Friday, December 30, 2011

ಜನಪದ ಕುಣಿತ


 ಈ ಜನಪದ ಕುಣಿತದಲ್ಲಿ  ವಿವಿಧ ಭಂಗಿಗಳಲ್ಲಿ ಕುಣಿಯುತ್ತಾನೆ.
ಮಲಗಿ,ಕುಳಿತು,ಮಕ್ಕಳನ್ನು ಎತ್ತಿಕೊಂಡು....ಗಿರಗಿರನೆ  ಸುತ್ತುತ್ತಾ
ಕುಣಿಯುತ್ತಾನೆ.

Monday, December 26, 2011

ಮದುವೆಯ ಭೋಜನ

ಮದುವೆಯಲ್ಲಿ  ಮಿಕ್ಕ ತುಸು  ಅನ್ನವನು  ಈಚೆ  ಹಾಕಿದಾಗ ಅಳಿಲು   ಓಡಿ ಬಂದು
ತಿನ್ನುತ್ತಿರುವ ಸುಂದರ  ದೃಶ್ಯ

ಭರ್ಜರಿ ಭೋಜನ

ಮುಸ್ಸಂಜೆಯಲಿ ಬೆಳ್ಳಕ್ಕಿಗಳ ಸಾಮೂಹಿಕ ಮೀನಿನ  ಭೋಜನ  ಮರುಳೂರು ಕೆರೆಯಲಿ
ಮಟ ಮಟ  ಮಧ್ಯಾನ್ಹ ದಾಸ ಕೊಕ್ಕರೆಗಳು  ಮೀನಿನ  ಭೋಜನ ವೀರಪುರ ಕೆರೆಯಲ್ಲಿ

Tuesday, December 20, 2011

ಕಪ್ಪು ಹುಡುಗಿಯ ಹಾಡು

ಕಪ್ಪು ಕಪ್ಪೆಂದು
ಕಂಗೆಟ್ಟು  ನನ್ನ
ಕಡೆಗಣಿಸದಿರು
     ಕಪ್ಪು ಮೋಡವೆ
     ಭುವಿಯನು  ತಣಿಸುವುದು
     ಬಿಳಿ  ಮೋಡವಲ್ಲ
ಕಪ್ಪು ಮಣ್ಣಿನಿಂದಲೇ
ಪಸಲು ಸುಗ್ಗಿಯಾಗುವುದು
ಮಿನುಗು  ಮರಳಿಂದಲ್ಲಾ
     ಕಪ್ಪು ಕೋಗಿಲೆಯೇ
     ಗಾನ ಗಂಧರ್ವ ವಾದುದು
     ಬಿಳಿ ಬೆಳ್ಳಕ್ಕಿಯಲ್ಲಾ
ಕಪ್ಪು ಕಪ್ಪೆಂದು ಜರಿಯದೇ
ಯೋಚಿಸು ನನ್ನ ಪ್ರೀತಿಸು 
ನಿನ್ನ ಲಗ್ನ ಆಗ್ತೀನಿ
     ನಿನ್ನ ತನು ಮನಕೆ
     ಸಕಲ ಅಷ್ಟ ವ್ಯೆಭೋಗಕೆ
     ಕಾಮಧೇನು ಆಗ್ತೀನಿ



Sunday, December 4, 2011

ಕಳ್ಳಿ ಪೀರ

ಈ ಹಕ್ಕಿಯ ಹೆಸರು ಕಳ್ಳಿ ಪೀರ. ಬಹಳ ಸುಂದರವಾದ ಹಕ್ಕಿಗಳು. ಇವು ತಂತಿಗಳ ಮೇಲೆ ಕುಳಿತು
ಚಿಟ್ಟೆ,ಜೇನುಹುಳು,ಜೀರಂಗಿ,ಮಿಡತೆ ..........ಇವುಗಳ ಹಾರಾಟದ ಚಲನೆಯ ದಿಕ್ಕು ವೇಗ  ಅರಿತು
ಬೇಟೆಗೆ ಇಳಿಯುತ್ತವೆ. ಆ ಬೇಟೆಯಲ್ಲೂ ತಮ್ಮದೇ  ಆದ ಶ್ಯೆಲಿಯಲ್ಲಿ  ಉದ್ದವಾಗಿ...ಅಡ್ಡವಾಗಿ...ಕೆಳಮುಖವಾಗಿ
ಹರಡುತ್ತಾ  ವ್ಯೆವಿಧ್ಯತೆ ಹೊಂದಿದೆ.ಮೇ ತಿಂಗಳ ಅವದಿಯಲ್ಲಿ ಮೊಟ್ಟೆ ಇಟ್ಟು ಮರಿಗಳನ್ನು ಮಾಡುತ್ತದೆ. ಇವುಗಳ
ವಾಸ ನದಿ ದಡದಲ್ಲಿ. ಇವು  ನನಗೆ ಸಿಕ್ಕಿದ್ದು  ಉತ್ತರಪಿನಾಕಿನಿ  ನದಿ ದಡದಲ್ಲಿ.

ಬಳೆಗಾರ ಚನ್ನೆಯ್ಯ