Sunday, March 25, 2012

ಮಾಕಳಿ ಬೆಟ್ಟ





      ನಮ್ಮ ತಾಲೂಕು ನಿಂದ  ಬೆಂಗಳೊರು ರಸ್ತೆಗೆ  ೫ ಕಿ.ಮಿ  ರಸ್ತೆಗೆ  ದಾಟಿದರೆ .....ಬಲಕ್ಕೆ  ಕಾಣುವ  ಬೆಟ್ಟಗಳ  ಸಾಲುಗಳು  ಕಣ್ಣಿಗೆ ಹಬ್ಬವನ್ನು  ಉಂಟು ಮಾಡುತ್ತದೆ.ಆ ಬೆಟ್ಟ ಏರಿದಾಗ  ಈ ಸುಂದರ ಮನ ಮೋಹಕ ದೃಶ್ಯ  ಕಾಣುತ್ತದೆ. ಈ  ರಸ್ತೆ ಯಲ್ಲಿ ಓಡಾಡಿದಾಗ ನನ್ನ ಮಗ ಈ ಬೆಟ್ಟ ಹತ್ತಬೇಕೆಂಬ ಒಂದೇ ಹಠ... ಸರಿ ಯಂದು  ಶಿವರಾತ್ರಿ  ಹಬ್ಬದ ದಿನ ಮುಂಜಾನೆ ೫.೪೫ ಕ್ಕೆ  ಬೆಟ್ಟದ  ಬುಡದಲ್ಲಿ  ಇದ್ದೆವು.ತುಸು ಬೆಳಕು ಹರಿದಾಗ ಹತ್ತುವುದಕ್ಕೆ  ಶುರು ಮಾಡಿದಾಗ  ಅದರ  ಮಜ ವೇ ಖುಷಿ ಕೊಡುವಂತದ್ದು.ಇದು  ಎರಡನೇ ಬಾರಿ ಈ  ಹತ್ತುತ್ತಿರುವುದು.

ಪಕ್ಷಿ ನೋಟ



         
          ಈ ಮಾಕಳಿ ಬೆಟ್ಟದ  ತಪ್ಪಲು  ಏರಿ ನಿಂತು  ಸೂರ್ಯ  ಉದಯ ನೋಡುತ್ತಿದ್ದಾಗ 
ಕ್ಷಣ ಕ್ಷಣ ಕ್ಕೂ  ಇಳೆ  ತನ್ನ  ರಂಗು  ಬದಲಾಯಿಸುತ್ತಿದೆ. ಎಷ್ಟೇ ಪ್ರಯತ್ನ  ಪಟ್ಟರು  ಕೆಲವು ಕೋನಗಳಿಂದ ಛಾಯಾಚಿತ್ರ ಗಳನ್ನೂ ತೆಗೆಯುವುದಕ್ಕೆ  ಆಗಲಿಲ್ಲ. ಮತ್ತು ಅತಿ ಸೂಕ್ಷ್ಮ ರಂಗುಗಳು ಛಾಯಾಚಿತ್ರದಲ್ಲಿ ಮೊಡಿಬರುತ್ತಿಲ್ಲಾ. ಆದರೆ ಪ್ರಸಿದ್ದ ಚಿತ್ರ ಕಲಾವಿದರು ಈ ಸುಂದರ ರಂಗು ರಂಗಿನ ಪ್ರಕೃತಿಯಾ ಚಿತ್ರ ಬಿಡಿಸಿದ್ದಾರೆ.ಆಗ  ನೋಡುತ್ತಿಗಾ..........ಇಷ್ಟು  ರಂಗು ಸಾಧ್ಯವೇ..?  ಎಂದು  ನನ್ನ ನಾನೇ ಪ್ರಶ್ನೆ  ಹಾಕಿ ಕೊಳ್ಳುತ್ತಿದ್ದೆ. ಈಗ  ಅದಕ್ಕೆಲ್ಲ  ಸಮರ್ಥ ಉತ್ತರ  ದೊರುಕುತ್ತಿದೆ.  ಈ ಜನ್ಮ ಸಾರ್ಥಕ  ಅನಿಸುತ್ತೆ.

ಹೀಗೊಂದು ಕ್ಷಣ


Monday, March 5, 2012

ಕಲ್ಲರಳಿ ಕಲೆಯಾಗಿ

                                                               ರಕ್ಕಸ ಮೀನಿನ ಬಾಯಿ  
                                                                     ಆಮೆಯಂತೆ 
ಪುರುಷನ ಜನನಾಂಗದಂತೆ
                         


                            ಪಕ್ಷಿನೋಟದಲ್ಲಿ ಉತ್ತರ ಪಿನಾಕಿನಿಯ ಹೆಜ್ಜೆಯ ಜಾಡು
                                                             ಪ್ರಾಣಿಗಳ ಮಿಲನ 
       
              ಗೌರಿಬಿದನೂರ್  ಸಕ್ಕರೆ ಕಾರ್ಖಾನೆ ಯಾ  ಹಿಂಭಾಗದಲ್ಲಿ  ಕಾಣುವ ಕಲ್ಲು  ಬೆಟ್ಟಗಳನ್ನು ಏರಿ...........
ಒಂದರ ನಂತರ ಒಂದು  ಬೆಟ್ಟಗಳ  ನೆತ್ತಿಯಲ್ಲಿ ಹೆಜ್ಜೆ   ಹಾಕುತ್ತ  ನಡೆದಾಗ  ಕಂಡ ಪ್ರಕೃತಿಯ ಸೌಂದರ್ಯ.

Sunday, March 4, 2012

ಗದ್ದೆ ಗೊರವ ಹಕ್ಕಿ

ನೀರಿನ ಪ್ರದೇಶದಲ್ಲಿ ಈ ಹಕ್ಕಿಗಳು ವಾಸಿಸುತ್ತವೆ . SANDDIPER ಗುಂಪಿನ ಹಕ್ಕಿಗಳನ್ನಾ  ಸ್ನೇಪೆಟ್ಸ್ (sneepets) ಎನ್ನುತ್ತಾರೆ .

ಕವಣೆ


         
         ಸೂರ್ಯ ಕಾಂತಿ,ಜೋಳ,ರಾಗಿ...............ಬೆಳೆಗಳು ಸಮೃದ್ದಿಯಾಗಿ ಬೆಳದು  ನಳನಲಿದಾಗ ಆದನ್ನು ಕಾಪಾಡುವುದೇ ನೇಗಿಲಯೋಗಿ ಗೆ ದೊಡ್ಡ ಶ್ರಮದಾಯಕ. ಹೇಗೆಂದರೆ ಪಕ್ಷಿಗಳಿಂದ  ಕಾಪಾಡುವುದು. ಹಿಂಡು ಹಿಂಡು ಹಕ್ಕಿಗಳು  ಬೆಳೆಗಳಿಗೆ  ದಾಳಿ ಇಟ್ಟಾಗ .....ಖಾಲಿ  ಡಬ್ಬ  ಹೊಡೆದು  ಶಬ್ದ  ಮಾಡಿ ಓಡಿಸುತ್ತಾರೆ. ಕೆಲವು ಬಾರಿ  ಈ ಶಬ್ದಕ್ಕೆ  ಈ  ಹಕ್ಕಿಗಳು  ಜಗ್ಗುವುದ್ದಿಲ್ಲ. ಆಗ ಅನಿವಾರ್ಯವಾಗಿ  ನೇಗಿಲಯೋಗಿ  " ಕವಣೆ " ಬಳಸುತ್ತಾನೆ. ಈ  ಕವಣೆ ಎರಡು ಕಡೆ ಕಾರವಾಗಿ ತಿರುಗಿಸುತ್ತಾ ಚಾವುಟಿಯ ಒಂದು ದಾರವನ್ನು ಬಿಟ್ಟಾಗ ಒಳಗಿದ್ದ ಕಲ್ಲು  ಹಕ್ಕಿಗಳ  ನಡುವೆ ಬೀಳುತ್ತದೆ. ಆಗ ಹಕ್ಕಿ ಹಾರಿ ಹೋಗುತ್ತದೆ. ಈ  ರೀತಿ ಒಬ್ಬನೇ  ೫-೬ ಎಕರೆ ಹೊಲವನ್ನು  ಕಾಯಬಹುದು.