ.ಬೆಟ್ಟದ ಬುಡದಲ್ಲಿ   ಧ್ಯಾನಕ್ಕೆ ಕಲ್ಲಿನ ಗುಹೆ ಇದೆ.ಬೆಟ್ಟದ  ವಿಶೇಷ  ಎಂದರೆ ಮಹಾಭಾರತದ   ಸಮಯದಲ್ಲಿ  ಪಾಂಡವರು ಈ ಬೆಟ್ಟದಲ್ಲಿ ತುಸು ಹೊತ್ತು ಕಾಲ ಕಳೆದಿದ್ದರು ಎಂಬ ಪ್ರತೀತಿ ಇದೆ.

Sunday, November 11, 2012

ಸಸ್ಯ ಕಲೆ

                ಈ ಕಾಷ್ಠ ಭಂಗಿ ನೋಡುತ್ತಿದ್ದರೆ  ಸರ್ಪಗಳ ಮಿಲನದಂತೆ,ಪ್ರಾಣಿಯಂತೆ ....ಕಾಣುತ್ತದೆ