Monday, April 30, 2012

ಬದುಕು



                         ಛಾಯಾಚಿತ್ರದಲ್ಲಿ ಈ  ಹಿರಿಯನ ಚರ್ಯೆ ಗಮನಿಸಿ........ವೃತ್ತಿ ಶ್ರದ್ದೆ ಎದ್ದು ಕಾಣಿಸುತ್ತದೆ. ಹರಿದ ಚಪ್ಪಲಿಯನ್ನು  ಹೊಲೆದು ಸರಿ ಇದೆಯ......... ಎಂದು ಸೂಕ್ಷ್ಮವಾಗಿ ಗಮನಿಸುತ್ತಿದ್ದಾನೆ.

Monday, April 23, 2012

ಕುದುರೆ ಮಿಡತೆ


ಈ ನಿಸರ್ಗ ಜೀವಿಯ ವಿಜ್ಞಾನದ  ಹೆಸರು "ಪ್ರೇಯಿಂಗ್ ಮಾನ್ಟಿಸ್".  ಆದ್ರೆ  ನಮ್ಮ ಹಳ್ಳಿಯ
ಆಡು ಭಾಷೆಯಲ್ಲಿ  ನಮಸ್ಕಾರ ಕೀಟ,ಕುದುರೆ ಮಿಡುತೆ ಎಂದು ಕರೆಯುತ್ತಾರೆ. ಇದರ ವಿಶೇಷ ಅಂದ್ರೆ
ನಮಸ್ಕಾರ ಮಾಡುವಂತೆ  ಮತ್ತು  ಜಿದ್ದಿಗೆ ಬಿದ್ದು ಓದುವ ಕುದುರೆಯಂತೆ  ಕಾಣುತ್ತದೆ. ಈ ಜೀವಿಯನ್ನು
ಸಸ್ಯ ರಾಶಿಯಲ್ಲಿ  ಕಂಡು ಹಿಡಿಯುವುದು  ಕಷ್ಟ... ಏಕೆಂದರೆ  ಇದರ ಬಣ್ಣ  ಹಸಿರು ಬಣ್ಣದಿಂದ ಹೆಚ್ಚಾಗಿ
ಕಾಣುಬರುತ್ತದೆ. ಈ ಜೀವಿಯ ಸಂತನ ಕ್ರಿಯೆ  ಬಹಳ ವಿಶೇಷ ಮತ್ತು ವಿಚಿತ್ರ ವಾದುದು.ಹೇಗೆಂದರೆ
ಹೆಣ್ಣು  ಗಂಡನ್ನು ಮಿಲನದಲ್ಲಿ ಸಂಪೂರ್ಣ ಮೈ ಮರೆಸಿ  ರಸ ಕ್ಷಣದ ನಂತರ ಹೆಣ್ಣು ತಕ್ಷಣ ಗಂಡಿನ ಮೇಲೆರಗಿ
ಕತ್ತನ್ನು ಮುರಿದು ಸಾಯಿಸಿ  ತಿಂದು ಹಾಕುತ್ತದೆ. ಆದ್ರೆ ಕೆಲವು  ಬಾರಿ ಚಾಣಕ್ಷ ಗಂಡು ತಪ್ಪಿಸಿ ಕೊಳ್ಳುತ್ತವೆ.
ಈ ರೀತಿ ವಿಲಕ್ಷಣ ಜೀವನ ಕ್ರಿಯೆ  ಈ ಜೀವಿಯಲ್ಲಿ ಕಂಡು ಬರುತ್ತದೆ.

Thursday, April 5, 2012

ಮರಿ ದಾಸಯ್ಯ

                ಈ ಛಾಯಾ ಚಿತ್ರ ನೋಡುವುದಕ್ಕೆ  ತುಂಬಾ ಸುಂದರವಾಗಿದೆ.  ಆದ್ರೆ  ಎಲ್ಲೂ ಒಂದು ಕಡೆ ನೋವು. ಎಂದರೆ ಆಟ ಆಡಿ ಓದುಕೊಂಡು ಇರಬೇಕಾದ ಹುಡುಗು ವಯಸ್ಸಿನಲ್ಲಿ ಈ ಸಂಪ್ರದಾಯದ ಉಡುಪು ತೊಟ್ಟು ಪ್ರದರ್ಶನ(ಭಿಕ್ಷೆ)ಗೆ ಇಳಿದಾಗ ಛೇ... ಅನ್ನಿಸುತ್ತೆ.ಹಬ್ಬ ಹರಿ ದಿನಗಳಲ್ಲಿ  ಈ ಉಡುಪು ತೊಟ್ಟು  ಶಾಸ್ತ್ರಕ್ಕೆ ಮೂರು ಮನೆ ಸುತ್ತಿ ದರೆ  ಚೆನ್ನ.ಆದ್ರೆ ದಿನ ಪೂರ್ತಿ ಇದೆ ಆದ್ರೆ ಏನು ಚೆನ್ನಾಗಿರುತ್ತೆ  .......?