Friday, February 24, 2012

ಅಲೆಮನೆ




                                           ಸವಿದರೆ ಬಿಸಿ ಬಿಸಿ  ಬೆಲ್ಲ
                 ನಲ್ಲೆಯ  ಗಲ್ಲದಷ್ಟೇ  ಸಿಹಿ ಎಲ್ಲಾ .!!!!  
          ಮೂವತ್ತು ವರ್ಷಗಳ ಹಿಂದೆ ಹಿಂತಿರುಗಿ  ನೋಡಿದಾಗ...........
ಗೌರಿಬಿದನೂರ್ ನ ಆಲೆಮನೆ ಯಾ  ವ್ಯೆಭವ  ಭಾರತ ದಲ್ಲೇ ಪ್ರಸಿದ್ದಿ. ಇಲ್ಲಿನ  ನೇಗಿಲ ಯೋಗಿಗಳು 
ಕಬ್ಬಿನ ಬೆಳೆಯನ್ನು ಭಾರತದಲ್ಲೇ  ಅತಿ ಹೆಚ್ಚಾಗಿ ಬೆಳೆಯುತ್ತಿದ್ದರು  ಮತ್ತು  ಒಂದು ಎಕರೆಗೆ ಸಾವಯವ ಗೊಬ್ಬರ ಬಳಸಿ  ಹೆಚ್ಚು ಇಳವರಿ ತೆಗಯುತ್ತಿದ್ದರು. ಅನೇಕ  ಕೃಷಿ ಪ್ರಶಶ್ತಿ  ಹೊಡುಕಿಕೊಂಡು ಬರುತ್ತಿತ್ತು.,ಈ  ತಾಲೂಕಿನ  " ನಾಮಗೊಂಡ್ಲು " ಕಬ್ಬಿನ ಜಲ್ಲೆಯಂತು  ಅಮೃತ ದಷ್ಟು  ರುಚಿ ಕಾರಣ ಈ ಮಣ್ಣಿನ ಗುಣ ವಿಶೇಷ ವಾದದು. ಈ  ಹಳ್ಳಿಯ  ಸುತ್ತಾ  ಹತ್ತು  ಕಿ.ಮಿ.  ತಯಾರಿಸಿದ ಬೆಲ್ಲ ವಂತೂ  ಇತರೆ  ಯಾವ ಬೆಲ್ಲಕ್ಕು  ಸರಿಸಾಟಿ  ಬರುವುದಿಲ್ಲ.ಅದಕ್ಕೆ  ಈ  ಸಮಯದಲ್ಲೂ  ನಾಮಗೊಂಡ್ಲು ಬೆಲ್ಲ ಅಂದ್ರೆ ಮುಗಿಬಿದ್ದು ಕೊಳ್ಳುತ್ತಾರೆ.  ಆಗಾ ತಾಲೂಕಿನಲ್ಲಿ  ಸಾವಿರಾರು  ಅಲೆಮನೆಗಳು  ಈಗ ದುರ್ಬಿನು ಹಾಕಿ ಹುಡುಕಿದರೂ  ಕಾಣುವುದು  ಕಷ್ಟ. ಈ ಛಾಯಾ ಚಿತ್ರ ನಾಮಗೊಂಡ್ಲು  ಪಕ್ಕದ ಹಳ್ಳಿಯ "ಬಾಲರೆಡ್ಡಿ ಹಳ್ಳಿ ".
          ಮೊಟ್ಟ ಮೊದಲ ಬಾರಿಗೆ ಕಬ್ಬನ್ನು ಗಾಣಕ್ಕೆ ಇಟ್ಟು..ಕಬ್ಬಿನ ಹಾಲನ್ನು  ಬಕೇಟು ಮೂಲಕ  ಹೂತ್ತು , ಎರಡನೇ ಛಾಯಾಚಿತ್ರ ದಲ್ಲಿ ತೋರಿಸಿದಂತೆ  ದೊಡ್ಡ ಕೊಪ್ಪರಿಕೆಗೆ ಸುರಿದು  ಚನ್ನಾಗಿ  ಕಾಯಸಿ  ಹದಕ್ಕೆ  ಬಂದ ಮೇಲೆ , ಕೆಳೆಗಿನ  ಕೊಪ್ಪಕರಿಗೆ  ಸುರಿದು ........ನಂತರ ಚೌಕಾರದ  ಗುಣಿಗೆ  ಸುರಿದು (ಮೂರನೆ ಚಿತ್ರ ನೋಡಿ)ಚನ್ನಾಗಿ  ಕಲಕಿ .........ನಂತರ  ಬಿಸಿ  ಆರಿದ ಮೇಲೆ 
ಸಣ್ಣ  ಉಂಡೆ  ಮಾಡಿದರೆ  ಅಪ್ಪಟ ಬೆಲ್ಲ  ಸಿದ್ದ. 




Tuesday, February 21, 2012

ಮುಸ್ಸಂಜೆಯ ಕ್ಷಣಗಳು





ಆವುಲಾ ಕೊಂಡ




ನಮ್ಮ ಊರಿಂದ ಕೇವಲ ಮೂವತ್ತು  ಕಿ.ಮಿ ದೊರದಲ್ಲಿರುವ  ಆವುಲಾ ಕೊಂಡ(ಬೆಟ್ಟ) ಸುಂದರವಾದ 
ಪ್ರಕೃತಿ ಇಂದ ಕೊಡಿದೆ.ಬೆಟ್ಟ ಗುಡ್ಡ ಸಸ್ಯ ರಾಶಿಯ ಸಾಗರವೇ ಇದೆ. ಬೆಟ್ಟದ ಮೇಲೆ " ಲಕ್ಷ್ಮಿ ಮತ್ತು 
ನರಸಿಂಹ  ಸ್ವಾಮಿ ಯಾ " ಪುರಾತನ ವಿಘ್ರಹ  ಇದೆ. ಒಮ್ಮೆ ನೋಡಿ ತಮ್ಮ ಕಣ್ಣನ್ನು  ತಣಿಸಿಕೊಳ್ಳಿ.