Tuesday, January 31, 2012

ಕಲ್ಲುಡಿ ಕೆರೆಯಲ್ಲಿ ಕಲವರ


             ಕಲ್ಲುಡಿ ಕೆರೆಯಲ್ಲಿ ನೀರು ಇಂಗುತ್ತ ಬಂದಿರುವುದರಿಂದ  ನಾನಾ ಪ್ರಭೇದದ ಕೊಕ್ಕರೆಗಳ ಹಿಂಡು ಹಿಂಡೆ.....ಕಾಣುತ್ತಿದೆ. ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತಿದೆ. 

Tuesday, January 17, 2012

ಬಲೆಯಲಿ ಸೊಗಸು

         ಚಿಕ್ಕ ಜಾಲಿ ಮುಳ್ಳಿನ ಗಿಡಕ್ಕೆ ಜೇಡ ಎಷ್ಟು ಸುಂದರವಾಗಿ  ಸೀರೆಯಂತೆ ಗೂಡುನ್ನು ಹಣೆದಿದೆ.ಸೂರ್ಯನ ಕಿರಣಗಳು  ಸೋಕಿದಾಗ ಎಷ್ಟು ಸೊಗಸಾಗಿ ಕಾಣುತ್ತಿದೆ. ನೋಡಿ.

ಹಚ್ಚೆ


                          ಹಚ್ಚೆ. ಇದಕ್ಕೆ ಶತ ಶತಮಾನಗಳ ಇತಿಹಾಸವಿದೆ.ಸಂಪ್ರದಾಯವಾಗಿ ಹಚ್ಚೆಗೆ ಗಿಡಮೂಲಿಕೆಗಳನ್ನು ಚೆನ್ನಾಗಿ ಅರೆದು ಅದರಿಂದ ರಸವನ್ನು  ಸಂಗ್ರಹಿಸಿ,ತಮಗೆ  ಬೇಕಾದ ಚಿತ್ರವನ್ನು ಮುದ್ರಿಸಿ, ನಂತರ ಗಿಡಮೊಲಿಕೆಯ ರಸವನ್ನು ಸೂಜಿ ಇಂದ  ನೆನೆಸಿಕೊಂಡು  ಚುಚ್ಚುತ್ತ.........ಚಿತ್ರವನ್ನು ಮುಗಿಸುತ್ತಾರೆ.ಈ ರೀತಿ ಚಿತ್ರಿಸಿದ  ಹಚ್ಚೆ ಮಾನವನ ಉಸಿರಿನ ತನಕ  ಜೊತೆಯಲ್ಲಿ  ಇರುತ್ತದೆ. ಈ ಹಚ್ಚೆಯನ್ನು ಸ್ನೇಹ,ಪ್ರೀತಿ,ಪ್ರೇಮ...ನೆನಪಿಗೆ  ಚಿತ್ರಿಸಿ ಕೊಳ್ಳುತ್ತಾರೆ.  ಈಗ  ಅಧುನಿಕ  ಕಾಲದ ಹಚ್ಚೆಗಳುಹಾಕಿದ ಸಾಮಾನ್ಯವಾಗಿ  ಒಂದು ತಿಂಗಳು ಇರುವುದಿಲ್ಲ  ಅನ್ನಿಸುತ್ತೆ. ಈ ಅಧುನಿಕ ಹಚ್ಚೆಗಳಲ್ಲಿ ಆಲಂಕಾರ ಪ್ರಧಾನವಾಗಿ ಎದ್ದು ಕಾಣುತ್ತಿರುತ್ತದೆ. ಮಾನವ ಸಂಭದದ ಭಾವನೆಗಳು ಕಡಿಮೆ.

Thursday, January 12, 2012

ಜಾತ್ರೆಯಲಿ.. ಯಾತ್ರೆ





ಗೌರಿಬಿದನೂರ್ ನಿಂದ  ಕೇವಲ  ೫ ಕಿ.ಮಿ. ದೂರದಲ್ಲಿರುವ " ಅಲಕಾಪುರ " ಹಳ್ಳಿಯಲ್ಲಿ ಸೋಮುವಾರ ಹುಣ್ಣಿಮೆ ದಿನ ಸೋಮೇಶ್ವರ ಸ್ವಾಮಿ ಯಾ  ಜಾತ್ರೆ ನಡೆಯಿತು.   ನನ್ನ ಕ್ಯಾಮರ ದೊಂದಿಗೆ  ಆ ಜಾತ್ರೆ ಒಳ  ಹೊಕ್ಕಾಗ  ನನ್ನ ಕಣ್ಣಿಗೆ  ಈ ದೃಶ್ಯ  ಕಂಡಿತು. ತೇರು, ಸುರುಳಿಯಾಕಾರದ ದಬ್ಬೆ (ರಿಂಗ್) ಯನ್ನು ವಸ್ತು ಮೇಲೆ ಹಾಕುವ ಆಟ,ಗಿಳಿ ಶಾಸ್ತ್ರ,ಪಿಳ್ಳಂಗೋವಿ,ಚಾಲಕಿ ಹೂ ಮಾರುವ ಹುಡುಗ,ಉತ್ಸವ ಮೂರ್ತಿ ತರುವ,ಹುಡುಗರನ್ನು ತುಸು ಹಾಳು ಮಾಡುವ ಅಂಕಿ ಆಟ,ಜಿಲೇಬಿ,ಜಾನಪದ ಕುಣಿತಗಳು,ಮಕ್ಕಳ ಆಟಗಳು.................... ಹೀಗೆ  ಹಲವಾರು  ಒಂದುಂದು  ಛಾಯಾ ಚಿತ್ರದ ಹಿಂದೆ
ಒಂದುಂದು  ಕತೆಯೇ  ಇದೆ ಎನ್ನಬಹುದು. ನಮ್ಮ ಹಳ್ಳಿಯ ಸಂಸ್ಕೃತಿಯನ್ನು ನೋಡಲು  ಇಂತಹ  ಜಾತ್ರೆ, ಸಂತೆ,ಕರಗ.....ನೋಡಿದಾಗಲೇ  ಅರಿವು  ಆಗುವುದು.

ಜಾತ್ರೆಯಲಿ ...ಯಾತ್ರೆ ೨





ಗೌರಿಬಿದನೂರ್ ನಿಂದ  ಕೇವಲ  ೫ ಕಿ.ಮಿ. ದೂರದಲ್ಲಿರುವ " ಅಲಕಾಪುರ " ಹಳ್ಳಿಯಲ್ಲಿ ಸೋಮುವಾರ ಹುಣ್ಣಿಮೆ ದಿನ ಸೋಮೇಶ್ವರ ಸ್ವಾಮಿ ಯಾ  ಜಾತ್ರೆ ನಡೆಯಿತು.   ನನ್ನ ಕ್ಯಾಮರ ದೊಂದಿಗೆ  ಆ ಜಾತ್ರೆ ಒಳ  ಹೊಕ್ಕಾಗ  ನನ್ನ ಕಣ್ಣಿಗೆ  ಈ ದೃಶ್ಯ  ಕಂಡಿತು. ತೇರು, ಸುರುಳಿಯಾಕಾರದ ದಬ್ಬೆ (ರಿಂಗ್) ಯನ್ನು ವಸ್ತು ಮೇಲೆ ಹಾಕುವ ಆಟ,ಗಿಳಿ ಶಾಸ್ತ್ರ,ಪಿಳ್ಳಂಗೋವಿ,ಚಾಲಕಿ ಹೂ ಮಾರುವ ಹುಡುಗ,ಉತ್ಸವ ಮೂರ್ತಿ ತರುವ,ಹುಡುಗರನ್ನು ತುಸು ಹಾಳು ಮಾಡುವ ಅಂಕಿ ಆಟ,ಜಿಲೇಬಿ,ಜಾನಪದ ಕುಣಿತಗಳು,ಮಕ್ಕಳ ಆಟಗಳು.................... ಹೀಗೆ  ಹಲವಾರು  ಒಂದುಂದು  ಛಾಯಾ ಚಿತ್ರದ ಹಿಂದೆ
ಒಂದುಂದು  ಕತೆಯೇ  ಇದೆ ಎನ್ನಬಹುದು. ನಮ್ಮ ಹಳ್ಳಿಯ ಸಂಸ್ಕೃತಿಯನ್ನು ನೋಡಲು  ಇಂತಹ  ಜಾತ್ರೆ, ಸಂತೆ,ಕರಗ.....ನೋಡಿದಾಗಲೇ  ಅರಿವು  ಆಗುವುದು.

Wednesday, January 11, 2012

ಗೌರಿಬಿದನೂರ್ ತಾಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ


ಸಮ್ಮೇಳನ ಅದ್ಯಕ್ಷರಿಗೆ ಸ್ವಾಗತದ ಮಾಲಾರ್ಪಣೆ
ಸಾಹಿತ್ಯದ  ಆಸಕ್ತರು
 
  1. ನನ್ನ" ಒಬ್ಬಟ್ಟು" ಮಕ್ಕಳ ಕವನ  ಹೇಳುತ್ತಿರುವುದು

ಸಮ್ಮೇಳನ ಛಾಯಾಚಿತ್ರಗಳನ್ನು  ಚಿತ್ರಿಸಲು ನೂಕು ನುಗ್ಗಲು  
**********************
ಗೌರಿಬಿದನೂರ್ ತಾಲೂಕು ತೃತೀಯ ಕನ್ನಡ ಸಾಹಿತ್ಯ  ಸಮ್ಮೇಳನ ೭ ಮತ್ತು ೮ ರಂದು  ಅದ್ಬುರಿಯಾಗಿ  ನಡೆಯಿತು.ಸಮ್ಮೇಳನ ಅಧ್ಯಕ್ಷರಾಗಿ ಕೆ.ನಾರಾಯಣಸ್ವಾಮಿ  ರವರು ನೆಡಿಸಿಕೊಟ್ಟರು. ಸಂಜೆ  ಕವಿಗೋಷ್ಠಿ  ಬಹಳ ಸುಂದರವಾಗಿ ನಡೆಯಿತು. ಅದರಲ್ಲಿ  ನಾನು ಈ ಮಕ್ಕಳ ಕವನ ಓದಿದೆ. ಸಮ್ಮೇಳನ ನೆನಪಿಗಾಗಿ  " ಗೌರಿ ಭಾಗಿನ " ಸ್ಮರಣ  ಸಂಚಿಕೆ ಬಿಡುಗಡೆ ಮಾಡಿದರು.
    
ಒಬ್ಬಟ್ಟು
ಒಬ್ಬಟ್ಟು  ಒಬ್ಬಟ್ಟು
ಹಬ್ಬಕೆ  ತಟ್ಟಿದ  ಒಬ್ಬಟ್ಟು
ಬೆಲ್ಲದ ಸಿಹಿಯ ಒಬ್ಬಟ್ಟು
ಪಾತ್ರೆ ತುಂಬಿತು  ಒಬ್ಬಟ್ಟು
ಘಮ ಘಮ  ವಾಸನೆ ಹರಡಿತ್ತು
     ನೆಂಟರು  ಬಂದರು  ಸಾಕಷ್ಟು
     ಬಂದರು ನೆಂಟರು ಮಳೆಯಸ್ಟು
     ಊಟಕೆ ಕುಳಿತರು  ಮತ್ತಷ್ಟು
     ತಿಂದರು  ಎಂಟೆಂಟು  ಹತ್ತತ್ತು
     ಹೊಟ್ಟೆಗೆ ತುರುಕಿದರು ಇನ್ನಸ್ಟು

     ಹಬ್ಬದ ಒಬ್ಬಟ್ಟು ಮುಗಿದೊಯ್ತು
     ತಿನ್ನುವ  ಆಸೆಯು  ಬತ್ತೋಯ್ತು
ಹೊಟ್ಟೆ ತುಂಬಾ  ಹಸಿದಿತ್ತು
ಸಿಕೂ ಬಾಕು  ಉಳಿದಿತ್ತು
ಬೇಳೆ ಸಾರು ಸುರಿದಾಯ್ತು
ಹೊಟ್ಟೆ ತುಂಬಾ ಕುಡಿದಾಯ್ತು
ಹಬ್ಬದ ಒಬ್ಬಟ್ಟು ಕನಸಾಯ್ತು 

Tuesday, January 3, 2012

ವಿದುರಾಶ್ವತ್ಥ

ದೇವಸ್ಥಾನದ  ವಿಹಂಗಮ ನೋಟ
ಭಕ್ತಿ-ಭಾವಗಳು ಭಗವಂತನಿಗೆ  ಸಮರ್ಪಣೆ

ಸರ್ವ ಅಲಂಕೃತ ಗೊಂಡ  ನಾಗರ ವಿಗ್ರಹ 

ಸ್ವತಂತ್ರ ಸಂಗ್ರಾಮದಲ್ಲಿ ಹೋರಟ ಮಾಡಿದ ಮಹನೀಯರರಿಗೆ ವೀರ ಸೌಧ 

ಹೋರಾಟದಲ್ಲಿ ಮಾಡಿದವರ ನೆನಪಿಗೆ ವೀರಭೂಮಿ 


 
ಭಗತ ಸಿಂಘರ  ಪ್ರತಿಮೆ 
 *********************
      ವಿದುರಾಶ್ವತ್ಥ   ಭಾರತದಲ್ಲೇ ಪುರಾಣ  ಪ್ರಸಿದ್ದವಾದ ಕ್ಷೇತ್ರ. ಮಹಾಭಾರತದ " ವಿದುರ " ನೆಟ್ಟ ಅಶ್ವಥ್  ವೃಕ್ಷ ಇದೆ.ನಾಗ ದೋಷ ದ ಪರಿಹಾರಕ್ಕೆ........ನಾಗರ ವಿಗ್ರಹವನ್ನು ಪ್ರತಿಷ್ಠೆ ಮಾಡುತ್ತಾರೆ.ಮತ್ತು  ಸ್ವತಂತ್ರ  ಹೋರಾಟದಲ್ಲಿ ಹಳ್ಳಿಯ ಜನತೆ ಭಾಗಿಯಾಗಿ...ಬ್ರಿಟಿಷರ ಬಂದೊಕಿಗೆ  ಎದೆ ಒಡ್ಡಿದ್ದಾರೆ. ಈ ಸನ್ನಿವೇಶ  ಎರಡೆನೇ  ಜಲಿಯನ್ ವಾಲಬಗ್ಎಂದು   ಹೆಸರಾಗಿದೆ.  ಈಗ  ಸರಕಾರದ ಕೃಪಾ ದೃಷ್ಟಿ  ಇಂದ  ನವ ನಿರ್ಮಾಣ ವಾಗಿ   ವೀರಸೌಧ,ವೀರಭೂಮಿ,ನಾಟಕ ಮಂಟಪ,ಸ್ವತಂತ್ರ  ಹೋರಾಟಗಾರರ  ಪುತ್ಥಳಿಗಳು,ಹಸಿರು ವನ........ಪ್ರವಾಸಿಗರಿಗೆ  ಸಕಲ ಅನುಕೊಲಗಳು  ಮಾಡಿವೆ.
ಬೆಂಗಳೊರು ಇಂದ  ನೇರವಾಗಿ ವಿದುರಾಶ್ವತ್ಥ ಕ್ಕೆ ಬಸ್ಸಿನ ಅನುಕೂಲ ಇದೆ. ತಾವುಗಳು  ಒಮ್ಮೆ ಈ ಕ್ಷೇತ್ರಕ್ಕೆ  ಕೊಡಿ.

Monday, January 2, 2012

ಉಪನಯನ

ಯಗ್ನೋಪವಿತ  ಧಾರಣೆ

ಆಚಮನ

  ತಾಯಿಯ ಸಂಗಡ ಒಂದೇ ಎಲೆಯ ಅಂತಿಮ ಭೋಜನ 
                                           ********************
    ಮಾನವನನ್ನು ಹಸನು ಗೊಳಿಸಲು ಇಹ ಮತ್ತು ಪರ ಲೋಕದಲ್ಲಿ
ಅವನು ಸುಖ ಶಾಂತಿಗಳನ್ನೂ ಪಡೆಯುವಂತೆ ಮಾಡುವ ಸಂಸ್ಕಾರಗಳು
ಹದಿನಾರು. ಅದರಲ್ಲಿ  ಉಪನಯನ  ಒಂದು.
      ಇದರ ಬಗ್ಗೆ ಆಸಕ್ತಿ ಇದ್ದರೇ.........."ಉಪನಯನ " ಪುಸ್ತಕ ತೆಗದು
ನೋಡಬಹುದು.
      ಈ ಉಪನಯನ ಜಾತಿಬೇದವಿಲ್ಲದೆ ಯಾರು ಬೇಕಾದರೂ...ಉಪನಯನ
ಮಾಡಿ ಕೊಳ್ಳಬಹುದು.